For Quick Alerts
ALLOW NOTIFICATIONS  
For Daily Alerts

ಬರೊಬ್ಬರಿ 5,400 ಕೋಟಿ ಅಘೋಷಿತ ಆದಾಯ ಪತ್ತೆ!

ನೋಟು ರದ್ದತಿ ನಂತರ(ನವೆಂಬರ್‌ 9, 2016) ಜನವರಿ 10, 2017ರ ನಡುವಿನ ಅವಧಿಯಲ್ಲಿ ದೇಶದಾದ್ಯಂತ ವಿವಿಧ ಕಾನೂನು ಜಾರಿ ಸಂಸ್ಥೆಗಳು ಒಟ್ಟು ರೂ. 5,400 ಕೋಟಿ ಅಘೋಷಿತ ಆದಾಯವನ್ನು ಪತ್ತೆ ಮಾಡಿವೆ ಎಂದು ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

By Siddu
|

ನೋಟು ರದ್ದತಿ ನಂತರ(ನವೆಂಬರ್‌ 9, 2016) ಜನವರಿ 10, 2017ರ ನಡುವಿನ ಅವಧಿಯಲ್ಲಿ ದೇಶದಾದ್ಯಂತ ವಿವಿಧ ಕಾನೂನು ಜಾರಿ ಸಂಸ್ಥೆಗಳು ಒಟ್ಟು ರೂ. 5,400 ಕೋಟಿ ಅಘೋಷಿತ ಆದಾಯವನ್ನು ಪತ್ತೆ ಮಾಡಿವೆ ಎಂದು ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

 

ನೋಟು ರದ್ದತಿಯ ನಂತರ ಸರ್ಕಾರವನ್ನು ವಂಚಿಸಲು ಚಿನ್ನ ಖರೀದಿಸಲು ಹಳೆಯ ನೋಟುಗಳನ್ನು ಬಳಸಿದ್ದೂ ಪ್ರಮುಖ ಮಾರ್ಗ ಎನ್ನುವುದು ಗಮನಕ್ಕೆ ಬಂದಿದೆ. ಅಲ್ಲದೇ ಇನ್ನೂ ಹಲವು ಮಾರ್ಗಗಳನ್ನು ಅನುಸರಿಸಲಾಗಿತ್ತು ಎನ್ನಲಾಗಿದೆ.

ಅಪರೇಷನ್ ಕ್ಲೀನ್ ಮನಿ

ಅಪರೇಷನ್ ಕ್ಲೀನ್ ಮನಿ

ಸಾರ್ವಜನಿಕರು 2016ರ ನವೆಂಬರ್‌ 9ರಿಂದ ಡಿಸೆಂಬರ್‌ ಅಂತ್ಯದವರೆಗಿನ ಅವಧಿಯಲ್ಲಿ ಬ್ಯಾಂಕುಗಳಲ್ಲಿ ಮಾಡಿದ ನಗದು ಜಮೆ, ಡೇಟಾ ವಿಶ್ಲೇಷಣೆ, ಇ-ಪರಿಶೀಲನೆ ಮತ್ತು ಕಾನೂನು ಜಾರಿ ಸಂಸ್ಥೆಗಳು ಮಾಡಿದ ದಾಳಿಗಳನ್ನು ಪರಿಶೀಲಿಸಲು ಆದಾಯ ತೆರಿಗೆ ಇಲಾಖೆ 'ಅಪರೇಷನ್ ಕ್ಲೀನ್ ಮನಿ' ಎಂಬ ಅಭಿಯಾನವನ್ನು ಜನವರಿ 31ರಂದು ಆರಂಭಿಸಿತ್ತು.

ನೋಟಿಸ್ ಜಾರಿ

ನೋಟಿಸ್ ಜಾರಿ

ಆದಾಯ ತೆರಿಗೆ ಇಲಾಖೆಯು ನೋಟು ರದ್ದತಿ ನಂತರದಿಂದ 2017ರ ಜನವರಿ 10ರ ನಡುವಿನ ಅವಧಿಯಲ್ಲಿ ದೇಶದ ನಾನಾ ಕಡೆಗಳಲ್ಲಿ ವಿವಿಧ ವ್ಯಕ್ತಿಗಳ ಮೇಲೆ 1,100 ದಾಳಿಗಳನ್ನು ನಡೆಸಿದೆ. ಈ ಅವಧಿಯಲ್ಲಿ ಅನುಮಾನಾಸ್ಪದವಾಗಿ ಬ್ಯಾಂಕುಗಳಲ್ಲಿ ಭಾರಿ ಮೊತ್ತ ಜಮೆ ಮಾಡಿದ 5,100 ಜನರಿಗೆ ಪರಿಶೀಲನೆಗಾಗಿ ನೋಟಿಸ್ ಜಾರಿ ಮಾಡಲಾಗಿತ್ತು ಎಂದು ಇಲಾಖೆ ಹೇಳಿದೆ.

610 ಕೋಟಿ ನಗದು ಜಪ್ತಿ
 

610 ಕೋಟಿ ನಗದು ಜಪ್ತಿ

ತೆರಿಗೆ ಇಲಾಖೆ ಮಾಡಿದ ದಾಳಿ ಸಂದರ್ಭದಲ್ಲಿ ರೂ. 610 ಕೋಟಿ ನಗದು ಹಣವನ್ನು(ರೂ. 513ಕೋಟಿ ಹಳೆ ನೋಟು ಮತ್ತು ರೂ. 110 ಕೋಟಿ ಹೊಸ ನೋಟು) ಆದಾಯ ತೆರಿಗೆ ಇಲಾಖೆ ಹಾಗೂ ಇತರ ಸರ್ಕಾರಿ ಸಂಸ್ಥೆಗಳು ಜಪ್ತಿ ಮಾಡಿದ್ದವು ಎಂದು ತಿಳಿಸಿದೆ.

English summary

Rs 5,400 crore worth of undisclosed income detected

A whopping Rs 5,400 crore worth of "undisclosed income" has been detected by law-enforcing agencies till January 10 since demonetisation came into force last November, the government has told the Supreme Court.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X