For Quick Alerts
ALLOW NOTIFICATIONS  
For Daily Alerts

ವಜ್ರದ ಉದ್ಯಮಿಯಿಂದ ಉದ್ಯೋಗಿಗಳಿಗೆ ದ್ವಿಚಕ್ರ ವಾಹನಗಳು ಗಿಫ್ಟ್!

ಉದ್ಯೋಗಿಗಳಿಗೆ ಸರಿಯಾಗಿ ಸಂಬಳ ಕೊಡುವುದೇ ಕಷ್ಟ. ಅಂತಾದರಲ್ಲಿ ಫ್ಲಾಟ್, ಕಾರು, ದ್ವಿಚಕ್ರ ವಾಹನಗಳನ್ನು ಗಿಫ್ಟ್ ರೂಪದಲ್ಲಿ ಕೊಟ್ಟರೆ ಅಚ್ಚರಿಯಲ್ಲವೆ..!!

By Siddu
|

ಉದ್ಯೋಗಿಗಳಿಗೆ ಸರಿಯಾಗಿ ಸಂಬಳ ಕೊಡುವುದೇ ಕಷ್ಟ. ಅಂತಾದರಲ್ಲಿ ಫ್ಲಾಟ್, ಕಾರು, ದ್ವಿಚಕ್ರ ವಾಹನಗಳನ್ನು ಗಿಫ್ಟ್ ರೂಪದಲ್ಲಿ ಕೊಟ್ಟರೆ ಅಚ್ಚರಿಯಲ್ಲವೆ..!!

 

ಸೂರತ್ ನ ವಜ್ರದ ವ್ಯಾಪಾರಿಯೊಬ್ಬರೂ ತಮ್ಮ ಸಂಸ್ಥೆಯ ಉದ್ಯೋಗಿಗಳಿಗೆ ದ್ವಿಚಕ್ರ ವಾಹನಗಳನ್ನು ಉಡುಗೊರೆಯಾಗಿ ಕೊಟ್ಟು ಭಾರೀ ಸುದ್ದಿಯಾಗಿದ್ದಾರೆ.

ಆ ವ್ಯಾಪಾರಿ ಯಾರು?

ಆ ವ್ಯಾಪಾರಿ ಯಾರು?

ಗುಜರಾತ್ ರಾಜ್ಯದ ಸೂರತ್ ನಲ್ಲಿನ ವಜ್ರದ ವ್ಯಾಪಾರಿ ಲಕ್ಷ್ಮೀಕಾಂತ್ ವಿಕಾರಿಯಾ ತಮ್ಮ ಸಂಸ್ಥೆಯ 150 ಉದ್ಯೋಗಿಗಳಿಗೆ ದ್ವಿಚಕ್ರ ವಾಹನಗಳನ್ನು ಗಿಫ್ಟ್ ರೂಪದಲ್ಲಿ ನೀಡಿದ್ದಾರೆ. ಲಕ್ಷ್ಮೀಕಾಂತ್ ವಿಕಾರಿಯಾ ಉದ್ಯೋಗಿಗಳ ವೇತನ ಭತ್ಯೆಯಾಗಿ ದ್ವಿಚಕ್ರ ವಾಹನಗಳನ್ನು ಉಡುಗೊರೆಯಾಗಿ ನೀಡಿ ಸುದ್ದಿಯಲ್ಲಿದ್ದಾರೆ.

ಗಿಫ್ಟ್ ನೀಡಲು ಕಾರ್ಯಕ್ರಮ ಆಯೋಜನೆ

ಗಿಫ್ಟ್ ನೀಡಲು ಕಾರ್ಯಕ್ರಮ ಆಯೋಜನೆ

ಲಕ್ಷ್ಮೀಕಾಂತ್ ವಿಕಾರಿಯಾ ತಾವೇ ಖುದ್ದಾಗಿ ಉಡುಗೊರೆಗಳನ್ನು ನೀಡಲು ಸೂರತ್ ನಲ್ಲಿ ಅದ್ದೂರಿ ಕಾರ್ಯಕ್ರಮವನ್ನೇ ಆಯೋಜಿಸಿದ್ದರು. ಉಡುಗೊರೆಯಾಗಿ ನೀಡಿದ್ದ ಪ್ರತೀ ದ್ವಿಚಕ್ರ ವಾಹನದ ಮೇಲೆ ತ್ರಿವರ್ಣ ಧ್ವಜವನ್ನು ಹಾಕುವ ಮೂಲಕ ದೇಶಭಕ್ತಿ ಮೆರೆದರು.

ಸಾವಜಿ ದೋಲ್ಖಿಯಾ
 

ಸಾವಜಿ ದೋಲ್ಖಿಯಾ

ಕಳೆದ ವರ್ಷ ಸೂರತ್ ನ ಇನ್ನೊಬ್ಬ ಪ್ರಸಿದ್ದ ವಜ್ರದ ವ್ಯಾಪಾರಿ ಸಾವಜಿ ದೋಲ್ಖಿಯಾ ತನ್ನ ಉದ್ಯೋಗಿಗಳಿಗೆ 400 ಫ್ಲಾಟ್, ಆಭರಣಗಳು ಮತ್ತು ಸುಮಾರು 1, 260 ಕಾರುಗಳನ್ನು ಉಡುಗೊರೆಯಾಗಿ ನೀಡಿ ಸುದ್ದಿಯಾಗಿದ್ದರು. ಇದೀಗ ಲಕ್ಷ್ಮೀಕಾಂತ್ ವಿಕಾರಿಯಾ ಅವರ ಸರದಿಯಾಗಿದ್ದು, ಉದ್ಯೋಗಿಗಳಿಗೆ ದ್ವಿಚಕ್ರ ವಾಹನ ನೀಡಿ ಗಮನ ಸೆಳೆದಿದ್ದಾರೆ.

ಬಿಎಸ್ 3 ವಾಹನಗಳು ಇರಬಹುದೆ?

ಬಿಎಸ್ 3 ವಾಹನಗಳು ಇರಬಹುದೆ?

ಕೆಲ ದಿನಗಳ ಹಿಂದೆ ಸಾರಿಗೆ ಇಲಾಖೆ ನಿಯಮದ ಪ್ರಕಾರ ಬಿಎಸ್ 3 ದ್ವಿಚಕ್ರ ವಾಹನಗಳನ್ನು ನಿಷೇಧ ಮಾಡಲಾಗಿತ್ತು. ಹೀಗಾಗಿ ಕಂಪನಿಗಳು ದ್ವಿಚಕ್ರ ವಾಹನಗಳನ್ನು ಡಿಸ್ಕೌಂಟ್ ದರದಲ್ಲಿ ಮಾರಾಟ ಮಾಡಿದ್ದವು. ಲಕ್ಷ್ಮೀಕಾಂತ್ ವಿಕಾರಿಯಾ ಕೂಡ ತಮ್ಮ ಉದ್ಯೋಗಿಗಳಿಗೆ ಈ ಬಿಎಸ್-3 ದ್ವಿಚಕ್ರ ವಾಹನಗಳನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. 
ಏನೇ ಆಗಲಿ ಉದ್ಯೋಗಿಗಳು ವಾಹನಗಳನ್ನು ಉಡುಗೊರೆಯಾಗಿ ಪಡೆದ ಖುಷಿಯಲ್ಲಿದ್ದಾರೆ. ಹೀರೋ, ಹೋಂಡಾ, ಬಜಾಜ್ ಸಂಸ್ಥೆಯ ಬಿಎಸ್ 3 ಮಾಡೆಲ್ ಬೈಕ್ ಮೇಲೆ 22 ಸಾವಿರವರೆಗೆ ರಿಯಾಯಿತಿ!

English summary

Surat diamond trader gives employees scooters for good performance

A diamond businessman in Gujarat’s Surat has given away scooties to his employees as a gift for the company doing well despite a sluggish economy, agencies reported on Friday.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X