For Quick Alerts
ALLOW NOTIFICATIONS  
For Daily Alerts

ಹುಡ್ಕೋ(HUDCO) ಐಪಿಒ- ಹೂಡಿಕೆಗೆ ಇಲ್ಲಿದೆ ಅಪರೂಪದ ಅವಕಾಶ

ಹುಡ್ಕೋ ಕಂಪನಿ ಸುಮಾರು ರೂ. 1,200 ಕೋಟಿಯಷ್ಟು ಹಣವನ್ನು ಸಂಗ್ರಹಿಸುವ ಉದ್ದೇಶದಿಂದ ಮೇ 8-11ರವರೆಗೂ, ಪ್ರತಿ ರೂ. 10 ರ ಮುಖಬೆಲೆಯ ಷೇರನ್ನು ರೂ. 56-60ರ ಅಂತರದಲ್ಲಿ ಐಪಿಒ ಮೂಲಕ ಮಾರಾಟ ಮಾಡಲಿದೆ.

By K G Krupal
|

ಹೌಸಿಂಗ್ ಅಂಡ್ ಅರ್ಬನ್ ಡೆವೆಲಪಮೆಂಟ್ ಕಾರ್ಪೊರೇಷನ್ ಲಿಮಿಟೆಡ್ ಕಂಪನಿಯು ಮಿನಿ ರಾಷ್ಟ್ರಮಟ್ಟದ ಕಂಪೆನಿಯಾಗಿದ್ದು, 46 ವರ್ಷಗಳ ಸಾಧನೆ ಹೊಂದಿದೆ. ಈ ಕಂಪನಿಯು ನೆಮ್ಮದಿಯ ಸೂರನ್ನು ಅಭಿವೃದ್ಧಿಗೊಳಿಸಿ ಜೀವನದ ಗುಣಮಟ್ಟವನ್ನು ಹೆಚ್ಚಿಸುವ ಗುರಿ ಹೊಂದಿದೆ. ವಸತಿ ವಲಯದಲ್ಲಿ ಸಂಪೂರ್ಣವಾದ ಆರ್ಥಿಕ ಅಗತ್ಯತೆ, ಪ್ರಾಜೆಕ್ಟ್ ಫೈನಾನ್ಸ್ ಒದಗಿಸುವ ಮೂಲಕ ಸಾರ್ವಭೌಮತ್ವವನ್ನು ಸಾಧಿಸಿದೆ. ಭಾರತದಲ್ಲಿ ಈ ಆದಾಯಗಳಿಗೆ ತೆರಿಗೆ ಇಲ್ಲ

ಈ ಕಂಪನಿಯು ಮೊದಲಿನಿಂದ ಈವರೆಗೂ ವಿತರಿಸಿದ ಸಾಲದ 39% ಪ್ರಮಾಣವು ವಸತಿ ವಲಯಕ್ಕೆ ಮತ್ತು ಉಳಿದ 61% ರಷ್ಟು ನಗರ ಮೂಲ ಸೌಕರ್ಯಾಭಿವೃದ್ಧಿಗೆ ನೀಡಿದೆ.

ಹುಡ್ಕೋ(HUDCO) ಉದ್ದೇಶ

ಹುಡ್ಕೋ(HUDCO) ಉದ್ದೇಶ

ಈ ಕಂಪನಿಯ ಹುಡ್ಕೋ ನಿವಾಸ್ ಯೋಜನೆಯು ಸಮೂಹ ವಸತಿ, ಗೃಹ ಸಮುಚ್ಚಯ ನಿರ್ಮಾಣ, ರಿಟೇಲ್ ಫೈನಾನ್ಸ್ ಗಳನ್ನು ಒಳಗೊಂಡಿದೆ. ಇದಲ್ಲದೆ ನಗರಾಭಿವೃದ್ಧಿ ಯೋಜನೆಗಳಲ್ಲಿ ನೀರು, ರಸ್ತೆ, ಸಾಗಾಣಿಕೆ, ಇಂಧನ, ಗ್ಯಾಸ್ ಪೈಪ್ ಲೈನ್ಸ್, ಆಯಿಲ್ ಟರ್ಮಿನಲ್ಸ್, ಟೆಲೆಕಾಂ ಪ್ರಾಜೆಕ್ಟ್, ಶಾಪಿಂಗ್ ಕಾಂಪ್ಲೆಕ್ಸ್, ಮಾಲ್ಸ್, ಮಲ್ಟಿಪ್ಲೆಕ್ಸ್, ಆಫೀಸ್ ಬಿಲ್ಡಿಂಗ್ಸ್ ಮುಂತಾದ ಯೋಜನೆಗಳಿಗೂ ಆರ್ಥಿಕ ಸೌಲಭ್ಯಗಳನ್ನು ಒದಗಿಸುತ್ತಿದೆ. ಅಲ್ಲದೆ 2013ರ ವರೆಗೂ ನಗರಗಳ ಒಳಚರಂಡಿ ಮತ್ತು ವೆಸ್ಟ್ ಮ್ಯಾನೇಜ್ ಮೆಂಟ್ ಗಳಿಗೂ ಸಂಪನ್ಮೂಲ ಒದಗಿಸಿ ನಗರ ನಿವಾಸಿಗಳ ಅಭಿವೃದ್ಧಿಯಲ್ಲಿ ಪಾಲ್ಗೊಂಡಿದೆ. ಇದು ಸಾರ್ವಜನಿಕ ಉದ್ದಿಮೆಯಾಗಿದೆ. ಹುಡ್ಕೋ ಸಾಲಗಳನ್ನು ಸರ್ಕಾರಗಳಿಗೆ ಮತ್ತು ಅವುಗಳ ಏಜೆನ್ಸಿಗಳಿಗೆ ಮಾತ್ರ ಲಭ್ಯವಿದ್ದು, ಸಾಲ ವಸೂಲಾತಿಯ ಕಿರಿಕಿರಿ, ಒತ್ತಡಗಳು ಇರುವುದಿಲ್ಲ.

ಈ ಕಂಪನಿಗೆ ಸಂಪನ್ಮೂಲ ಹೇಗೆ ಒದಗಿಸಲಾಗಿದೆ?

ಈ ಕಂಪನಿಗೆ ಸಂಪನ್ಮೂಲ ಹೇಗೆ ಒದಗಿಸಲಾಗಿದೆ?

ಕಂಪನಿಯು ಟ್ಯಾಕ್ಸ್ ಫ್ರಿ ಬಾಂಡ್ ಗಳನ್ನು ಕಳೆದ ಕೆಲವು ವರ್ಷಗಳಲ್ಲಿ ವಿತರಿಸಿದೆ. ಡಿಬೆಂಚರ್ ಗಳು, ಎನ್ ಸಿ ಡಿ, ಟರ್ಮ್ ಲೊನ್ಸ್, ಕಮರ್ಷಿಯಲ್ ಪೇಪರ್ಸ್, ಪಬ್ಲಿಕ್ ಡಿಪಾಜಿಟಿಗಳು ಮುಂತಾದ ವಿಧಗಳಲ್ಲಿ ಕಂಪನಿಯ ಚಟುವಟಿಕೆಗೆ ಸಂಪನ್ಮೂಲ ಒದಗಿಸಲಾಗಿದೆ. ಕಂಪನಿಯು ಹೌಸಿಂಗ್ ನಲ್ಲಿ ರೂರಲ್ ಮತ್ತು ಅರ್ಬನ್ ಹೌಸಿಂಗ್ ವಲಯಗಳಲ್ಲದೆ ಕೋ ಆಪರೇಟಿವ್ ಹೌಸಿಂಗ್, ಕಮ್ಯುನಿಟಿ ಟಾಯ್ಲೆಟ್, ಸ್ಟಾಫ್ ಹೌಸಿಂಗ್ ಮುಂತಾದ ವಿಭಾಗಗಳಲ್ಲಿ ತನ್ನ ಚಟುವಟಿಕೆಯನ್ನು ಹರಡಿಕೊಂಡಿದೆ.

ಐಪಿಒ ಮಾರಾಟ
 

ಐಪಿಒ ಮಾರಾಟ

ಹೌಸಿಂಗ್ ಅಂಡ್ ಅರ್ಬನ್ ಡೆವೆಲಪಮೆಂಟ್ ಕಾರ್ಪೊರೇಷನ್ ಲಿಮಿಟೆಡ್ ಕಂಪನಿಯ ಶೇ. 10ರಷ್ಟು ಬಂಡವಾಳವನ್ನು ಸಾರ್ವಜನಿಕರಿಗೆ ವಿತರಿಸುವ ಮೂಲಕ ಸರ್ಕಾರವು ಸುಮಾರು ರೂ. 1,200 ಕೋಟಿಯಷ್ಟು ಹಣವನ್ನು ಸಂಗ್ರಹಿಸುವ ಉದ್ದೇಶದಿಂದ ಮೇ 8-11 ರವರೆಗೂ, ಪ್ರತಿ ರೂ. 10 ರ ಮುಖಬೆಲೆಯ ಷೇರನ್ನು ರೂ. 56-60 ರ ಅಂತರದಲ್ಲಿ ಐಪಿಒ ಮೂಲಕ ಮಾರಾಟ ಮಾಡಲಿದೆ. ಕೇಂದ್ರ ಸರ್ಕಾರವು ಈ ವರ್ಷ ರೂ. 56,500 ಕೋಟಿ ಹಣವನ್ನು ಬಂಡವಾಳ ಹಿಂತೆಗೆತದ ಮೂಲಕ ಸಂಗ್ರಹಿಸುವ ಗುರಿ ಹೊಂದಿದ್ದು, ಈ ದಿಶೆಯಲ್ಲಿ ಹುಡ್ಕೋ ಕಂಪನಿಯ ಎರಡು ಕೋಟಿ ಷೇರುಗಳನ್ನು ಮಾರಾಟ ಮಾಡುತ್ತಿದೆ.

ಹೂಡಿಕೆಗೆ ಹುಡ್ಕೊ ಏಕೆ ಉತ್ತಮ?

ಹೂಡಿಕೆಗೆ ಹುಡ್ಕೊ ಏಕೆ ಉತ್ತಮ?

ವಸತಿ ವಲಯದ ಎಲ್ಐಸಿ ಹೌಸಿಂಗ್ ಕಂಪನಿಯ ಷೇರಿನ ಬೆಲೆ ರೂ. 700ರ ಸಮೀಪ, ಇಂಡಿಯಾ ಬುಲ್ ಹೌಸಿಂಗ್ ಫೈನಾನ್ಸ್ ಕಂಪನಿಯ ರೂ. 2ರ ಮುಖಬೆಲೆಯ ಷೇರು ರೂ. 1,100ನ್ನು ದಾಟಿದ್ದು, ದಿವಾನ್ ಹೌಸಿಂಗ್ ಫೈನಾನ್ಸ್ ರೂ. 10ರ ಮುಖಬೆಲೆಯ ಷೇರು ರೂ. 440ರ ಸಮೀಪವಿದೆ. ಹೀಗಿರುವಾಗ ರೂ. 10ರ ಮುಖಬೆಲೆಯ, ಕೇಂದ್ರ ಸರ್ಕಾರಿ ಸ್ವಾಮ್ಯದ ಕಂಪನಿಯ ಷೇರು ಕೇವಲ 60 ರೂಪಾಯಿಗಳಿಗೆ ವಿತರಣೆಯಲ್ಲಿ ದೊರೆಯುತ್ತಿರುವುದು ಆಕರ್ಷಣೀಯವೇ ಸರಿ.

ವಿಶೇಷ ರಿಯಾಯಿತಿ

ವಿಶೇಷ ರಿಯಾಯಿತಿ

ಎರಡು ಲಕ್ಷ ರೂಪಾಯಿಗಳವರೆಗೂ ಅರ್ಜಿ ಸಲ್ಲಿಸುವವರಿಗೆ ರಿಟೇಲ್ ಸಮೂಹವೆಂದು ಪರಿಗಣಿಸಲಾಗುವುದು ಮತ್ತು ಈ ವಿಭಾಗದ ಅರ್ಜಿದಾರರಿಗೆ ಪ್ರತಿ ಷೇರಿಗೆ ರೂ. 2ರಂತೆ ವಿಶೇಷ ರಿಯಾಯಿತಿ ದೊರೆಯುತ್ತದೆ. ಅಂದರೆ ರಿಟೇಲ್ ವಿಭಾಗದ ಅರ್ಜಿದಾರರು ರೂ. 58ರಂತೆ ಅರ್ಜಿ ಸಲ್ಲಿಸಬೇಕು. ಅರ್ಜಿಯನ್ನು 200 ಮತ್ತು ಅದರ ಗುಣಕಗಳಲ್ಲಿ ಸಲ್ಲಿಸಬಹುದಾಗಿದೆ.

ತ್ವರಿತ ಯೋಜನೆ

ತ್ವರಿತ ಯೋಜನೆ

ಅರ್ಜಿಯೊಂದಿಗೆ ಯಾವುದೇ ಚೆಕ್ ಅಥವಾ ಡ್ರಾಫ್ಟ್ ಅವಶ್ಯಕವಿಲ್ಲ. ಇದು ‘ಎಎಸ್ಬಿಎ‘ ಯೋಜನೆಯಡಿಯಾದ್ದರಿಂದ ಅರ್ಜಿಯಲ್ಲಿ ನಿಮ್ಮ ಬ್ಯಾಂಕ್ ಮತ್ತು ಅಕೌಂಟ್ ನಂಬರಿನೊಂದಿಗೆ ಇತರ ವಿವರ ನೀಡಿದಲ್ಲಿ ಅಷ್ಟು ಹಣವನ್ನು ಬ್ಲಾಕ್ ಮಾಡುವರು. ಅಲಾಟ್ ಅದ ನಂತರ ಅದಕ್ಕೆ ತಕ್ಕಂತೆ ಹಣವನ್ನು ಪಡೆದುಕೊಳ್ಳುವರು. ಹೆಚ್ಚಿನ ಹಣವಿದ್ದರೆ ಅದನ್ನು ಅನ್-ಬ್ಲಾಕ್ ಮಾಡುವರು. ಎಲ್ಲವು ತ್ವರಿತವಾಗಿರುವುದು ಈ ಯೋಜನೆಯ ವಿಶೇಷ.

ಸುವರ್ಣ ಅವಕಾಶ

ಸುವರ್ಣ ಅವಕಾಶ

ನರೇಂದ್ರ ಮೋದಿ ಸರ್ಕಾರದ ಪ್ರಮುಖ ಜನಕಲ್ಯಾಣ ಯೋಜನೆಗಳುನರೇಂದ್ರ ಮೋದಿ ಸರ್ಕಾರದ ಪ್ರಮುಖ ಜನಕಲ್ಯಾಣ ಯೋಜನೆಗಳು

English summary

HUDCO IPO: Should you invest?

The initial public offer (IPO) of Housing and Urban Development Corporation Ltd. (HUDCO) saw a good response on the opening day, with the issue getting subscribed 63%, or 0.63 times.
Story first published: Tuesday, May 9, 2017, 11:05 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X