For Quick Alerts
ALLOW NOTIFICATIONS  
For Daily Alerts

ಹೂಡಿಕೆದಾರರು ಕಾರ್ಯಶೈಲಿಯನ್ನು ಪರಿವರ್ತಿಸಿಕೊಳ್ಳದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ

ಸಾಮಾನ್ಯವಾಗಿ ಷೇರುಪೇಟೆಯಲ್ಲಿ ಹೂಡಿಕೆ ಮಾಡುವವರಾಗಲಿ ಅಥವಾ ವ್ಯವಹಾರ ಮಾಡುವವರಾಗಲಿ ಪೇಟೆಯ ವಾತಾವರಣ, ಕಂಪನಿಗಳ ಸಾಧನೆ, ಕಾರ್ಪೊರೇಟ್ ಫಲಗಳು ಪ್ರಕಟವಾದ ಮೇಲೆ ಹೂಡಿಕೆಯ ಬಗ್ಗೆ ನಿರ್ಧರಿಸುತ್ತಾರೆ.

By K G Krupal
|

ಸಾಮಾನ್ಯವಾಗಿ ಷೇರುಪೇಟೆಯಲ್ಲಿ ಹೂಡಿಕೆ ಮಾಡುವವರಾಗಲಿ ಅಥವಾ ವ್ಯವಹಾರ ಮಾಡುವವರಾಗಲಿ ಪೇಟೆಯ ವಾತಾವರಣ, ಕಂಪನಿಗಳ ಸಾಧನೆ, ಕಾರ್ಪೊರೇಟ್ ಫಲಗಳು ಪ್ರಕಟವಾದ ಮೇಲೆ ಹೂಡಿಕೆಯ ಬಗ್ಗೆ ನಿರ್ಧರಿಸುತ್ತಾರೆ. ಇದು ಹಿಂದಿನಿಂದಲೂ ನಡೆದು ಬಂದ ರೀತಿಯಾಗಿದ್ದು, ಚಟುವಟಿಕೆದಾರರ ಈ ಗುಣವನ್ನೇ ವಹಿವಾಟುದಾರರು ಬಂಡವಾಳವಾಗಿಸಿಕೊಂಡು ಲಾಭ ಮಾಡಿಕೊಳ್ಳುತ್ತಿರುವುದು ಈಗ ಸಾಮಾನ್ಯವಾಗಿದೆ. ಹೂಡಿಕೆದಾರರು ತಮ್ಮ ಕಾರ್ಯ ಶೈಲಿಯನ್ನು ಪರಿವರ್ತಿಸಿಕೊಳ್ಳದಿದ್ದರೆ ಅಪಾಯ ಹೆಚ್ಚು.

 

ತೀರಾ ಇತ್ತೀಚಿನ ಬೆಳವಣಿಗೆ ಎಂದರೆ ಪ್ರತಿ ಷೇರಿಗೆ ಎರಡರಂತೆ ( 2:1ರ ಅನುಪಾತ) ಬೋನಸ್ ಷೇರು ಪ್ರಕಟಿಸಿದ ಬಯೋಕಾನ್ ಷೇರಿನ ಬೆಲೆಯು ಬೋನಸ್ ಪ್ರಕಟಣೆಗಿಂತ ಮುಂಚೆಯೇ ರೂ. 1,185ನ್ನು ತಲುಪಿ ಪ್ರಕಟಣೆಯ ನಂತರ ಕುಸಿಯುತ್ತಿದೆ. ಇದಕ್ಕೆ ಅಮೆರಿಕಾ ಎಫ್ ಡಿಎ ಕ್ರಮವು ಪೂರಕ ಅಂಶವಾಗಿದೆ.

ಗರಿಷ್ಠ ಲಾಭಕ್ಕೆ ಜಾಣ ನಡೆ ಅಗತ್ಯ

ಗರಿಷ್ಠ ಲಾಭಕ್ಕೆ ಜಾಣ ನಡೆ ಅಗತ್ಯ

ಅಂತರ ರಾಷ್ಟ್ರೀಯ ಕಂಪನಿ ಪ್ರಾಕ್ಟರ್ ಅಂಡ್ ಗ್ಯಾಂಬಲ್ ಹೈಜಿನ್ ಅಂಡ್ ಹೆಲ್ತ್ ಕೇರ್ ಲಿಮಿಟೆಡ್ ಕಂಪನಿಯು ಪ್ರತಿ ಷೇರಿಗೆ ರೂ. 362ರ ವಿಶೇಷ ಲಾಭಾಂಶ ಪ್ರಕಟಿಸಿದ ದಿನಂದಿನ ಷೇರಿನ ಬೆಲೆಯು ರೂ. 800ಕ್ಕೂ ಹೆಚ್ಚಿನ ಏರಿಕೆ ಕಂಡು ಲಾಭಾಂಶದ ಆಸೆಗೆ ಗರಿಷ್ಟ ಮಟ್ಟದಲ್ಲಿ ಕೊಂಡರೆ ಲಾಭ ಗಳಿಸುವುದಕ್ಕಿಂತ, ಹೂಡಿದ ಹಣ ಹಿಂದೆ ಪಡೆಯಲು ಕೆಲವು ವರ್ಷಗಳೇ ಬೇಕಾದೀತು. ಇದಕ್ಕೆ ಉದಾಹರಣೆಯೆಂದರೆ 2010ರಲ್ಲಿ ಫಾರ್ಮ ಕಂಪನಿ ಮರ್ಕ್ ಲಿಮಿಟೆಡ್ ವಿಶೇಷ ಲಾಭಾಂಶವೆಂದು ಪ್ರತಿ ಷೇರಿಗೆ ರೂ. 95ನ್ನು ಪ್ರಕಟಿಸಿದಾಗ ಏರಿಕೆಯಲ್ಲಿ ಕೊಂಡ ಷೇರುಗಳನ್ನು ಕೊಂಡ ಬೆಲೆಗೆ ಮಾರಾಟ ಮಾಡಲು ವರ್ಷಗಳೇ ಬೇಕಾಯಿತು.

ಮಾರಾಟದ ಒತ್ತಡ

ಮಾರಾಟದ ಒತ್ತಡ

ಬ್ಯಾಂಕಿಂಗ್ ವಲಯದ ಷೇರುಗಳು ವಿಶೇಷವಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳು ಫಲಿತಾಂಶ ಪ್ರಕಟಣೆಗಿಂತ ಮುಂಚೆ ಏರಿಕೆಯಿಂದ ವಾರ್ಷಿಕ ಗರಿಷ್ಠ ಮಟ್ಟ ದಾಖಲಿಸಿದವು. ಅದರಲ್ಲಿ ಕೆನರಾ ಬ್ಯಾಂಕ್ ವಾರ್ಷಿಕ ಗರಿಷ್ಟ ರೂ. 414ನ್ನು ತಲುಪಿದಾಗ ಕಂಪನಿಯ ಸಾಧನೆ ಹೊರಬಿತ್ತು. ಆಗ ಮಾರಾಟದ ಒತ್ತಡ ಉಂಟಾಗಿ ಷೇರಿನ ಬೆಲೆಯು ರೂ. 364ರವರೆಗೂ ಇಳಿಕೆ ಕಂಡಿತು.

ಪ್ರೋತ್ಸಾಹದಾಯಕ ವಹಿವಾಟು
 

ಪ್ರೋತ್ಸಾಹದಾಯಕ ವಹಿವಾಟು

ಹೆವಿ ಎಲೆಕ್ಟ್ರಿಕಲ್ ಉಪಕರಣಗಳ ತಯಾರಿಕಾ ಕಂಪನಿ ಎಬಿಬಿ ಲಿಮಿಟೆಡ್ ಫಲಿತಾಂಶ ಉತ್ತಮವಾಗಿ, ಆರ್ಡರ್ ಬುಕ್ ಪ್ರೋತ್ಸಾಹದಾಯಕವಾಗಿದೆ ಎಂಬ ಕಾರಣಕ್ಕಾಗಿ ಷೇರಿನ ಬೆಲೆಯನ್ನು ರೂ. 1,619ರ ಸರ್ವಕಾಲೀನ ಗರಿಷ್ಟಕ್ಕೆ ತಲುಪಿಸಲಾಯಿತು. ಆದರೆ ವಾಸ್ತವವಾಗಿ ಮಂಗಳವಾರದಂದು ಕಂಪನಿಯ ಎಜಿಎಂ ಇದ್ದು, ಅಂದು ಆರಂಭವಾದ ಏರಿಕೆಯು ಬುಧವಾರ ಮುಂದುವರೆದು ಸ್ವಲ್ಪ ಇಳಿಕೆ ಕಂಡಿತು. ಎಜಿಎಂ ಪ್ರಭಾವ ಎಷ್ಟು ದಿನವಿರುತ್ತದೆ ಎಂಬುದು ಕಾದು ನೋಡಬೇಕು. ಬುಧವಾರದಂದು ಬಯೋಕಾನ್ ಷೇರಿನ ಬೆಲೆಯು ರೂ. 60ರಷ್ಟು ಕುಸಿತ ಕಂಡು ನಂತರ ಚೇತರಿಸಿಕೊಂಡಿತು. ಇದಕ್ಕೆ ಕಾರಣ ಅಮೆರಿಕಾದ ಎಫ್ಡಿಎ ಕೆಲವು ಅಬ್ಸರ್ವೇಶನ್. ಆದರೆ ಮತ್ತೊಂದು ಬೆಂಗಳೂರಿನ ಕಂಪನಿ ಸ್ಟ್ರೈಡ್ಸ್ ಶಾಸೂನ್ ಅಮೆರಿಕಾದ ಎಫ್ ಡಿ ಎ ಇನ್ಸ್ಪೆಕ್ ಷನ್ ನಲ್ಲಿ ಯಾವುದೇ ರೀತಿಯ ಅಬ್ಸರ್ ವೇಷನ್ ಗಳಿಲ್ಲ ಎಂದರೂ ಕೇವಲ ರೂ. 16ರಷ್ಟು ಮಾತ್ರ ಏರಿಕೆ ಕಂಡಿದೆ.

ವಾರ್ಷಿಕ ಫಲಿತಾಂಶ ಮತ್ತು ಲಾಭಾಂಶ ಪ್ರಕಟಣೆ

ವಾರ್ಷಿಕ ಫಲಿತಾಂಶ ಮತ್ತು ಲಾಭಾಂಶ ಪ್ರಕಟಣೆ

ಸ್ಥಿರತೆ, ಆರ್ಥಿಕ ಪರಿಸ್ಥಿತಿ, ಗುಣಮಟ್ಟಗಳ ರೇಟಿಂಗ್ ನೀಡುವ ಕ್ರೆಡಿಟ್ ಅನಾಲಿಸಿಸ್ ಅಂಡ್ ರಿಸರ್ಚ್ ಲಿಮಿಟೆಡ್ ಕಂಪನಿಯ ಷೇರಿನ ಬೆಲೆಯೂ ಸಹ ಕಳೆದ ಕೆಲವು ದಿನಗಳಿಂದ ಉಯ್ಯಾಲೆಯಲ್ಲಿ ಜೀಕುತ್ತಿದ್ದು, ಹೂಡಿಕೆದಾರರಿಗೆ ನಿರ್ಧರಿಸುವುದು ಅಸಾಧ್ಯವೆಂಬ ರೀತಿ ಏರಿಳಿತಗಳನ್ನು ಪ್ರದರ್ಶಿಸುತ್ತಿದೆ. ಈ ಕಂಪನಿಯ ವಾರ್ಷಿಕ ಫಲಿತಾಂಶ ಮತ್ತು ಲಾಭಾಂಶ ಪ್ರಕಟಣೆಯು ಇದೆ 16ರಂದು ನಡೆಯಲಿದೆ ಎಂಬ ಕಾರಣ ಷೇರಿನ ಬೆಲೆ ಹೆಚ್ಚು ' ವೊಲಾಟಾಲಿಟಿ' ಪ್ರದರ್ಶಿಸುತ್ತಿದೆ. ಕಳೆದ ಒಂದು ತಿಂಗಳಲ್ಲಿ ರೂ. 10ರ ಮುಖಬೆಲೆಯ ಷೇರಿನ ಬೆಲೆಯು ರೂ. 1490-1620ರವರೆಗೂ ಏರಿಳಿತ ಪ್ರದರ್ಶಿಸಿದೆ.

ಏರಿಳಿತದ ಫಲಿತಾಂಶ

ಏರಿಳಿತದ ಫಲಿತಾಂಶ

ಎಲೆಕ್ಟ್ರಿಕಲ್ ಗೃಹೋಪಯೋಗಿ ಉಪಕರಣಗಳ ಕಂಪನಿ ಹ್ಯಾವೆಲ್ಸ್ ಇಂದು ತನ್ನ ವಾರ್ಷಿಕ ಫಲಿತಾಂಶ ಪ್ರಕಟಿಸಿದ ಕಾರಣ ಹಿಂದಿನ ದಿನದ ರೂ. 498-526ರ ವರೆಗೂ ಜಿಗಿತ ಕಂಡು ನಂತರ, ಫಲಿತಾಂಶ ಉತ್ತಮವಾಗಿದ್ದರೂ ಸ್ಥಿರತೆ ಕಾಣದೆ, ದಿನದ ಮಧ್ಯಂತರದಲ್ಲಿ ರೂ. 515ಕ್ಕೆ ಇಳಿಯಿತು. ಇದು ವಹಿವಾಟುದಾರರ ಪೇಟೆಯೇ ಹೊರತು, ದೀರ್ಘಕಾಲೀನ ಹೂಡಿಕೆದಾರರಿಗಲ್ಲ ಎಂಬಂತೆ ಚಲಿಸಿದೆ.

ವಿಶೇಷ ಎಚ್ಚರ ಅಗತ್ಯ

ವಿಶೇಷ ಎಚ್ಚರ ಅಗತ್ಯ

ಘಟಾನುಘಟಿ ಕಂಪನಿಗಳ ಷೇರಿನ ಬೆಲೆಗಳು ಹೆಚ್ಚು ಹೆಚ್ಚು ಏರಿಳಿತಕ್ಕೊಳಗಾಗಿ ಅಲ್ಪ ಕಾಲದಲ್ಲೇ ಅವಕಾಶಗಳನ್ನು ಕಲ್ಪಿಸಿಕೊಡುತ್ತಿವೆ. ಈ ರೀತಿಯ ಏರಿಳಿತಗಳಿಗೆ ಮುಖ್ಯ ಕಾರಣ ಎಲ್ಲಾ ವಲಯದ ಕಂಪನಿಗಳು ಗರಿಷ್ಟ ಮಟ್ಟಕ್ಕೆ ಜಿಗಿತ ಕಂಡಿದ್ದು, ಈ ಏರಿಕೆಗೆ ಆಂತರಿಕವಾದ, ಮೂಲಭೂತ ಬೆಂಬಲವಿಲ್ಲದೆ, ಕೇವಲ ಟೆಕ್ನಿಕಲ್ ಅನಾಲಿಸಿಸ್ ಗಳು ಚಾಲನೆ ನೀಡುತ್ತಿವೆ. ಈ ಹಂತದಲ್ಲಿ ಹೂಡಿಕೆಗೆ ಆಯ್ಕೆ ಮಾಡಿಕೊಳ್ಳಬೇಕಾದರೆ ವಿಶೇಷವಾದ ಎಚ್ಚರ ಅಗತ್ಯ.
ಒಟ್ಟಾರೆ ಪೇಟೆಯಲ್ಲಿ ಷೇರಿನ ಬೆಲೆಗಳ ಏರಿಕೆ ಅಥವಾ ಇಳಿಕೆಗೆ ಆಪರೇಟರ್ ಗಳ ಚಿಂತನೆಯೇ ಮುಖ್ಯ, ಉಳಿದಂತೆ ಇತರೆ ಬೆಳವಣಿಗೆಗಳು ನೆಪಮಾತ್ರ.

Read more about: share stock sensex finance news
English summary

Thinking of the operators is important, the rest is the constant

If the investor does not change the functionality then the risk is guaranteed.
Story first published: Thursday, May 11, 2017, 14:09 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X