For Quick Alerts
ALLOW NOTIFICATIONS  
For Daily Alerts

ಜಿಯೋ ಧಮಾಕಾ..! 'ಫ್ರೈಮ್ ಆಫರ್' ಮೂಲಕ ಹೊಸ ಕೊಡುಗೆ ಘೋಷಣೆ

ಜಿಯೋ ಮಾರುಕಟ್ಟೆಗೆ ಪ್ರವೇಶ ಮಾಡಿದ ನಂತರ ಟೆಲಿಕಾಂ ಕಂಪನಿಗಳು ದರ ಸಮರದಲ್ಲಿ ಸ್ಪರ್ಧೆಯಲ್ಲಿ ತೊಡಗಿವೆ. ಒಂದರ ಮೇಲೊಂದು ಆಫರ್ ಗಳನ್ನು ಘೋಷಿಸುತ್ತಲೇ ಇವೆ.

By Siddu
|

ಜಿಯೋ ಮಾರುಕಟ್ಟೆಗೆ ಪ್ರವೇಶ ಮಾಡಿದ ನಂತರ ಟೆಲಿಕಾಂ ಕಂಪನಿಗಳು ದರ ಸಮರದಲ್ಲಿ ಸ್ಪರ್ಧೆಯಲ್ಲಿ ತೊಡಗಿವೆ. ಒಂದರ ಮೇಲೊಂದು ಆಫರ್ ಗಳನ್ನು ಘೋಷಿಸುತ್ತಲೇ ಇವೆ.

ಜಿಯೊ ಕೂಡ ತನ್ನ ಗ್ರಾಹಕರಿಗೆ ಹಲವು ಸಿಹಿ ಸುದ್ದಿಗಳನ್ನು ನೀಡುತ್ತಲೆ ಬಂದಿದೆ. ವೆಲ್‌ಕಮ್ ಮತ್ತು ನ್ಯೂ ಇಯರ್ ಆಫರ್ ಮೂಲಕ 6 ತಿಂಗಳಲ್ಲಿ 10 ಕೋಟಿ ಗ್ರಾಹಕರನ್ನು ಸಂಪಾದಿಸಿದ್ದ ಜಿಯೊ ಮತ್ತೊಂದು ಸಾಹಸಕ್ಕೆ ಮುಂದಾಗಿದೆ. ಮುಂದಿನ ಒಂದು ವರ್ಷ ಘೋಷಿಸಿರುವ ಫ್ರೈಮ್ ಆಫರ್ ಸಂಪೂರ್ಣ ವಿವರ ಇಲ್ಲಿದೆ ನೋಡಿ...

ಪ್ರೈಮ್ ಸದಸ್ಯತ್ವ ಆರಂಭ

ಪ್ರೈಮ್ ಸದಸ್ಯತ್ವ ಆರಂಭ

ರಿಲಯನ್ಸ್ ಮಾಲೀಕತ್ವದ ಜಿಯೋ ಮಾರ್ಚ್ 1ರಿಂದ ಜಿಯೋ ಪ್ರೈಮ್ ಮೆಂಬರ್ ಶಿಪ್ ಆರಂಭವಾಗಿದೆ. ಪ್ರಸ್ತುತ ಜಿಯೋ ಸಿಮ್ ಬಳಸುತ್ತಿರುವವರು ಜಿಯೋ ಪ್ರೈಮ್ ಸದಸ್ಯರಾಗಬಹುದಾಗಿದೆ. ಮಾರ್ಚ್ 01 ರಿಂದ ಮಾರ್ಚ್ 31ರ ವರೆಗೆ ಪ್ರೈಮ್ ಸದಸ್ಯತ್ವ ಅಭಿಯಾನ ನಡೆಯಲಿದೆ.

ಸದಸ್ಯತ್ವ ಹೇಗೆ?

ಸದಸ್ಯತ್ವ ಹೇಗೆ?

ಜಿಯೋ 10 ಕೋಟಿ ಗ್ರಾಹಕರನ್ನು ಹೊಂದಿದ ಸಂದರ್ಭದಲ್ಲಿ ಘೋಷಣೆ ಮಾಡಿದಂತೆ 99 ರೂ. ನೀಡಿ ಜಿಯೋ ಪ್ರೈಮ್ ಸದಸ್ಯರಾಗಬಹುದಾಗಿದ್ದು, ಈ ಮೂಲಕ ಒಂದು ವರ್ಷಗಳ ಕಾಲ ಹ್ಯಾಪಿ ನ್ಯೂ ಇಯರ್ ಆಫರ್ ಪಡೆಯಬಹುದಾಗಿದೆ. ಪ್ರಸ್ತುತ ರಿಲಯನ್ಸ್ ಜಿಯೋ ಗ್ರಾಹಕರು ಅನುಭವಿಸುತ್ತಿರುವ ಉಚಿತ ಕರೆ ಮತ್ತು ಡೇಟಾ ಸೇವೆಗಳನ್ನು ಬರುವ 12 ತಿಂಗಳುಗಳ ಕಾಲ ಕೇವಲ ರೂ. 99 ರಿಚಾರ್ಜ್ ಮಾಡುವುದರ ಮುಖೇನ ಮುಂದುವರಿಸಬಹುದು.

ಜಿಯೋ ಪ್ರೈಮ್ ಕಾಲಾವಧಿ
 

ಜಿಯೋ ಪ್ರೈಮ್ ಕಾಲಾವಧಿ

ರಿಲಾಯನ್ಸ್ ಜಿಯೋ ಪ್ರೈಮ್ ಸದಸ್ಯತ್ವ ಅಭಿಯಾನ ಮಾರ್ಚ್ 01 ರಿದ ಮಾರ್ಚ್ 31ರ ವರೆಗೆ ನಡೆಯಲಿದ್ದು, ಜಿಯೋ ಹ್ಯಾಪಿ ನ್ಯೂಯರ್ ಆಫರ್ ಏಪ್ರಿಲ್ 1, 2017 ರಿಂದ 2018ರ ಮಾರ್ಚ್ 31 ವರೆಗೆ ಒಂದು ವರ್ಷದ ಅವಧಿವರೆಗೆ ಉಪಯೋಗಿಸಬಹುದಾಗಿದೆ.

ಪ್ರೈಮ್ ಪ್ರಯೋಜನಗಳು

ಪ್ರೈಮ್ ಪ್ರಯೋಜನಗಳು

ಜಿಯೋ ಪ್ರೈಮ್ ಸದಸ್ಯತ್ವ ಪಡೆಯುವ ಗ್ರಾಹಕರು ಏಪ್ರಿಲ್ 1, 2017 ರಿಂದ 2018ರ ಮಾರ್ಚ್ 31 ವರೆಗೆ ಒಂದು ವರ್ಷದ ಅವಧಿಯಲ್ಲಿ ಹ್ಯಾಪಿ ನ್ಯೂ ಇಯರ್ ಆಫರ್ ಪಡೆಯಬಹುದಾಗಿದ್ದು, ಅನಿಯಮಿತ ಕರೆ ಮತ್ತು ಡೇಟಾ ಸೇವೆ ಹಾಗೂ ಜಿಯೋ ಆಪ್‌ಗಳ ಸೇವೆಯನ್ನು ಪಡೆಯಬಹುದಾಗಿದೆ. ಪ್ರತಿ ತಿಂಗಳಿಗೆ ರೂ. 303 ಪಾವತಿಸಬೇಕು.

ವಿಶೇಷ ಕೊಡುಗೆ ಏನು?

ವಿಶೇಷ ಕೊಡುಗೆ ಏನು?

ರಿಲಾಯನ್ಸ್ ಜಿಯೋ ಪ್ರೈಮ್ ಸದಸ್ಯತ್ವ ಪಡೆದ ಗ್ರಾಹಕರು ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಮ್ಯೂಸಿಕ್, ಜಿಯೋ ಎಕ್ಸ್‌ಪ್ರೆಸ್ ನ್ಯೂಸ್ ಆಪ್‌ಗಳ ಸೇವೆಗಳನ್ನು ಮುಂದಿನ ಒಂದು ವರ್ಷದ ಅವಧಿವರೆಗೆ ಉಚಿತವಾಗಿ ಬಳಸಬಹುದಾಗಿದೆ.

ಎಷ್ಟು ಪಾವತಿಸಬೇಕು?

ಎಷ್ಟು ಪಾವತಿಸಬೇಕು?

ಪ್ರೈಮ್ ಸದಸ್ಯತ್ವ ಪಡೆಯಲು ಗ್ರಾಹಕರು ಒಂದು ಬಾರಿ 99 ರೂ.ಗಳನ್ನು ಪಾವತಿ ಮಾಡಬೇಕು. ಜತೆಗೆ ಒಂದು ವರ್ಷಗಳ ಕಾಲ ಹ್ಯಾಪಿ ನ್ಯೂ ಇಯರ್ ಸೇವೆಯನ್ನು ಪಡೆಯಲು ಪ್ರತಿ ತಿಂಗಳು ರೂ. 303 ಪಾವತಿ ಮಾಡಬೇಕಾಗಿದೆ. ಇದರಂತೆ ಪ್ರತಿ ದಿನಕ್ಕೆ 10 ರೂ. ಪಾವತಿ ಮಾಡಿದಂತಾಗುತ್ತದೆ.

ಲಭ್ಯವಿರುವ ಸೇವೆಗಳು

ಲಭ್ಯವಿರುವ ಸೇವೆಗಳು

ಗ್ರಾಹಕರು ಪ್ರತಿ ತಿಂಗಳು ರೂ. 303 ಪಾವತಿ ಮಾಡಿದರೆ ಪ್ರತಿ ದಿನ 1GB 4G ಡೇಟಾ ಪಡೆಯಬಹುದಾಗಿದೆ. ಜತೆಗೆ ಒಂದು ವರ್ಷ ಉಚಿತವಾಗಿ ಕರೆ ಮಾಡುವ ಕೊಡುಗೆಗಳನ್ನು ಪಡೆಯಬಹುದಾಗಿದೆ. ಒಂದು ವರ್ಷದ ಅವದಿಯಲ್ಲಿ ರೂ. 10,000 ಮೌಲ್ಯದ ಜಿಯೋ ಮೀಡಿಯಾ ಸೇವೆಯನ್ನು ಪಡೆಯಬಹುದಾಗಿದೆ.

ಪ್ರೈಮ್ ಸದಸ್ಯರಾಗುವುದು ಹೇಗೆ?

ಪ್ರೈಮ್ ಸದಸ್ಯರಾಗುವುದು ಹೇಗೆ?

ಮಾರ್ಚ್ 01 ರಿಂದ 31ರ ವರೆಗೆ ಜಿಯೋ ಪ್ರೈಮ್ ಸದಸ್ಯರಾಗಲು ಅವಕಾಶವಿದೆ. ಗ್ರಾಹಕರು ಸುಲಭವಾಗಿ ನಿಮ್ಮ ಸ್ಮಾರ್ಟ್‌ಪೋನಿನಲ್ಲಿರುವ ಮೈ ಜಿಯೋ ಆಪ್ ಮೂಲಕ ಸದಸ್ಯರಾಗಬಹುದು. ಇಲ್ಲದಿದ್ದರೆ ರಿಲಯನ್ಸ್ ಡಿಜಿಟಲ್, ಜಿಯೋ ರಿಟೆಲ್ ಸ್ಟೋರ್ ಇಲ್ಲವೇ ಜಿಯೋ ಪಾಟ್ನರ್ ಸ್ಟೋರ್ ಗೆ ಭೇಟಿ ನೀಡಿ ಸದಸ್ಯತ್ವ ಪಡೆಯಬಹುದಾಗಿದೆ.

ಜಿಯೋ 5G ಸೇವೆ

ಜಿಯೋ 5G ಸೇವೆ

ದೇಶದ ಗ್ರಾಹಕರಿಗೆ ಸ್ಯಾಮ್‌ಸಂಗ್ ಸಹಭಾಗಿತ್ವದಲ್ಲಿ 5G ಸೇವೆ ನೀಡಲು ರಿಲಾಯನ್ಸ್ ಜಿಯೊ ಮುಂದಾಗಿದೆ. ಇದನ್ನು ಸ್ಯಾಮ್‌ಸಂಗ್ ಸ್ಪಷ್ಟಪಡಿಸಿದೆ.

ಶೇ. 90ರಷ್ಟು ಸೇವೆ ವಿಸ್ತಾರ

ಶೇ. 90ರಷ್ಟು ಸೇವೆ ವಿಸ್ತಾರ

ಜಿಯೋ 5G ಯೋಜನೆ ಮೂಲಕ ಗ್ರಾಮೀಣ ಮತ್ತು ನಗರ ಪ್ರದೇಶಗಳ ಶೇ.90ರಷ್ಟು ಗ್ರಾಹಕರಿಗೆ ಸೇವೆ ಪೂರೈಸಲು ಜಿಯೊ ಮುಂದಾಗಿದೆ. ಪ್ರತಿಯೊಬ್ಬರಿಗೂ ಅಂತರ್ಜಾಲ ಸೇವೆ ಪೂರೈಸುವುದು ಜಿಯೊ ಉದ್ದೇಶವಾಗಿದೆ.

ಜಿಯೊ ಹೊಸ ಶಕೆ!

ಜಿಯೊ ಹೊಸ ಶಕೆ!

ನಗದು ರಹಿತದ ಡಿಜಿಟಲ್ ಇಂಡಿಯಾದ ವ್ಯವಸ್ಥೆಯಲ್ಲಿ 170 ದಿನಗಳಲ್ಲಿ 10 ಕೋಟಿ ಗ್ರಾಹಕರನ್ನು ಹೊಂದಿರುವ ನಾವು ಹೊಸ ಶಕೆ ಆರಂಭಕ್ಕೆ ಮುಂದಾಗಿದ್ದೇವೆ ಎಂದು ರಿಲಾಯನ್ಸ್ ಜಿಯೊ ಮಂಡಳಿ ತಿಳಿಸಿದೆ. ಜಿಯೋ ಧಮಾಕಾ..! ಮುಂದಿನ ಒಂದು ವರ್ಷ ಸಂಪೂರ್ಣ ಉಚಿತ!

English summary

Jio Prime membership opens on March 1: New tariff plan

Reliance Jio is all set to begin enrolling customers on to its Jio Prime membership plans from March 1, effectively offering 1 GB high-speed 4G data and free calls for Rs 10 a day for an year.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X