For Quick Alerts
ALLOW NOTIFICATIONS  
For Daily Alerts

ವಿಶ್ವದಲ್ಲೇ ನಂ. 1 'ಗ್ಲೋಬಲ್ ಗೇಮ್ ಚೆಂಜರ್' ಅಂಬಾನಿ

ಫೋರ್ಬ್ಸ್ ನಿಯತಕಾಲಿಕೆ ಪ್ರಕಟಿಸಿರುವ ‘ಜಾಗತಿಕ ಬದಲಾವಣೆಯ ಹರಿಕಾರರ’ (ಗ್ಲೋಬಲ್ ಗೇಮ್ ಚೇಂಜರ್ಸ್) ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಮೊದಲ ಸ್ಥಾನ ಪಡೆದಿದ್ದಾರೆ.

By Siddu
|

ಫೋರ್ಬ್ಸ್ ನಿಯತಕಾಲಿಕೆ ಪ್ರಕಟಿಸಿರುವ 'ಜಾಗತಿಕ ಬದಲಾವಣೆಯ ಹರಿಕಾರರ' (ಗ್ಲೋಬಲ್ ಗೇಮ್ ಚೇಂಜರ್ಸ್) ಪಟ್ಟಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಮೊದಲ ಸ್ಥಾನ ಪಡೆದಿದ್ದಾರೆ.

ಫೋರ್ಬ್ಸ್ ತನ್ನ ಎರಡನೇ ವಾರ್ಷಿಕ ಗ್ಲೋಬಲ್ ಗೇಮ್ ಚೇಂಜರ್ಸ್ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು, ಇದರಲ್ಲಿ ವಿಶ್ವದಲ್ಲೆಡೆಯ 25 ಸಾಹಸಿ ಉದ್ಯಮಿ ನಾಯಕರು ಸ್ಥಾನ ಪಡೆದಿದ್ದಾರೆ. ಜಿಯೋ ಹೊಸ ಅವತಾರ! 100% ಕ್ಯಾಶ್ ಬ್ಯಾಕ್ ಬಂಪರ್ ಆಫರ್!!

ಆಯ್ಕೆ ಮಾನದಂಡ ಏನು?

ಆಯ್ಕೆ ಮಾನದಂಡ ಏನು?

ಅಲ್ಪತೆಗೆ ತೃಪ್ತರಾಗದೆ ತಮ್ಮ ಕಾರ್ಯಕ್ಷೇತ್ರದ ವಸ್ತುಸ್ಥಿತಿ ಬದಲಿಸಿ ನೂತನ ಪರಿವರ್ತನೆಗಳನ್ನು ತರುವ ಮೂಲಕ ಪ್ರಪಂಚದಾದ್ಯಂತ ಶತಕೋಟಿ ಜನಸಾಮಾನ್ಯರ ಜೀವನವನ್ನು ಬದಲಾಯಿಸುವ ವಾಣಿಜ್ಯ ನಾಯಕರನ್ನು ಫೋರ್ಬ್ಸ್‌ ನಿಯತಕಾಲಿಕೆ ಗುರುತಿಸುತ್ತದೆ. ಜಿಯೋಗೆ ತಿರುಗೇಟು! ಏರ್ಟೆಲ್ ಡಬಲ್ ಡೇಟಾ ಆಫರ್..!!

25 ಸಾಹಸಿ ಉದ್ಯಮಿ ನಾಯಕರು

25 ಸಾಹಸಿ ಉದ್ಯಮಿ ನಾಯಕರು

ಇಲ್ಲಿ 25 ಸಾಹಸಿ ಉದ್ಯಮಿ ನಾಯಕರ ಹೆಸರು, ಕಂಪನಿ, ದೇಶಗಳ ವಿವರ ನೀಡಲಾಗಿದೆ.
1. ಮುಖೇಶ್ ಅಂಬಾನಿ- ರಿಲಯನ್ಸ್ ಇಂಡಸ್ಟ್ರೀಸ್' ಭಾರತ
2. ಜಿವ್ ಅವಿರಾಮ್, ಅಮೋನ್ ಶಶುವ- ಮೊಬೈಲ್ಯ, ಇಸ್ರೇಲ್
3. ಸ್ಟೀವರ್ಟ್ ಬಟರ್ಫೀಲ್ಡ್- ಸ್ಲಾಕ್, ಯುನೈಟೆಡ್ ಸ್ಟೇಟ್ಸ್
4. ಜಾನ್ ಮತ್ತು ಪ್ಯಾಟ್ರಿಕ್ ಕೊಲಿಸನ್- ಸ್ಟ್ರೈಪ್, ಯುನೈಟೆಡ್ ಸ್ಟೇಟ್ಸ್
5. ಜೇಮ್ಸ್ ಡೈಸನ್- ಡೈಸನ್, ಯುನೈಟೆಡ್ ಕಿಂಗ್ಡಮ್
6. ಸ್ಕಾಟ್ ಫರ್ಕುಹಾರ್, ಮೈಕ್ ಕ್ಯಾನನ್, ಬ್ರೂಕ್ಸ್- ಅಟ್ಲಾಸ್ಸಿಯನ್, ಆಸ್ಟ್ರೇಲಿಯಾ
7. ಲ್ಯಾರಿ ಫಿಂಕ್- ಬ್ಲ್ಯಾಕ್ ರಾಕ್, ಯುನೈಟೆಡ್ ಸ್ಟೇಟ್ಸ್
8. ಕೆನ್ ಫ್ರೇಜಿಯರ್- ಮೆರ್ಕ್, ಯುಎಸ್
9. ಟಾವೆಟ್ ಹಿನ್ರಿಕಸ್, ಕ್ರಿಸ್ಟೋ ಕಾರ್ಮಾರ್ನ್-
ಟ್ರಾನ್ಸ್ಫಾಫರ್ ವೈಸ್, ಯುನೈಟೆಡ್ ಕಿಂಗ್ಡಮ್
10. ರಾಬರ್ಟ್ ಕಾಟ್ಜ್- ವೈಲ್, ಯುಎಸ್
11. ಡೇವಿಡ್ ಕಾಂಗ್- ನಿರ್ವಾಣ ಏಷ್ಯಾ, ಮಲೇಷಿಯಾ
12. ಜೆಫ್ ಲಾಸನ್- ಟ್ವಿಲಿಯೊ, ಯುಎಸ್
13. ಆಡಮ್ ನ್ಯೂಮನ್- ವಿವರ್ಕ್, ಯುಎಸ್
14. ಗೇಬ್ ನೆವೆಲ್- ವಾಲ್ವ್, ಯುನೈಟೆಡ್ ಸ್ಟೇಟ್ಸ್
15. ಜಾನ್ ಓವರ್ಡೆಕ್, ಡೇವಿಡ್ ಸೈಗೆಲ್- ಟು ಸಿಗ್ಮಾ, ಯುನೈಟೆಡ್ ಸ್ಟೇಟ್ಸ್
16. ಝೌ ಕುನ್ಫೈ- ಲೆನ್ಸ್ ಟೆಕ್ನಾಲಜಿ, ಚೀನಾ
17. ಮೈಕಲ್ ರಾಪಿನೋ-ಲೈವ್ ನೇಷನ್, ಯುಎಸ್
18. ಮೊಹಮ್ಮದ್ ಬಿನ್ ಸಲ್ಮಾನ್- ಡೆಪ್ಯುಟಿ ಕ್ರೌನ್ ಪ್ರಿನ್ಸ್, ಸೌದಿ ಅರೇಬಿಯಾ
19. ಪಾಲೊ ಸಿಸಾರ್ ಡಿ ಸೌಜಾ ಇ ಸಿಲ್ವಾ- ಎಂಬ್ರಾಯರ್, ಬ್ರೆಜಿಲ್
20. ಇವಾನ್ ಸ್ಪೀಗೆಲ್- ಸ್ನ್ಯಾಪ್, ಯುಎಸ್
21. ಜುಡಿ ವೆನ್ಹಾಂಗ್ ಟಾಂಗ್- ಕ್ಯಾನಿಯಾವೊ, ಚೀನಾ
22. ಹಮ್ದಿ ಉಲುಕಾಯ- ಚೋಬನಿ, ಯುಎಸ್
23. ಚೆಂಗ್ ವೀ- ದಿದಿ ಚುಕ್ಸಿಂಗ್, ಚೀನಾ
24. ಕ್ರಿಸ್ಟೊ ವೈಸ್- ಸ್ಟೀನ್ಹಾಫ್, ದಕ್ಷಿಣ ಆಫ್ರಿಕಾ
25. ಆನ್ನೆ ವೋಜ್ಸಿಕ್ಕಿ- 23andMe, ಯುಎಸ್

3. ಅಂಬಾನಿ ಮುಂಚೂಣಿಯಲ್ಲಿ ಏಕೆ?

3. ಅಂಬಾನಿ ಮುಂಚೂಣಿಯಲ್ಲಿ ಏಕೆ?

ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಭಾರತದ ಇಂಟರರ್ನೆಟ್ ಉದ್ಯಮದಲ್ಲಿ ಹೊಸ ಸಾಹಸಗಳ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ. ಅಲ್ಲದೇ ಜಗತ್ತಿನ ಜನ ಸಮೂಹದ ಮೇಲೆ ಭಾರೀ ಪ್ರಭಾವ ಬೀರಿದ್ದಾರೆ ಎಂದು ಫೋರ್ಬ್ಸ್ ವರದಿ ಮಾಡಿದೆ.

4. ಜಿಯೋ ಗೇಮ್ ಚೆಂಜರ್!

4. ಜಿಯೋ ಗೇಮ್ ಚೆಂಜರ್!

ಅಂಬಾನಿಯವರ ಈ ಸಾಧನೆಗೆ ಜಿಯೋ ಮಹತ್ತರ ಪಾತ್ರವಹಿಸಿದೆ. ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಸಂಚಲನವನ್ನೇ ಉಂಟು ಮಾಡಿದ್ದು, ಜಿಯೋ ಪ್ಲಾನ್ ಮೂಲಕ ಉಚಿತ 4g ಡೇಟಾ ಮತ್ತು ಕರೆಗಳ ಸೌಲಭ್ಯಗಳನ್ನು ಒದಗಿಸಿ ಡಿಜಿಟಲಿಕರಣಕ್ಕೆ ಭದ್ರ ಅಡಿಪಾಯ ಹಾಕಲು ಬೆನ್ನೆಲುಬು ಆಗಿದ್ದರು.

5. ಅಂಬಾನಿ ಮ್ಯಾಜಿಕ್

5. ಅಂಬಾನಿ ಮ್ಯಾಜಿಕ್

Anything and everything that can go digital is going digital. India cannot afford to be left behind." ಪ್ರತಿಯೊಂದು ಕೂಡ ಡಿಜಿಟಲ್ ಮಯವಾಗಬೇಕು. ಡಿಜಿಟಲ್ ನಲ್ಲಿ ಭಾರತ ಹಿಂದುಳಿಯುವುದಿಲ್ಲ. ಇಂತಹ ಒಂದು ಉತ್ಸಾಹ, ಉಮ್ಮೆದಿನೊಂದಿಗೆ ರಿಲಯನ್ಸ್ ಜಿಯೋ ಪ್ರಾರಂಭಿಸಿದ್ದಾರೆ. ಇದು ಭಾರತದ ಟೆಲಿಕಾಂ ರಂಗದ ದಿಕ್ಕನ್ನೇ ಬದಲಿಸುತ್ತಿದೆ.

6. ಟೆಲಿಕಾಂ ಸಂಚಲನ!

6. ಟೆಲಿಕಾಂ ಸಂಚಲನ!

ತೈಲ ಮತ್ತು ಅನಿಲ ಸಂಸ್ಕರಣಾ ಉದ್ಯಮಿಯಾಗಿದ್ದ ಅಂಬಾನಿ ಜಿಯೋ ಮೂಲಕ ವಿಶ್ವದ ಟೆಲಿಕಾಂ ಲೋಕದಲ್ಲಿ ಹೊಸ ಸಂಚಲನವನ್ನೇ ಹುಟ್ಟುಹಾಕಿದ್ದಾರೆ. ವೇಗದ ಇಂಟರ್ನೆಟ್ ಸೌಲಭ್ಯವನ್ನು ಅಗ್ಗದ ದರದಲ್ಲಿ ನೀಡಿ, ಕೇವಲ ಆರು ತಿಂಗಳಲ್ಲಿ 10 ಕೋಟಿ ಗ್ರಾಹಕರನ್ನು ಜಿಯೋ ಗಳಿಸಿರುವುದು ಸಾಮಾನ್ಯವಲ್ಲ ಎಂದು ಫೋರ್ಬ್ಸ್ ಹೇಳಿದೆ.

7. ಜನಸಾಮಾನ್ಯರಿಗೆ ನೆಟ್

7. ಜನಸಾಮಾನ್ಯರಿಗೆ ನೆಟ್

ಫೋರ್ಬ್ಸ್ ನಿಯತಕಾಲಿಕೆ ವರದಿ ಪ್ರಕಾರ ಅಂಬಾನಿ ಜಿಯೋ ಮೂಲಕ ಜನಸಾಮಾನ್ಯರಿಗೆ ಇಂಟರ್ನೆಟ್ ಸೇವೆಗಳ ಮೂಲಕ ತಲುಪಿ ಹೊಸ ದಿಶೆಗೆ(bringing the internet to India's masses) ಕಾರಣಿಭೂತರಾಗಿದ್ದಾರೆ ಎಂದಿದೆ. ಜಿಯೋ ಉಲಾಲಾ.... ಇನ್ನೂ 12-18 ತಿಂಗಳು ಉಚಿತ ಆಫರ್!!

English summary

Mukesh Ambani leads Forbes list of Global Game Changers

Reliance Industries Chairman Mukesh Ambani leads a Forbes list of 'Global Game Changers' who are transforming their industries and changing the lives of billions of people around the globe.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X