For Quick Alerts
ALLOW NOTIFICATIONS  
For Daily Alerts

ಪಾಕ್-ಬಾಂಗ್ಲಾ ಕೈವಾಡ! 2000 ನಕಲಿ ನೋಟು ಹಾವಳಿ, ಭದ್ರತಾ ವೈಶಿಷ್ಟ್ಯ ಕದ್ದ ಖದೀಮರು!

ಖೋಟಾನೋಟು, ಕಪ್ಪುಹಣ, ಭ್ರಷ್ಟಾಚಾರ ನಿರ್ಮೂಲನೆಗಾಗಿ ಕೇಂದ್ರ ಸರ್ಕಾರ ಕಳೆದ ನವೆಂಬರ್ ನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಹೊಸ ರೂ. 2000 ಮತ್ತು 500 ನೋಟುಗಳನ್ನುಬಿಡುಗಡೆ ಮಾಡಿತ್ತು.

By Siddu
|

ಖೋಟಾನೋಟು, ಕಪ್ಪುಹಣ, ಭ್ರಷ್ಟಾಚಾರ ನಿರ್ಮೂಲನೆಗಾಗಿ ಕೇಂದ್ರ ಸರ್ಕಾರ ಕಳೆದ ನವೆಂಬರ್ ನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ವತಿಯಿಂದ ಹೊಸ ರೂ. 2000 ಮತ್ತು 500 ನೋಟುಗಳನ್ನು ಬಿಡುಗಡೆ ಮಾಡಿತ್ತು.

ಆದರೆ ಹೊಸ ನೋಟುಗಳು ಚಲಾವಣೆಗೆ ಬಂದ ಮೂರು ತಿಂಗಳಲ್ಲೇ ಖದೀಮರು ನೋಟುಗಳ ಭದ್ರತಾ ವೈಶಿಷ್ಟ್ಯತೆಯನ್ನು ನಕಲು ಮಾಡಿದ್ದಾರೆ! ರೂ. 2000 ನೋಟಿನ ವಿಶೇಷತೆಗಳೇನು? ತಪ್ಪದೆ ನೋಡಿ...

1. ಖೋಟಾನೋಟು ತಯಾರಕರ ಕೈವಾಡ

1. ಖೋಟಾನೋಟು ತಯಾರಕರ ಕೈವಾಡ

ಹೊಸ ರೂ. 2000 ಮುಖಬೆಲೆಯ ನೋಟುಗಳಲ್ಲಿರುವ 17 ಭದ್ರತಾ ವೈಶಿಷ್ಟ್ಯಗಳಲ್ಲಿ 11 ವೈಶಿಷ್ಟ್ಯಗಳನ್ನು ಖೋಟಾ ನೋಟು ತಯಾರಕರು ನಕಲು ಮಾಡಿದ್ದಾರೆಂದು ಮೂಲಗಳು ತಿಳಿಸಿವೆ.

2. ಬಾಂಗ್ಲಾ ಗಡಿಯಲ್ಲಿ ಖೋಟಾನೋಟುಗಳು ಪತ್ತೆ

2. ಬಾಂಗ್ಲಾ ಗಡಿಯಲ್ಲಿ ಖೋಟಾನೋಟುಗಳು ಪತ್ತೆ

ಬಾಂಗ್ಲಾದೇಶದ ಗಡಿಯಲ್ಲಿನ ಮುರ್ಷಿದಾಬಾದ್ ನಲ್ಲಿ ಇರುವ ಚೆಕ್ ಪೋಸ್ಟ್ ನಲ್ಲಿ ಭಾರತೀಯ ಯೋಧರು ಫೆ. 8ರಂದು 26 ವರ್ಷದ ಅಜೀವುರ್ ರಹಮಾನ್ ಎಂಬ ಯುವಕನನ್ನು ಬಂಧಿಸಿದ್ದರು. ಇತನು ಪಶ್ಚಿಮ ಬಂಗಾಳದ ಮಾಲ್ಡಾ ಪ್ರದೇಶದವನೆಂದು ತಿಳಿದುಬಂದಿದೆ. ಬಂಧನದ ಸಂದರ್ಭದಲ್ಲಿ ಈತನ ಬಳಿ 40 ಹೊಸ 2000 ಮುಖಬೆಲೆಯ ಖೋಟಾ ನೋಟುಗಳಿದ್ದವು. ಪಾಕಿಸ್ತಾನದಲ್ಲಿ ಮುದ್ರಣವಾಗಿದ್ದು, ಬಾಂಗ್ಲಾ ಗಡಿ ಮೂಲಕ ಖೋಟಾನೋಟುಗಳನ್ನು ರವಾನಿಸಲಾಗುತ್ತಿದೆ ಎಂದು ತನಿಖಾಗಾರರು ಹೇಳಿದ್ದಾರೆ.

3. ಪಾಕ್-ಬಾಂಗ್ಲಾದಲ್ಲಿ ಖೋಟಾನೋಟು ತಯಾರು!

3. ಪಾಕ್-ಬಾಂಗ್ಲಾದಲ್ಲಿ ಖೋಟಾನೋಟು ತಯಾರು!

ಅಜೀವುರ್ ರಹಮಾನ್ ಬಂಧನದ ವೇಳೆ ಈ ನೋಟುಗಳು ಬಾಂಗ್ಲಾದೇಶದಿಂದ ಬಂದಿವೆ ಎಂದು ಹೇಳಿದ್ದಾನೆ. ಫೆಬ್ರವರಿ 1ರಂದು ಭಾರತ, ಬಾಂಗ್ಲಾದೇಶದ ಗಡಿಯಲ್ಲಿ ಭಾರತೀಯ ಕರೆನ್ಸಿ ರೂ. 2000 ಮುಖಬೆಲೆಯ ಹೊಸ ನೋಟುಗಳು ದೇಶದ ಒಳನುಸುಳುತ್ತಿವೆ.

4. BSF ಯೋಧರು ಹಗಲು ರಾತ್ರಿ ಕಾವಲು

4. BSF ಯೋಧರು ಹಗಲು ರಾತ್ರಿ ಕಾವಲು

ಬಾಂಗ್ಲಾ, ಭಾರತ ಗಡಿಯಲ್ಲಿ ಖೋಟಾನೋಟುಗಳು ಒಳನುಸುಳುತ್ತಿರುವುದರಿಂದ ಗಡಿ ಪ್ರದೇಶದಲ್ಲಿ ಬಿಎಸ್ ಎಫ್ ಯೋಧರು ಹಗಲು ರಾತ್ರಿ ಕಾವಲು ಕಾಯುತ್ತಿದ್ದು, ಬಾಂಗ್ಲಾದೇಶದಿಂದ ರವಾನೆಯಾಗುತ್ತಿರುವ ಖೋಟಾ ನೋಟುಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.

5. 17 ಭದ್ರತಾ ವೈಶಿಷ್ಟ್ಯಗಳಲ್ಲಿ 11 ಅಂಶ ನಕಲು!

5. 17 ಭದ್ರತಾ ವೈಶಿಷ್ಟ್ಯಗಳಲ್ಲಿ 11 ಅಂಶ ನಕಲು!

ಬಾಂಗ್ಲಾ ನುಸುಳುಕೋರರಿಂದ ವಶಪಡಿಸಿಕೊಂಡಿರುವ ನೋಟುಗಳನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ತಜ್ಞರ ನಡೆಸಿದ ಪರೀಕ್ಷೆಯಲ್ಲಿ ಆರ್ಬಿಐ ಬಿಡುಗಡೆ ಮಾಡಿರುವ ಹೊಸ ನೋಟುಗಳಲ್ಲಿರುವ 17 ಭದ್ರತಾ ಅಂಶಗಳಲ್ಲಿ 11 ಅಂಶಗಳನ್ನು ನಕಲು ಮಾಡುವುದರಲ್ಲಿ ಖೋಟಾನೋಟು ತಯಾರಕರು ಯಶಸ್ವಿಯಾಗಿರುವುದು ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿದೆ.

6. ನಕಲು ಮಾಡಲಾದ ಭದ್ರತಾ ವೈಶಿಷ್ಟ್ಯಗಳು

6. ನಕಲು ಮಾಡಲಾದ ಭದ್ರತಾ ವೈಶಿಷ್ಟ್ಯಗಳು

ಆರ್ಬಿಐ ನ ಹೊಸ ಕರೆನ್ಸಿಯ ಪಾರದರ್ಶಕ ಸ್ಥಳ, ವಾಟರ್ ಮಾರ್ಕ್, ಅಶೋಕ ಸ್ತಂಭ, ರಾಷ್ಟ್ರ ಚಿಹ್ನೆ, ರೂ. 2000 ಎಂಬ ಅಕ್ಷರ, ಆರಬಿಐ ಗವರ್ನರ್ ಖಾತ್ರಿ ಸಂದೇಶ ಹಾಗೂ ಸಹಿ, ದೇವನಾಗರಿ ಲಿಪಿಯಲ್ಲಿರುವ ನೋಟಿನ ಸಂಖ್ಯೆ, ಚಂದ್ರಯಾನದ ಚಿತ್ರ, ಸ್ವಚ್ಛ ಭಾರತ ಲೋಗೊ, ಭಾಷಾ ಪ್ಯಾನಲ್, ನೋಟು ಮುದ್ರಿತಗೊಂಡಿರುವ ವರ್ಷ - ಇವೆಲ್ಲವುಗಳನ್ನು ನಕಲು ಮಾಡಲಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

7. ರೂ. 500 ಹೊಸ ನೋಟು ಸಾಧ್ಯತೆ

7. ರೂ. 500 ಹೊಸ ನೋಟು ಸಾಧ್ಯತೆ

ಹೊಸ 2000 ನೋಟುಗಳನ್ನು ನಕಲು ಮಾಡಿರುವಂತೆ ಇತ್ತೀಚೆಗೆ ಬಿಡುಗಡೆಗೊಂಡಿರುವ ಹೊಸ ರೂ. 500 ನೋಟುಗಳನ್ನೂ ಕೂಡ ನಕಲು ಮಾಡಿರುವ ಸಾಧ್ಯತೆ ಇದೆಯೆಂದು ತಜ್ಞರು ಅಂದಾಜು ಮಾಡಿದ್ದಾರೆ.

8. ಖೋಟಾನೋಟು ಪತ್ತೆಗೆ BSF ಯೋಧರಿಗೆ ತರಬೇತಿ

8. ಖೋಟಾನೋಟು ಪತ್ತೆಗೆ BSF ಯೋಧರಿಗೆ ತರಬೇತಿ

ಖೋಟಾನೋಟುಗಳು ನೆರೆಯ ಬಾಂಗ್ಲಾದೇಶದಿಂದ ಭಾರತದೊಳಕ್ಕೆ ನುಸುಳುತ್ತಿರುವುದನ್ನು ತಡೆಯಲು ಗಡಿ ಭದ್ರತಾ ಪಡೆಯ (ಬಿಎಸ್ಎಫ್) ಸೈನಿಕರಿಗೆ ಖೋಟಾ ನೋಟುಗಳನ್ನು ಪತ್ತೆ ಹಚ್ಚುವ ವಿಶೇಷ ತರಬೇತಿ ನೀಡುವ ಕುರಿತಂತೆ ಬಿಎಸ್ಎಫ್ ಚಿಂತನೆ ನಡೆಸಿದೆ. ಈ ಕುರಿತಂತೆ ಆರ್ಬಿಐದೊಂದಿಗೆ BSF ಮಾತುಕತೆ ನಡೆಸಿದೆ ಎನ್ನಲಾಗಿದೆ. ಹೊಸ ರೂ. 2000 ಮುಖಬೆಲೆಯ ನೋಟುಗಳನ್ನು ಹೋಲುವ ಖೋಟಾ ನೋಟುಗಳನ್ನು ಮುದ್ರಿಸಿ ಬಾಂಗ್ಲಾದೇಶದಿಂದ ಭಾರತಕ್ಕೆ ರವಾನೆ ಮಾಡಲಾಗುತ್ತಿದೆ.

Read more about: black money rbi fake notes money
English summary

Fake Rs 2,000 note: 11 out of 17 security features replicated

The fake currency racketeers have managed to replicate 11 out of the 17 security features on the new Rs 2,000 notes. On February 1, a consignment of fake notes had been seized along the Bangladesh border. Forensic analysis showed that the racketeers had replicated eight out of the 17 security features.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X