For Quick Alerts
For Daily Alerts
ಪಿಎಫ್ ಪಿಂಚಣಿ ಪಡೆಯಲು ಆಧಾರ್ ಕಡ್ಡಾಯವಲ್ಲ
ಪಿಎಫ್ ಪಿಂಚಣಿ ಮೊತ್ತ ವಿತ್ ಡ್ರಾ ಮಾಡುವಾಗ ಆಧಾರ್ ಕಾರ್ಡ್ ಕಡ್ಡಾಯವಾಗಿ ಒದಗಿಸಬೇಕು ಎಂಬ ನಿಯಮವನ್ನು ಸಡಿಲಿಸಲಾಗಿದೆ ಎಂದು ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (EPFO) ತಿಳಿಸಿದೆ.
|
ಪಿಎಫ್ ಪಿಂಚಣಿ ಮೊತ್ತ ವಿತ್ ಡ್ರಾ ಮಾಡುವಾಗ ಆಧಾರ್ ಕಾರ್ಡ್ ಕಡ್ಡಾಯವಾಗಿ ಒದಗಿಸಬೇಕು ಎಂಬ ನಿಯಮವನ್ನು ಸಡಿಲಿಸಲಾಗಿದೆ ಎಂದು ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (EPFO) ತಿಳಿಸಿದೆ.
ಉದ್ಯೋಗಿಗಳ ಪಿಂಚಣಿ ಯೋಜನೆಯಡಿಯಲ್ಲಿ ಭವಿಷ್ಯ ನಿಧಿ(ಪಿಎಫ್) ವಿತ್ ಡ್ರಾ ಮಾಡುವಾಗ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿತ್ತು.
ಇನ್ಮುಂದೆ ನಿವೃತ್ತ ಪಿಂಚಣಿದಾರರು ಉಳಿತಾಯ ಖಾತೆಯಲ್ಲಿರುವ ಪಿಂಚಣಿ ಹಣ ವಿತ್ ಡ್ರಾ ಮಾಡಲು ಆಧಾರ್ ಕಾರ್ಡ್ ಬಳಸಬೇಕಾಗಿಲ್ಲ. ಸೇವಾ ಅವಧಿಯಲ್ಲಿನ ವೇತನದಲ್ಲಿ ಉಳಿಸಿದ ಮೊತ್ತ ಹಿಂಪಡೆಯುವಾಗ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿರುವುದು ಸರಿಯಲ್ಲ ಎನ್ನುವ ಅಸಮಾಧಾನದ ಮಾತುಗಳು ಕೇಳಿಬಂದಿದ್ದವು. ಹೀಗಾಗಿ ಆಧಾರ್ ಕಡ್ಡಾಯ ನಿಯಮವನ್ನು ಸಡಿಲಗೊಳಿಸಲಾಗಿದೆ.
10 ವರ್ಷಕ್ಕಿಂತ ಕಡಿಮೆ ಸೇವಾವಧಿ ಹೊಂದಿರುವ ಸದಸ್ಯರು 10C ಫಾರ್ಮ್ ಭರ್ತಿ ಮಾಡಿ ಸಲ್ಲಿಸುವುದರ ಮೂಲಕ ಭವಿಷ್ಯ ನಿಧಿ ಖಾತೆಯಲ್ಲಿರುವ ಪಿಂಚಣಿ ಹಣವನ್ನು ಹಿಂಪಡೆದುಕೊಳ್ಳಬಹುದು. ಆದರೆ, 10D ಅರ್ಜಿ ಸಲ್ಲಿಸುವ ಚಂದಾದರರು ಕಡ್ಡಾಯವಾಗಿ ಆಧಾರ್ ಕಾರ್ಡ್ ಒದಗಿಸಬೇಕಾಗುತ್ತದೆ.
English summary
Aadhaar not mandatory for withdrawals under EPS
Story first published: Wednesday, March 1, 2017, 14:01 [IST]