For Quick Alerts
ALLOW NOTIFICATIONS  
For Daily Alerts

ದೇಶದ ಮಾರುಕಟ್ಟೆಯಲ್ಲಿ ಚೀನಾದ ಒಪ್ಪೊ, ಶಿಯೋಮಿ, ವಿವೊ ಪ್ರಾಬಲ್ಯ

ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಚೀನಾದ ಒಪ್ಪೊ, ಶಿಯೋಮಿ ಮತ್ತು ವಿವೊ ಮೊಬೈಲ್‌ಫೋನ್ ಬ್ರ್ಯಾಂಡ್‌ಗಳ ಪ್ರಾಬಲ್ಯ ಹೆಚ್ಚಾಗಲಿದೆ ಎಂದು ಮಾರುಕಟ್ಟೆ ಅಧ್ಯಯನ ಸಂಸ್ಥೆ ಸಿಎಂಆರ್ ತಿಳಿಸಿದೆ.

By Siddu
|

ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಚೀನಾದ ಒಪ್ಪೊ, ಶಿಯೋಮಿ ಮತ್ತು ವಿವೊ ಮೊಬೈಲ್‌ಫೋನ್ ಬ್ರ್ಯಾಂಡ್‌ಗಳ ಪ್ರಾಬಲ್ಯ ಹೆಚ್ಚಾಗಲಿದೆ ಎಂದು ಮಾರುಕಟ್ಟೆ ಅಧ್ಯಯನ ಸಂಸ್ಥೆ ಸಿಎಂಆರ್ ತಿಳಿಸಿದೆ.

ದೇಶದ ಮಾರುಕಟ್ಟೆಯಲ್ಲಿ ಚೀನಾದ ಒಪ್ಪೊ, ಶಿಯೋಮಿ, ವಿವೊ ಪ್ರಾಬಲ್ಯ

ಪ್ರಸಕ್ತ ತ್ರೈಮಾಸಿಕ ಅವಧಿಯಲ್ಲಿ ಈ ಬ್ರ್ಯಾಂಡ್‌ಗಳ ಪ್ರಾಬಲ್ಯ ಗಣನೀಯವಾಗಿ ಹೆಚ್ಚಲಿದೆ. ಚೀನಾದ ಕಂಪೆನಿಗಳು ಕಳೆದ ಜನವರಿ-ಮಾರ್ಚ್ ತ್ರೈಮಾಸಿಕ ಅವಧಿಯಲ್ಲಿ ದೇಶದ ಮೊಬೈಲ್‌ಫೋನ್ ಮಾರುಕಟ್ಟೆಯ ಪ್ರಮಾಣದ ಒಟ್ಟು 40%ರಷ್ಟನ್ನು ತಮ್ಮದಾಗಿಸಿಕೊಂಡಿವೆ.

ಸ್ವದೇಶೀ ಮೊಬೈಲ್ ಕಂಪೆನಿಗಳನ್ನು ಹಿಂದಿಕ್ಕಿ ಚೀನಾದ ಮೊಬೈಲ್‌ಫೋನ್ ಕಂಪನಿಗಳು ಈಗಾಗಲೇ ಅಗ್ರ ಐದರಲ್ಲಿ ಸ್ಥಾನ ಪಡೆದಿವೆ. ಮುಂದಿನ ದಿನಗಳಲ್ಲಿ ಇವು ಭಾರತದ ಬ್ರ್ಯಾಂಡ್‌ಗಳನ್ನು ಸಂಪೂರ್ಣವಾಗಿ ಹಿಂದಿಕ್ಕಲಿವೆ ಎಂದು ಸಿಎಂಆರ್ ಸಂಸ್ಥೆ ತಿಳಿಸಿದೆ.

ದೇಶದ ಮೈಕ್ರೋಮ್ಯಾಕ್ಸ್, ಇಂಟೆಕ್ಸ್ ನಂತ ಮೊಬೈಲ್ ಕಂಪನಿಗಳೇ ಅಗ್ರ ಐದರಲ್ಲಿ ಸ್ಥಾನ ಪಡೆಯುತ್ತಿದ್ದವು. ಆದರೆ ಇದೀಗ ಚೀನಾದ ಬ್ರ್ಯಾಂಡ್‌ಗಳು ಅವುಗಳನ್ನು ಹಿಂದಿಕ್ಕಿವೆ ಎಂದಿದೆ.

Read more about: india economy mobile finance news
English summary

China players like Xiaomi, Oppo may dominate: CMR

In what could be a first since 2009, Chinese handset makers like Xiaomi, Oppo and Vivo could wipe out Indian players from the top five list of the handset segment in the quarter through June, market research firm CMR said.
Story first published: Saturday, May 20, 2017, 12:47 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X