For Quick Alerts
ALLOW NOTIFICATIONS  
For Daily Alerts

ಷೇರುಪೇಟೆ - ಪರಿಸ್ಥಿತಿ ಅವಲಂಭಿಸಿ ಚಟುವಟಿಕೆಯ ರೀತಿ ಬದಲಿಸಿ...

ಷೇರುಪೇಟೆಯ ಎಲ್ಲಾ ಇಂಡೆಕ್ಸ್ ಗಳು ಅಂದರೆ ಸೆನ್ಸೆಕ್ಸ್, ಮಿಡ್ ಕ್ಯಾಪ್, ಸ್ಮಾಲ್ ಕ್ಯಾಪ್, ಎಫ್ಎಂಸಿಜಿ, ಬ್ಯಾಂಕೆಕ್ಸ್, ಮ್ಯಾನುಫ್ಯಾಕ್ಚರಿಂಗ್, ಆಟೋ, ಇಂಡಸ್ಟ್ರಿಯಲ್ಸ್, ರಿಯಾಲ್ಟಿ, ಇಂಡೆಕ್ಸ್ ಗಳು ನಿನ್ನೆ(ಗುರುವಾರ) ಸರ್ವಕಾಲೀನ ಗರಿಷ್ಟಕ್ಕೆ

By K G Krupal
|

ಷೇರುಪೇಟೆಯ ಎಲ್ಲಾ ಇಂಡೆಕ್ಸ್ ಗಳು ಅಂದರೆ ಸೆನ್ಸೆಕ್ಸ್, ಮಿಡ್ ಕ್ಯಾಪ್, ಸ್ಮಾಲ್ ಕ್ಯಾಪ್, ಎಫ್ಎಂಸಿಜಿ, ಬ್ಯಾಂಕೆಕ್ಸ್, ಮ್ಯಾನುಫ್ಯಾಕ್ಚರಿಂಗ್, ಆಟೋ, ಇಂಡಸ್ಟ್ರಿಯಲ್ಸ್, ರಿಯಾಲ್ಟಿ, ಇಂಡೆಕ್ಸ್ ಗಳು ನಿನ್ನೆ(ಗುರುವಾರ) ಸರ್ವಕಾಲೀನ ಗರಿಷ್ಟಕ್ಕೆ ಜಿಗಿತ ಕಂಡು ದಾಖಲೆ ನಿರ್ಮಿಸಿದೆ. ಉಳಿದಂತೆ ಇತರೆ ಉಪ ಇಂಡೆಕ್ಸ್ ಗಳಾದ ಪಿ ಎಸ್ ಯು, ಇನ್ಫ್ರಾ ಸ್ಟ್ರಕ್ಚರ್, ಕನ್ಸೂಮರ್ ಡ್ಯುರಬಲ್ಸ್, ಕ್ಯಾಪಿಟಲ್ ಗೂಡ್ಸ್, ಫೈನಾನ್ಸ್, ಆಯಿಲ್ ಅಂಡ್ ಗ್ಯಾಸ್, ಪವರ್ ಇಂಡೆಕ್ಸ್ ಗಳು ಈ ತಿಂಗಳಲ್ಲಿ ಗರಿಷ್ಠ ದಾಖಲೆ ನಿರ್ಮಿಸಿವೆ. ಅಂದ ಮೇಲೆ ಈಗ ಹೂಡಿಕೆ ಮಾಡಲು ಅವಕಾಶವಿದೆಯೇ? ಎಂಬುದು ಬಹಳಷ್ಟು ಹೂಡಿಕೆದಾರರಲ್ಲಿ ಉದ್ಭವಿಸಬಹುದಾದ ಪ್ರಶ್ನೆಯಾಗಿದೆ.

ಅಸ್ಥಿರತೆ ಹೆಚ್ಚು

ಅಸ್ಥಿರತೆ ಹೆಚ್ಚು

ಷೇರುಪೇಟೆಯ ಬೆಲೆಗಳು ಮಿಶ್ರಿತ ರೀತಿಯಲ್ಲಿದ್ದು, ಅವಕಾಶಗಳು ಆಗಿಂದ್ದಾಗ್ಗೆ ಲಭಿಸುತ್ತಿರುತ್ತವೆ. ಯಾವುದು ಸ್ಥಿರವಲ್ಲ, ವಿಶೇಷವಾಗಿ ಪೇಟೆಗಳು ಉತ್ತುಂಗದಲ್ಲಿದ್ದಾಗ ಅಸ್ಥಿರತೆಯು ಹೆಚ್ಚಾಗಿರುತ್ತದೆ. ಮಾರುತಿ ಸುಜುಕಿ, ರಿಲಯನ್ಸ್ ಇಂಡಸ್ಟ್ರೀಸ್, ಹೆಚ್ ಡಿ ಎಫ್ ಸಿ ಸಮೂಹ ಕಂಪನಿಗಳ ಷೇರಿನ ಏರಿಳಿತಗಳು ಇದಕ್ಕೆ ಉತ್ತಮ ಉದಾಹರರಣೆಯಾಗಿವೆ. ಇಂದಿನ ಚಟುವಟಿಕೆಯ ರೀತಿ ನೋಡಿದಾಗ ಟಾಟಾ ಸ್ಟಿಲ್ ಕಂಪನಿಯ ಷೇರಿನ ಬೆಲೆಯು ಸುಮಾರು ನಲವತ್ತು ರೂಪಾಯಿಗಳ ಏರಿಕೆಯಿಂದ ಸೆನ್ಸೆಕ್ಸ್ ನ್ನು ಗರಿಷ್ಟ ಮಟ್ಟಕ್ಕೆ ತಲುಪಿಸಿತು. ಆದರೆ ಮಾರುತಿ ಸುಜುಕಿ, ರಿಲಯನ್ಸ್ ಇಂಡಸ್ಟ್ರೀಸ್ ದಿನದ ಅಂತ್ಯದವರೆಗೂ ಇಳಿಕೆಯಲ್ಲಿದ್ದು ನಂತರ ಅಂತಿಮ ಕ್ಷಣದಲ್ಲಿ ಏರಿಕೆ ಪಡೆದುಕೊಂಡಿತು.

ಪ್ರತಿದಿನ ಭಿನ್ನ ಫಲಿತಾಂಶ

ಪ್ರತಿದಿನ ಭಿನ್ನ ಫಲಿತಾಂಶ

ಬುಧವಾರದಂದು ಸೆನ್ಸೆಕ್ಸ್ 76 ಪಾಯಿಂಟುಗಳ ಏರಿಕೆಗೆ ಟಾಟಾ ಸ್ಟಿಲ್ ಕಂಪನಿಯ ಶೇ. 8ರಷ್ಟರ ಏರಿಕೆಯೇ ಮುಖ್ಯವಾಗಿದೆ. ಇದರೊಂದಿಗೆ ಐಸಿಐಸಿಐ ಬ್ಯಾಂಕ್ ಮತ್ತು ಟಾಟಾ ಮೋಟಾರ್ ಗಳು ಶೇ. 2ಕ್ಕೂ ಹೆಚ್ಚಿನ ಏರಿಕೆ ಪ್ರದರ್ಶಿಸಿದರೆ, ಉಳಿದವುಗಳು ಸಪ್ಪೆಯಾಗಿದ್ದವು. ಅಂದರೆ ಒಂದೊಂದು ದಿನ ಒಂದೊಂದು ಕಂಪನಿ ಸಾರ್ವಭೌಮತ್ವವನ್ನು ಪಡೆದು ಮಿಂಚುತ್ತವೆ.

ಪ್ರಾಫಿಟ್ ಬುಕಿಂಗ್

ಪ್ರಾಫಿಟ್ ಬುಕಿಂಗ್

ಪೇಟೆಗೆ ಹರಿದು ಬರುತ್ತಿರುವ ಹಣದ ಕಾರಣ ಷೇರಿನ ಬೆಲೆಗಳು ಗಗನಕ್ಕೆ ಚಿಮ್ಮುತ್ತಿವೆ. ಕೆಲವೆಡೆ ಇದಕ್ಕೆ ಪೂರಕವಾಗಿ ಕಂಪನಿಗಳು ಉತ್ತಮ ಸಾಧನೆಯನ್ನು ಪ್ರದರ್ಶಿಸಿವೆ. ಆದರೆ ಫಲಿತಾಂಶ ಪ್ರಕಟವಾದ ದಿನದಂದು ಇರುವ ಉತ್ಸಾಹ ನಂತರದ ದಿನಗಳಲ್ಲಿ ಕಂಡು ಬರುವುದಿಲ್ಲ. ಕೆನರಾ ಬ್ಯಾಂಕ್ ಷೇರಿನ ಬೆಲೆ ರೂ. 415ರ ವರೆಗೂ ತಲುಪಿದ್ದು ಫಲಿತಾಂಶದ ದಿನದ ನಂತರ ಕುಸಿತ ಕಂಡಿತು. ನಿನ್ನೆಯ ದಿನ ಪಂಜಾಬ್ ನ್ಯಾಷನಲ್ ಬ್ಯಾಂಕ್ ಪ್ರಕಟಿಸಿದ ಅಂಕಿ ಅಂಶಗಳು ಉತ್ತಮವಾಗಿದ್ದ ಕಾರಣ ಷೇರಿನ ಬೆಲೆಯು ರೂ. 180ರ ಸಮೀಪಕ್ಕೆ ಜಿಗಿದು ನಂತರದ ದಿನ ರೂ. 165ರ ಸಮೀಪಕ್ಕೆ ಕುಸಿದಿದೆ. ಅಂದರೆ ಪ್ರಾಫಿಟ್ ಬುಕಿಂಗ್ ನ ವೇಗವು ಷೇರಿನ ಬೆಲೆ ಏರಿಕೆಯ ದಿಶೆಯನ್ನು ಬದಲಿಸಿ ಬಿಡುತ್ತದೆ.

ಬೆಲೆ ಕುಸಿತ

ಬೆಲೆ ಕುಸಿತ

ಇಂಡಿಯನ್ ಬ್ಯಾಂಕ್ ಷೇರಿನ ಬೆಲೆಯು ಹಿಂದಿನ ವರ್ಷದ ಮೇ ತಿಂಗಳ 25ರಂದು ರೂ. 89ರ ಸಮೀಪವಿದ್ದು, ಈಗ ರೂ. 360ರ ಸಮೀಪವಿದೆ. ಅದೇ ರೀತಿ ಕೆನರಾ ಬ್ಯಾಂಕ್ ನ ಷೇರಿನ ಬೆಲೆ ಸರಿಯಾಗಿ ಒಂದು ವರ್ಷದ ಹಿಂದೆ ಅಂದರೆ 17ನೇ ಮೇ 2016ರಂದು ರೂ. 176ರ ಕನಿಷ್ಠ ಬೆಲೆಯಲ್ಲಿದ್ದು ಕೆಲವು ದಿನಗಳ ಹಿಂದಷ್ಟೇ ರೂ. 415ರ ಸಮೀಪಕ್ಕೆ ಜಿಗಿತ ಕಂಡಿದೆ. ಇದೆ ಪರಿಸ್ಥಿತಿ ಪಂಜಾಬ್ ನ್ಯಾಷನಲ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಷೇರಿನ ಬೆಲೆಗಳದಾಗಿದೆ. ಅಂದರೆ ಕಳೆದ ವರ್ಷದ ಮೇ ತಿಂಗಳಲ್ಲಿ ಕನಿಷ್ಠ ಮಟ್ಟದಲ್ಲಿದ್ದು, ಈಗ ಗರಿಷ್ಟ ಮಟ್ಟಕ್ಕೆ ಕೆಲವು ದ್ವಿಗುಣಗೊಂಡಿದ್ದರೆ, ಕೆಲವು ಇನ್ನೂ ಹೆಚ್ಚಾಗಿವೆ. ಆಗಿನ ದಿನಗಳಲ್ಲಿ ಬ್ಯಾಂಕ್ ಗಳ ಎನ್ ಪಿ ಎ ಪ್ರಮಾಣ ಹೆಚ್ಚಾಗಿದೆ ಎಂಬ ಕಾರಣಕ್ಕಾಗಿ ಬೆಲೆ ಕುಸಿತ ಕಂಡಿದ್ದರೂ, ಆಗಿನ ಸಂದರ್ಭದಲ್ಲಿ ಹೂಡಿಕೆ ಮಾಡಿದ ಧೈರ್ಯವಂತರಿಗೆ ಈಗ ಉತ್ತಮ ವರದಾನವಾಗಿ ಪರಿಣಮಿಸಿದೆ.

ಉತ್ತಮ ಅವಕಾಶ

ಉತ್ತಮ ಅವಕಾಶ

ಅದೇ ನಿಯಮಗಳನ್ನು ಪಾಲಿಸಿದರೆ, ಈಗಿನ ದಿನಗಳಲ್ಲಿ ಪ್ರಮುಖ ಫಾರ್ಮ ವಲಯದ ಕಂಪನಿಗಳಾದ ದಿವೀಸ್ ಲ್ಯಾಬ್, ಡಾಕ್ಟರ್ ರೆಡ್ಡಿಸ್ ಲ್ಯಾಬ್, ಇಪ್ಕಾ ಲ್ಯಾಬ್, ಗ್ಲೇನ್ ಮಾರ್ಕ್ ಫಾರ್ಮ, ಲುಪಿನ್, ಸನ್ ಫಾರ್ಮ ಮುಂತಾದವುಗಳು ತಮ್ಮ ಗರಿಷ್ಠದಿಂದ ತೀವ್ರ ಕುಸಿತ ಕಂಡಿದ್ದು, ದೀರ್ಘಕಾಲೀನ ಹೂಡಿಕೆಗೆ ಉತ್ತಮ ಅವಕಾಶ ಕಲ್ಪಿಸಿಕೊಡಬಹುದಾಗಿದೆ. ಅಮೆರಿಕಾದ ಎಫ್ ಡಿ ಎ ಕ್ರಮಗಳು, ಆಕ್ಷೇಪಣೆಗಳು ತರುವ ಏರಿಳಿತಗಳು ಹೂಡಿಕೆದಾರರಿಗೆ ಉತ್ತಮವಾದ ಅವಕಾಶಗಳನ್ನು ಒದಗಿಸುತ್ತವೆ.

ಪೇಟೆಯ ಏರಿಳಿತ

ಪೇಟೆಯ ಏರಿಳಿತ

ಹೂಡಿಕೆ ಮಾಡುವಾಗ ದೀರ್ಘಕಾಲೀನ ಅವಧಿಯ ಹೂಡಿಕೆಯಾಗಿ ಮಾಡಿದರೂ, ಅನಿರೀಕ್ಷಿತ ಮಟ್ಟದ ಲಾಭವನ್ನು ಅಲ್ಪ ಕಾಲಿನದಲ್ಲೇ ಗಳಿಸಿಕೊಟ್ಟರೆ ಪ್ರಾಫಿಟ್ ಬುಕ್ ಮಾಡಿಕೊಳ್ಳುವುದು ಸರಿಯಾದ ಕ್ರಮವಾಗಿದೆ. ಕಾರಣ ಪೇಟೆಯ ಏರಿಳಿತಗಳು ಮಿಂಚಿನ ವೇಗದಲ್ಲಿದ್ದು, ಈಗಿನ ಲೋ ಇಂಟರೆಸ್ಟ್ ಯುಗದಲ್ಲಿ ಷೇರುಪೇಟೆ ಮಾತ್ರ ಹೆಚ್ಚಿನ ಲಾಭ ಒದಗಿಸಬಲ್ಲದು.

ಎಚ್ಚರವಿರಲಿ

ಎಚ್ಚರವಿರಲಿ

ಹೂಡಿಕೆದಾರರು ಷೇರುಪೇಟೆ ಎಂಬ ಚಕ್ರವ್ಯೂಹ ಪ್ರವೇಶಿಸಿದ ಮೇಲೆ ಅರ್ಜುನ ನಂತೆ ಹೊರಬರುವ ನೈಪುಣ್ಯತೆಯನ್ನು ಬೆಳೆಸಿಕೊಂಡಲ್ಲಿ ಉತ್ತಮ ಫಲಿತಾಂಶ ಪಡೆಯಬಹುದು, ಇಲ್ಲವಾದಲ್ಲಿ ಅಭಿಮನ್ಯುವಿನಂತೆ ಚಕ್ರವ್ಯೂಹಕ್ಕೆ ಬಲಿಯಾಗಬಹುದು ಎಚ್ಚರ.

English summary

Stock Market - Depending on the situation, change the way of activity.

All the indices of the Stock Markets are at all time record level. Because of free fund flow into the market share prices are shooting up. Without looking at index movement, investments in quality Shares where the values have dropped, may produce good yield.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X