For Quick Alerts
ALLOW NOTIFICATIONS  
For Daily Alerts

ಸುರಕ್ಷತೆಗಾಗಿ ಸಣ್ಣ ಹೂಡಿಕೆದಾರರು ಅಳವಡಿಸಿಕೊಳ್ಳಬೇಕಾದ ಪ್ರಮುಖ ಸಂಗತಿಗಳು

ಷೇರು ಬ್ರೋಕಿಂಗ್ ನಲ್ಲಿ ಮೂರುವರೆ ದಶಕಗಳಿಂದ ತೊಡಗಿಸಿಕೊಂಡಿರುವ ಷೇರುಪೇಟೆ ವಿಶ್ಲೇಷಕರು, ಲೇಖಕರು, ಮಾರ್ಗದರ್ಶಕರು, ಅಂಕಣಕಾರರು ಆಗಿರುವ ಕೆ ಜಿ ಕೃಪಾಲ್ ರವರು ಸಣ್ಣ ಹೂಡಿಕೆದಾರರು ಅಳವಡಿಸಿಕೊಳ್ಳಬೇಕಾದ ಹಲವು ಗುಣಗಳ ಬಗ್ಗೆ ಬರೆದ ಲೇಖನವಿದು.

By Krupal
|

ಷೇರುಪೇಟೆಯ ಚಲನೆಯು ಪೂರ್ವ ನಿರ್ಧಾರಿತ ಮಟ್ಟದಲ್ಲಿರದೆ ತನ್ನದೇ ಅದ ದಾರಿಯನ್ನು ಕಂಡುಕೊಳ್ಳುತ್ತಿದೆ. ಕ್ಷಣದಲ್ಲಿ ಏರಿಕೆ ಕಂಡು ಇನ್ನು ಏರಿಕೆ ಕಾಣಬಹುದೆಂಬ ಭಾವನೆ ಮೂಡಿಸಿ ದಿಶೆ ಬದಲಾಯಿಸುವ ಗುಣ ಇತ್ತೀಚಿಗೆ ಹೆಚ್ಚಾಗಿದೆ. ಹೆಚ್ಚಿನ ಹೂಡಿಕೆದಾರರು ತಾವು ಗಳಿಸಿದ ಲಾಭದ ಪ್ರಮಾಣವನ್ನು ಪರಿಗಣಿಸದೆ ಕೇವಲ ಇನ್ನು ಹೆಚ್ಚು ಲಾಭ ಗಳಿಸಿಕೊಡಬಹುದೆಂಬ ಕಲ್ಪನೆಗಳಿಂದ ಕೈಗೆಟುಕುವ ಲಾಭವನ್ನು ಚೆಲ್ಲಿ ನಿರಾಶೆಗೊಂಡಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಷೇರುಪೇಟೆ ಹೂಡಿಕೆ ಬಗ್ಗೆ ನಿಮಗೆಷ್ಟು ಗೊತ್ತು?

ಈ ಗುಣ ಹೆಚ್ಚಾಗಿ ಸ್ಮಾಲ್ ಕ್ಯಾಪ್, ಮಿಡ್ ಕ್ಯಾಪ್, ಜೊಳ್ಳು, ಟೊಳ್ಳು ಕಳಪೆ ಕಂಪೆನಿಗಳಲ್ಲಿ ಹೆಚ್ಚಾಗಿದೆ. ಹಲವಾರು ಬಾರಿ ಪೇಟೆಯು ಸುದ್ಧಿಗಳಿಗೆ ನೀಡುವ ತಕ್ಷಣದ ಪ್ರತಿಕ್ರಿಯೆಯು ತೀಕ್ಷ್ಣವಾಗಿದ್ದು, ಹಲವಾರು ಬಾರಿ ದಾರಿ ತಪ್ಪಿಸುವಂತಿರುತ್ತದೆ. ಇಂದಿನ ದಿನಗಳಲ್ಲಿ ಎಲ್ಲರಿಗೂ ಗುರಿ ತಲುಪುವ ಮಾರ್ಗ ಮಾತ್ರ ಮುಖ್ಯ. ಆ ಗುರಿಯನ್ನು ತಲುಪಲು ಅನುಸರಿಸಬೇಕಾದ ಮಾರ್ಗವು ನಗಣ್ಯವಾಗಿರುವುದರಿಂದ ಈ ರೀತಿಯ ಭಾರಿ ಏರಿಳಿತಗಳು ಪ್ರದರ್ಶಿತವಾಗುತ್ತವೆ. ಗಾಳಿ ಸುದ್ಧಿಗಳು ತೇಲಿಬಿಟ್ಟು ಸಹ ಹಲವಾರು ಬಾರಿ ರಭಸದ ಏರಿಳಿತಗಳನ್ನುಂಟು ಮಾಡುವ ಹವ್ಯಾಸವು ಹೆಚ್ಚಾಗಿದೆ. ಷೇರಿನ ಬೆಲೆಗಳು ಉತ್ತುಂಗದಲ್ಲಿದ್ದಾಗ ದುಡುಕದೆ ಸಮತೋಲನಾ ನಿರ್ಧಾರ ಇಂದಿನ ಅಗತ್ಯವಾಗಿದೆ.

ವಾರ್ಷಿಕ ಗರಿಷ್ಟ ದರ

ವಾರ್ಷಿಕ ಗರಿಷ್ಟ ದರ

ಇತ್ತೀಚಿಗೆ ಸರ್ಕಾರವು 'ಆಫ್ಫೋರ್ಡಬಲ್ ಹೌಸಿಂಗ್' ವಲಯಕ್ಕೆ ನೀಡುತ್ತಿರುವ ಪ್ರೋತ್ಸಾಹದಿಂದ ಪ್ರೇರಿತವಾಗಿ ಹೌಸಿಂಗ್ ವಲಯದ ಕಂಪನಿಗಳು ಚುರುಕಾದ ಏರಿಕೆಯಿಂದ ವಾರ್ಷಿಕ ಗರಿಷ್ಟ ದರ ತಲುಪಿವೆ. ಉದಾಹರಣೆಯಾಗಿ ಇಂಡಿಯಾ ಬುಲ್ ಹೌಸಿಂಗ್ ಫೈನಾನ್ಸ್ ಕಂಪನಿಯ ಷೇರಿನ ಬೆಲೆಯು ಕಳೆದ ಒಂದು ತಿಂಗಳಿನಲ್ಲಿ ರೂ.840 ರಿಂದ ಒಂದು ಸಾವಿರ ರೂಪಾಯಿಗಳ ಗಡಿ ದಾಟಿತು. ಅದೇ ರೀತಿ ಜಿಐಸಿ ಹೌಸಿಂಗ್ ಫೈನಾನ್ಸ್ ಒಂದೇ ತಿಂಗಳಲ್ಲಿ ರೂ.300 ರ ಸಮೀಪದಿಂದ ರೂ. 505ರವರೆಗೂ ಏರಿಕೆ ಕಂಡಿದೆ.

ಷೇರು ಚಟುವಟಿಕೆ

ಷೇರು ಚಟುವಟಿಕೆ

ಈ ರೀತಿಯ ಬೆಲೆ ಏರಿಕೆಗಳು ಸ್ಥಿರತೆ ಕಾಣುವುದಿಲ್ಲ ಎಂಬುದಕ್ಕೆ ಇಂಡಿಯಾ ಬುಲ್ ಹೌಸಿಂಗ್ ಫೈನಾನ್ಸ್ ನಂತರದ ದಿನಗಳಲ್ಲಿ ರೂ. 930ರ ಸಮೀಪಕ್ಕೆ ಕುಸಿದಿದೆ. ಈ ಹಂತದಲ್ಲಿ ಕಂಪನಿಯ ವಾರ್ಷಿಕ ಮತ್ತು ತ್ರೈಮಾಸಿಕ ಫಲಿತಾಂಶ ಪ್ರಕಟಣೆಯ ದಿನ ಪ್ರಕಟಿಸಿದಾಗ ಷೇರಿನ ಬೆಲೆಯಲ್ಲಿ ಮತ್ತೊಮ್ಮೆ ಚಟುವಟಿಕೆ ಬಿರುಸಾಗಿರುವ ಸಾಧ್ಯತೆ ಹೆಚ್ಚು. ಈ ಕಂಪನಿಯು ನಿರಂತರವಾಗಿ ಪ್ರತಿ ತ್ರೈಮಾಸಿಕದಲ್ಲೂ ರೂ. 9ರ ಲಾಭಾಂಶ ವಿತರಿಸುವ ದಾಖಲೆ ಹೊಂದಿದೆ. ಈ ಪ್ರಮಾಣದ ಡಿವಿಡೆಂಡ್ ಷೇರಿನ ಬೆಲೆಗೆ ಹೋಲಿಸಿದಾಗ ಅದು ಆಕರ್ಷಕವಲ್ಲದಿದ್ದರು ಸಹ ಷೇರಿನ ಚಟುವಟಿಕೆ ತೀವ್ರಗೊಳ್ಳುವುದು ಸಾಮಾನ್ಯವಾಗಿ ಬಿಟ್ಟಿದೆ.

ಅವಕಾಶದ ಸದ್ಬಳಕೆ

ಅವಕಾಶದ ಸದ್ಬಳಕೆ

ಆಟೋ ವಲಯದ ಕಂಪನಿಗಳು ವಿಶೇಷವಾಗಿ ದ್ವಿಚಕ್ರ ವಾಹನ ವಲಯದ ಕಂಪನಿಗಳು ಮಾರ್ಚ್ ವರ್ಷಾಂತ್ಯದಲ್ಲಿ ಬಿಎಸ್-4 ಜಾರಿಗೆ ಬರುವ ಕಾರಣ, ತಮ್ಮ ಇನ್ವೆಂಟರಿಯನ್ನು ಪೂರ್ಣವಾಗಿ ಮಾರಾಟ ಮಾಡಿದ ನೆಪವು ಟಿವಿಎಸ್ ಮೋಟಾರ್ ಷೇರಿನ ಬೆಲೆಯು ರೂ. 477ರ ವಾರ್ಷಿಕ ಗರಿಷ್ಠವನ್ನು ಸೋಮವಾರ ತಲುಪುವಂತಾಯಿತು. ಇದು ಸಹ ತಕ್ಷಣದ ಪ್ರತಿಕ್ರಿಯೆ ಎನ್ನಬಹುದಾಗಿದೆ. ಈ ರೀತಿಯ ಮಾರ್ಚ್ ಅಂತ್ಯದಲ್ಲಿ ಮಾರಾಟದಿಂದ ತಮ್ಮ ಸ್ಟಾಕ್ ಖಾಲಿಯಾಯಿತೆಂದು ಬೀಗಬಹುದಾದರೂ ಇದರ ಪ್ರಭಾವ ಏಪ್ರಿಲ್ ತಿಂಗಳ ಸಾಧನೆ ಮೇಲೆ ಹೆಚ್ಚಾಗಿರುತ್ತದೆ. ವಾಹನ ಕೊಳ್ಳಬೇಕಾದವರು ಮುಂಚಿತವಾಗಿ ಖರೀದಿಸಿದ್ದರಿಂದ ಈ ತಿಂಗಳು ಮಾರಾಟದ ಅಂಕಿ ಅಂಶಗಳು ಆಕರ್ಷಕವಿರಲಾರದು. ಈ ಅಂಶ ಹೊರಬಂದು, ಸಾಧನೆ ಕಳಪೆಯಾದಲ್ಲಿ ಷೇರಿನ ಬೆಲೆ ಕುಸಿಯಲುಬಹುದು. ಹಾಗಾಗಿ ಗರಿಷ್ಟದಲ್ಲಿದ್ದಾಗ ಎನ್ ಕ್ಯಾಶ್ ಭಾಗಶಃ ವಾದರೂ ಮಾಡಿಕೊಳ್ಳುವುದು ಸೂಕ್ತ.

ಏರುಪೇರುಗಳ ಪರಿಣಾಮ

ಏರುಪೇರುಗಳ ಪರಿಣಾಮ

ಹಿಂದಿನವಾರ ದಿನದ ಆರಂಭದಲ್ಲಿ ಗ್ಯಾಲ್ಯಾಂಟ್ ಇಸ್ಪಾಟ್ ಷೇರು ರೂ. 345ರ ಸಮೀಪದಲ್ಲಿದ್ದು ಕೇವಲ ಅರ್ಧ ಘಂಟೆಯ ಅವಧಿಯಲ್ಲಿ ರೂ. 272.35ಕ್ಕೆ ಕುಸಿದು ದಿನದ ಲೋವರ್ ಸರ್ಕ್ಯೂಟ್ ತಲುಪಿ ನಂತರ ದಿನದ ಅಂತ್ಯದವರೆಗೂ ರೂ.273ರಲ್ಲಿ ವಹಿವಾಟಾಗುತ್ತಿತ್ತು. ಒಂದೇ ದಿನ ಈ ಸ್ಮಾಲ್ ಕ್ಯಾಪ್ ಷೇರು ರೂ. 68ರಷ್ಟು ಇಳಿಕೆಯಿಂದ ಹೂಡಿಕೆದಾರರ ಬಂಡವಾಳ ನಶಿಸುವಂತೆ ಮಾಡಿದೆ. ಈ ರೀತಿಯ ಅಗಾಧ ಕುಸಿತದ ಕಾರಣ ನಂತರದ ದಿನಗಳಲ್ಲಿ ಈ ಷೇರಿನ 'ಸರ್ಕ್ಯೂಟ್ ಲಿಮಿಟ್' ನ್ನು ಶೇ.10% ಕ್ಕೆ ಇಳಿಸಲಾಯಿತು. ಷೇರಿನ ಬೆಲೆಯು ರೂ.229ರ ಸಮೀಪಕ್ಕೆ ಕುಸಿದು ವಾರ್ಷಿಕ ಕನಿಷ್ಠದ ದಾಖಲೆ ನಿರ್ಮಿಸಿದೆ. ಆ ಸಂದರ್ಭದಲ್ಲಿ ಕಂಪನಿಯ ಪತ್ರವೊಂದು ಸ್ಟಾಕ್ ಎಕ್ಸ್ ಚೇಂಜ್ ಗೆ ತಲುಪಿ, ಅದರಲ್ಲಿ ಕಂಪನಿಯು ತನ್ನ ಉತ್ಪಾದನೆ ಸ್ಟಿಲ್ ಗೆ ಮುಂದಿನ ದಿನಗಳಲ್ಲಿ ನಾಲ್ಕು ರಸ್ತೆಗಳ ನಿರ್ಮಾಣ, ಮೆಟ್ರೋ ಪ್ರಾಜೆಕ್ಟ್, ಫರ್ಟಿಲೈಜರ್ ಕಾರ್ಪೊರೇಷನ್ ಘಟಕದ ಪುನರಾರಂಭ, ಆಲ್ ಇಂಡಿಯಾ ಮೆಡಿಕಲ್ ಸೈನ್ಸಸ್ ಆರಂಭಕ್ಕೆ ಶಂಕು ಸ್ಥಾಪನೆಯಾಗಿರುವುದು ಎಲ್ಲವೂ ಹೆಚ್ಚಿನ ಬೇಡಿಕೆ ಬರುವ ಕಾರಣ ಉತ್ತಮ ಭವಿಷ್ಯವಿದೆ ಎಂದು ತಿಳಿಸಿದ್ದಲ್ಲದೆ, ಮೆಟ್ರೋ ಪ್ರಾಜೆಕ್ಟ್ ಗೆ ಕಂಪನಿಯ ಶೇ.1% ರಷ್ಟು ನಿವೇಶನ ಮಾತ್ರ ಅವಶ್ಯಕೆತೆಯಿದ್ದು, ಪ್ರತಿ ಚದರಡಿಗೆ ರೂ.3500ರಂತೆ ಕಾಂಪೆನ್ ಸೆಷನ್ ದೊರೆಯುವುದು. ಈ ವ್ಯಾಲ್ಯೂಯೇಷನ್ ನಿಂದ ಉಳಿದ 2 ಲಕ್ಷ ಚದರಡಿ ನಿವೇಶನದ ಬೆಲೆಯು ಹೆಚ್ಚಾಗುವುದೆಂದು ತಿಳಿಸಿದೆ. ಅಂದರೆ ಕಂಪನಿಗಳು ಸಹ ಷೇರಿನ ಬೆಲೆಗಳ ಕುಸಿತ ತಡೆಯಲು ಪ್ರಯತ್ನಿಸುತ್ತವೆ. ಇಲ್ಲಿ ನಾವು 'ಹಂಸ ಕ್ಷೀರ ನ್ಯಾಯದಂತೆ' ಬೇಕಾದ ಹಾಲಿನ ಅಂಶವನ್ನು ಹೀರಿಕೊಳ್ಳುವ ಗುಣವನ್ನು ಬೆಳೆಸಿಕೊಳ್ಳಬೇಕಾಗಿದೆ. ಆಗಲೇ ಹೂಡಿಕೆಯನ್ನು ಸುರಕ್ಷಿತವಾಗಿಸಬಹುದಾಗಿದೆ.

Read more about: stock share investments sensex
English summary

How to make a safe investment? Retailers View...

A stock market, equity market or share market is the aggregation of buyers and sellers (a loose network of economic transactions, not a physical facility or discrete entity) of stocks (also called shares); these may include securities listed on a stock exchange as well as those only traded privately.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X