For Quick Alerts
ALLOW NOTIFICATIONS  
For Daily Alerts

ಎಸ್‌ಬಿಐ ವಿಲೀನ 2018ರಲ್ಲಿ ಪೂರ್ಣ

ಮುಂದಿನ ಹಣಕಾಸು ಸಾಲಿನಲ್ಲಿ(2018-19) ಎಸ್‌ಬಿಐ ಜತೆಗಿನ ಐದು ಸಹವರ್ತಿ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಎಸ್‌ಬಿಐ ಬ್ಯಾಂಕ್‌ನ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಹೇಳಿದ್ದಾರೆ.

By Siddu
|

ಮುಂದಿನ ಹಣಕಾಸು ಸಾಲಿನಲ್ಲಿ(2018-19) ಎಸ್‌ಬಿಐ ಜತೆಗಿನ ಐದು ಸಹವರ್ತಿ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಎಸ್‌ಬಿಐ ಬ್ಯಾಂಕ್‌ನ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಹೇಳಿದ್ದಾರೆ.

 

ಈಗಾಗಲೇ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ(ಎಸ್‌ಬಿಐ) ಪ್ರಮುಖ ಐದು ಸಹವರ್ತಿ ಬ್ಯಾಂಕುಗಳ ವಿಲೀನ ಪ್ರಕ್ರಿಯೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ಸೂಚಿಸಿದೆ.

 
ಎಸ್‌ಬಿಐ ವಿಲೀನ 2018ರಲ್ಲಿ ಪೂರ್ಣ

ಐದು ಸಹವರ್ತಿ ಬ್ಯಾಂಕುಗಳೊಂದಿಗಿನ ವಿಲೀನ ಯಾವಾಗಿನಿಂದ ಜಾರಿಗೆ ಬರಲಿದೆ ಎನ್ನುವುದರ ಕುರಿತು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಲಿದೆ.

ಸದ್ಯಕ್ಕೆ ವೇತನಕ್ಕೆ ಸಂಬಂಧಿತ ವಿವಾದ ಎದುರಾಗಿಲ್ಲ.ಸಿಬ್ಬಂದಿ ಈಗ ಪಡೆಯುತ್ತಿರುವ ವೇತನ ಕಾಯ್ದುಕೊಳ್ಳುವ ಬಗ್ಗೆ ಹಣಕಾಸು ಇಲಾಖೆ ಭರವಸೆ ನೀಡಿದೆ ಎಂದು ಹೇಳಿದರು.

ಪ್ರಸ್ತುತ ಎಸ್‌ಬಿಐ ಸಿಬ್ಬಂದಿಗಳು ಪಡೆಯುತ್ತಿರುವ ವೇತನವನ್ನು ಸಹವರ್ತಿ ಬ್ಯಾಂಕುಗಳ ಸಿಬ್ಬಂದಿಗಳಿಗೂ ನೀಡಲಾಗುವುದು. ವಿಲೀನದ ನಂತರ ಎಸ್‌ಬಿಐ, ಜಾಗತಿಕ ಮಟ್ಟದ 50 ದೊಡ್ಡ ಬ್ಯಾಂಕ್‌ಗಳ ಸಾಲಿಗೆ ಸೇರಲಿದೆ' ಎಂದು ತಿಳಿಸಿದ್ದಾರೆ. ಎಸ್‌ಬಿಐ ವಿಲೀನಕ್ಕೆ ಸಂಪುಟ ಒಪ್ಪಿಗೆ: ವಿಲೀನದ ಅನುಕೂಲ/ಅನಾನುಕೂಗಳೇನು?

English summary

Associate banks' merger with SBI to be completed by FY 2018: SBI chief

The merger of five associate banks with State Bank of India will be completed in the fiscal year 2018 even as the cabinet has given a green signal for it on Wednesday.
Story first published: Saturday, February 18, 2017, 14:38 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X