For Quick Alerts
ALLOW NOTIFICATIONS  
For Daily Alerts

ಡೆಬಿಟ್ ಕಾರ್ಡ್‌ ಪೇಮೆಂಟ್ ಮೇಲೆ ಸೇವಾಶುಲ್ಕ ಕಡಿತ

ನೋಟು ರದ್ದತಿ ನಂತರ ನಗದುರಹಿತ ವ್ಯವಹಾರ ಉತ್ತೇಜಿಸಲು ಡೆಬಿಟ್ ಕಾರ್ಡ್‌ ಪಾವತಿಗಳ ಮೇಲೆ ಬ್ಯಾಂಕ್‌ಗಳು ಗ್ರಾಹಕರಿಗೆ ವಿಧಿಸುವ ಸೇವಾಶುಲ್ಕದಲ್ಲಿ(MDR) ಭಾರೀ ಪ್ರಮಾಣದ ಕಡಿತ ಮಾಡಲು ರಿಸರ್ವ್ ಬ್ಯಾಂಕ್‌ ಆಫ್ ಇಂಡಿಯಾ ನಿರ್ಧರಿಸಿದೆ.

By Siddu
|

ನೋಟು ರದ್ದತಿ ನಂತರ ನಗದುರಹಿತ ವ್ಯವಹಾರ ಉತ್ತೇಜಿಸಲು ಡೆಬಿಟ್ ಕಾರ್ಡ್‌ ಪಾವತಿಗಳ ಮೇಲೆ ಬ್ಯಾಂಕ್‌ಗಳು ಗ್ರಾಹಕರಿಗೆ ವಿಧಿಸುವ ಸೇವಾಶುಲ್ಕದಲ್ಲಿ(MDR) ಭಾರೀ ಪ್ರಮಾಣದ ಕಡಿತ ಮಾಡಲು ರಿಸರ್ವ್ ಬ್ಯಾಂಕ್‌ ಆಫ್ ಇಂಡಿಯಾ ನಿರ್ಧರಿಸಿದೆ.

 

ಡೆಬಿಟ್‌ ಕಾರ್ಡುಗಳ ಮೂಲಕ ನಡೆಯುವ ವ್ಯವಹಾರ ಮೊತ್ತದ ಶೇ. 0.70ರ ಬದಲು ಶೇ. 0.40 ರಷ್ಟು ಮಾತ್ರ ಗ್ರಾಹಕರಿಂದ ಸೇವಾಶುಲ್ಕ ರೂಪದಲ್ಲಿ ಸಂಗ್ರಹಿಸಲಾಗುವುದು ಎಂದು ಆರ್‌ಬಿಐ ತಿಳಿಸಿದೆ.

ಪ್ರಸ್ತುತ ಸೇವಾಶುಲ್ಕ ಎಷ್ಟು?

ಪ್ರಸ್ತುತ ಸೇವಾಶುಲ್ಕ ಎಷ್ಟು?

ಪ್ರಸ್ತುತ ಡೆಬಿಟ್ ಕಾರ್ಡ್‌ ಮೂಲಕ ಮಾಡಲಾಗುವ ರೂ. 2 ಸಾವಿರದವರೆಗಿನ ವವ್ಯವಹಾರಕ್ಕೆ ಶೇ. 0.75ರಷ್ಟು ಮತ್ತು ರೂ. 2 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ವ್ಯವಹಾರಗಳಿಗೆ ಶೇ. 1ರಷ್ಟು ಸೇವಾಶುಲ್ಕ ವಿಧಿಸಲಾಗುತ್ತಿದೆ.

20 ಲಕ್ಷದವರೆಗಿನ ವಹಿವಾಟಿಗೆ ಶುಲ್ಕ

20 ಲಕ್ಷದವರೆಗಿನ ವಹಿವಾಟಿಗೆ ಶುಲ್ಕ

ವಾರ್ಷಿಕವಾಗಿ ರೂ. 20 ಲಕ್ಷದ ಒಳಗೆ ವಹಿವಾಟು ನಡೆಸುವ ವ್ಯಾಪಾರಸ್ಥರು, ವರ್ತಕರು, ವಿಮೆ, ಮ್ಯೂಚುವಲ್‌ ಫಂಡ್ಸ್‌, ಶೈಕ್ಷಣಿಕ ಸಂಸ್ಥೆ, ಸರ್ಕಾರಿ ಆಸ್ಪತ್ರೆಗಳಲ್ಲಿನ ಡೆಬಿಟ್‌ ಕಾರ್ಡ್‌ ವಹಿವಾಟಿಗೆ ಶೇ 0.40ರಷ್ಟು ಎಂಡಿಆರ್ ಅನ್ವಯವಾಗಲಿದೆ.

ಏಪ್ರಿಲ್‌ 1ರಿಂದ ಜಾರಿ
 

ಏಪ್ರಿಲ್‌ 1ರಿಂದ ಜಾರಿ

ಈ ಪರಿಷ್ಕೃತ ದರ ಏಪ್ರಿಲ್‌ 1ರಿಂದ ಜಾರಿಗೆ ಬರಲಿದ್ದು, ಕ್ರೆಡಿಟ್‌ ಕಾರ್ಡ್‌ ಮೂಲಕ ಪಾವತಿಸುವ ಮೊತ್ತದ ಮೇಲಿನ MDR ಮೇಲೆ ಆರ್‌ಬಿಐ ಮಿತಿ ವಿಧಿಸಿಲ್ಲ. ಪಿಒಎಸ್(Point of sale), ಕ್ಯೂಆರ್ ಕೋಡ್‌ ಮೂಲಕ ನಡೆಸಲಾಗುವ ಡಿಜಿಟಲ್‌ ವ್ಯವಹಾರದ ಮೇಲೆ ಕಡಿಮೆ ಸೇವಾಶುಲ್ಕ ವಿಧಿಸಲಾಗುವುದು.

ಅಂಗಡಿಗಳಲ್ಲಿ ಫಲಕ

ಅಂಗಡಿಗಳಲ್ಲಿ ಫಲಕ

ವ್ಯಾಪಾರಿಗಳು/ವರ್ತಕರು ‘ಗ್ರಾಹಕರು ಸೇವಾಶುಲ್ಕ ತೆರಬೇಕಾಗಿಲ್ಲ' ಎಂಬ ಫಲಕವನ್ನು ತಮ್ಮ ಅಂಗಡಿಗಳಲ್ಲಿ ನೇತು ಹಾಕುವಂತೆ ಸೂಚಿಸಬೇಕೆಂದು ಬ್ಯಾಂಕುಗಳಿಗೆ ಸೂಚಿಸಲಾಗಿದೆ.

English summary

RBI proposes to drastically cut MDR charges on debit card payments

Demonetisation drive that is gradually coming to an end, the Reserve Bank of India (RBI) has come out with yet another new push that seeks to empower people regarding digital payments – one of the goals of the note ban was to turn India into a less cash-dependent country by encouraging payments.
Story first published: Saturday, February 18, 2017, 13:09 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X