For Quick Alerts
ALLOW NOTIFICATIONS  
For Daily Alerts

ಜಿಯೋ 'ಫ್ರೈಮ್ ಮೆಂಬರ್‌ಶಿಪ್‌ ಆಫರ್' ಈಗ ಉಚಿತ!!

ಜಿಯೋ ಮೂಲಕ ಕೇವಲ 6 ತಿಂಗಳಲ್ಲಿ 10 ಕೋಟಿ ಗ್ರಾಹಕರನ್ನು ಸಂಪಾದನೆ ಮಾಡಿರುವ ಜಿಯೋ ಇದೀಗ ತನ್ನ ಗ್ರಾಹಕರನ್ನು ದೀರ್ಘ‌ಕಾಲ ಉಳಿಸಿಕೊಳ್ಳುವ ಸಲುವಾಗಿ ಪ್ರೈಮ್ ಮೆಂಬರ್‌ಶಿಪ್‌ ಆಫರ್ ಉಚಿತವೆಂದು ಘೋಷಿಸಿದ್ದಾರೆ.!

By Siddu
|

ರಿಲಾಯನ್ಸ್ ಮುಖ್ಯಸ್ಥ ಅಂಬಾನಿ 'ಜಿಯೋ ವೆಲ್ ಕಂ ಆಫರ್' ಮೂಲಕ ಟೆಲಿಕಾಂ ರಂಗದಲ್ಲಿ ಸಂಚಲನ ಮೂಡಿಸಿ, ಕಡಿಮೆ ಅವಧಿಯಲ್ಲಿ ಅತ್ಯಧಿಕ ಗ್ರಾಹಕರನ್ನು ಆಕರ್ಷಿಸಿದ್ದರು.

 

ಕೇವಲ 6 ತಿಂಗಳಲ್ಲಿ 10 ಕೋಟಿ ಗ್ರಾಹಕರನ್ನು ಸಂಪಾದನೆ ಮಾಡಿರುವ ಜಿಯೋ ಇದೀಗ ತನ್ನ ಗ್ರಾಹಕರನ್ನು ದೀರ್ಘ‌ಕಾಲ ಉಳಿಸಿಕೊಳ್ಳುವ ಸಲುವಾಗಿ ಪ್ರೈಮ್ ಮೆಂಬರ್‌ಶಿಪ್‌ ಆಫರ್ ಕ್ಯಾಶ್ ಬ್ಯಾಕ್ ಸೌಲಭ್ಯದ ಮೂಲಕ ಉಚಿತವಾಗಿ ಸಿಗಲಿದೆ..! 'ಜಿಯೋ ಫ್ರೀ ಆಫರ್' ಮುಂದುವರೆಯುತ್ತೆ....

ಹ್ಯಾಪಿ ನ್ಯೂ ಇಯರ್ ಆಫರ್ ಕೊನೆ

ಹ್ಯಾಪಿ ನ್ಯೂ ಇಯರ್ ಆಫರ್ ಕೊನೆ

ಅಂಬಾನಿ ಈ ಹಿಂದೆ ಘೋಷಿಸಿದ್ದ ವೆಲ್ ಕಂ ಮತ್ತು ಅದರ ಮುಂದುವರೆದ ಭಾಗವಾಗಿದ್ದ ಹ್ಯಾಪಿ ನ್ಯೂ ಇಯರ್ ಉಚಿತ ಕೊಡುಗೆಗಳು ಇದೇ ಮಾರ್ಚ್‌ 31ರಂದು ಕೊನೆಗೊಳ್ಳಲಿವೆ.

ಅಂಬಾನಿ ಫ್ರೈಮ್ ಆಫರ್ ಬಗ್ಗೆ ಹೇಳಿದ್ದೇನು?

ಅಂಬಾನಿ ಫ್ರೈಮ್ ಆಫರ್ ಬಗ್ಗೆ ಹೇಳಿದ್ದೇನು?

ಮಾರ್ಚ್ 01 ರಿಂದ ಮಾರ್ಚ್ 31ರ ವರೆಗೆ ಪ್ರೈಮ್ ಸದಸ್ಯತ್ವ ಅಭಿಯಾನ ನಡೆಯಲಿದೆ. 99 ರೂ. ನೀಡಿ ಜಿಯೋ ಪ್ರೈಮ್ ಸದಸ್ಯರಾಗಬಹುದಾಗಿದ್ದು, ಈ ಮೂಲಕ ಒಂದು ವರ್ಷಗಳ ಕಾಲ ಹ್ಯಾಪಿ ನ್ಯೂ ಇಯರ್ ಆಫರ್ ಪಡೆಯಬಹುದಾಗಿದೆ. ಪ್ರಸ್ತುತ ರಿಲಯನ್ಸ್ ಜಿಯೋ ಗ್ರಾಹಕರು ಅನುಭವಿಸುತ್ತಿರುವ ಉಚಿತ ಕರೆ ಮತ್ತು ಡೇಟಾ ಸೇವೆಗಳನ್ನು ಬರುವ 12 ತಿಂಗಳುಗಳ ಕಾಲ ಕೇವಲ ರೂ. 99 ರಿಚಾರ್ಜ್ ಮಾಡುವುದರ ಮುಖೇನ ಮುಂದುವರಿಸಬಹುದು. ಇದಕ್ಕಾಗಿ ಪ್ರತಿ ತಿಂಗಳಿಗೆ ರೂ. 303 ಶುಲ್ಕ ಪಾವತಿಸಬೇಕು ಎಂದು ಹೇಳಿದ್ದರು.

ಫ್ರೈಮ್ ಮೆಂಬರ್‌ಶಿಪ್‌ ಆಫರ್ ಉಚಿತ ಹೇಗೆ?
 

ಫ್ರೈಮ್ ಮೆಂಬರ್‌ಶಿಪ್‌ ಆಫರ್ ಉಚಿತ ಹೇಗೆ?

ಕಳೆದ ಬಾರಿ ಫ್ರೈಮ್ ಆಫರ್ ಬಗ್ಗೆ ಮಾತನಾಡಿದ್ದ ಮುಕೇಶ್ ಅಂಬಾನಿ ಅವರು ಜಿಯೋ ಪ್ರೈಮ್ ಮೆಂಬರ್‌ಶಿಪ್‌ ಪಡೆಯಲು ಪಾವತಿಸಬೇಕಾಗಿರುವ 99 ರೂ. ಗಳನ್ನು ರಿಲಯನ್ಸ್ ಜಿಯೋದಲ್ಲಿನ ಜಿಯೊ ಮನಿ ಆಪ್ ಮೂಲಕ ಪಾವತಿಸಿದರೆ ರೂ. 50 ಕ್ಯಾಶ್‌ ಬ್ಯಾಕ್‌ ಆಫರ್ ಪಡೆಯಬಹುದೆಂದು ಹೇಳಿದ್ದಾರೆ. ಜತೆಗೆ ಪ್ರತಿ ತಿಂಗಳ ರೀಚಾರ್ಜ್‌ ಶುಲ್ಕ 303 ರೂ.ಗಳನ್ನು ಜಿಯೋ ಮನಿ ಆಪ್ ಮೂಲಕ ಪಾವತಿಸಿದರೆ ಮತ್ತೆ ಪುನಃ ರೂ. 50 ಕ್ಯಾಶ್‌ ಬ್ಯಾಕ್‌ ಆಫರ್ ಸಿಗುತ್ತದೆ ಎಂದಿದ್ದಾರೆ.

ಪ್ರೈಮ್ ಮೆಂಬರ್‌ಶಿಪ್‌ ಶುಲ್ಕ ಈಗ ಪೂರ್ತಿ ಉಚಿತ

ಪ್ರೈಮ್ ಮೆಂಬರ್‌ಶಿಪ್‌ ಶುಲ್ಕ ಈಗ ಪೂರ್ತಿ ಉಚಿತ

ಒಟ್ಟಾರೆಯಾಗಿ ಈ ಎರಡು ರೀಚಾರ್ಜ್ ಗಳಿಂದ 50 + 50= 100 ರೂ. ಗಳ ಕ್ಯಾಶ್ ಬ್ಯಾಕ್ ಸಿಗುವುದರಿಂದ ಗ್ರಾಹಕರು ಪಾವತಿಸುವ 99 ರೂ.ಗಳ ಜಿಯೋ ಪ್ರೈಮ್ ಮೆಂಬರ್‌ಶಿಪ್‌ ಶುಲ್ಕ ಸಂಪೂರ್ಣವಾಗಿ ಉಚಿತವಾದಂತಾಗುತ್ತದೆ. ಹೀಗಾಗಿ ಜಿಯೋ ಬಳಕೆದಾರರು ಪ್ರೈಮ್ ಸೇವೆಗೆ ಕಟ್ಟಿದ ಹಣ ಸಂಪೂರ್ಣ ವಾಪಸ್!!

ಅಂಬಾನಿ ಪ್ಲಾನ್ ಏನು?

ಅಂಬಾನಿ ಪ್ಲಾನ್ ಏನು?

ರಿಲಯನ್ಸ್ ಜಿಯೋ ಬಳಕೆದಾರರನ್ನು ಸಂಪೂರ್ಣವಾಗಿ ತಮ್ಮ ಜಾಲದಲ್ಲಿ ಉಳಿಸಿಕೊಳ್ಳಲು ಅಂಬಾನಿ ಈ ಪ್ಲಾನ್ ಮಾಡಿದ್ದಾರೆ. ಅಂಬಾನಿ ಅವರ ಈ ಡಬಲ್ ಕ್ಯಾಶ್‌ ಬ್ಯಾಕ್‌ ಆಫರ್ ಬಳಕೆದಾರರಿಗೂ ಜಿಯೋ ಕಂಪೆನಿಗೂ ಡಬಲ್ ಧಮಾಕಾ ಆಗಿದ್ದು, ಜಿಯೋ ಬಳಕೆದಾರರನ್ನು ಪೂರ್ತಿಯಾಗಿ ತಮ್ಮ ಜಾಲದಲ್ಲಿ ಉಳಿಸಿಕೊಳ್ಳಲು ಸಾಧ್ಯ ಎಂದು ಅಂಬಾನಿ ಭಾವಿಸಿದ್ದಾರೆ.

ದರ ಸಮರ ಪ್ರಭಾವ

ದರ ಸಮರ ಪ್ರಭಾವ

ಟೆಲಿಕಾಂ ರಂಗದಲ್ಲಿ ಈಗಾಗಲೇ ಏರ್‌ಟೆಲ್, BSNL, ಐಡಿಯಾ ಸೇರಿದಂತೆ ಎಲ್ಲಾ ಟೆಲಿಕಾಂ ಕಂಪೆನಿಗಳು ಜಿಯೋ ಪ್ರೈಮ್ ಆಫರ್‌ಗೆ ವಿರುದ್ದವಾಗಿ ಹಲವಾರು ಆಫರ್ ಗಳನ್ನು ಘೋಷಿಸುತ್ತಿವೆ. ಅಲ್ಲದೆ ವೋಡಾಫೋನ್ ಮತ್ತು ಐಡಿಯಾ ಕೂಡ ವಿಲೀನವಾಗಿ ದೇಶದ ಅತಿದೊಡ್ಡ ಟೆಲಿಕಾಂ ಸಂಸ್ಥೆಯಾಗಿ ಹೊರಹೊಮ್ಮಿದೆ. ಈ ಎಲ್ಲ ಬೆಳವಣಿಗೆಗಳಿಂದಾಗಿ ತಳಮಳಗೊಂಡಿರುವ ಅಂಬಾನಿ, ಫ್ರೈಮ್ ಕ್ಯಾಶ್ ಬ್ಯಾಕ್ ಮೂಲಕ ಜಿಯೋ ಗ್ರಾಹಕರನ್ನು ಆಕರ್ಷಿಸಲು ಪ್ರಯತ್ನಿಸುತ್ತಿದ್ದಾರೆ. ಜಿಯೋ ಧಮಾಕಾ..! 'ಫ್ರೈಮ್ ಆಫರ್' ಮೂಲಕ ಹೊಸ ಕೊಡುಗೆ ಘೋಷಣೆ

English summary

Reliance Jio Prime membership available for free; here’s how to avail

Reliance Jio is offering Rs 50 cashback on Prime membership to users, who recharge via Jio Money app. Users will get an additional cashback of Rs 50 if they recharge with Rs 303 plan right away using Jio Money wallet.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X