For Quick Alerts
ALLOW NOTIFICATIONS  
For Daily Alerts

ಕೇವಲ 3 ವರ್ಷಗಳಲ್ಲಿ 50 ಸಾವಿರ ಕೋಟಿ ಉಳಿತಾಯ

ಸಬ್ಸಿಡಿ ಹಣವನ್ನು ನೇರ ವರ್ಗಾವಣೆ ಮಾಡುವ ಕೇಂದ್ರ ಸರ್ಕಾರದ ಪರಿಣಾಮಕಾರಿ ನೀತಿಯಿಂದ ಕಳೆದ 3 ವರ್ಷಗಳಲ್ಲಿ ದಾಖಲೆಯ ರೂ. 50 ಸಾವಿರ ಕೋಟಿ ಹಣ ಉಳಿತಾಯ ಮಾಡಿದೆ.

By Siddu
|

ಸಬ್ಸಿಡಿ ಹಣವನ್ನು ನೇರ ವರ್ಗಾವಣೆ ಮಾಡುವ ಕೇಂದ್ರ ಸರ್ಕಾರದ ಪರಿಣಾಮಕಾರಿ ನೀತಿಯಿಂದ ಕಳೆದ 3 ವರ್ಷಗಳಲ್ಲಿ ದಾಖಲೆಯ ರೂ. 50 ಸಾವಿರ ಕೋಟಿ ಹಣ ಉಳಿತಾಯ ಮಾಡಿದೆ.

 

ಈ ಬೃಹತ್ ಪ್ರಮಾಣದ ಮೊತ್ತ ಪ್ರಸಕ್ತ ಹಣಕಾಸು ವರ್ಷದಲ್ಲಿ ಕೊಡಲಾಗುವ ಸಬ್ಸಿಡಿಯ ಒಟ್ಟು ಮೊತ್ತಕ್ಕೆ ಸಮನಾಗಿದ್ದು, ಭಾರೀ ಪ್ರಮಾಣದ ಸಬ್ಸಿಡಿ ಸೋರಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ತಡೆಗಟ್ಟಿದೆ.

 
ಕೇವಲ 3 ವರ್ಷಗಳಲ್ಲಿ 50 ಸಾವಿರ ಕೋಟಿ ಉಳಿತಾಯ

ಕೇಂದ್ರದ ಅಂಕಿ-ಅಂಶಗಳ ಪ್ರಕಾರ ಡಿ. 31, 2016 ರ ವರೆಗೆ ಒಟ್ಟು 50 ಸಾವಿರ ಕೋಟಿ ರೂಪಾಯಿ ಉಳಿತಾಯವಾಗಿದೆ. ಅಂದರೆ ನಕಲಿ ಫಲಾನುಭವಿಗಳಿಗೆ ಹಾಗೂ ಮಧ್ಯವರ್ತಿಗಳಿಗೆ ಹೋಗುತ್ತಿದ್ದ ಹಣವನ್ನು ತಡೆಗಟ್ಟಿರುವುದರಿಂದ ಒಂದು ವರ್ಷದ ಸಬ್ಸಿಡಿ ಮೊತ್ತವನ್ನು ಉಳಿತಾಯ ಮಾಡಿದಂತಾಗಿದೆ ಎಂದು ಇಲಾಖೆ ತಿಳಿಸಿದೆ.

ಕೇಂದ್ರ ಸರ್ಕಾರದಿಂದ ಕೊಡಲ್ಪಡುವ ಸಬ್ಸಿಡಿ ಪಾವತಿಯಾಗುವ ಒಟ್ಟು 533 ಯೋಜನೆಗಳಲ್ಲಿ 17 ಸಚಿವಾಲಯಗಳ 84 ಯೋಜನೆಗಳ ಸಬ್ಸಿಡಿಯನ್ನು ನೇರ ವರ್ಗಾವಣೆ ವ್ಯವಸ್ಥೆಯಡಿ ಪಾವತಿ ಮಾಡಲಾಗುತ್ತಿದೆ.

64 ಸಚಿವಾಲಯಗಳ ಯೋಜನೆಗಳ ಸಬ್ಸಿಡಿಯನ್ನು 2018 ರ ಮಾರ್ಚ್ 31 ರ ವೇಳೆಗೆ ನೇರ ವರ್ಗಾವಣೆ ಮಾಡುವ ವ್ಯವಸ್ಥೆಗೆ ಒಳಪಡಿಸಲಾಗುವುದರಿಂದ ಮುಂದಿನ ವರ್ಷದಲ್ಲಿ ಉಳಿತಾಯ ಮತ್ತಷ್ಟು ಹೆಚ್ಚಲಿದೆ.

Read more about: narendra modi money savings
English summary

Direct Benefit Transfer leads to Rs 50,000-crore savings for government in 3 years

Savings due to Direct Benefit Transfer (DBT) over the last three years have touched Rs 50,000 cr as on December 31, 2016, as per latest government figures. This amount is equivalent to the subsidy paid out under DBT in this financial year, implying nearly a year’s subsidy was saved.
Story first published: Wednesday, February 22, 2017, 10:36 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X