For Quick Alerts
ALLOW NOTIFICATIONS  
For Daily Alerts

ಅದಾನಿ ಎಂಟರ್ ಪ್ರೈಸಸ್ ಅಚ್ಚರಿಯ ಜಿಗಿತ!

ಷೇರುಪೇಟೆಯ ಹೆಗ್ಗುರುತಾದ ಸೆನ್ಸೆಕ್ಸ್ ಏರಿಳಿತಗಳಿಗಿಂತ ಹೊರಗಿನ ಷೇರುಗಳಲ್ಲಿ ರಭಸದ ಏರಿಳಿತಗಳು ಗಮನಾರ್ಹವಾಗಿರುತ್ತದೆ. ಕೆಲವು ಬಾರಿ ಈ ಏರಿಳಿತಗಳು ಕಲ್ಪನೆಯನ್ನು ಮೀರಿದ ರೀತಿಯಲ್ಲಿರುತ್ತವೆ.

By K G Krupal
|

ಷೇರುಪೇಟೆಯ ಹೆಗ್ಗುರುತಾದ ಸೆನ್ಸೆಕ್ಸ್ ಏರಿಳಿತಗಳಿಗಿಂತ ಹೊರಗಿನ ಷೇರುಗಳಲ್ಲಿ ರಭಸದ ಏರಿಳಿತಗಳು ಗಮನಾರ್ಹವಾಗಿರುತ್ತದೆ. ಕೆಲವು ಬಾರಿ ಈ ಏರಿಳಿತಗಳು ಕಲ್ಪನೆಯನ್ನು ಮೀರಿದ ರೀತಿಯಲ್ಲಿರುತ್ತವೆ. ಅದಾನಿ ಎಂಟರ್ ಪ್ರೈಸಸ್ ಲಿಮಿಟೆಡ್ ಎಂಬ ಕಂಪನಿಯ ಷೇರಿನ ಬೆಲೆಯು ದಿನದ ಮಧ್ಯಂತರದ ಚಟುವಟಿಕೆಯಲ್ಲಿ ಸುಮಾರು ಶೇ. 30 ರಷ್ಟು ಏರಿಕೆ ಪಡೆದು ದಿನದ ಅಂತ್ಯದಲ್ಲಿ ರೂ. 144.90ರಲ್ಲಿ ಕೊನೆಗೊಂಡಿತು. ಈ ಷೇರು ಒಂದು ತಿಂಗಳಲ್ಲಿ ರೂ. 101-160ರವರೆಗೂ ತಲುಪಿರುವುದು ವಿಶೇಷವಾಗಿದ್ದು, ಈ ಏರಿಕೆಗೆ ಸಿಂಹಪಾಲು ಈ ವಾರದ ಕೊಡುಗೆಯಾಗಿದೆ.

ವಿಶೇಷವೆಂದರೆ ಈ ಷೇರಿನ ಬೆಲೆ ಕಳೆದ ನವೆಂಬರ್ 9 ರಂದು ರೂ. 58.35ರಲ್ಲಿದ್ದು ಕೇವಲ ಐದು ತಿಂಗಳ ಸಮಯದಲ್ಲಿ ರೂ. 100ಕ್ಕೂ ಹೆಚ್ಚಿನ ಏರಿಕೆ ಕಂಡಿದ್ದು, ಶೇ. 170ನ್ನು ಮೀರಿದೆ. ಇದನ್ನು ವಾರ್ಷಿಕ ಆದಾಯಕ್ಕೆ ಲೆಕ್ಕ ಹಾಕಿದ್ದರೆ ಅಗಾಧವಾಗುತ್ತದೆ. ಈ ಷೇರಿನ ಒಳನೋಟ ಹೇಗಿದೆ ಎಂದರೆ 2015ರ ಮೇ ತಿಂಗಳಲ್ಲಿ ರೂ. 800ರ ಸಮೀಪವಿದ್ದು, ಅದೇ ವರ್ಷ ಜೂನ್ ಮೊದಲ ವಾರದಲ್ಲಿ ಷೇರಿನ ಬೆಲೆ ರೂ. 100 ಸಮೀಪಕ್ಕೆ ಕುಸಿಯಿತು. ಈ ರೀತಿಯ ಕುಸಿತವು ಕಲ್ಪನಾತೀತವಲ್ಲವೇ? ಆದರೂ ಇದು ನಿಜ.

ಕಂಪನಿಯ ಚಟುವಟಿಕೆ

ಕಂಪನಿಯ ಚಟುವಟಿಕೆ

ಯಾವ ಕಾರಣಕ್ಕಾಗಿ ಈ ರೀತಿಯ ಕುಸಿತ, ಕಂಪನಿಯ ಚಟುವಟಿಕೆಯಲ್ಲಿ ಲೋಪವೇ ಎಂಬುದು ಸಾಮಾನ್ಯವಾಗಿ ಮೂಡುವ ಪ್ರಶ್ನೆ. ಆ ಸಮಯದಲ್ಲಿ ಕಂಪನಿಯು ತನ್ನ ಚಟುವಟಿಕೆಗಳನ್ನು ಬೇರ್ಪಡಿಸಿ ಅದಾನಿ ಪೋರ್ಟ್ಸ್ ಅಂಡ್ ಸ್ಪೆಷಲ್ ಎಕನಾಮಿಕ್ ಝೋನ್ ( ಈಗ ಈ ಕಂಪನಿಯು ಸೆನ್ಸೆಕ್ಸ್ ನ ಭಾಗವಾಗಿದೆ), ಅದಾನಿ ಪವರ್, ಅದಾನಿ ಟ್ರಾನ್ಸ್ಮಿಷನ್ ಎಂಬ ಷೇರುಗಳನ್ನು ನೀಡಿದ ಕಾರಣ ಈ ರೀತಿಯ ಭಾರಿ ಕುಸಿತವುಂಟಾಯಿತು. ಆ ಸಮಯದಲ್ಲಿ ಕಂಪನಿಯ ಚಟುವಟಿಕೆಯು ಮೈನ್ ಡೆವೆಲಪರ್ ಆಪರೇಟರ್ ಮಾತ್ರವಾಯಿತು. ಅಲ್ಲಿಂದ ಕುಸಿಯುತ್ತಾ ಬಂದು ರೂ. 59ರವರೆಗೂ ಬಂದು ನಂತರ ಚೇತರಿಕೆ ಕಂಡಿದೆ.

ಷೇರು ಖರೀದಿ ಸರಿಯಲ್ಲ

ಷೇರು ಖರೀದಿ ಸರಿಯಲ್ಲ

ಕಂಪನಿಯ ಚಟುವಟಿಕೆಗಳನ್ನು ಡೀಮರ್ಜ್ ಮಾಡಿದ ನಂತರದಲ್ಲಿ ತಕ್ಷಣಕ್ಕೆ ಆ ಕಂಪನಿಯ ಷೇರು ಕೊಳ್ಳುವುದು ಸರಿಯಲ್ಲ. ಷೇರಿನ ಬೆಲೆ ಕುಸಿತಕ್ಕೆ ಸಹನೆಯಿಂದ ಕಾಯಬೇಕು. ದುಡುಕಿದರೆ ಯಾವ ರೀತಿಯ ಹಾನಿಯಾಗಬಹುದೆಂದು ತಿಳಿಯಲು ಇದೆ ಕಂಪನಿಯು ಉತ್ತಮ ಉದಾಹರಣೆ. 2015ರ ಜೂನ್ ತಿಂಗಳಲ್ಲಿ ಡೀಮರ್ಜ್ ರೆಕಾರ್ಡ್ ಡೇಟ್ ನಂತರ ಈ ಷೇರಿನ ಬೆಲೆಯು ರೂ. 570ರ ಸಮೀಪವಿದ್ದು, ರೂ. 570ರಲ್ಲಿ ಕೊಂಡವರಿಗೂ ಮತ್ತು ರೂ. 58ರ ಸಮೀಪ ಕೊಂಡವರಿಗೂ ದೊರೆಯುವ ಕಾರ್ಪೊರೇಟ್ ಫಲಗಳಲ್ಲಿ ವ್ಯತ್ಯಾಸವಿಲ್ಲ. ಅಂದರೆ ರೂ. 570ರಲ್ಲಿ ಕೊಂಡವರಿಗೆ ಇಷ್ಟು ದೀರ್ಘಕಾಲ ಕಾದರೂ ಅಸಲು ಲಭ್ಯವಿಲ್ಲ. ಆದರೆ ರೂ. 59ರ ಸಮೀಪ ಕೊಂಡವರಿಗೆ ಅಗಾಧ ಲಾಭ ಲಭ್ಯ. ಇದೆ ಷೇರುಪೇಟೆಯ ವಿಸ್ಮಯಕಾರಿ ಗುಣ.

ವ್ಯಾಲ್ಯೂ ಪಿಕ್ ಗೆ ಅವಕಾಶ

ವ್ಯಾಲ್ಯೂ ಪಿಕ್ ಗೆ ಅವಕಾಶ

ತಕ್ಷಣದ ಪ್ರತಿಕ್ರಿಯೆಯು, ಅಲ್ಪಕಾಲೀನ ಹೂಡಿಕೆ ಉದ್ದೇಶದಿಂದ ಮಾಡಿದರೂ ಅದು ಒತ್ತಾಯ ಪೂರ್ವಕವಾದ ಧೀರ್ಘಕಾಲೀನ ಹೂಡಿಕೆಯಾಗಿ ಪರಿವರ್ತಿತಗೊಂಡು ಬೇಸರ ಮೂಡಿಸುವುದು. ಹಾಗಾಗಿ ಷೇರಿನ ಬೆಲೆ ಕುಸಿತದವರೆಗೂ ತಾಳ್ಮೆ ಇರಬೇಕು. ಆಗ ಮಾತ್ರ ವ್ಯಾಲ್ಯೂ ಪಿಕ್ ಗೆ ಅವಕಾಶವಾಗುತ್ತದೆ. ಈ ಷೇರು ಡೆರಿವೇಟಿವ್ಸ್ ವಿಭಾಗದ ಭಾಗವಾಗಿದ್ದು, ಈ ರೀತಿಯ ಏರಿಕೆಯ ಹಿಂದೆ ಅಲ್ಲಿನ ಶಾರ್ಟ್ - ಲಾಂಗ್ ಪೊಸಿಷನ್ ಗಳು ಸಹ ಪ್ರಭಾವಿಯಾಗಿರುವುದರಿಂದ, ರಭಸದ ಏರಿಕೆಯು ಸ್ಥಿರತೆ ಕಾಣುವ ಸಾಧ್ಯತೆ ಕಡಿಮೆಯಾಗಿರುತ್ತದೆ.

ಲಾಭ ಕ್ಯಾಶ್ ಮಾಡಿ

ಲಾಭ ಕ್ಯಾಶ್ ಮಾಡಿ

ಇಂಡಿಯಾ ಬುಲ್ ರಿಯಲ್ ಎಸ್ಟೇಟ್ ಕಂಪನಿಯ ಷೇರು ಸೋಮವಾರದಂದು ಸುಮಾರು ಶೇ. 40ಕ್ಕೂ ಹೆಚ್ಚಿನ ಏರಿಕೆ ಪ್ರದರ್ಶಿಸಿತು. ಇದಕ್ಕೆ ಕಾರಣ ಈ ಕಂಪನಿಯು ಗೃಹ ನಿರ್ಮಾಣ ಮತ್ತು ಕಮರ್ಷಿಯಲ್ ಕಾಂಪ್ಲೆಕ್ಸ್ ಚಟುವಟಿಕೆಯನ್ನು ಬೇರ್ಪಡಿಸಿ ಪ್ರತ್ಯೇಕ ಕಂಪೆನಿಗಳನ್ನಾಗಿಸುವ ಪ್ರಕ್ರಿಯೆಯಾಗಿದೆ. ಆದರೆ ನಂತರದ ದಿನದಲ್ಲಿ ಶೇ. 10ರಷ್ಟು ಕುಸಿತಕ್ಕೊಳಗಾಯಿತು. ಯಾವುದಾದರೂ ಕಾರ್ಪೊರೇಟ್ ಕ್ರಿಯೆಗಳು ಪ್ರಕಟವಾದಾಗ ಷೇರುಪೇಟೆಯು ನೀಡುವ ತಕ್ಷಣದ ಪ್ರತಿಕ್ರಿಯೆಯು ಅಭೂತಪೂರ್ವವಾಗಿದ್ದು ಅಂತಹ ಏರಿಕೆಯ ಕ್ಷಣಗಳು ದೊರೆತಾಗ ಕಣ್ಮುಚ್ಚಿ ಲಾಭವನ್ನು ಎನ್ ಕ್ಯಾಶ್ ಮಾಡುವುದು ಸೂಕ್ತವಾಗಿದೆ.

ಕೊನೆ ಮಾತು

ಕೊನೆ ಮಾತು

ಈಗಿನ ಪೇಟೆಗಳಲ್ಲಿ ಅವಕಾಶ ಬೇಟೆಯಾಡುವುದಕ್ಕಿಂತ ದೊರೆತಂತಹ ಅವಕಾಶಗಳ ಲಾಭ ಪಡೆದುಕೊಳ್ಳುವುದು ಸೂಕ್ತ ಕ್ರಮ. ಆದರೆ ನಡೆಸಿದ ಎಲ್ಲಾ ಚಟುವಟಿಕೆಗಳಿಗೆ ಅಕೌಂಟ್ ಮಾಡಿ ದಾಖಲೆಗಳನ್ನು ಶಿಸ್ತುಬದ್ಧವಾಗಿರಿಸಿಕೊಳ್ಳುವುದು ಅತ್ಯವಶ್ಯಕ.

Read more about: stock share sensex
English summary

Adani Enterprises surprise jump!

Adani Enterprises Ltd found life after a long gap of time. In June 2015 at the time of demerger the share price was Rs.800 level. After the record date the share Price has fallen on ex basis to Rs.570. Since then the share price crushed to Rs.59 level in November 2016, which is yearly low.
Story first published: Wednesday, April 19, 2017, 13:13 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X