For Quick Alerts
ALLOW NOTIFICATIONS  
For Daily Alerts

H1-B ವೀಸಾ ನೀತಿ: ದೇಶದ ಐಟಿ ವಲಯಕ್ಕೆ ಇನ್ನೊಂದು ಅಘಾತ!

H1-B ವೀಸಾ ನೀತಿ ಭಾರತದ ಮೇಲಂತೂ ಅತಿ ಕೆಟ್ಟ ಪರಿಣಾಮವನ್ನುಂಟು ಮಾಡಿದ್ದು, ಇದೀಗ H1-B ವೀಸಾ ನೀತಿ ಕುರಿತು ಕೆಟ್ಟ ಸುದ್ದಿಯೊಂದು ಬಂದಿದೆ.

By Siddu
|

H1-B ವೀಸಾ ನೀತಿ ಭಾರತದ ಮೇಲಂತೂ ಅತಿ ಕೆಟ್ಟ ಪರಿಣಾಮವನ್ನುಂಟು ಮಾಡಿದ್ದು, ಇದೀಗ H1-B ವೀಸಾ ನೀತಿ ಕುರಿತು ಅಘಾತಕಾರಿ ಸುದ್ದಿಯೊಂದು ಬಂದಿದೆ.

H1-B ವೀಸಾ ತ್ವರಿತ ವಿಲೇವಾರಿಗಾಗಿ ಏಪ್ರಿಲ್ 3 ರಿಂದ ಪ್ರೀಮಿಯಂ ಪ್ರೊಸೆಸಿಂಗ್ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಅಮೆರಿಕ ಪೌರತ್ವ ಮತ್ತು ವಲಸೆ ಸೇವೆ (USCIS) ತಿಳಿಸಿದೆ.

H1-B ವೀಸಾ ನೀತಿ: ದೇಶದ ಐಟಿ ವಲಯಕ್ಕೆ ಇನ್ನೊಂದು ಅಘಾತ!

ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಈ ಕ್ರಮದಿಂದಾಗಿ ದೇಶದ ಆಡಳಿತಕ್ಕೆ ಸಾಕಷ್ಟು ಸಹಾಯಕವಾಗಲಿದೆ. H1-B ವೀಸಾ ವಿಲೇವಾರಿ ಮಾಡುವ ಸಮಯದ ಉಳಿತಾಯ ಆಗಲಿದೆ ಎಂದು ಅಮೆರಿಕ ಪೌರತ್ವ ಮತ್ತು ವಲಸೆ ಸೇವೆ (USCIS) ಹೇಳಿದೆ.

ಈಗಾಗಲೇ ಎಚ್1ಬಿ ವೀಸಾಗಾಗಿ ಸಲ್ಲಿಸಲಾಗಿರುವ H1-B ವೀಸಾ ಅರ್ಜಿಗಳನ್ನು ವಿಲೇವಾರಿ ಮಾಡಲು ಈ ಕ್ರಮ ಸಹಾಯವಾಗಲಿದೆ ಎನ್ನಲಾಗಿದೆ. ಈ ಕ್ರಮದಿಂದಾಗಿ H1-B ವೀಸಾವನ್ನು ಶೀಘ್ರವಾಗಿ ಪಡೆಯಬಯಸುವವರು ಫಾರ್ಮ್ I-907 ಅನ್ನು ಸಲ್ಲಿಸುವಂತಿಲ್ಲ.

ಈಗಾಗಲೇ ದೇಶದ ಪ್ರಮುಖ ಐಟಿ(Information Technology) ಕಂಪನಿಗಳು, ಷೇರುಪೇಟೆ ಹಾಗೂ ದೇಶದ ಸಾವಿರಾರು ಐಟಿ ಉದ್ಯೋಗಿಗಳ ಭಾರೀ ಪರಿಣಾಮ ಬೀರಿದೆ.

H1-B ವೀಸಾ ನೀತಿ: ದೇಶದ ಐಟಿ ವಲಯಕ್ಕೆ ಇನ್ನೊಂದು ಅಘಾತ!

H1-B ವೀಸಾ ಏನು?

ವೀಸಾ ನೀತಿ H1-B ವೀಸಾದ ಅಡಿಯಲ್ಲಿ ಪ್ರತಿ ವರ್ಷ ಭಾರತದ ಐಟಿ ಇಂಡಸ್ಟ್ರಿ ಲಕ್ಷ ಲಕ್ಷ ಉದ್ಯೋಗಿಗಳನ್ನು ಯುಎಸ್ ಗೆ ಕಳುಹಿಸಿಕೊಡುತ್ತದೆ. ಇದರಿಂದಾಗಿ ಅಮೆರಿಕನ್ನರ ಉದ್ಯೋಗದ ಅವಕಾಶಗಳಿಗೆ ಹಾನಿ ಮಾಡಿದಂತಾಗುತ್ತದೆ ಎನ್ನುವುದು ಡೊನಾಲ್ಡ್ ಟ್ರಂಪ್ ಅಭಿಪ್ರಾಯ. H1-B ವೀಸಾ ಅಮೆರಿಕಾದ ಕಂಪನಿಗಳಲ್ಲಿ ಕೆಲಸ ಮಾಡಲು ವಿದೇಶದಿಂದ ತಜ್ಞ ನೌಕರರನ್ನು ನೇಮಿಸಿಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಈ ಹಿನ್ನೆಲೆಯಲ್ಲಿ ಅಮೆರಿಕಾದ ಕೆಲಸಗಾರರಿಗೆ ಉದ್ಯೋಗ ಸಿಗುತ್ತಿಲ್ಲ ಎನ್ನುವುದು ಟ್ರಂಪ್ ವಾದ. ಅದರಲ್ಲೂ ಭಾರತೀಯ ತಜ್ಞ ಉದ್ಯೋಗಿಗಳು ಯುಸ್ ನಲ್ಲಿ ಹೆಚ್ಚಿನ ಉದ್ಯೋಗಗಳನ್ನು ಪಡೆದುಕೊಳ್ಳುತ್ತಿರುವುದರಿಂದಾಗಿ ವಾಲ್ಟ್ ಡಿಸ್ನಿ ವರ್ಲ್ಡ್ ಉದ್ಯೋಗಿಗಳು ತಮ್ಮ ನೌಕರಿಯನ್ನು ಕಳೆದುಕೊಳ್ಳುತ್ತಿದ್ದಾರೆ. H1-B ಹೊಸ ಬಿಲ್: ದೇಶದ 10 ಐಟಿ ಕಂಪನಿಗಳಿಗೆ ಎದುರಾಗಿದೆ ಭೀತಿ

English summary

US suspends 'premium processing' for H-1B visas

In a move that could restrict access to foreign engineers, the U.S. Citizenship and Immigration Services (USCIS) announced tonight that it will "temporarily suspend premium processing for all H-1B petitions.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X