For Quick Alerts
ALLOW NOTIFICATIONS  
For Daily Alerts

ಸೆನ್ಸೆಕ್ಸ್ ಆಧಾರಿತಕ್ಕಿಂತ ಕಂಪನಿ ಆಧಾರಿತ ಚಟುವಟಿಕೆ ಲಾಭದಾಯಕ

ಉಷ್ಣತೆಯನ್ನಳೆಯಲು ಥರ್ಮೋಮೀಟರ್, ಹಾಲಿನ ಸಾಂದ್ರತೆಯನ್ನಳೆಯಲು ಲ್ಯಾಕ್ಟೋಮೀಟರ್, ಹಾಗೆಯೇ ದೇಶದ ಷೇರುಪೇಟೆಯ ಮಟ್ಟವನ್ನಳೆಯಲು ಸೆನ್ಸೆಕ್ಸ್.

By Krupal
|

ಉಷ್ಣತೆಯನ್ನಳೆಯಲು ಥರ್ಮೋಮೀಟರ್, ಹಾಲಿನ ಸಾಂದ್ರತೆಯನ್ನಳೆಯಲು ಲ್ಯಾಕ್ಟೋಮೀಟರ್, ಹಾಗೆಯೇ ದೇಶದ ಷೇರುಪೇಟೆಯ ಮಟ್ಟವನ್ನಳೆಯಲು ಸೆನ್ಸೆಕ್ಸ್. ಅಂತರರಾಷ್ಟ್ರೀಯ ಮಟ್ಟದಲ್ಲಿ ಸೆನ್ಸೆಕ್ಸ್ ನಮ್ಮ ಆರ್ಥಿಕ ಮಟ್ಟದ ಹೆಗ್ಗುರುತಾಗಿದೆ. ಸೆನ್ಸೆಕ್ಸ್ 1986ರ ಜನವರಿಯಲ್ಲಿ ಆರಂಭಿಸಲಾಗಿದ್ದು, ಇದರಲ್ಲಿ ಆರ್ಥಿಕವಾಗಿ ಸುಭದ್ರವಾದ, ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ 30 ಕಂಪನಿಗಳನ್ನು ಸೇರಿಸಲಾಗಿದೆ.

ಎಲ್ಲಾ ವಿಧದ ಕಂಪನಿಗಳು

ಎಲ್ಲಾ ವಿಧದ ಕಂಪನಿಗಳು

ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ಸುಮಾರು ಐದು ಸಾವಿರ ಕ್ಕೂ ಹೆಚ್ಚಿನ ಕಂಪನಿಗಳು ಟ್ರೇಡಿಂಗ್ ಗೆ ಲಿಸ್ಟಿಂಗ್ ಮಾಡಿಕೊಂಡಿವೆ. ಇವುಗಳಲ್ಲಿ ಎಲ್ಲಾ ರೀತಿಯ ಕಂಪನಿಗಳು ಇದ್ದು, ಉತ್ತಮವಾದ ಅಗ್ರಮಾನ್ಯ ಕಂಪನಿಗಳು, ಮಿಡ್ ಕ್ಯಾಪ್, ಸ್ಮಾಲ್ ಕ್ಯಾಪ್, ಟೊಳ್ಳು, ಜೊಳ್ಳು, ಕಳಪೆ ಗುಣಮಟ್ಟದ ಷೇರುಗಳು ಇವೆ. ಜಾಗತೀಕರಣಕ್ಕೆ ಮುಂಚೆ ಸೆನ್ಸೆಕ್ಸ್ ಮುಂದಾಳತ್ವದಲ್ಲಿ ಪೇಟೆಯ ಎಲ್ಲಾ ಕಂಪನಿಗಳು ಸಾಗುತ್ತಿದ್ದವು. ಆಗ ಸೆನ್ಸೆಕ್ಸ್ ಮಾತ್ರವಿದ್ದು ಬೇರೆ ಯಾವ ಸಬ್-ಇಂಡೆಕ್ಸ್ ಗಳೂ ಇರಲಿಲ್ಲ.

ಉಪ ಇಂಡೆಕ್ಸ್ ಜಾರಿ

ಉಪ ಇಂಡೆಕ್ಸ್ ಜಾರಿ

ಪೇಟೆಯು ಬೆಳೆದಂತೆಲ್ಲಾ ಟ್ರೇಡಿಂಗ್ ಗೆ ಲಿಸ್ಟಿಂಗ್ ಮಾಡಿಕೊಂಡ ಕಂಪನಿಗಳ ಸಂಖ್ಯೆಯೂ ಸಹ ಬೆಳೆಯುತ್ತಾ ಹೋಯಿತು. ಸೆನ್ಸೆಕ್ಸ್ ನಲ್ಲಿನ ಕಂಪನಿಗಳಿಂದ ಮಾತ್ರ ಪೇಟೆಯ ಸಂಪೂರ್ಣವಾದ ಮಾಪನ ಮಾಡಲು ಸಾಧ್ಯವಿಲ್ಲವೆಂಬ ಕಾರಣ ಉಪ ಇಂಡೆಕ್ಸ್ ಗಳನ್ನು ಜಾರಿಗೊಳಿಸಲಾಯಿತು.

ಕಂಪನಿಗಳ ಸಾಮರ್ಥ್ಯ

ಕಂಪನಿಗಳ ಸಾಮರ್ಥ್ಯ

ಸೆನ್ಸೆಕ್ಸ್ ನಲ್ಲಿರುವ ಕಂಪನಿಗಳು ಶಾಶ್ವತವಲ್ಲ. ಪೇಟೆಯ ಪರಿಸ್ಥಿತಿ ಹಾಗೂ ಕಂಪನಿಗಳ ಸಾಮರ್ಥ್ಯವನ್ನಾಧರಿಸಿ ಸೆನ್ಸೆಕ್ಸ್ ಕಂಪನಿಗಳು ಬದಲಾಗುತ್ತಿರುತ್ತವೆ. ಇದಕ್ಕಾಗಿ ಸೆನ್ಸೆಕ್ಸ್ ಕಮಿಟಿ ಕಾರ್ಯ ನಿರ್ವಹಿಸುತ್ತದೆ. ಸೆನ್ಸೆಕ್ಸ್ ನಲ್ಲಿರುವ ಕಂಪನಿಗಳು ಸದಾ ಸುಭದ್ರವೆಂದೇನಲ್ಲ. ಹಿಂದೆ ಒಂದು ಸಮಯದಲ್ಲಿ ಸೆನ್ಸೆಕ್ಸ್ ನ ಅಂಗವಾಗಿದ್ದಂತಹ ಕಂಪನಿ ಸಿಂಧಿಯಾ ಸ್ಟೀಮ್ ಶಿಪ್ ಕಂಪನಿಯು ರೋಗಗ್ರಸ್ಥವಾಗಿದ್ದರೆ, ಕಂಪನಿಗಳಾದ ಎಂಟಿಎನ್ಎಲ್, ಹಿಂದೂಸ್ಥಾನ್ ಮೋಟಾರ್ಸ್, ದುರ್ಬಲಗೊಂಡಿವೆ. ಪೀಕೋ ಎಲೆಕ್ಟ್ರಾನಿಕ್ಸ್, ಐ.ಪಿ.ಸಿ.ಎಲ್, ಇಂಡಿಯನ್ ರೆಯಾನ್, ಫಿಲಿಪ್ಸ್, ಇಂಡಿಯನ್ ರೆಯಾನ್ ಕಂಪನಿಗಳು ಬೇರೆ ಬೇರೆ ಕಂಪನಿಗಳಲ್ಲಿ ವಿಲೀನಗೊಂಡು ತಮ್ಮ ಅಸ್ಥಿತ್ವವನ್ನು ಕಳೆದುಕೊಂಡಿವೆ.

ಏರಿಳಿತಗಳ ದಾಖಲೆ ಮಟ್ಟ

ಏರಿಳಿತಗಳ ದಾಖಲೆ ಮಟ್ಟ

ಜನವರಿ 2010ರಲ್ಲಿ ಪ್ರಥಮ ಬಾರಿಗೆ ಸೆನ್ಸೆಕ್ಸ್ 21,206 ಪಾಯಿಂಟುಗಳನ್ನು ತಲುಪಿ ದಾಖಲೆ ನಿರ್ಮಿಸಿತು. ಅಂದು ಮಾರ್ಕೆಟ್ ಕ್ಯಾಪಿಟಲೈಸೇಶನ್ ರೂ. 71,41,611 ಕೋಟಿ ಇತ್ತು. ಸೆನ್ಸೆಕ್ಸ್ ಹತ್ತು ಸಾವಿರ ಪಾಯಿಂಟುಗಳಿಂದ ಇಪ್ಪತ್ತು ಸಾವಿರ ಪಾಯಿಂಟುಗಳಿಗೆ ಜಿಗಿಯಲು ತೆಗೆದುಕೊಂಡ ಸಮಯ ಸುಮಾರು 389 ದಿನಗಳಾಗಿದೆ. ಈ ದಾಖಲೆಯ ಮಟ್ಟವನ್ನು ಮತ್ತೊಮ್ಮೆ ದಾಟಲು ಸುಮಾರು ನಾಲ್ಕು ವರ್ಷಗಳ ಸಮಯ ಬೇಕಾಯಿತು. ಸೆನ್ಸೆಕ್ಸ್ 21 ಸಾವಿರದ ಗಡಿಯನ್ನು ದಾಟಿದ ನಂತರದ ವರ್ಷದಲ್ಲಿ 9ನೇ ಮಾರ್ಚ್ 2009ರಂದು ಸೆನ್ಸೆಕ್ಸ್ 8160 ಪಾಯಿಂಟುಗಳಿಗೆ ಕುಸಿಯಿತು. ಕುಸಿತವು ತೀವ್ರ ಮತ್ತು ಹರಿತವಾದುದಾಗಿತ್ತು. ಕಲ್ಪನೆಗೂ ಮೀರಿದ ವೇಗದಲ್ಲಿ ಮಾರ್ಕೆಟ್ ಕ್ಯಾಪಿಟಲೈಸೇಷನ್ ಕರಗಿತು. ಸೆನ್ಸೆಕ್ಸ್ 21 ಸಾವಿರದಿಂದ ಹತ್ತು ಸಾವಿರ ಪಾಯಿಂಟುಗಳಿಗೆ ಕುಸಿಯಲು ಕುಂಬಾರನಿಗೆ ವರ್ಷ, ದೊಣ್ಣೆಗೆ ನಿಮಿಷ ಎಂಬಂತೆ ಕೇವಲ 187 ದಿನಗಳು ಮಾತ್ರ ಸಾಕಾಯಿತು.
2013ರ ನವೆಂಬರ್ 3ರಂದು ದೀಪಾವಳಿಯ ದಿನ ಸೆನ್ಸೆಕ್ಸ್ ಮತ್ತೊಮ್ಮೆ 21371.53 ನ್ನು ತಲುಪಿ ಹೊಸ ದಾಖಲೆ ನಿರ್ಮಿಸಿತು.

ಕಂಪನಿಗಳ ವೇಟೇಜ್

ಕಂಪನಿಗಳ ವೇಟೇಜ್

ಕಂಪನಿಗಳ ಗಾತ್ರ, ಚಟುವಟಿಕೆ ರೀತಿ ಮುಂತಾದವುಗಳನ್ನಾಧರಿಸಿ ಅವುಗಳಿಗೆ ಪ್ರತ್ಯೇಕವಾಗಿ ವೇಟೇಜ್ ನೀಡಲಾಗಿದ್ದು, ಅವುಗಳ ಬೆಲೆಗಳಲ್ಲುಂಟಾದ ಏರಿಳಿತಕ್ಕೆ ತಕ್ಕಂತೆ ವೇಟೇಜ್ ಆಧರಿಸಿ ಪಾಯಿಂಟುಗಳ ಏರಿಳಿತ ಉಂಟಾಗುತ್ತದೆ. ಕೆಲವು ಕಂಪನಿಗಳಿಗೆ ಹೆಚ್ಚಿನ ವೇಟೇಜ್ ನೀಡಲಾಗಿದೆ. ಕಂಪನಿಗಳಾದ ರಿಲಯನ್ಸ್ ಇಂಡಸ್ಟ್ರೀಸ್, ಮಾರುತಿ ಸುಜುಕಿ, ಲಾರ್ಸನ್ ಅಂಡ್ ಟೋಬ್ರೋ, ಹೆಚ್ಡಿಎಫ್ಸಿ, ಎಸ್ಬಿಐ, ಐಟಿಸಿ ಗಳು ಹೆಚ್ಚಿನ ವೇಟೇಜ್ ತಮ್ಮ ವಹಿವಾಟಿನ ಗಾತ್ರ, ಉತ್ತಮ ಗುಣಮಟ್ಟಗಳು ಈ ವೇಟೇಜ್ ಪಡೆಯಲು ಸಹಕಾರಿಯಾಗಿವೆ.

ಏರಿಕೆ-ಇಳಿಕೆ ವೇಗ

ಏರಿಕೆ-ಇಳಿಕೆ ವೇಗ

ಈಗಿನ ಸೆನ್ಸೆಕ್ಸ್ ಬೃಹದಾಕಾರವಾಗಿ ಬೆಳೆದಿರುವುದರಿಂದ ಏರಿಕೆ- ಇಳಿಕೆಗಳು ಹೆಚ್ಚು ವೇಗವಾಗಿರುತ್ತದೆ. ಈ ರೀತಿಯ ಏರಿಳಿತಗಳಿಗೆ ಮತ್ತೊಂದು ಪ್ರಮುಖ ಕಾರಣವೆಂದರೆ ಫಾರಿನ್ ಇನ್ಸ್ಟಿ ಟ್ಯೂಷನಲ್ ಇನ್ವೆಸ್ಟರ್ಸ್(ಎಫ್ಐಐ) ಮತ್ತು ಡೊಮೆಸ್ಟಿಕ್ ಇನ್ಸ್ಟಿ ಟ್ಯೂಷನಲ್ ಇನ್ವೆಸ್ಟರ್ಸ್(ಡಿಐಐ) ಗಳ ಜೊತೆಗೆ ಹೈ ನೆಟ್ ವರ್ತ್ ಇಂಡಿವಿಜುಯಲ್ಸ್( ಸಾಹುಕಾರಿ ವ್ಯಕ್ತಿಗಳು), ಮ್ಯುಚುಯಲ್ ಫಂಡ್ ಗಳು ಸಹ ಷೇರುಪೇಟೆಯ ವ್ಯವಹಾರವನ್ನು ತಮ್ಮ ಚಟುವಟಿಕೆಯ ಮುಖ್ಯ ಭಾಗವನ್ನಾಗಿಸಿಕೊಂಡಿರುವುದಾಗಿದೆ.

ನಿಖರ ನಿರ್ಧಾರ ಅಸಾಧ್ಯ

ನಿಖರ ನಿರ್ಧಾರ ಅಸಾಧ್ಯ

ತಿಂಗಳಿಗೊಮ್ಮೆ ಚುಕ್ತಾ ಚಕ್ರ ಹೊಂದಿರುವ ಡೆರಿವೇಟಿವ್ಸ್ ವಿಭಾಗವು ಸಹ ಅಲ್ಲಿನ ಗ್ರಾಹಕರ ಚಟುವಟಿಕೆಯನ್ನಾಧರಿಸಿ, ಮೂಲ ಪೇಟೆಯಲ್ಲಿ ಆ ಷೇರಿನ ಬೆಲೆಯಲ್ಲಿ ಏರಿಳಿತ ಕಾಣುವಂತೆ ಮಾಡುತ್ತದೆ. ಈ ಫ್ಯುಚರ್ ಅಂಡ್ ಅಪ್ಶನ್ಸ್ ಪೇಟೆಯ ಕಾರಣ ಷೇರಿನ ಬೆಲೆಗಳಲ್ಲಿ ಏರಿಕೆಯಾಗಲಿ, ಇಳಿಕೆಯಾಗಲಿ ನಿಖರವಾಗಿ ನಿರ್ಧರಿಸುವುದು ಅಸಾಧ್ಯವಾಗಿದೆ. ಪೇಟೆಯಲ್ಲಿ 'ಸ್ಪೆಕ್ಯೂಲೇಟಿವ್' ಚಟುವಟಿಕೆ ಎಷ್ಟರ ಮಟ್ಟಿಗಿರುತ್ತದೆ ಎಂದರೆ ಡೆರಿವೇಟಿವ್ಸ್ ವಿಭಾಗದ ಸೆಟ್ಲ್ ಮೆಂಟ್ ಸಮೀಪವಿದ್ದಾಗ ಅಥವಾ ಕೊನೆ ದಿನ ವಹಿವಾಟಿನ ಗಾತ್ರವು ಎರಡು ಮೂರೂ ಪಟ್ಟು ಹೆಚ್ಚಿರುವ ದಿನಗಳೇ ಹೆಚ್ಚು. ಷೇರುಪೇಟೆಯಲ್ಲಿ ಸಾಮಾನ್ಯವಾಗಿ ಏರಿಕೆ ಕಂಡ ಕಂಪೆನಿಗಳನ್ನೇ ಉದಾಹರಣೆಯಾಗಿ ನೀಡುವುದು ಸಾಮಾನ್ಯವಾಗಿದೆ. ಸಣ್ಣ ಹೂಡಿಕೆದಾರರು ಇಂತಹ ಉದಾಹರಣೆಗಳನ್ನು ಆದರಿಸಿ ಪರಿಶೀಲಿಸದೆ ತಮ್ಮ ನಿರ್ಧಾರವನ್ನು ತೆಗೆದುಕೊಳ್ಳುವುದು ಅಪಾಯಕಾರಿ ಆಗಬಹುದು.

ಕೊನೆ ಮಾತು

ಕೊನೆ ಮಾತು

ಪ್ರತಿಯೊಂದು ಏರಿಕೆಯಾಗಲಿ ಅಥವಾ ಇಳಿಕೆಯಾಗಲಿ ಎಲ್ಲವೂ ತಾತ್ಕಾಲಿಕ. ಹಾಗಾಗಿ ದೊರೆತಂತಹ ಲಾಭ ಗಳಿಕೆಯ ಅವಕಾಶಗಳನ್ನು ಉಪಯೋಗಿಸಿಕೊಂಡು ಹೊಂದಿರುವ ಷೇರುಗಳನ್ನು ಮಾರಾಟ ಮಾಡುವುದು ಉತ್ತಮವಾಗಿದೆ.

Read more about: sensex stock share
English summary

The company based activity is more profitable than Sensex

Sensex is global brand for Indian Capital Markets, is for measuring the movement of scrips in Stock Market. Markets have grown to such level that movement of Sensex has lost its command on the market. Earlier it was leading from the front before the Globalisation.
Story first published: Monday, April 17, 2017, 16:17 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X