Englishहिन्दी മലയാളം தமிழ் తెలుగు

ಜಿಯೋಗೆ ತಿರುಗೇಟು! ಏರ್ಟೆಲ್ ಡಬಲ್ ಡೇಟಾ ಆಫರ್..!!

Written By: Siddu
Subscribe to GoodReturns Kannada

ಜಿಯೋ ಕೊಡುಗೆಗಳ ಬಿರುಗಾಳಿಗೆ ಸಿಲುಕಿರುವ ಪ್ರಮುಖ ಟೆಲಿಕಾಂ ಕಂಪನಿಗಳು ದರ ಸಮರದಲ್ಲಿ ತೊಡಗಿವೆ. ಎಲ್ಲಾ ಕಂಪನಿಗಳಿಗೂ ತಮ್ಮ ಗ್ರಾಹಕರನ್ನು ಉಳಿಸುವ ಮತ್ತು ಹೊಸ ಗ್ರಾಹಕರನ್ನು ಆಕರ್ಷಿಸುವ ತವಕ.  ಅದರಲ್ಲೂ ಜಿಯೋ ಪ್ರವೇಶದ ನಂತರ ಎಲ್ಲವೂ ಜಿಯೋಮಯವಾಗುವತ್ತ ಸಾಗಿದೆ..!

ಜಿಯೋ ಎಫೆಕ್ಟ್ ಗೆ ಸಿಲುಕಿರುವ ಏರರ್ಟೆಲ್ ಇಲ್ಲಿಯವರೆಗೆ ಅನೇಕ ಆಫರ್ ಗಳನ್ನು ಘೋಷಿಸುತ್ತಾ ತನ್ನ ಗ್ರಾಹಕರನ್ನು ಉಳಿಸಲು ಹರಸಾಹಸ ಪಡುತ್ತಿದ್ದು, ಇದೀಗ ಡಬಲ್ ಡೇಟಾ ಆಫರ್ ನೀಡುತ್ತಿದೆ..! ಜಿಯೋ ಹೊಸ ಅವತಾರ! 100% ಕ್ಯಾಶ್ ಬ್ಯಾಕ್ ಬಂಪರ್ ಆಫರ್!!

100% ಹೈಸ್ಪೀಡ್

ನೂತನವಾಗಿ ಘೋಷಿಸಿರುವ ಬ್ರಾಡ್ ಬ್ಯಾಂಡ್ ಪ್ಲಾನ್ ಅಡಿಯಲ್ಲಿ ಶೇ. 100ರಷ್ಟು ಹೆಚ್ಚುವರಿ ವೇಗದ ಡೇಟಾ ಪ್ರಯೋಜನಗಳನ್ನು ನೀಡುವುದಾಗಿ ಭಾರ್ತಿ ಏರರ್ಟೆಲ್ ಹೇಳಿದೆ. ದೇಶದ ಟೆಲಿಕಾಂ ಕ್ಷೇತ್ರದ ಜಿಯೋ ಬ್ರಾಡ್ ಬ್ಯಾಂಡ್ ಸೇವೆಗಳಿಗೆ ಪ್ರತಿಸ್ಪರ್ಧಿಯಾಗಿ ಈ ಘೋಷಣೆ ನೀಡುತ್ತಿದೆ.

ಹೆಚ್ಚು ವೇಗ ಹೆಚ್ಚು GB

ಬಾರ್ತಿ ಏರ್ಟೆಲ್ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಯೋಜನೆಗಳು ರಾಷ್ಟ್ರೀಯ ರಾಜಧಾನಿಯಲ್ಲಿ ರೂ. 899ಕ್ಕೆ ಪ್ರಾರಂಭವಾಗುತ್ತದೆ. ಈಗ ಅದೇ ಮಾಸಿಕ ದರದಲ್ಲಿ ಹೆಚ್ಚು GB ಡೇಟಾವನ್ನು ಹೆಚ್ಚಿನ ವೇಗದೊಂದಿಗೆ ಒದಗಿಸುತ್ತಿದೆ. ಭಾರತದ ದೊಡ್ಡ ಟೆಲಿಕಾಂ ಕಂಪೆನಿ ಏರಟೆಲ್ ತನ್ನ ಈ ಹೊಸ ಯೋಜನೆಯನ್ನು ದೇಶದ ಡಿಜಿಟಲ್ ಟ್ರಾನ್ಸ್ಫಾರ್ಮೆಶನ್ ಗೆ ಪೂರಕವಾಗಿ ಚಾಲನೆ ಮಾಡುವುದಾಗಿ ಹೇಳಿದೆ.

ಹೈ ಸ್ಪೀಡ್ ಡೇಟಾ ಸುಗ್ಗಿ!

ಈ ಹಿಂದೆ ಏರ್ಟೆಲ್ ರೂ. 899ರ ಯೋಜನೆ ಅಡಿಯಲ್ಲಿ 30GB ಹೆಚ್ಚಿನ ವೇಗದ ಡೇಟಾವನ್ನು ನೀಡಿತು. ಇದೀಗ 60GB ಡೇಟಾವನ್ನು ಘೋಷಿಸಿದೆ. ಇದರ ರೂ. 1,099 ಯೋಜನೆ ಅಡಿ 90GB ಹೈ ಸ್ಪೀಡ್ ಡೇಟಾ ಘೋಷಿಸಿದ್ದು, ಈ ಹಿಂದೆ 50GB ಮಾತ್ರ ನೀಡುತಿತ್ತು.
ರೂ. 1,299 ಯೋಜನೆ ಈಗ 125GB ಆಫರ್ ಘೋಷಿಸಿದ್ದು, ಮುಂಚೆ ಕೇವಲ 75GB ಇತ್ತು. ಜತೆಗೆ ರೂ. 1,499 ಪ್ಲಾನ್ ಅಡಿ 160GB ಹೈ ಸ್ಪೀಡ್ ಡೇಟಾ ಘೋಷಿಸಿದ್ದು, ಹಿಂದೆ 100GB ಮಾತ್ರ ನೀಡುತ್ತಿತ್ತು. ಏರ್‌ಟೆಲ್‌ - ಜಿಯೋ ನಡುವೆ ಮತ್ತೆ ದರ ಸಮರ!

V-ಪೈಬರ್

ಡಿಜಿಟಲ್ ಸೂಪರ್ ಹೈವೇ ಮತ್ತು ಸೂಪರ್ ಫಾಸ್ಟ್ ಬ್ರಾಡ್ ಬ್ಯಾಂಡ್ ಆಘಿ ಭಾರತವನ್ನು ರೂಪಾಂತರಿಸಲು ವಿ-ಫೈಬರ್ ಹೊಸ ಯೋಜನೆಯಾಗಿದೆ ಎಂದು ಏರ್ಟೆಲ್ ತಿಳಿಸಿದೆ. ಈ ಯೋಜನೆ ಮೂಲಕ ನಿಜವಾದ ಡಿಜಿಟಲ್ ಅನುಭವವನ್ನು ಗ್ರಾಹಕರಿಗೆ ನೀಡುವ ಉದ್ದೇಶ ಹೊಂದಿದೆ ಎಂದು ಹೇಳಿದೆ.

ಜಿಯೋಫೈಬರ್

ಉಚಿತ ಸೇವೆಗಳ ಮೂಲಕ ದೇಶಧ ಟೆಲಿಕಾಂ ರಂಗದಲ್ಲಿ ಸಂಚಲನ ಮೂಡಿಸಿರುವ ರಿಲಾಯನ್ಸ್ ಜಿಯೋ ಈಗಾಗಲೇ ಜಿಯೋಫೈಬರ್ ಹೆಸರಲ್ಲಿ ಜಿಯೋ ಬ್ರಾಡ್ ಬ್ಯಾಂಡ್ ಸೇವೆಗಳನ್ನು ನೀಡುವುದಾಗಿ ಘೋಷಿಸಿದೆ. ಸದ್ಯದಲ್ಲೆ ದೇಹಲಿ, ಮುಂಬೈ, ವಡೋದರ ನಗರಗಳಲ್ಲಿ ಬಿಡುಗಡೆಗೊಳಿಸಲಿದೆ. ಇದಕ್ಕೆ ಪೂರ್ವತಯಾರಿಯಾಗಿ ಏರ್ಟೆಲ್ ಕೂಡ V-ಪೈಬರ್ ಘೋಷಿಸಿದೆ. ಜಿಯೊ ಎಫೆಕ್ಟ್: ಏರ್‌ಟೆಲ್ ನಿಂದ ಒಂದು ವರ್ಷ ಉಚಿತ 4G ಡೇಟಾ ಆಫರ್ !

Read more about: airtel, jio, telecom, reliance, ಜಿಯೋ
English summary

Jio Effect: Airtel Offers Double Data Benefit In New Broadband Plan

Amid buzz about Jio's broadband services in India's telecom sector, Bharti Airtel is offering up to 100 per cent additional high speed data benefits in its newly-announced broadband plans. Bharti Airtel whose broadband internet plans in the national capital start from Rs. 899 a month, will is now offering more GBs of high speed data in the same monthly rental plans.
Story first published: Thursday, May 18, 2017, 15:07 [IST]
Please Wait while comments are loading...
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC