For Quick Alerts
ALLOW NOTIFICATIONS  
For Daily Alerts

ಜಿಯೋ ಉಲಾಲಾ.... ಇನ್ನೂ 12-18 ತಿಂಗಳು ಉಚಿತ ಆಫರ್!!

ಮುಖೇಶ್ ಅಂಬಾನಿ ತನ್ನ ಜಿಯೋ ಗ್ರಾಹಕರಿಗೆ ಸಂತಸದ ಸುದ್ದಿಯನ್ನು ನೀಡಿದ್ದು, ಇದೀಗ ಇನ್ನೂ 12 ರಿಂದ 18 ತಿಂಗಳ ಕಾಲ ಜಿಯೋ ಉಚಿತ ಕೊಡುಗೆಗಳನ್ನು ವಿಸ್ತರಿಸಿದ್ದಾರೆ.

By Siddu
|

ಶಾಕ್ ಆಯ್ತಾ..? ಆಗಿರ್ಲೆಬೇಕು. ಶಾಕ್ ಆಗ್ಲಿ ಅಂತಾ ತಾನೆ ಮೇಲಿಂದ ಮೇಲೆ ಆಫರ್ಸ್ ಬಿಡ್ತಾ ಇರೋದು..!!

 

ಹೌದು... ಅಂಬಾನಿ ತನ್ನ ರಿಲಯನ್ಸ್ ಜಿಯೋ ಗ್ರಾಹಕರಿಗೆ ಘೊಷಿಸುತ್ತಿರುವ ಕೊಡುಗೆಗಳನ್ನು ನೋಡಿದಾಗ ಸಿನಿಮಾದ ಈ ಡೈಲಾಗ್ ನೆನಪಿಗೆ ಬಂತು..! ಅಂಬಾನಿ ಕೊಡುಗೆಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ! ಮತ್ತೆ ಮತ್ತೆ ಹೊಸ ಆಫರ್ ಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದ್ದಾರೆ!! ಜಿಯೋಗೆ ಸರ್ಜರಿ! ಏರ್ಟೆಲ್, ಐಡಿಯಾ, ವೋಡಾಫೋನ್ ಆಫರ್ಸ್ ಭರ್ಜರಿ!!

ಜಿಯೋ ವಿಸ್ತಾರ!

ಜಿಯೋ ವಿಸ್ತಾರ!

ಮುಖೇಶ್ ಅಂಬಾನಿ ತನ್ನ ಜಿಯೋ ಗ್ರಾಹಕರಿಗೆ ಸಂತಸದ ಸುದ್ದಿಯನ್ನು ನೀಡಿದ್ದು, ಇದೀಗ ಇನ್ನೂ 12 ರಿಂದ 18 ತಿಂಗಳ ಕಾಲ ಜಿಯೋ ಉಚಿತ ಕೊಡುಗೆಗಳನ್ನು ವಿಸ್ತರಿಸುವ ಸಾಧ್ಯತೆ ಕುರಿತು ಸೂಚನೆ ನೀಡಿದ್ದಾರೆ.

ಜಿಯೋ ಧನ್ ಧನಾ ಧನ್ ಆಫರ್

ಜಿಯೋ ಧನ್ ಧನಾ ಧನ್ ಆಫರ್

ಈಗಾಗಲೇ ಜಿಯೋ ಈಗ ತನ್ನ 72 ಮಿಲಿಯನ್ ಗ್ರಾಹಕರಿಗೆ ‘ಜಿಯೋ ಧನ್ ಧನಾ ಧನ್' ಎಂಬ ಆಫರ್ ನ್ನು ಘೋಷಣೆ ಮಾಡಿದೆ. ಈ ಯೋಜನೆ ಅನ್ ಲಿಮಿಟೆಡ್ ಯೋಜನೆಯೊಂದಿಗೆ ವಿಶೇಷ ಸೇವೆಗಳನ್ನು ನೀಡುತ್ತಿದೆ. ಅಲ್ಲದೇ ಜಿಯೋ ಚಂದಾದಾರರು ಯಾವುದೇ ಅಡೆತಡೆಗಳಿಲ್ಲದೆ ಡಿಜಿಟಲ್ ಲೈಫ್ ನ್ನು ಉತ್ತೇಜಿಸುವ ಗುರಿ ಹೊಂದಿದೆ. 309 ರೂ.ಗಳ ಈ ಪ್ಲಾನ್ ಮೂಲಕ ಮೂರು ತಿಂಗಳು ಉಚಿತ ಸೇವೆಗಳನ್ನು ಒದಗಿಸುತ್ತಿದ್ದು, ಇದು ಅನಿಯಮಿತ ಎಸ್ಎಂಎಸ್, ಕರೆ, ಡೇಟಾ ಒಳಗೊಂಡಿದೆ. ಪ್ರತಿ ದಿನಕ್ಕೆ 4G ವೇಗದ 1GB ಡೇಟಾ ಸಿಗುತ್ತಿದೆ. ಒಂದು ಬಾರಿ 309 ರೂ. ರೀಚಾರ್ಜ್ ಮಾಡಿದರೆ ಮೂರು ತಿಂಗಳವರೆಗೆ ಅವಧಿ ಇರಲಿದೆ. ಮತ್ತೆ ಜಿಯೋ ಧಮಾಕಾ... 'ಧನ್ ಧನಾ ಧನ್' ಭರ್ಜರಿ ಆಫರ್!!

ಟೆಲಿಕಾಂ ಕಂಪನಿಗಳ ಹರಸಾಹಸ!
 

ಟೆಲಿಕಾಂ ಕಂಪನಿಗಳ ಹರಸಾಹಸ!

ಜಿಯೋ ಉಚಿತ ಕೊಡುಗೆಗಳಿಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ಏರ್ಟೆಲ್, ವೊಡಾಫೋನ್, ಬಿಎಸ್ಎನ್ಎಲ್, ಐಡಿಯಾ ಕಂಪನಿಗಳು ಈಗಾಗಲೇ ಆಫರ್ ಗಳ ಮೇಲೆ ಆಫರ್ ಘೋಷಿಸುತ್ತಿವೆ. ತಮ್ಮ ಗ್ರಾಹಕರನ್ನು ಉಳಿಸಲು ಈ ಕಂಪನಿಗಳು ಹರಸಾಹಸ ಪಡುವಂತಾಗಿದೆ.

ಟೆಲಿಕಾಂ ಕಂಪನಿಗಳು ಕಾರಣ!

ಟೆಲಿಕಾಂ ಕಂಪನಿಗಳು ಕಾರಣ!

ಏರ್ಟೆಲ್, ವೊಡಾಫೋನ್, ಬಿಎಸ್ಎನ್ಎಲ್, ಐಡಿಯಾ ಪ್ರಮುಖ ಕಂಪನಿಗಳು ಜಿಯೋ ವಿರುದ್ಧವಾಗಿ ಆಫರ್ಸ್ ಗಳನ್ನು ಘೊಷಿಸುತ್ತಿರುವುದು ಇದಕ್ಕೆಲ್ಲಾ ಕಾರಣವೆನ್ನಲಾಗಿದೆ! ಯಾರೇ ಏನೇ ಆಫರ್ಸ್ ಗಳನ್ನು ಘೋಷಣೆ ಮಾಡಿದರೂ ಅಂಬಾನಿ ಮಾತ್ರ ಸುಮ್ಮನೆ ಕೂತಿಲ್ಲ. ಹೀಗಾಗಿ ಜಿಯೋ ಟೆಲಿಕಾಂ ಕಂಪನಿಗಳನ್ನು ಧೂಳೀಪಟ ಮಾಡಲು ಸಜ್ಜಾಗಿರುವಂತೆ ಭಾಸವಾಗುತ್ತದೆ. ಮತ್ತೆ ಮತ್ತೆ ಉಚಿತ ಕೊಡುಗೆಗಳನ್ನು ವಿಸ್ತರಿಸುತ್ತಾ ಹೋಗಲು ಜಿಯೋ ದಾಪುಗಾಲು ಇಟ್ಟಿದೆ.

ತಜ್ಞರು ಏನಂತಾರೆ?

ತಜ್ಞರು ಏನಂತಾರೆ?

ಜಿಯೋ ಎಫೆಕ್ಟ್: ದೇಶದ ಟೆಲಿಕಾಂ ಉದ್ಯಮಕ್ಕೆ ಭಾರೀ ನಷ್ಟ!ಜಿಯೋ ಎಫೆಕ್ಟ್: ದೇಶದ ಟೆಲಿಕಾಂ ಉದ್ಯಮಕ್ಕೆ ಭಾರೀ ನಷ್ಟ!

ಅಮೆರಿಕ ಬ್ಯಾಂಕ್ ಮೋರ್ಗಾನ್ ಸ್ಟಾನ್ಲಿ ಹೇಳಿದ್ದೇನು?

ಅಮೆರಿಕ ಬ್ಯಾಂಕ್ ಮೋರ್ಗಾನ್ ಸ್ಟಾನ್ಲಿ ಹೇಳಿದ್ದೇನು?

ಅನಿಯಮಿತ ಆಫರ್ಸ್ ಗಳ ಕಾರಣದಿಂದಾಗಿ ಟೆಲಿಕಾಂ ಕಂಪನಿಗಳು ಒಬ್ಬ ಗ್ರಾಹಕನಿಂದ ತಿಂಗಳಿಗೆ ಕೆವಲ ರೂ. 300 ರವರೆಗೆ ಮಾತ್ರ ಆದಾಯ ಗಳಿಸುತ್ತಿವೆ. ಜಿಯೋದಿಂದಾಗಿ ಗ್ರಾಹಕರಿಂದ ವಸೂಲಿಯಾಗದ ತಿಂಗಳ ಆಧಾಯದ ಪ್ರಮಾಣ ಕೂಡ ಗಣನೀಯವಾಗಿ ಕುಸಿದಿದೆ. ಹೀಗೆ ದೀರ್ಘಕಾಲದವರೆಗೆ ಮುಂದುವರೆದರೆ ಟೆಲಿಕಾಂ ಕಂಪನಿಗಳ ಅಸ್ತಿತ್ವಕ್ಕೆ ಕುತ್ತು ಬರಲಿದೆ ಎಂದು ಅಮೆರಿಕ ಬ್ಯಾಂಕ್ ಮೋರ್ಗಾನ್ ಸ್ಟಾನ್ಲಿ ಅಭಿಪ್ರಾಯ ಪಟ್ಟಿದೆ. (Rread more: ರಿಲಯನ್ಸ್ ಜಿಯೋ)

English summary

Reliance Jio free offers to continue for 12-18 months

Reliance Jio Infocomm is expected to pursue its pricing strategy of sharp discounts and complimentary services for the next 12-18 months in a bid to garner about 15% of India’s wireless subscribers, a move that will continue to hurt rivals, analysts said.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X