For Quick Alerts
ALLOW NOTIFICATIONS  
For Daily Alerts

ಎಸ್‌ಬಿಐ ಬಡ್ಡಿದರ ಕಡಿತ: ಗೃಹಸಾಲ ಪಡೆಯಲು ಇದು ಸುಸಮಯ

ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಭಾರತೀಯ ಸ್ಟೇಟ್‌ ಬ್ಯಾಂಕ್‌(ಎಸ್‌ಬಿಐ) ಕಡಿಮೆ ಬೆಲೆಯಲ್ಲಿ ವಸತಿ ಒದಗಿಸುವ ಉದ್ದೇಶದಿಂದ ಗೃಹ ಸಾಲದ ಬಡ್ಡಿದರದಲ್ಲಿ ಶೇ. 0.25 ರಷ್ಟು ಕಡಿತ ಮಾಡಿದೆ.

By Siddu
|

ದೇಶದ ಪ್ರತಿಯೊಬ್ಬರಿಗೂ ವಸತಿ ಸೌಲಭ್ಯ ಕಲ್ಪಿಸುವುದು ಕೇಂದ್ರ ಸರ್ಕಾರದ ಪ್ರಮುಖ ಧ್ಯೇಯವಾಗಿದ್ದು, ಕಡಿಮೆ ಬೆಲೆಯಲ್ಲಿ ಮನೆ ಖರೀದಿಗೆ ಉತ್ತೇಜನ ನೀಡುವ ಉದ್ದೇಶದಿಂದ ಬಡ್ಡಿದರ ಕಡಿತಕ್ಕೆ ಮುಂದಾಗಿದೆ.

 

ದೇಶದ ಅತಿದೊಡ್ಡ ಸರ್ಕಾರಿ ಸ್ವಾಮ್ಯದ ಭಾರತೀಯ ಸ್ಟೇಟ್‌ ಬ್ಯಾಂಕ್‌(ಎಸ್‌ಬಿಐ) ಕಡಿಮೆ ಬೆಲೆಯಲ್ಲಿ ವಸತಿ ಒದಗಿಸುವ ಉದ್ದೇಶದಿಂದ ಗೃಹ ಸಾಲದ ಬಡ್ಡಿದರದಲ್ಲಿ ಶೇ. 0.25 ರಷ್ಟು ಕಡಿತ ಮಾಡಿದೆ. 2017ರಲ್ಲಿ ಕಡಿಮೆ ಬಡ್ಡಿದರದಲ್ಲಿ ಗೃಹಸಾಲ ನೀಡುವ ಬ್ಯಾಂಕುಗಳು

ಮಹಿಳೆಯರಿಗೆ ಬಡ್ಡಿದರ ಎಷ್ಟು?

ಮಹಿಳೆಯರಿಗೆ ಬಡ್ಡಿದರ ಎಷ್ಟು?

ಎಸ್‌ಬಿಐ ಬ್ಯಾಂಕ್ ಗೃಹಸಾಲ ಬಡ್ಡಿದರ ಕಡಿತದ ನಿರ್ಧಾರದಿಂದ ಮಹಿಳೆಯರಿಗೆ ಗೃಹ ಸಾಲದ ಬಡ್ಡಿದರ ಶೇ. 8.60 ರಿಂದ ಶೇ. 8.35ಕ್ಕೆ ಇಳಿಕೆಯಾಗಿದೆ. ಜತೆಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 2.67 ಲಕ್ಷದವರೆಗೆ ಬಡ್ಡಿದರ ವಿನಾಯಿತಿ ಕೂಡ ಪಡೆಯಬಹುದಾಗಿದೆ ಎಂದು ಬ್ಯಾಂಕ್ ಮೂಲ ತಿಳಿಸಿದೆ. ಭಾರತದಲ್ಲಿ ಲಭ್ಯವಿರುವ ಅನೇಕ ವಿಧದ ಸಾಲಗಳು ಯಾವುವು?

ಜಾರಿ ಯಾವಾಗ?

ಜಾರಿ ಯಾವಾಗ?

ಎಸ್‌ಬಿಐ ಬ್ಯಾಂಕ್ ಗೃಹಸಾಲದ ಪರಿಷ್ಕೃತ ಬಡ್ಡಿದರ 9-5-17 (ಮಂಗಳವಾರದಿಂದ) ಜಾರಿಗೆ ಬರಲಿದೆ. ಈ ಬಡ್ಡಿ ದರ ಹೊಸದಾಗಿ ಸಾಲ ಪಡೆಯುವ ಗ್ರಾಹಕರಿಗೆ ಅನ್ವಯವಾಗಲಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಬೇರೆ ಬ್ಯಾಂಕುಗಳಿಗೆ ಹೋಲಿಸಿದಲ್ಲಿ ಗೃಹ ಸಾಲಕ್ಕೆ ಇರುವ ಅತ್ಯಂತ ಕಡಿಮೆ ಬಡ್ಡಿದರ ಇದಾಗಿದೆ.

ಬಡ್ಡಿದರ ವಿವರ
 

ಬಡ್ಡಿದರ ವಿವರ

* ವೇತನ ಪಡೆಯುವ ಮಹಿಳೆಯರು- ಸಾಲದ ಬಡ್ಡಿದರ ಶೇ. 8.35(ಶೇ. 0.25 ಬಡ್ಡಿದರ ಕಡಿತ)
* ವೇತನ ಪಡೆಯದ ಮಹಿಳೆಯರು- ಸಾಲದ ಬಡ್ಡಿದರ ಶೇ. 8.40(ಶೇ. 0.20 ಬಡ್ಡಿದರ ಕಡಿತ)
* ವೇತನ ಪಡೆಯುವ ಪುರುಷರು- ಸಾಲದ ಬಡ್ಡಿದರ ಶೇ. 8.45(ಶೇ. 0.15 ಬಡ್ಡಿದರ ಕಡಿತ)
* ವೇತನ ಪಡೆಯದಪುರುಷರು- ಸಾಲದ ಬಡ್ಡಿದರ ಶೇ. 8.40(ಶೇ. 0.20 ಬಡ್ಡಿದರ ಕಡಿತ)

(Read more: ಬಡ್ಡಿದರ)

ಗೃಹಸಾಲಕ್ಕೆ ಬೇಡಿಕೆ

ಗೃಹಸಾಲಕ್ಕೆ ಬೇಡಿಕೆ

ಪ್ರಸ್ತುತ ಗೃಹಸಾಲ ಪಡೆಯುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ರೂ. 30 ಲಕ್ಷದವರೆಗಿನ ಗೃಹ ಸಾಲವು ಅಗ್ಗದ ದರದ ವಸತಿ ವ್ಯಾಪ್ತಿಗೆ ಬರಲಿದೆ. ಈಗಾಗಲೇ ರೂ. 30 ಲಕ್ಷದವರೆಗಿನ ಮೊತ್ತದ ಗೃಹಸಾಲಕ್ಕೆ ಸಂಬಂಧ ಪಟ್ಟಂತೆ ರೂ. 2.23 ಲಕ್ಷ ಕೋಟಿಯಷ್ಟು ಮುಂಗಡ ಬೇಡಿಕೆ ಇದೆ ಎಂದು ಎಸ್‌ಬಿಐ ಹೇಳಿದೆ.

ಕೆವೈಸಿ ಅಪ್ಡೇಟ್

ಕೆವೈಸಿ ಅಪ್ಡೇಟ್

ಎಸ್ಬಿಐ ವಿಲೀನದ ನಂತರ ಎಸ್‌ಬಿಎಂ ಸೇರಿದಂತೆ ವಿಲೀನ ಬ್ಯಾಂಕುಗಳಲ್ಲಿ ಖಾತೆ ಹೊಂದಿರುವ ಗ್ರಾಹಕರು ಇಲ್ಲಿಯವರೆಗೆ ಅಗತ್ಯ ದಾಖಲಾತಿಗಳನ್ನು ಸಲ್ಲಿಸದಿದ್ದರೆ ಅಂತಹ ಗ್ರಾಹಕರಿಗೆ ಕರೆ ಮಾಡಿ ಇಲ್ಲವೇ ಎಸ್ಎಂಎಸ್ ಮೂಲಕ ತಿಳಿಸಲಾಗುವುದು. ನಿಮ್ಮ ಗ್ರಾಹಕರನ್ನು ಅರಿಯಿರಿ(KYC) ದಾಖಲೆಗಳನ್ನು ಅಪ್ಡೇಟ್ ಮಾಡಬೇಕು.

(Read more: ಗೃಹ ಸಾಲ)

 

English summary

SBI Cuts Home Loan Rate, Lowest In Market

India's largest lender SBI today announced a steep reduction of 25 basis points in affordable housing loans to 8.35 per cent for new borrowers. Under the new government scheme, loans under Rs 30 lakh qualify for affordable housing.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X