For Quick Alerts
ALLOW NOTIFICATIONS  
For Daily Alerts

ಗ್ರಾಹಕರ ಅನುಕೂಲಕ್ಕಾಗಿ 2% ಶುಲ್ಕ ಹಿಂಪಡೆದ ಪೇಟಿಎಂ

ದೇಶದ ಪ್ರಮುಖ ಡಿಜಿಟಲ್ ವಾಲೆಟ್ ಸಂಸ್ಥೆ ಪೇಟಿಎಂ ಕ್ರೆಡಿಟ್‌ ಕಾರ್ಡ್‌ನಿಂದ ಮೊಬೈಲ್‌ ವಾಲೆಟ್‌ಗೆ ಹಣ ವರ್ಗಾವಣೆ ಮೇಲೆ ಶೇ. 2ರಷ್ಟು ಶುಲ್ಕ (ಎಲ್ಲ ತೆರಿಗೆ ಸೇರಿ) ವಿಧಿಸುವುದಾಗಿ ಗುರುವಾರ ಘೋಷಿಸಿತ್ತು.

By Siddu
|

ದೇಶದ ಪ್ರಮುಖ ಡಿಜಿಟಲ್ ವಾಲೆಟ್ ಸಂಸ್ಥೆ ಪೇಟಿಎಂ ಕ್ರೆಡಿಟ್‌ ಕಾರ್ಡ್‌ನಿಂದ ಮೊಬೈಲ್‌ ವಾಲೆಟ್‌ಗೆ ಹಣ ವರ್ಗಾವಣೆ ಮೇಲೆ ಶೇ. 2ರಷ್ಟು ಶುಲ್ಕ (ಎಲ್ಲ ತೆರಿಗೆ ಸೇರಿ) ವಿಧಿಸುವುದಾಗಿ ಗುರುವಾರ ಘೋಷಿಸಿತ್ತು.

ಗ್ರಾಹಕರ ಅನುಕೂಲಕ್ಕಾಗಿ 2% ಶುಲ್ಕ ಹಿಂಪಡೆದ ಪೇಟಿಎಂ

ಲಕ್ಷಾಂತರ ವ್ಯಾಪಾರಿ ಮತ್ತು ಗ್ರಾಹಕರಿಗೆ ಉತ್ತಮ ಸೇವೆ ನೀಡುವುದು ಮೊದಲ ಆದ್ಯತೆಯಾಗಿದೆ. ದುರುಪಯೋಗಗಳನ್ನು ನಿಗ್ರಹಿಸಲು ಅತ್ಯುತ್ತಮ ವೈಶಿಷ್ಟ್ಯಗಳನ್ನು ಕಾರ್ಯರೂಪಕ್ಕೆ ತರಲಾಗುವುದು. ಇದಕ್ಕಾಗಿ ವಿಧಿಸಲಾಗಿದ್ದ ಶೇ. 2ರಷ್ಟು ಶುಲ್ಕವನ್ನು ವಜಾಗೊಳಿಸಲಾಗಿದೆ ಎಂದು ಪೇಟಿಎಂ ಹೇಳಿದೆ.
ಗುರುವಾರ ಪೇಟಿಎಂ ಪ್ರಕಟಣೆ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಮೊಬೈಲ್ ವಾಲೆಟ್ ಪ್ರತಿಸ್ಪರ್ಧಿ ಕಂಪೆನಿ ಮೋಬಿಕ್ವಿಕ್, ಕ್ರೆಡಿಟ್‌ ಕಾರ್ಡ್‌ನಿಂದ ಹಣ ವರ್ಗಾವಣೆಗೆ ತಾನು ಯಾವುದೇ ಶುಲ್ಕ ವಿಧಿಸುವುದಿಲ್ಲ ಎಂದು ಹೇಳಿತ್ತು.

ಕ್ರೆಡಿಟ್‌ ಕಾರ್ಡ್‌ನಿಂದ ಮೊಬೈಲ್‌ ವಾಲೆಟ್‌ಗೆ ಹಣ ಭರ್ತಿ ಮಾಡುವ (ಟಾಪ್‌ಅಪ್‌) ಮತ್ತು ಬ್ಯಾಂಕು ಖಾತೆಗಳಿಗೆ ಹಣ ವರ್ಗಾಯಿಸುವ ಪೇಟಿಎಂ ಗ್ರಾಹಕರ ಸಂಖ್ಯೆ ಇತ್ತೀಚೆಗೆ ಹೆಚ್ಚಾಗಿದೆ.

ಕೆಲವರು ಹಣ ವರ್ಗಾವಣೆ ಉಚಿತ ಸೇವೆಯ ದುರುಪಯೋಗ ಮಾಡಿಕೊಳ್ಳುತ್ತಿರುವುದನ್ನು ಗಮನಿಸಿದ ಪೇಟಿಎಂ ಶುಲ್ಕ ವಿಧಿಸುವ ನಿರ್ಧಾರಕ್ಕೆ ಬಂದಿರುವುದಾಗಿ ಸಮಜಾಯಿಷಿ ನೀಡಿತ್ತು.

English summary

Paytm suspends 2% fee on recharge via credit cards for customers convenience

In a u-turn on levy of 2% fee on credit charge use to customers in almost 24 hours Paytm today said it was suspending the 2% charge for customers convenience.
Story first published: Friday, March 10, 2017, 15:20 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X