For Quick Alerts
ALLOW NOTIFICATIONS  
For Daily Alerts

ಭ್ರಷ್ಟಾಚಾರದಲ್ಲಿ ಭಾರತ ನಂಬರ್ ಒನ್: ವರದಿ

ಏಷ್ಯಾ ಪೆಸಿಫಿಕ್ ವಲಯದ ದೇಶಗಳಲ್ಲಿ ಲಂಚ ಪಡೆಯುವುದರಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ ಎಂದು ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ಸಂಸ್ಥೆ ಸಮೀಕ್ಷಾ ವರದಿ ಬಹಿರಂಗ ಪಡಿಸಿದೆ.

By Siddu
|

ಕೇಂದ್ರ ಸರ್ಕಾರ ಭ್ರಷ್ಟಮುಕ್ತ ದೇಶದ ನಿರ್ಮಾಣಕ್ಕಾಗಿ ಎಷ್ಟೇ ಪ್ರಯತ್ನ ಮಾಡುತ್ತಿದ್ದರೂ ಈ ಪಿಡುಗಿನ ಮೇಲೆ ಯಾವುದೇ ಪರಿಣಾಮಗಳು ಬೀರಿಲ್ಲ ಎಂಬುದಕ್ಕೆ ಈ ವರದಿ ಸಾಕ್ಷಿಯಾಗಿದೆ.

ಏಷ್ಯಾ ಪೆಸಿಫಿಕ್ ವಲಯದ ದೇಶಗಳಲ್ಲಿ ಲಂಚ ಪಡೆಯುವುದರಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ ಎಂದು ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ಸಂಸ್ಥೆಯ ಸಮೀಕ್ಷಾ ವರದಿ ತಿಳಿಸಿದೆ.

10 ಜನರಲ್ಲಿ ಏಳು ಮಂದಿ ಲಂಚ

10 ಜನರಲ್ಲಿ ಏಳು ಮಂದಿ ಲಂಚ

ಆಶ್ಚರ್ಯಕರ ರೀತಿಯಲ್ಲಿ ದೇಶದಲ್ಲಿ ಸರ್ಕಾರಿ ಸೇವೆಗಳನ್ನು ಪಡೆಯುವ ಪ್ರತಿ 10 ಜನರಲ್ಲಿ 7 ಜನರು ಅಧಿಕಾರಿಗಳಿಂದ ಕೆಲಸ ಮಾಡಿಸಿಕೊಳ್ಳುವುದಕ್ಕಾಗಿ ಲಂಚ ಪಾವತಿಸುತ್ತಾರೆ ಎಂದು ವರದಿ ಹೇಳಿದೆ.

ಭಾರತ ನಂಬರ್ ಒನ್

ಭಾರತ ನಂಬರ್ ಒನ್

ಭ್ರಷ್ಟಾಚಾರ ತಡೆಗಾಗಿ ಹಲವು ನಿಯಮಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದರು ಏಷ್ಯಾ ಪೆಸಿಫಿಕ್ ವಲಯದ 16 ರಾಷ್ಟ್ರಗಳಲ್ಲಿ ಲಂಚ ಪಡೆಯುವುದರಲ್ಲಿ ಭಾರತವೇ ಮೊದಲ ಸ್ಥಾನದಲ್ಲಿದೆ.

20 ಸಾವಿರ ಜನರ ಸಂದರ್ಶನ

20 ಸಾವಿರ ಜನರ ಸಂದರ್ಶನ

ಏಷ್ಯಾ- ಪೆಸಿಫಿಕ್ ವಲಯದ ಒಟ್ಟು 16 ದೇಶಗಳಲ್ಲಿನ 20 ಸಾವಿರ ಜನರನ್ನು ಸಂದರ್ಶನ ಮಾಡಿ ಈ ವರದಿ ಸಿದ್ಧಪಡಿಸಲಾಗಿದೆ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ಸಂಸ್ಥೆ ಹೇಳಿದೆ.

ಧಾರ್ಮಿಕ ನಾಯಕರು ಹಿಂದೆ ಬಿದ್ದಿಲ್ಲ!

ಧಾರ್ಮಿಕ ನಾಯಕರು ಹಿಂದೆ ಬಿದ್ದಿಲ್ಲ!

ಸಾರ್ವಜನಿಕರಿಂದ ಲಂಚ ಪಡೆಯುವುದರಲ್ಲಿ ಧಾರ್ಮಿಕ ನಾಯಕರು ಕೂಡ ಹಿಂದೆ ಬಿದ್ದಿಲ್ಲ. ಸಮೀಕ್ಷೆಗೆ ಒಳಪಡಿಸಿದ ಶೇ. 71 ಮಂದಿ ಧಾರ್ಮಿಕ ನಾಯಕಗಳು ಕೂಡ ಭ್ರಷ್ಟರು ಎಂದು ಹೇಳಿದ್ದಾರೆ ಎಂದು ಈ ಸಮೀಕ್ಷಾ ವರದಿ ತಿಳಿಸಿದೆ.

ಪೊಲೀಸರು ನಂಬರ್ ಒನ್

ಪೊಲೀಸರು ನಂಬರ್ ಒನ್

ಸಾರ್ವಜನಿಕರಿಂದ ಲಂಚ ಪಡೆಯುವುದರಲ್ಲಿ ಪೊಲೀಸರೇ ಮುಂದಿದ್ದಾರೆ ಎಂದು ಶೇ. 85ರಷ್ಟು ಜನರು ಹೇಳಿದ್ದಾರೆ. ಶೇ. 84ರಷ್ಟು ಜನರು ಸರ್ಕಾರಿ ಅಧಿಕಾರಿಗಳು ಲಂಚ ಕೇಳುತ್ತಾರೆಂದು ಹೇಳಿದ್ದಾರೆ.

ನಂತರದ ಭ್ರಷ್ಟರ ಸ್ಥಾನದಲ್ಲಿ

ನಂತರದ ಭ್ರಷ್ಟರ ಸ್ಥಾನದಲ್ಲಿ

ಮೂರನೇ ಸ್ಥಾನದಲ್ಲಿ ಉದ್ಯಮಪತಿಗಳು( ಶೇ. 79ರಷ್ಟು ಜನ), ನಾಲ್ಕನೇ ಸ್ಥಾನದಲ್ಲಿ ಸ್ಥಳೀಯ ಕೌನ್ಸಿಲರ್‌ಗಳು (ಶೇ. 78), ಐದನೇ ಸ್ಥಾನದಲ್ಲಿ ಸಂಸದರು (ಶೇ. 76), ಆರನೇ ಸ್ಥಾನದಲ್ಲಿ ತೆರಿಗೆ ಅಕಾರಿಗಳು (ಶೇ. 74) ಹಾಗೂ ಏಳನೇ ಸ್ಥಾನದಲ್ಲಿ ಧಾರ್ಮಿಕ ನಾಯಕರು ಮತ್ತು ಎಂಟನೇ ಸ್ಥಾನದಲ್ಲಿ ನ್ಯಾಯಾಧೀಶರು-ಮ್ಯಾಜಿಸ್ಟ್ರೇಟ್‌ಗಳು(ಶೇ. 66) ಇದ್ದಾರೆ ಎಂದು ವರದಿ ಬಹಿರಂಗ ಪಡಿಸಿದೆ.

ಈ ಸೇವೆಗಳಿಗಾಗಿ ಲಂಚ

ಈ ಸೇವೆಗಳಿಗಾಗಿ ಲಂಚ

ಸಾರ್ವಜನಿಕ ಆಸ್ಪತ್ರೆ, ಸಾರ್ವಜನಿಕ ಶಾಲೆ, ಗುರುತಿನ ಚೀಟಿ, ಪರ್ಮಿಟ್, ಸಾರ್ವಜನಿಕ ಸೇವೆ, ಪೊಲೀಸ್ ಇಲಾಖೆಗಳಿಂದ ಸೇವೆ ಪಡೆಯಲು ಜನರು ಲಂಚ ನೀಡುತ್ತಾರೆ. ಆದರೆ ನ್ಯಾಯಾಲಯಗಳಲ್ಲಿ ಭ್ರಷ್ಟತೆ ಪ್ರಮಾಣ ಕಡಿಮೆ ಎಂದು ವರದಿ ತಿಳಿಸಿದೆ.

2ನೇ ಸ್ಥಾನದಲ್ಲಿ ವಿಯೆಟ್ನಾಂ

2ನೇ ಸ್ಥಾನದಲ್ಲಿ ವಿಯೆಟ್ನಾಂ

ಭಾರತದಲ್ಲಿ ಪ್ರತಿ 10 ಜನರಲ್ಲಿ 7 ಜನರು ಲಂಚ ಪಾವತಿಸಿದರೆ, ಎರಡನೇ ಸ್ಥಾನದಲ್ಲಿರುವ ವಿಯೆಟ್ನಾಂನಲ್ಲಿ ಸರ್ಕಾರಿ ಸೇವೆ ಪಡೆಯಲು ಶೇ. 65ರಷ್ಟು ಜನರು ಲಂಚ ಪಾವತಿಸುತ್ತಾರೆ.

ಜಪಾನ್‌

ಜಪಾನ್‌

ಜಪಾನ್‌ ದೇಶದ ಕೇವಲ ಶೇ. 0.2ರಷ್ಟು ಜನರು ಮಾತ್ರ ಲಂಚ ಪಾವತಿಸಿರುವುದಾಗಿ ಹೇಳಿಕೊಂಡಿದ್ದರೆ, ಸೌತ್ ಕೋರಿಯಾದ ಶೇ. 3ರಷ್ಟು ಜನರು ಲಂಚ ನೀಡಿರುವುದಾಗಿ ಹೇಳಿದ್ದಾರೆ.

3/1ರಷ್ಟು ಲಂಚ

3/1ರಷ್ಟು ಲಂಚ

ಸಮೀಕ್ಷೆಗೆ ಒಳಪಟ್ಟ ಒಟ್ಟು 16 ದೇಶಗಳ ಜನರ ಪೈಕಿ 90 ಕೋಟಿ ಅಥವಾ ಮೂರನೇ ಒಂದರಷ್ಟು ಜನರು ಲಂಚ ಕೊಟ್ಟಿದ್ದಾರೆ ಎಂದು ವರದಿ ಆಗಿದೆ.

ಚೀನಾದಲ್ಲಿ ಭ್ರಷ್ಟಾಚಾರ ಕಡಿಮೆ

ಚೀನಾದಲ್ಲಿ ಭ್ರಷ್ಟಾಚಾರ ಕಡಿಮೆ

ಚೀನಾದಲ್ಲಿ ಕಳೆದ ವರ್ಷಗಳಿಂದ ಭ್ರಷ್ಟಾಚಾರ ಶೇ. 73ರಷ್ಟು ಕಡಿಮೆಯಾಗಿದ್ದು, ಶ್ರೀಮಂತರಿಗೆ ಲಂಚದ ಬಿಸಿ ತಟ್ಟಿದೆ ಎಂದು ತಿಳಿಸಿದೆ. ಆದರೆ ಭಾರತ, ಪಾಕಿಸ್ತಾನ, ಥಾಯ್ಲೆಂಡ್, ಮಯನ್ಮಾರ್, ಶ್ರೀಲಂಕಾ ದೇಶಗಳಲ್ಲಿ ಸಾರ್ವಜನಿಕರಿಗೆ ಭ್ರಷ್ಟಾಚಾರದಿಂದ ಸಮಸ್ಯೆಯಾಗುತ್ತಿದೆ.

English summary

India tops bribing chart in Asia Pacific: Survey

India has got the dubious distinction of having the highest bribery rate in the Asia Pacific, with a survey revealed on Tuesday that more than two-thirds of Indians had to pay 'tea money' or fork out other forms of bribe to get public services.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X