For Quick Alerts
ALLOW NOTIFICATIONS  
For Daily Alerts

ಬೆಂಗಳೂರು ದೇಶದ 3ನೇ ಶ್ರೀಮಂತ ನಗರ

ಭಾರತದ ಅತ್ಯಂತ ಶ್ರೀಮಂತ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಮೂರನೇ ಸ್ಥಾನ ಪಡೆದಿದೆ.

By Siddu
|

ಭಾರತದ ಅತ್ಯಂತ ಶ್ರೀಮಂತ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಮೂರನೇ ಸ್ಥಾನ ಪಡೆದಿದೆ.

 

ನ್ಯೂ ವರ್ಲ್ಡ್ ವೆಲ್ತ್ ವರದಿ ಪ್ರಕಾರ ವಾಣಿಜ್ಯ ನಗರಿ ಖ್ಯಾತಿಯ ಮುಂಬೈ ಮೊದಲ ಸ್ಥಾನ, ರಾಜಧಾನಿ ದೆಹಲಿ ಎರಡನೇ ಸ್ಥಾನ ಹಾಗೂ ಬೆಂಗಳೂರು ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಮುಂಬೈ

ಮುಂಬೈ

ಮೊದಲ ಸ್ಥಾನದಲ್ಲಿರುವ ಬಾಲಿವುಡ್ ಖ್ಯಾತಿಯ ಮುಂಬೈ ನಗರದ ಸಂಪತ್ತಿನ ಮೊತ್ತ 82 ಸಾವಿರ ಕೋಟಿ. ಇದು ವಾಣಿಜ್ಯ, ಪ್ಯಾಷನ್, ಎಂಟರ್ಟೇನ್ಮೆಂಟ್, ಬಂಡವಾಳ ಹೂಡಿಕೆ ಕ್ಷೇತ್ರದಲ್ಲಿ ಭಾರತದ ಶ್ರೇಷ್ಠ ಮತ್ತು ಪ್ರಖ್ಯಾತ ನಗರ. ಮುಂಬೈ ಎನ್ಎಸ್ಇ, ಬಿಎಸ್ಇ, ಆರ್ಬಿಐ ಮತ್ತು ಇನ್ನಿತರ ಅನೇಕ ಮಹತ್ವದ ಕಂಪನಿ, ವ್ಯವಹಾರಗಳಿವೆ. ಅಲ್ಲದೆ ಪ್ರಮುಖ ಬಂದರು ನಗರ. ದೇಶದ ಅತಿ ದೊಡ್ಡ ಕಂಪನಿಗಳಾದ ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಟಾಟಾ ಗ್ರೂಪ್ ಮತ್ತು ಆದಿತ್ಯ ಬಿರ್ಲಾ ಮುಂಬೈ ಹೊರತು ಪಡಿಸಿ ಜಗತ್ತಿನ ಅನೇಕ ಕಡೆಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.

ದೆಹಲಿ

ದೆಹಲಿ

ಭಾರತದ ರಾಜಧಾನಿ ದೆಹಲಿ ದೇಶದ ಎರಡನೇ ಶ್ರೀಮಂತ ನಗರಿ ಎಂಬ ಖ್ಯಾತಿ ಹೊಂದಿದ್ದು, 45 ಸಾವಿರ ಕೋಟಿ ಸಂಪತ್ತನ್ನು ಹೊಂದಿದೆ.
ಇದು ಅತಿ ಹೆಚ್ಚಿನ ಸರ್ಕಾರಿ ಉದ್ಯೋಗಿ ಮತ್ತು ಅರೆ ಸರ್ಕಾರಿ ಉದ್ಯೋಗಿಗಳನ್ನು ಹೊಂದಿರುವ ನಗರ. ಚಿಲ್ಲರೆ ಮಾರುಕಟ್ಟೆಯಲ್ಲಿ ಅತ್ಯಂತ ಲಾಭದಾಯಕದಲ್ಲಿರುವ ದೆಹಲಿ ವಿದೇಶಿ ನೇರ ಬಂಡವಾಳ ವನ್ನು ಆಕರ್ಷಿಸುತ್ತದೆ. ಮಾಹಿತಿ ತಂತ್ರಜ್ಞಾನ, ಹೋಟೆಲ್ ಉದ್ಯಮ, ಬ್ಯಾಂಕು, ಮಾದ್ಯಮ ಮತ್ತು ಪ್ರವಾಸೋದ್ಯಮ ಸೇವೆಯ ಮತ್ತು ಆದಾಯದ ಮೂಲಗಳಾಗಿವೆ.

ಬೆಂಗಳೂರು
 

ಬೆಂಗಳೂರು

ಸಿಲಿಕಾನ್ ಸಿಟಿ ಖ್ಯಾತಿಯ ಹಾಗೂ ಅನೇಕ ಐಟಿ ಕಂಪನಿಗಳಿಗೆ ಜನ್ಮ ನೀಡಿದ ನಗರ ಇದು. ಬೆಂಗಳೂರು 32 ಸಾವಿರ ಕೋಟಿ ಸಂಪತ್ತು ಹೊಂದಿದೆ. ಇದು ನವೊದ್ಯಮಗಳ ನೆಚ್ಚಿನ ತಾಣವಾಗಿದೆ. ದೇಶದಲ್ಲಿ ಶೇ. 35ರಷ್ಟು ಐಟಿ ಉದ್ಯೋಗಿಗಳು ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾರತದಿಂದ ವಿದೇಶಕ್ಕೆ ಹೋಗುವ ತಂತ್ರಜ್ಞರಲ್ಲಿ ಹೆಚ್ಚಿನವರು ಬೆಂಗಳೂರಿನವರೆ ಆಗಿದ್ದಾರೆ.

ಮಾನದಂಡ

ಮಾನದಂಡ

ದೇಶದ ಶ್ರೀಮಂತ ನಗರ ಎಂಬುದನ್ನು ಆಯಾ ನಗರಗಳ ಜಿಡಿಪಿ, ವಾಣಿಜ್ಯ ವ್ಯವಹಾರ, ಬಂಡವಾಳ ಹೂಡಿಕೆ, ಆರ್ಥಿಕ ಅಭಿವೃದ್ಧಿಯ ವೇಗ, ಅನ್ವೇಷಣೆ, ಪ್ರವಾಸೋದ್ಯಮ, ಸಂಸ್ಕೃತಿ ಇತ್ಯಾದಿ ಅಂಶಗಳು ಇದರ ಪ್ರಮುಖ ಸಹಜ ಮಾನದಂಡಗಳಾಗಿರುತ್ತವೆ.

ವಲಸೆಯಲ್ಲಿ ಹೆಚ್ಚಳ

ವಲಸೆಯಲ್ಲಿ ಹೆಚ್ಚಳ

ಜಾಗತಿಕವಾಗಿ ಸ್ವದೇಶದಿಂದ ವಲಸೆ ಹೋಗುತ್ತಿರುವ ಶ್ರೀಮಂತರ ಸಂಖ್ಯೆಯಲ್ಲಿ ಭಾರಿ ಏರಿಕೆ ಆಗಿದ್ದು, 2016ರಲ್ಲಿ ಜಗತ್ತಿನಾದ್ಯಂತ 82 ಸಾವಿರ ಅತಿ ಸಿರಿವಂತರು ವಲಸೆ ಹೋಗಿದ್ದಾರೆ. ಹೀಗೆ ಅತಿ ಹೆಚ್ಚು ವಲಸೆ ಹೋಗುವ ಅಗ್ರ ಐದು ದೇಶಗಳಲ್ಲಿ ಭಾರತವೂ ಇದೆ.

ಶೇ. 50 ವಲಸೆ

ಶೇ. 50 ವಲಸೆ

2015ನೇ ಸಾಲಿನಲ್ಲಿ ಭಾರತದಿಂದ ಬೇರೆ ದೇಶಗಳಿಗೆ ವಲಸೆ ಹೋದವರ ಸಂಖ್ಯೆ 4 ಸಾವಿರ. ಕಳೆದ ವರ್ಷಕ್ಕೆ ಹೋಲಿಸಿದರೆ 2016ರಲ್ಲಿ ವಲಸೆ ಹೋದ ಸಿರಿವಂತರ ಸಂಖ್ಯೆಯಲ್ಲಿ ಶೇ. 50 ರಷ್ಟು ಏರಿಕೆಯಾಗಿದೆ.

English summary

Mumbai richest Indian city with $820 billion wealth

New World Wealth report, India's financial capital here is home to 46,000 millionaires and 28 billionaires, and is followed in terms of wealth by Delhi in second place and Bengaluru in third place.
Story first published: Monday, February 27, 2017, 14:35 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X