For Quick Alerts
ALLOW NOTIFICATIONS  
For Daily Alerts

ಬ್ಯಾಂಕ್ ಶುಲ್ಕ ವಿರುದ್ಧ ಗ್ರಾಹಕರ ಆಕ್ರೋಶ

ಬ್ಯಾಂಕುಗಳು ನಗದು ವಹಿವಾಟಿನ ಮೇಲೆ ಶುಲ್ಕ ವಿಧಿಸಲು ಮುಂದಾಗಿರುವ ಖಾಸಗಿ ವಲಯದ ಬ್ಯಾಂಕುಗಳ ಮತ್ತು ಭಾರತೀಯ ಸ್ಟೇಟ್‌ ಬ್ಯಾಂಕ್‌ ನಿಲುವನ್ನು ಬ್ಯಾಂಕು ಗ್ರಾಹಕರು ತೀವ್ರವಾಗಿ ಖಂಡಿಸಿದ್ದಾರೆ.

|

ಬ್ಯಾಂಕುಗಳು ನಗದು ವಹಿವಾಟಿನ ಮೇಲೆ ಶುಲ್ಕ ವಿಧಿಸಲು ಮುಂದಾಗಿರುವ ಖಾಸಗಿ ವಲಯದ ಬ್ಯಾಂಕುಗಳ ಮತ್ತು ಭಾರತೀಯ ಸ್ಟೇಟ್‌ ಬ್ಯಾಂಕ್‌ ನಿಲುವನ್ನು ಗ್ರಾಹಕರು ತೀವ್ರವಾಗಿ ಖಂಡಿಸಿದ್ದಾರೆ.

ದೇಶದಲ್ಲಿ ನಗದುರಹಿತ ವ್ಯವಹಾರದ ಉತ್ತೇಜನಕ್ಕಾಗಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಬ್ಯಾಂಕುಗಳು ಹೇಳಿವೆ.

ಲೋಕಲ್‌ ಸರ್ಕಲ್ಸ್ ಸಂಸ್ಥೆ ದೇಶದಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಗ್ರಾಹಕರು ಇದೊಂದು ಕೆಟ್ಟ ನಿರ್ಧಾರವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಎಸ್ಬಿಐ ಖಾತೆಯಲ್ಲಿ ಮಿನಿಮಮ್ ಬ್ಯಾಲೆನ್ಸ್ ಇಲ್ಲದಿದ್ದರೆ ದಂಡ

11,081 ಜನರು ಸಮೀಕ್ಷೆಯಲ್ಲಿ ಭಾಗಿ

11,081 ಜನರು ಸಮೀಕ್ಷೆಯಲ್ಲಿ ಭಾಗಿ

ಲೋಕಲ್‌ ಸರ್ಕಲ್ಸ್ ಕೈಗೊಂಡ ಸಮೀಕ್ಷೆಯಲ್ಲಿ 11,081 ನಾಗರಿಕರು ಪಾಲ್ಗೊಂಡಿದ್ದರು. ಬ್ಯಾಂಕು ಶಾಖೆಗಳಲ್ಲಿ ನಡೆಸುವ ನಾಲ್ಕು ಅಥವಾ ಅದಕ್ಕಿಂತ ಹೆಚ್ಚಿನ ವ್ಯವಹಾರಗಳಿಗೆ ಶುಲ್ಕ ವಿಧಿಸುವುದನ್ನು ರದ್ದುಪಡಿಸಬೇಕು ಎಂದು ಶೇ. 70ರಷ್ಟು ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ.

ಶೇ. 26ರಷ್ಟು ಗ್ರಾಹಕರಿಂದ ಪೂರಕ ಪ್ರತಿಕ್ರಿಯೆ

ಶೇ. 26ರಷ್ಟು ಗ್ರಾಹಕರಿಂದ ಪೂರಕ ಪ್ರತಿಕ್ರಿಯೆ

ಪ್ರತಿ ತಿಂಗಳಿಗೆ ನಾಲ್ಕು ವ್ಯವಹಾರ ನಡೆಸಲು ಅವಕಾಶ ಇರುವುದು ನಮಗೆ ಸಾಕು. ಈ ಶುಲ್ಕದ ಬಗ್ಗೆ ನಾವು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಸಮೀಕ್ಷೆಯಲ್ಲಿ ಭಾಗವಹಿಸಿದ ಶೇ. 26ರಷ್ಟು ಗ್ರಾಹಕರು ಪ್ರತಿಕ್ರಿಯಿಸಿದ್ದಾರೆ. ನಗದುರಹಿತ ವ್ಯವಹಾರ ನಡೆಸುವುದಾಗಿ ಶೇ. 4ರಷ್ಟು ಗ್ರಾಹಕರು ಆಸಕ್ತಿ ತೋರಿದ್ದಾರೆ.

ಡಿಜಿಟಲ್‌ ಪಾವತಿ ವೆಚ್ಚ

ಡಿಜಿಟಲ್‌ ಪಾವತಿ ವೆಚ್ಚ

ಬ್ಯಾಂಕುಗಳು ಶುಲ್ಕ ವಿಧಿಸುವುದರಿಂದ ಗ್ರಾಹಕರು ಒಂದೇ ಬಾರಿಗೆ ಹೆಚ್ಚು ಹಣ ಪಡೆಯಬಹುದು. ಇದರಿಂದ ನಗದು ರಹಿತ ವ್ಯವಹಾರ ಹೆಚ್ಚಲಿದೆ. ಜತೆಗೆ ಡಿಜಿಟಲ್‌ ಪಾವತಿ ವೆಚ್ಚಗಳ ಬಗ್ಗೆಯೂ ಹಲವರು ಆತಂಕ ವ್ಯಕ್ತಪಡಿಸಿದ್ದಾರೆ.

ಡೆಬಿಟ್ /ಕ್ರೆಡಿಟ್‌ ಕಾರ್ಡ್‌ ಶುಲ್ಕ ವಿರುದ್ಧ ಆಕ್ರೋಶ

ಡೆಬಿಟ್ /ಕ್ರೆಡಿಟ್‌ ಕಾರ್ಡ್‌ ಶುಲ್ಕ ವಿರುದ್ಧ ಆಕ್ರೋಶ

ಡೆಬಿಟ್/ಕ್ರೆಡಿಟ್‌ ಕಾರ್ಡ್‌ ಬಳಕೆ ಮಾಡಿದ್ದಕ್ಕೆ ವರ್ತಕರು ಶೇ. 2ರಷ್ಟು ಹೆಚ್ಚುವರಿ ಶುಲ್ಕ ವಿಧಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡೆಬಿಟ್ ಕಾರ್ಡ್‌ ಬಳಕೆ ಮೇಲಿನ ಶುಲ್ಕವನ್ನು ಶೂನ್ಯಕ್ಕೆ ಇಳಿಸಬೇಕು ಎಂದು ಹೇಳಿದ್ದಾರೆ.

Read more about: ಬ್ಯಾಂಕು bank money sbi
English summary

Consumer outrage against bank charges

Considers to impose an expensive fee for cash trade takes place within the bank branches of State Bank of India (SBI) and private sector banks have sharply contradicted the stance of bank customers.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X