For Quick Alerts
ALLOW NOTIFICATIONS  
For Daily Alerts

ಇನ್ಫೋಸಿಸ್ ನಲ್ಲಿ ಆಂತರಿಕ ಸಂಘರ್ಷ ಬಿರುಕಿನ ವಾತಾವರಣ!

ಇನ್ಫೋಸಿಸ್ ಪ್ರವರ್ತಕರು ಮತ್ತು ನಿರ್ದೇಶಕ ಮಂಡಳಿ ಮಧ್ಯೆ ಬೋರ್ಡ್‌ ರೂಂ ಮತ್ತು ಹಿತಾಸಕ್ತಿ ಸಂಘರ್ಷ ನಡೆಯುತ್ತಿಲ್ಲ ಎಂದು ಇನ್ಫೊಸಿಸ್ ಅಧ್ಯಕ್ಷ ಆರ್‌. ಶೇಷಸಾಯಿ ಮುಂಬೈನಲ್ಲಿ ಸ್ಪಷ್ಟಪಡಿಸಿದ್ದಾರೆ.

By Siddu
|

ದೇಶದ ಐಟಿ(ಮಾಹಿತಿ ತಂತ್ರಜ್ಞಾನ) ವಲಯದ ಪ್ರಮುಖ ಸಂಸ್ಥೆಗಳಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ. ಕಳೆದ ಐದಾರು ತಿಂಗಳು ದೇಶದ ಅತಿದೊಡ್ಡ ಸಂಸ್ಥೆ ಟಾಟಾ ಗ್ರೂಪ್ ನಲ್ಲಿ ಬಿರುಗಾಳಿ ಎದ್ದಿತ್ತು. ಇದೀಗ ದೇಶದ ಇನ್ನೊಂದು ಪ್ರಸಿದ್ದ ಕಂಪನಿಯಾದ ಇನ್ಫೋಸಿಸ್ ನಲ್ಲಿ ಆಂತರಿಕ ಸಂಘರ್ಷ, ಹಿತಾಸಕ್ತಿ ಕಲಹಗಳು ಮನೆ ಮಾಡಿವೆ. ಆಡಳಿತ ಮಂಡಳಿ, ನಿರ್ದೇಶಕ ಮಂಡಳಿ, ಪ್ರವರ್ತಕರು ಹೇಗೆ ಎಲ್ಲರಲ್ಲೂ ಗೊಂದಲದ ವಾತಾವರಣ ಸೃಷ್ಟಿಯಾಗಿದೆ.

 

ಇನ್ಫೋಸಿಸ್ ಪ್ರವರ್ತಕರು ಮತ್ತು ನಿರ್ದೇಶಕ ಮಂಡಳಿ ಮಧ್ಯೆ ಬೋರ್ಡ್‌ ರೂಂ ಮತ್ತು ಹಿತಾಸಕ್ತಿ ಸಂಘರ್ಷ ನಡೆಯುತ್ತಿಲ್ಲ ಎಂದು ಇನ್ಫೊಸಿಸ್ ಅಧ್ಯಕ್ಷ ಆರ್‌. ಶೇಷಸಾಯಿ ಮುಂಬೈನಲ್ಲಿ ಸ್ಪಷ್ಟಪಡಿಸಿದ್ದಾರೆ.

ಇನ್ಫೋಸಿಸ್ ಸಿಇಒ ವಿಶಾಲ್‌ ಸಿಕ್ಕಾ ಅವರ ವೇತನ ಮತ್ತು ಭತ್ಯೆ ನಿಗದಿಪಡಿಸುವುದಕ್ಕೆ ಹಾಗೂ ಕಾರ್ಪೊರೇಟ್‌ ಆಡಳಿತದ ನಿಯಮಗಳ ಪಾಲನೆಗೆ ಯಾವುದೇ ಸಂಬಂಧಗಳಿಲ್ಲ ಎಂದು ತಿಳಿಸಿದರು.

ವಿಶಾಲ್‌ ಸಿಕ್ಕಾ ವೇತನ ಪ್ಯಾಕೇಜ್ ಗೊಂದಲ

ವಿಶಾಲ್‌ ಸಿಕ್ಕಾ ವೇತನ ಪ್ಯಾಕೇಜ್ ಗೊಂದಲ

ಇನ್ಫೋಸಿಸ್ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ವಿಶಾಲ್‌ ಸಿಕ್ಕಾ ಅವರ ವೇತನ ಮತ್ತು ಭತ್ಯೆ ನಿಗದಿಪಡಿಸುವುದಕ್ಕೆ ಹಾಗೂ ಕಾರ್ಪೊರೇಟ್‌ ಆಡಳಿತದ ನಿಯಮಗಳ ಪಾಲನೆಗೆ ಯಾವುದೇ ಸಂಬಂಧಗಳಿಲ್ಲ. ವಹಿವಾಟಿನ ಮಹತ್ವಾಕಾಂಕ್ಷೆಯ ಗುರಿಗೆ ಈ ವೇತನ ಸಂಬಂಧಿಸಿದ್ದು, ಜಾಗತಿಕ ಮಾನದಂಡಗಳ ಪ್ರಕಾರ ವೇತನ ಪ್ಯಾಕೇಜ್‌ ನಿಗದಿ ಪಡಿಸಲಾಗಿದೆ ಎಂದು ತಿಳಿಸಿದರು.

30 ತಿಂಗಳ ವೇತನ ಶಂಕೆ

30 ತಿಂಗಳ ವೇತನ ಶಂಕೆ

ಈ ಹಿಂದೆ ಕಂಪನಿ ಬಿಟ್ಟು ಹೋಗಿರುವ ಮಾಜಿ ಮುಖ್ಯ ಹಣಕಾಸು ಅಧಿಕಾರಿ ರಾಜೀವ್‌ ಬನ್ಸಲ್ ಸಂಸ್ಥೆಯ ಹಣಕಾಸಿನ ವ್ಯವಹಾರ ಸಂಬಂಧ ಯಾವುದೇ ಗುಟ್ಟು ಬಹಿರಂಗ ಮಾಡಬಾರದು ಎಂಬ ಕಾರಣಕ್ಕೆ ಗುತ್ತಿಗೆ ಒಪ್ಪಂದದನ್ವಯ 30 ತಿಂಗಳ ವೇತನ ನೀಡಲಾಗಿದೆ ಎಂದು ಶಂಕಿಸಿರುವುದು ಮನಸ್ಸಿಗೆ ನೋವುಂಟು ಮಾಡಿದೆ ಎಂದರು.

ಬಾಡಿಗೆ ವಿಮಾನ ಬಳಕೆ ಸ್ಪಷ್ಟನೆ
 

ಬಾಡಿಗೆ ವಿಮಾನ ಬಳಕೆ ಸ್ಪಷ್ಟನೆ

ವಿಶಾಲ್ ಸಿಕ್ಕಾ ಖಾಸಗಿ ವಿಮಾನದಲ್ಲಿ ಪ್ರಯಾಣ ಮಾಡಿದಕ್ಕೆ ಸಂಸ್ಥೆ ಹಣ ಪಾವತಿಸಿದೆ ಎನ್ನುವುದು ಸರಿಯಲ್ಲ. ಸಿಕ್ಕಾ ಬಾಡಿಗೆ ವಿಮಾನ ಬಳಸಿ ಪ್ರಯಾಣ ಮಾಡಿರುವುದು ಕೇವಲ ಶೇ. 8ರಷ್ಟು ಮಾತ್ರ. ಬಾಡಿಗೆ ವಿಮಾನ ಬಳಸುವುದಕ್ಕೆ ಹಣ ಪಾವತಿಸಲು ಮಂಡಳಿ ನಿರ್ಧಾರ ಕೈಗೊಂಡಿತ್ತು ಎಂದು ಆರ್‌. ಶೇಷಸಾಯಿ ಸ್ಪಷ್ಟ ಪಡಿಸಿದರು.

ನಾರಾಯಣಮೂರ್ತಿ ಸ್ಪಷ್ಟನೆ

ನಾರಾಯಣಮೂರ್ತಿ ಸ್ಪಷ್ಟನೆ

ಇನ್ಫೋಸಿಸ್ ನಲ್ಲಿ ಕಾರ್ಪೊರೇಟ್‌ ಆಡಳಿತದ ವೈಫಲ್ಯ ಕಂಡುಬಂದಿದೆ ಎಂಬ ತಮ್ಮ ಆಕ್ಷೇಪವನ್ನು ವಾಪಸ್‌ ತೆಗೆದುಕೊಂಡಿರುವೆ ಎನ್ನುವ ವರದಿ ನಾರಾಯಣಮೂರ್ತಿ ಅಲ್ಲಗಳೆದಿದ್ದಾರೆ.
ಸಂಸ್ಥೆಯ ನಿರ್ದೇಶಕ ಮಂಡಳಿಯಲ್ಲಿ ಉತ್ತಮ ಉದ್ದೇಶ ಹೊಂದಿರುವ ಪ್ರಾಮಾಣಿಕರಾದವರಿದ್ದಾರೆ. ಸಂಸ್ಥೆಯ ಉಜ್ವಲ ಭವಿಷ್ಯದ ದೃಷ್ಟಿಯಿಂದ ಆಡಳಿತದಲ್ಲಿ ಸುಧಾರಣೆ ತರಲಿದೆ. ಎಲ್ಲ ಪಾಲುದಾರರ ಅಹವಾಲು ಕೇಳಬೇಕು ಎಂದರು.

ಸಿಕ್ಕಾ-ಮೂರ್ತಿ ಉತ್ತಮ ಬಾಂಧವ್ಯ

ಸಿಕ್ಕಾ-ಮೂರ್ತಿ ಉತ್ತಮ ಬಾಂಧವ್ಯ

ನಾರಾಯಣ ಮೂರ್ತಿಯವರೊಂದಿಗೆ ನಾನು ಉತ್ತಮವಾದ ಆತ್ಮೀಯ ಸಂಬಂಧ ಹೊಂದಿದ್ದೇನೆ ಎಂದು ಸಿಇಒ ವಿಶಾಲ್‌ ಸಿಕ್ಕಾ ಹೇಳಿದ್ದಾರೆ.
ನಾರಾಯಣಮೂರ್ತಿಯವರನ್ನು ವರ್ಷದಲ್ಲಿ ಐದಾರು ಬಾರಿ ಭೇಟಿಯಾಗುತ್ತೇನೆ ಎಂದರು. ಇನ್ಫೋಸಿಸ್ ಸ್ಪಷ್ಟನೆ: 500 ಸಿಬ್ಬಂದಿ ವಜಾ ಮಾಡಿಲ್ಲ

English summary

Vishal Sikka’s team responds to founder Narayana Murthy, others’ concerns

The Infosys management on Monday sought to allay concerns that the company was facing a worsening dispute with its founders over how the company was being run.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X