For Quick Alerts
ALLOW NOTIFICATIONS  
For Daily Alerts

ರಿಲಯನ್ಸ್ ಜಿಯೋ ಲೈಫ್ ಟೈಮ್ ಉಚಿತ ಸೇವೆಗಳು!!

ರಿಲಾಯನ್ಸ್ ಜಿಯೋಗೆ ಪೂರಕವಾದ ಸವಲತ್ತುಗಳನ್ನು ಒದಗಿಸಲು ಟ್ರಾಯ್ ಸಂಪೂರ್ಣ ಬೆಂಬಲ ನೀಡುತ್ತಿದೆ ಎಂದು ಎಲ್ಲಾ ಟೆಲಿಕಾಂ ಸಂಸ್ಥೆಗಳು ಟ್ರಾಯ್ ಮೇಲೆ ಹರಿಹಾಯುತ್ತಿವೆ.

By Siddu
|

ಟೆಲಿಕಾಂ ಸಂಸ್ಥೆಗಳು ಜಿಯೋ ವಿರುದ್ದ ಅಷ್ಟೇ ಅಲ್ಲ, ಟ್ರಾಯ್ ವಿರುದ್ದ ಕೂಡ ದೂರು ಮಾಡುತ್ತಿವೆ!!

 

ರಿಲಾಯನ್ಸ್ ಜಿಯೋಗೆ ಪೂರಕವಾದ ಸವಲತ್ತುಗಳನ್ನು ಒದಗಿಸಲು ಟ್ರಾಯ್ ಸಂಪೂರ್ಣ ಬೆಂಬಲ ನೀಡುತ್ತಿದೆ ಎಂದು ಎಲ್ಲಾ ಟೆಲಿಕಾಂ ಸಂಸ್ಥೆಗಳು ಟ್ರಾಯ್ ಮೇಲೆ ಹರಿಹಾಯುತ್ತಿವೆ.

ಆದರೆ ಟ್ರಾಯ್ ಮತ್ತೆ ಜಿಯೋ ಪರವಾಗಿ ಹಲವು ನಿಯಮಗಳನ್ನು ಜಾರಿಗೆ ತರುತ್ತಿದೆ ಎಂಬ ಆರೋಪ ಕೇಳಿಬರುತ್ತಲೇ ಇದೆ..! ಏರ್‌ಟೆಲ್ ಸರ್ಪ್ರೈಸ್ ಆಫರ್..! ಗ್ರಾಹಕರಿಗೆ ಉಚಿತ ಕೊಡುಗೆ

ಜಿಯೋ ವಿರುದ್ದ ಕೋರ್ಟ್ ದೂರು

ಜಿಯೋ ವಿರುದ್ದ ಕೋರ್ಟ್ ದೂರು

ದೇಶದ ಏರ್‌ಟೆಲ್ ಮತ್ತು ಇತರ ಪ್ರಮುಖ ಟೆಲಿಕಾಂ ಕಂಪನಿಗಳು ಭಾರತೀಯ ದೂರಸಂಪರ್ಕ ನಿಯಂತ್ರಣ ಮಂಡಳಿ(ಟ್ರಾಯ್) ರಿಲಾಯನ್ಸ್ ಜಿಯೋಗೆ ಸಹಕಾರಿಯಾಗಿದೆ ಎಂದು ಈಗಾಗಲೇ ಕೋರ್ಟ್ ಮೆಟ್ಟಿಲೇರಿವೆ. ಇದೀಗ ಜಿಯೋಗೆ ಅನುಕೂಲವಾಗುವ ನಿಟ್ಟಿನಲ್ಲಿ ಟ್ರಾಯ್ ಮತ್ತೆ ಕೆಲವು ಟೆಲಿಕಾಂ ನಿಯಮಗಳನ್ನು ಬದಲಾವಣೆಗಳನ್ನು ಮಾಡಿದೆ ಎಂಬ ಮಾಹಿತಿ ದೊರೆತಿದೆ.!

ಇಂಟರ್‌ಕನೆಕ್ಟ್ ಒಪ್ಪಂದ

ಇಂಟರ್‌ಕನೆಕ್ಟ್ ಒಪ್ಪಂದ

ಟೆಲಿಕಾಂ ಕಂಪನಿಗಳ ಮಧ್ಯೆ ಇದ್ದ ಅಂತರ್ ಸಂಪರ್ಕ ಒಪ್ಪಂದ( ಇಂಟರ್‌ಕನೆಕ್ಟ್) ಬಳಕೆ ಶುಲ್ಕದ ದರದ ನಿಯಮಗಳನ್ನು ಟ್ರಾಯ್ ಸಡಿಲಿಸಲು ಮುಂದಾಗಿದೆ ಎನ್ನಲಾಗಿದೆ.

ಜಿಯೋ ಲೈಫ್ ಟೈಮ್ ಉಚಿತ ಸೇವೆ
 

ಜಿಯೋ ಲೈಫ್ ಟೈಮ್ ಉಚಿತ ಸೇವೆ

ಅಂತರ್ ಸಂಪರ್ಕ ಒಪ್ಪಂದ ಬಳಕೆ ಶುಲ್ಕದ ದರದ ನಿಯಮಗಳಿಂದಾಗಿ ಜಿಯೋತನ್ನ ಗ್ರಾಹಕರಿಗೆ ಲೈಫ್‌ಟೈಮ್ ಉಚಿತ ಕರೆ ಸೇವೆಗಳನ್ನು ನೀಡುವಂತೆ ಮಾಡಲು ಟ್ರಾಯ್ ಸಹಾಯ ಮಾಡುತ್ತಿದೆ ಎನ್ನುವ ಮಾತು ಟೆಲಿಕಾಂ ರಂಗದಲ್ಲಿ ಸಂಚಲನ ಉಂಟುಮಾಡಿದೆ.

ಟ್ರಾಯ್ ತಂತ್ರ

ಟ್ರಾಯ್ ತಂತ್ರ

ಒಂದು ಟೆಲಿಕಾಂ ಕಂಪೆನಿಯ ಗ್ರಾಹಕ ಮತ್ತೊಂದು ಟೆಲಿಕಾಂ ಕಂಪೆನಿಗೆ ಕರೆ ಮಾಡಿದರೆ, ಕರೆ ಮಾಡಿದ ಗ್ರಾಹಕನ ಕಂಪೆನಿ 14 ಪೈಸೆಗಳನ್ನು ಇತರ ಕಂಪೆನಿಗೆ ನೀಡಬೇಕಾಗುತ್ತದೆ. ಇದರಿಂದ ಜಿಯೋ ಉಚಿತ ಧ್ವನಿ ಕರೆ ಆಫರ್‌ಗೆ ತಡೆಯಾಗಲಿದೆ. ಹಾಗಾಗಿ ಈ ನಿಯಮವನ್ನು ಸಡಿಲಗೊಳಿಸಲು ಟ್ರಾಯ್ ತಂತ್ರ ಹೂಡಿದೆ ಎನ್ನಲಾಗಿದೆ.

ಜಿಯೋ ಸಂಪೂರ್ಣ ಉಚಿತ ಕರೆ ಸೇವೆ

ಜಿಯೋ ಸಂಪೂರ್ಣ ಉಚಿತ ಕರೆ ಸೇವೆ

ಒಂದು ಕಂಪನಿ ಇನ್ನೊಂದು ಕಂಪನಿಗೆ ಕರೆ ಮಾಡುವ ಸಂದರ್ಭದಲ್ಲಿನ ನಿಯಮಗಳೇನಾದರೂ ಜಾರಿಯಾದರೆ ಜಿಯೋ ಸಂಪೂರ್ಣವಾಗಿ ಉಚಿತ ಕರೆ ಸೇವೆಯನ್ನು ನೀಡಲಿದೆ ಎನ್ನಲಾಗಿದೆ!

Read more about: reliance jio telecom airtel j
English summary

Reliance Jio Good news! Trai may de-link tariff from interconnect charge

Mukesh Ambani-owned telco Reliance Jio Infocomm is likely to get a major boost as the sector regulator Trai is considering to de-link call tariff from that of interconnect usage charge (IUC), according to ET Now report.
Story first published: Tuesday, February 14, 2017, 12:18 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X