For Quick Alerts
ALLOW NOTIFICATIONS  
For Daily Alerts

ಜಿಎಸ್‌ಟಿ ಜಾರಿ: ಯಾವುದು ದುಬಾರಿ, ಯಾವುದು ಅಗ್ಗ?

ಜಿಎಸ್ಟಿ ಮಸೂದೆ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮಂಡಳಿ ಸೇವೆಗಳ ಮೇಲಿನ ತೆರಿಗೆ ದರವನ್ನು ಅಂತಿಮಗೊಳಿಸಿದೆ.

By Siddu
|

ಜಿಎಸ್ಟಿ ಮಸೂದೆ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಮಂಡಳಿ ಸೇವೆಗಳ ಮೇಲಿನ ತೆರಿಗೆ ದರವನ್ನು ಅಂತಿಮಗೊಳಿಸಿದೆ. ಯಾವುದು ದುಬಾರಿ, ಯಾವುದು ಅಗ್ಗವಾಗಲಿದೆ ಎಂಬುದನ್ನು ನೋಡೋಣ...

ಜಿಎಸ್‌ಟಿ(GST) ಜಾರಿ: 13 ಪ್ರಯೋಜನ ತಪ್ಪದೆ ಪಡೆಯಿರಿಜಿಎಸ್‌ಟಿ(GST) ಜಾರಿ: 13 ಪ್ರಯೋಜನ ತಪ್ಪದೆ ಪಡೆಯಿರಿ

ಜಾರಿ ಯಾವಾಗ

ಜಾರಿ ಯಾವಾಗ

ಜುಲೈ 1ರಿಂದ ಹೊಸ ಜಿಎಸ್‌ಟಿ ವ್ಯವಸ್ಥೆ ಜಾರಿಗೆ ಬರಲಿದೆ. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ಶ್ರೀನಗರದಲ್ಲಿ ನಡೆದ ಜಿಎಸ್'ಟಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ದಿನ ಬಳಕೆಯ ಸರಕುಗಳಲ್ಲಿ ಯಾವುದು ಅಗ್ಗ?

ದಿನ ಬಳಕೆಯ ಸರಕುಗಳಲ್ಲಿ ಯಾವುದು ಅಗ್ಗ?

ಮಸೂದೆ ಜಾರಿಯಾದ ಬಳಿಕ ಆಹಾರ ಪದಾರ್ಥಗಳು, ಅಕ್ಕಿ, ಗೋದಿ, ಮೊಸರು, ಧಾನ್ಯಗಳು ಹಾಗೂ ಹಾಲು ಅಗ್ಗವಾಗಲಿದ್ದು, ಜಿಎಸ್ಟಿ ತೆರಿಗೆ ವ್ಯಾಪ್ತಿಯಿಂದ ಹೊರಗಿಡಲು ನಿರ್ಧರಿಸಲಾಗಿದೆ. ಜತೆಗೆ ದಿನ ಬಳಕೆಯ ಸಕ್ಕರೆ, ಚಹಾ, ಕಾಫಿ, ಅಡುಗೆ ತೈಲ ಮುಂತಾದ ಸರಕುಗಳಿಗೂ ಅತ್ಯಂತ ಕಡಿಮೆ 5%ರಷ್ಟು ತೆರಿಗೆ ಅನ್ವಯವಾಗಲಿದೆ. ಹೀಗಾಗಿ ಇವುಗಳ ಬೆಲೆ ಇಳಿಕೆಯಾಗಲಿದೆ.

ಯಾವುದು ದುಬಾರಿ?

ಯಾವುದು ದುಬಾರಿ?

ಜಿಎಸ್ಟಿ ಬಿಲ್ ಜಾರಿ ಬಳಿಕ ಕಾರು, ಎಸಿ, ರೆಫ್ರಿಜರೇಟರ್, ತಂಪು ಪಾನಿಯಗಳು ದುಬಾರಿಯಾಗಲಿವೆ. ಕಾರಣ ಇವುಗಳು 28%ರ ತೆರಿಗೆ ವ್ಯಾಪ್ತಿಯಲ್ಲಿ ಬರುತ್ತವೆ. ಅಲ್ಲದೇ ಸಾಮಾನ್ಯ ಬಳಕೆಯ ಉತ್ಪನ್ನಗಳಾದ ಕೇಶ ತೈಲ, ಸೋಪು, ಟೂಥ್ ಪೆಸ್ಟ್‌ಗಳು 18%ರ ತೆರಿಗೆ ವ್ಯಾಪ್ತಿಗೆ ಬರಲಿವೆ.

ಸೇವೆಗಳು ಅಗ್ಗ

ಸೇವೆಗಳು ಅಗ್ಗ

ಓಲಾ, ಉಬರ್‌ನಂತಹ ಆಫ್ ಆಧಾರಿತ ಸಾರಿಗೆ ಸೇವೆಗಳಿಗೆ 5%ರಷ್ಟು ಸೇವಾ ತೆರಿಗೆಯನ್ನು ನಿಗದಿಗೊಳಿಸಲಾಗಿದೆ. ಜಿಎಸ್‌ಟಿ ಜಾರಿಯಾದರೆ ವಿಮಾನ ಪ್ರಯಾಣದ ಟಿಕೆಟ್‌ಗಳು ಅಗ್ಗವಾಗಲಿವೆ. ಸೇವೆಗಳಿಗೆ 4 ಹಂತದ (5%, 12%, 18% ಮತ್ತು 28%) ತೆರಿಗೆ ದರವನ್ನು ಅಂತಿಮಗೊಳಿಸಲಾಗಿದೆ. ರೈಲು, ವಿಮಾನ ಸೇರಿದಂತೆ ಎಲ್ಲಾ ಸಾರಿಗೆ ಸೇವೆಗಳಿಗೆ ಶೇಕಡ 5ರಷ್ಟು ತೆರಿಗೆ ದರ ನಿಗದಿಪಡಿಸಲಾಗಿದೆ.

ಐಷಾರಾಮಿ ಸೇವೆಗಳು ದುಬಾರಿ

ಐಷಾರಾಮಿ ಸೇವೆಗಳು ದುಬಾರಿ

ಐಷಾರಾಮಿ ಸೇವೆಗಳಿಗೆ 28%ರಷ್ಟು ತೆರಿಗೆ ದರ ನಿಗದಿಗೊಳಿಸಲಾಗಿದೆ. ಪಂಚತಾರಾ ಹೋಟೆಲ್‌ಗಳು, ರೇಸ್ ಕ್ಲಬ್‌, ಸಿನಿಮಾ ವಲಯಕ್ಕೆ 28% ಹಾಗೂ ದೂರಸಂಪರ್ಕ, ಹಣಕಾಸು ಸೇವೆಗಳಿಗೆ 18% ತೆರಿಗೆ ದರ ನಿಗದಿಪಡಿಸಲಾಗಿದೆ.

ಶಿಕ್ಷಣ ಅಗ್ಗ

ಶಿಕ್ಷಣ ಅಗ್ಗ

ಹೊಸ ಜಿಎಸ್ಟಿ ನಿಯಮದ ಅಡಿ ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ತೆರಿಗೆಯಿಂದ ಹೊರಗಿಡಲಾಗಿದೆ. ಇನ್ನುಮುಂದೆ ಶಿಕ್ಷಣಕ್ಕೆ ಸಂಬಂಧಿತ ಸೇವೆಗಳು ಅಗ್ಗವಾಗಲಿವೆ.

ಚಿನ್ನದ ತೆರಿಗೆ

ಚಿನ್ನದ ತೆರಿಗೆ

ಚಿನ್ನ, ಚಪ್ಪಲಿ ಸೇರಿದಂತೆ ಹಲವು ಉತ್ಪನ್ನಗಳ ತೆರಿಗೆ ಪ್ರಮಾಣ ಇನ್ನೂ ನಿರ್ಧಾರ ಆಗಿಲ್ಲ. ಜೂನ್‌ 3ರಂದು ನಡೆಯಲಿರುವ ಮಂಡಳಿಯ ಸಭೆಯಲ್ಲಿ ಚಿನ್ನದ ಮೇಲಿನ ತೆರಿಗೆ ದರ ನಿಗದಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. (read more: ಜಿಎಸ್‌ಟಿ)

English summary

GST Council finalised tax rates, what is become cheaper and costlier?

Cab rides could get marginally cheaper for customers from July 1 as the incidence of tax will come down to five per cent for bookings made on cab aggregators like Ola and Uber.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X