For Quick Alerts
ALLOW NOTIFICATIONS  
For Daily Alerts

ಎಸ್‌ಬಿಐ(SBI) ವಿಲೀನ: ವಿಲೀನದ ಅನುಕೂಲ/ಅನಾನುಕೂಗಳೇನು?

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ(ಎಸ್‌ಬಿಐ) ಪ್ರಮುಖ ಐದು ಸಹವರ್ತಿ ಬ್ಯಾಂಕುಗಳ ವಿಲೀನ ಪ್ರಕ್ರಿಯೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದ್ದು, ಜಗತ್ತಿನ ಮೊದಲ 50 ಬ್ಯಾಂಕುಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲಿದೆ.

By Siddu
|

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ(ಎಸ್‌ಬಿಐ) ಪ್ರಮುಖ ಐದು ಸಹವರ್ತಿ ಬ್ಯಾಂಕುಗಳ ವಿಲೀನ ಪ್ರಕ್ರಿಯೆಗೆ ಯಶಸ್ವಿಯಾಗಿದ್ದು, ಜಗತ್ತಿನ ಮೊದಲ 50 ಬ್ಯಾಂಕುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ಎಸ್‌ಬಿಐನಲ್ಲಿ ಐದು ಬ್ಯಾಂಕುಗಳ ವಿಲೀನ ಪ್ರಸ್ತಾವಕ್ಕೆ ಈ ಮೊದಲೇ ಸಂಪುಟವು ತನ್ನ ತಾತ್ವಿಕ ಒಪ್ಪಿಗೆಯನ್ನು ಸೂಚಿಸಿತ್ತು. ವಿಲೀನ ಪ್ರಸ್ತಾವಕ್ಕೆ ಬ್ಯಾಂಕುಗಳ ನಿರ್ದೇಶಕ ಮಂಡಳಿಗಳು ತಮ್ಮ ಅಂಗೀಕಾರ ನೀಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದವು.
ಬ್ಯಾಂಕುಗಳ ನಿರ್ದೇಶಕ ಮಂಡಳಿಗಳ ಕೇಳಿ ಮಾಡಿದ್ದ ಶಿಫಾರಸುಗಳನ್ನು ಕೇಂದ್ರ ಸಂಪುಟ ಪರಿಗಣಿಸಿ, ಈಗ ಐದು ಬ್ಯಾಂಕುಗಳ ವಿಲೀನ ಯಾವುದೇ ಸಮಸ್ಯೆ ಅಥವಾ ವಿರೋಧ ಇಲ್ಲದೆ ಸುಸೂತ್ರವಾಗಿ ನಡೆದಿದೆ. ಭಾರತದಲ್ಲಿ 10 ಬೆಸ್ಟ್ ಇನ್‌ವೆಸ್ಟ್‌ಮೆಂಟ್‌ ಪ್ಲಾನ್

ಎಸ್ಬಿಐ ವಿಲೀನದಿಂದ ಆಗಬಹುದಾದ ಅನುಕೂಲ, ಅನಾನುಕೂಲ ಮತ್ತು ನಿರ್ವಹಣೆಗಳ ಬಗ್ಗೆ ಗ್ರಾಹಕರಲ್ಲಿ ಕೂತುಹಲವಿದ್ದು, ಇಲ್ಲಿ ಕೆಲ ಅಂಶಗಳನ್ನು ನೀಡಲಾಗಿದೆ. ಎಸ್‌ಬಿಐ

ಐದು ಸಹವರ್ತಿ ಬ್ಯಾಂಕುಗಳು

ಐದು ಸಹವರ್ತಿ ಬ್ಯಾಂಕುಗಳು

ದೇಶದ ಅತಿ ದೊಡ್ಡ ಬ್ಯಾಂಕ್‌ ಆಗಿರುವ ಎಸ್‌ಬಿಐನೊಂದಿಗೆ ಈ ಐದು ಬ್ಉಆಂಕುಗಳು ವಿಲೀನ ಆಗಲಿವೆ.
1. ಸ್ಟೇಟ್ ಬ್ಯಾಂಕ್ ಆಫ್ ಬಿಕಾನೇರ್ ಮತ್ತು ಜೈಪುರ
2. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು
3.. ಸ್ಟೇಟ್ ಬ್ಯಾಂಕ್ ಆಫ್ ಟ್ರಾವಾನ್ಕೊರ್
4..ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲಾ
5. ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್

ಜಾಗತಿಕವಾಗಿ ಅಗ್ರ 50ರ ಪಟ್ಟಿಯಲ್ಲಿ ಸೇರ್ಪಡೆ

ಜಾಗತಿಕವಾಗಿ ಅಗ್ರ 50ರ ಪಟ್ಟಿಯಲ್ಲಿ ಸೇರ್ಪಡೆ

ಹೊಸ ವರದಿಯ ಪ್ರಕಾರ ಸಹವರ್ತಿ ಬ್ಯಾಂಕುಗಳೊಂದಿಗಿನ ವಿಲೀನದ ನಂತರ ಎಸ್ಬಿಐ ದೇಶದ ಅತಿದೊಡ್ಡ ಬ್ಯಾಂಕು ಮತ್ತು ಜಾಗತಿಕವಾಗಿ ಅಗ್ರ 50 ಪಟ್ಟಿಯಲ್ಲಿ ಸೇರ್ಪಡೆ ಆಗಲಿದೆ. ಇದು ಭಾರತೀಯರೆಲ್ಲರಿಗೂ ಹೆಮ್ಮೆಯ ವಿಷಯ.

ಜಗತ್ತಿನಾದ್ಯಂತ 16,500 ಶಾಖೆಗಳು
 

ಜಗತ್ತಿನಾದ್ಯಂತ 16,500 ಶಾಖೆಗಳು

ಎಸ್ಬಿಐ ಪ್ರಸ್ತುತ 36 ದೇಶಗಳಲ್ಲಿನ 191 ಶಾಖೆಗಳೂ ಒಳಗೊಂಡಂತೆ ಜಗತ್ತಿನಾದ್ಯಂತ ಒಟ್ಟು 16,500 ಶಾಖೆಗಳನ್ನು ಹೊಂದಿದೆ.

ಭಾರತೀಯ ಮಹಿಳಾ ಬ್ಯಾಂಕ್ ವಿಲೀನ!

ಭಾರತೀಯ ಮಹಿಳಾ ಬ್ಯಾಂಕ್ ವಿಲೀನ!

ಈ ಮೇಲಿನ ಐದು ಬ್ಯಾಂಕುಗಳೊಂದಿಗೆ ದೇಶದ ಮೊದಲ ಮಹಿಳಾ ಬ್ಯಾಂಕ್ ಎನಿಸಿರುವ ಭಾರತೀಯ ಮಹಿಳಾ ಬ್ಯಾಂಕ್ ಕೂಡ ಎಸ್ಬಿಐ ನೊಂದಿಗೆ ವಿಲೀನಗೊಳ್ಳುವ ಸಾಧ್ಯತೆ ಇದೆ. ಆದರೆ ವಿಲೀನಗೊಳ್ಳುವ ಪ್ರಸ್ತಾಪವಿದ್ದ ಭಾರತೀಯ ಮಹಿಳಾ ಬ್ಯಾಂಕ್‌ ಬಗ್ಗೆ ಸಚಿವ ಸಂಪುಟವು ಇನ್ನೂ ಅಂತಿಮ ತಿರ್ಮಾನಕ್ಕೆ ಬಂದಿಲ್ಲ.

ಎಸ್ಬಿಐ ಆಸ್ತಿ ಎಷ್ಟು?

ಎಸ್ಬಿಐ ಆಸ್ತಿ ಎಷ್ಟು?

ಐದು ಬ್ಯಾಂಕುಗಳೊಂದಿಗಿನ ವಿಲೀನದ ನಂತರ ಎಸ್ಬಿಐ 37,000 ಲಕ್ಷ ಕೋಟಿ ಆಸ್ತಿಯನ್ನು ಹೊಂದಿದಂತಾಗಲಿದೆ ಎಂದು ಅಂದಾಜಿಸಲಾಗಿದೆ. ಜತೆಗೆ ಭಾರತದಲ್ಲಿ ವ್ಯಾಪಕ ಜಾಲವನ್ನು ಹೊಂದಿರುವ ಬೃಹತ್ ಬ್ಯಾಂಕಾಗಿ ಹೊರಹೊಮ್ಮಲಿದೆ.

ವಿಲೀನದ ಪ್ರಯೋಜನಗಳು

ವಿಲೀನದ ಪ್ರಯೋಜನಗಳು

ಬ್ಯಾಂಕುಗಳನ್ನು ವಿಲೀನ ಮಾಡುವುದರಿಂದ ಎಸ್ಬಿಐ ಜಗತ್ತಿನ ಮೊದಲ 50 ಬ್ಯಾಂಕುಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲಿದೆ. ಇದು ಭಾರತೀಯರಲ್ಲಿ ಹೆಮ್ಮೆ ಮೂಡಿಸುವ ಸಂಗತಿ. ಖಾಸಗಿ ವಲಯಕ್ಕೆ ಉತ್ತಮ ಪೈಪೋಟಿ ಕೊಡಬಲ್ಲದು. ಅಲ್ಲದೆ ತನ್ನ ಶಾಖೆಗಳಲ್ಲಿನ ಮಾನವ ಸಂಪನ್ಮೂಲವನ್ನು ಅಭಿವೃದ್ಧಿ ಪಡಿಸಲು ಸಾಧ್ಯವಾಗಲಿದೆ. ಸಾಲ ನೀಡುವಿಕೆ, ಠೇವಣಿಗಳ ಮೇಲೆ ಉತ್ತಮ ಲಾಭ ಸಿಗಬಹುದು. ಉತ್ತಮ ಸೇವೆ ನೀಡಲು, ತೊಡಕುಗಳನ್ನು ಹೋಗಲಾಡಿಸಲು ಸಾಧ್ಯ. ತ್ರೈಮಾಸಿಕ ಮತ್ತು ವಾರ್ಷಿಕ ಆದಾಯವನ್ನು ನಿರಂತರವಾಗಿ ಹೆಚ್ಚಿಸಬಹುದು. ಒಟ್ಟಿನಲ್ಲಿ ಜಾಗತಿಕ ವೇದಿಕೆಯಲ್ಲಿ ದೈತ್ಯ ಶಕ್ತಿಯಾಗಿ ಹೊರಹೊಮ್ಮುವಲ್ಲಿ ಯಾವುದೇ ಸಂಶಯವಿಲ್ಲ.

ವಿಲೀನದಿಂದಾಗಬಹುದಾದ ಅನಾನುಕೂಲಗಳು

ವಿಲೀನದಿಂದಾಗಬಹುದಾದ ಅನಾನುಕೂಲಗಳು

ವೆಚ್ಚವನ್ನು ಕಡಿಮೆ ಮಾಡುವುದರ ಮುಖಾಂತರ ಅಥವಾ ಆದಾಯ ಹೆಚ್ಚು ಮಾಡುವುದರ ಮೂಲಕ ಮೌಲ್ಯವನ್ನು ಹೆಚ್ಚಿಸಬಲ್ಲವು. ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಲ್ಲಿ ಖಾಸಗಿ ಬಂಡವಾಳ ಪ್ರಮಾಣ ಕಡಿಮೆಯಾಗಬಹುದು. ಬ್ಯಾಂಕಿಂಗ್ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಹೆಚ್ಚಾಗಬಹುದು. ವಿಲೀನಗೊಳ್ಳುವ ಬ್ಯಾಂಕುಗಳು ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಳ್ಳಲಿವೆ. ಎಸ್ಬಿಐ ಸುಪ್ರಿಂ ಪವರ್ ಅಗುವುದರಿಂದ ಅದರ ಅಡಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ವಿಲೀನಗೊಂಡ ಬ್ಯಾಂಕುಗಳು ಸ್ವತಂತ್ರವಾಗಿ ನಿರ್ಣಯ/ನಿರ್ಧಾರ ತೆಗೆದುಕೊಳ್ಳವುದು ಅಸಾಧ್ಯ ಆಗಬಹುದು.

10. ದಕ್ಷ ನಿರ್ವಹಣೆ

10. ದಕ್ಷ ನಿರ್ವಹಣೆ

ಒಟ್ಟಿನಲ್ಲಿ ಸಹವರ್ತಿ ಬ್ಯಾಂಕುಗಳ ವಿಲೀನದಿಂದ ಬ್ಯಾಂಕಿಂಗ್‌ ವಹಿವಾಟಿನಲ್ಲಿ ದಕ್ಷತೆ ಹೆಚ್ಚಾಗಲಿದೆ. ಬ್ಯಾಂಕುಗಳ ಕಾರ್ಯನಿರ್ವಹಣಾ ವೆಚ್ಚ ಮತ್ತು ಠೇವಣಿಗಳ ಮೇಲಿನ ವೆಚ್ಚಗಳು ಕಡಿತ ಆಗಲಿವೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ.

ಜಾರಿ ಯಾವಾಗ?

ಜಾರಿ ಯಾವಾಗ?

ಎಸ್ಬಿಐ ಸಹವರ್ತಿ ಬ್ಯಾಂಕ್ ಗಳ ವಿಲೀನ ಪ್ರಕ್ರಿಯೆ ಯಾವ ದಿನದಿಂದ ಜಾರಿಗೆ ಬರಲಿದೆ ಎನ್ನುವುದರ ಬಗ್ಗೆ ಅರುಣ್ ಜೇಟ್ಲಿ ಖಚಿತವಾದ ಮಾಹಿತಿ ಹಾಗೂ ಹೆಚ್ಚಿನ ವಿವರ ನೀಡಿಲ್ಲ.

English summary

Cabinet approves merger of SBI, 5 associate banks

With the merger of all the five associates, SBI is expected to become a global-sized bank with an asset base of Rs 37 trillion (Rs 37 lakh crore) or over USD 555 billion, 22,500 branches and 58,000 ATMs. It will have over 50 crore customers.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X