For Quick Alerts
ALLOW NOTIFICATIONS  
For Daily Alerts

ಸ್ಟಾಟಿಸ್ಟಿಕ್ಸ್ ನಂಬಿ ಮೋಸ ಹೋಗ್ಬೇಡಿ, ಪೇಟೆ ನೀಡುವ ಅವಕಾಶ ಮಿಸ್ ಮಾಡ್ಕೊಬೇಡಿ...

ಷೇರಿನ ಬೆಲೆಗಳು ವಾರ್ಷಿಕ ಗರಿಷ್ಟ, ಕನಿಷ್ಠ, ದಾಖಲೆಯ ಏರಿಕೆ, ಕಂಪನಿಗಳ ಸಾಧನೆಯ ಅಂಶಗಳು, ಲಾಭ ಮತ್ತು ಲಾಭಾಂಶ ಪ್ರಮಾಣ, ಸೆನ್ಸೆಕ್ಸ್ ದಾಖಲೆ ಪರಿಸ್ಥಿತಿ ಮುಂತಾದವುಗಳನ್ನು ಬಣ್ಣಿಸಲು ಇರುವುದು ಒಂದು ಮುಖ್ಯ ವಿಧ ಎಂದರೆ ಸ್ಟಾಟಿಸ್ಟಿಕ್ಸ್.

By K G Krupal
|

ಷೇರಿನ ಬೆಲೆಗಳು ವಾರ್ಷಿಕ ಗರಿಷ್ಟ, ಕನಿಷ್ಠ, ದಾಖಲೆಯ ಏರಿಕೆ, ಕಂಪನಿಗಳ ಸಾಧನೆಯ ಅಂಶಗಳು, ಲಾಭ ಮತ್ತು ಲಾಭಾಂಶ ಪ್ರಮಾಣ, ಸೆನ್ಸೆಕ್ಸ್ ದಾಖಲೆ, ಎಫ್ ಅಂಡ್ ಓ ಪೇಟೆಯ ಪರಿಸ್ಥಿತಿ ಮುಂತಾದವುಗಳನ್ನು ಬಣ್ಣಿಸಲು ಇರುವುದು ಒಂದು ಮುಖ್ಯ ವಿಧ ಎಂದರೆ ಅಂಕಿ ಅಂಶಗಳ ಅದಾರ, ಇದು ಸ್ಟಾಟಿಸ್ಟಿಕ್ಸ್ ಎಂದು ವರ್ಣಿಸುವರು.

 

ಈ ಸ್ಟಾಟಿಸ್ಟಿಕ್ಸ್ ಆಧರಿಸಿ, ಕಣ್ಮುಚ್ಚಿ ನಿರ್ಧರಿಸುವಂತಿಲ್ಲ. ಸುಮಾರು ಐದುವರೆ ಸಾವಿರ ಕಂಪನಿಗಳು ನೋಂದಾಯಿಸಿಕೊಂಡಿರುವ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ ನ ಮಾರ್ಕೆಟ್ ಕ್ಯಾಪಿಟಲೈಸೇಶನ್ ರೂ. 127 ಲಕ್ಷ ಕೋಟಿಯಷ್ಟಿರುವುದಲ್ಲದೆ, ವಹಿವಾಟಿಗೆ ನೋಂದಾಯಿಸಿಕೊಂಡಿರುವ ಗ್ರಾಹಕ ಸಂಖ್ಯೆ ಮೂರು ಕೋಟಿಗೂ ಹೆಚ್ಚಿರುವಾಗ ಕೆಲವು ಕಂಪನಿಗಳ ಷೇರುಗಳ ವಹಿವಾಟಾಗುವ ಸಂಖ್ಯೆ ಅಚ್ಚರಿಯನ್ನುಟು ಮಾಡುವಂತಹುದಾಗಿದೆ. ಕೆಲವು ವಹಿವಾಟುಗಳು ಕೇವಲ ದಾಖಲೆಯ ದೃಷ್ಟಿಯಿಂದ ಮಾತ್ರ ನಡೆಸುವ ಹಿತಾಸಕ್ತ ಚಟುವಟಿಕೆಯೂ ಆಗಿರುವ ಸಾಧ್ಯತೆ ಇದೆ.

ಸ್ಟಾಟಿಸ್ಟಿಕ್ಸ್ ಪ್ರಭಾವ

ಸ್ಟಾಟಿಸ್ಟಿಕ್ಸ್ ಪ್ರಭಾವ

ಒಂದು ಕಂಪನಿಯ ಷೇರಿನ ದಾಖಲೆಗಾಗಲಿ, ಸೂಚ್ಯಂಕಗಳ ದಾಖಲೆಗಾಗಲಿ ವಹಿವಾಟಾದ ಸಂಖ್ಯೆಗಳು ನಗಣ್ಯ. ವಹಿವಾಟಾಗಿರುವುದು ಒಂದು ಷೇರಾದರೂ ದಾಖಲೆಗೆ ಸಾಕು. ಹಾಗಾಗಿ ವಹಿವಾಟು ನಡೆಸುವಾಗ ಕೇವಲ ದಾಖಲೆಯಾಧಾರಿತವಾಗಿ ಹೂಡಿಕೆಗೆ ಆಯ್ಕೆ ಮಾಡುವುದು ಸರಿಯಲ್ಲ. ಕೆಲವು ಹೂಡಿಕೆದಾರರಲ್ಲಿ ಕೊಳ್ಳುವ ಅಥವಾ ಮಾರಾಟ ಮಾಡುವ ಮುಂಚೆ ದಿನದ ಗರಿಷ್ಟ ಬೆಲೆ ಅಥವಾ ಕನಿಷ್ಠ ಬೆಲೆಗಳನ್ನು ಗಮನಿಸಿ ತಮ್ಮ ಷೇರಿನ ಚಟುವಟಿಕೆಯ ದರವನ್ನು ನಿರ್ಧರಿಸುತ್ತಾರೆ. ದಿನದ ಗರಿಷ್ಟ ಬೆಲೆ ಅಥವಾ ಕನಿಷ್ಠ ಬೆಲೆಗಳಲ್ಲಿ ವಹಿವಾಟಾದ ಸಂಖ್ಯೆ ಬಿಂಬಿತವಾಗುವುದಿಲ್ಲ. ಅದು ಕೇವಲ ಒಂದೇ ಒಂದು ಷೇರಾದರೂ ಸಹ ದಾಖಲೆಯಾಗಿರುತ್ತದೆ. ಇದು ಸ್ಟಾಟಿಸ್ಟಿಕ್ಸ್ ಪ್ರಭಾವ. ಪರ್ಫೆಕ್ಟ್ ಆಕ್ಟೇವ್ ಮೀಡಿಯಾ ಪ್ರಾಜೆಕ್ಟ್ಸ್ ಲಿಮಿಟೆಡ್ ಕಂಪನಿಯು ಶುಕ್ರವಾರದಂದು ಶೇ. 5ರ ಗರಿಷ್ಟ ಮಿತಿ ತಲುಪಿತ್ತು ಆದರೆ ವಹಿವಾಟಾದ ಷೇರುಗಳ ಸಂಖ್ಯೆಯು ಮಾತ್ರ ಕೇವಲ 43.

ವಿಸ್ಮಯಕಾರಿ ಅಂಶ
 

ವಿಸ್ಮಯಕಾರಿ ಅಂಶ

ರಾಜ್ ರೇಯಾನ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿಯ ಷೇರಿನ ಬೆಲೆಯು ಶುಕ್ರವಾದಂದು ಶೇ. 5ರ ಗರಿಷ್ಟ ಆವರಣ ಮಿತಿ ತಲುಪಿತ್ತು. ಅಂದು ವಹಿವಾಟಾದ ಷೇರುಗಳ ಸಂಖ್ಯೆ ಮಾತ್ರ ಕೇವಲ 50. ಮತ್ತೊಂದು ಸ್ಟಾಟಿಸ್ಟಿಕ್ಸ್ ನ ವಿಸ್ಮಯಕಾರಿ ಅಂಶವೆಂದರೆ ಅಂದು ಶೇ. 5 ರ ಏರಿಕೆ ಕಂಡ ಈ ಷೇರಿನ ಬೆಲೆಯು 24 ಪೈಸೆಗಳಿಂದ 25 ಪೈಸೆಗಳಿಗೆ ಏರಿಕೆ ಕಂಡಿದೆ. ಇಪ್ಪತ್ತನಾಲ್ಕು ಪೈಸೆ ಬೆಲೆಯ ಷೇರು ಕೇವಲ ಐವತ್ತು ಷೇರುಗಳ ವಹಿವಾಟಿನಿಂದ ಗರಿಷ್ಟ ಅವರಣ ಮಿತಿಯಲ್ಲಿರುವ ಷೇರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ವಿಸ್ಮಯಕಾರಿ ಅಂಶವಲ್ಲವೇ?

ಆಕರ್ಷಣೆಗೆ ಒಳಗಾಗಬೇಡಿ

ಆಕರ್ಷಣೆಗೆ ಒಳಗಾಗಬೇಡಿ

ಸ್ಟಾಟಿಸ್ಟಿಕ್ಸ್ ನ ಪ್ರಭಾವ ಎಷ್ಟರ ಮಟ್ಟಿಗೆ ಹೂಡಿಕೆದಾರರನ್ನಾಕರ್ಷಿಸುತ್ತದೆ ಎಂಬುದಕ್ಕೆ ಮತ್ತೊಂದು ಉದಾಹರಣೆ ಎಂದರೆ ಇನ್ಫೋ ಡ್ರೈವ್ ಸಾಫ್ಟ್ ವೇರ್ ಲಿಮಿಟೆಡ್ ಕಂಪನಿಯ ಷೇರಿನ ಬೆಲೆಯು ಶೇ. 6.67ರಷ್ಟು ಏರಿಕೆ ಕಂಡಿದೆ ಎಂಬ ಅಂಶವು, ಈ ಷೇರು ಏರಿಕೆಯ ಪಥದಲ್ಲಿದೆ ಅಂದು ಕೆಲವು ಅಮಾಯಕ ಹೂಡಿಕೆದಾರರನ್ನು ಆಕರ್ಷಿಸುವುದು ಸಹಜ. ಆದರೆ ಈ ಶೇ. 6.67ರ ಏರಿಕೆಯ ಹಿಂದಿನ ಅಂಶ ಮತ್ತಷ್ಟು ವಿಸ್ಮಯಕಾರಿಯಾಗಿದೆ. ಕೇವಲ ಒಂದು ಪೈಸೆಯ ಏರಿಕೆಯಿಂದ ಶೇ. 6.67ರ ಏರಿಕೆ ದಾಖಲಿಸಿದ ಈ ಷೇರಿನ ಬೆಲೆಯು 15 ಪೈಸೆ ಮಾತ್ರವಿತ್ತು. ಕೆ ಜಿ ಎನ್ ಇಂಡಸ್ಟ್ರೀಸ್ ಲಿಮಿಟೆಡ್ ಎಂಬ ಕಂಪನಿಯ ಷೇರಿನ ಬೆಲೆ ಕೇವಲ ಎರಡು ಪೈಸೆ ಏರಿಕೆಯಿಂದ ವಾರ್ಷಿಕ ಗರಿಷ್ಟ ದಾಖಲಿಸಿಕೊಂಡಿದೆ.

ಹೂಡಿಕೆ ಮುನ್ನ ದೃಢಪಡಿಸಿ

ಹೂಡಿಕೆ ಮುನ್ನ ದೃಢಪಡಿಸಿ

ಎಕ್ಸ್ ಟಿ ಸಮೂಹದ ಆರ್ ಎಲ್ ಎಫ್ ಲಿಮಿಟೆಡ್ ಕಂಪನಿಯು ಶುಕ್ರವಾರದಂದು ವಾರ್ಷಿಕ ಗರಿಷ್ಟ ದಾಖಲಿಸಿದೆ. ಆದರೆ ಈ ಷೇರು ಗಳಿಸಿದ ಏರಿಕೆ ಒಂಬತ್ತು ಪೈಸೆಗಳು. ಅಂದರೆ ಷೇರಿನ ಬೆಲೆ ರೂ. 1.85 - 1.94ರವರೆಗೂ ಏರಿಕೆ ಕಂಡಿದೆ. ಇಷ್ಟು ಅಲ್ಪ ಮೌಲ್ಯದ ಷೇರಿನ ವಹಿವಾಟಿನ ಸಂಖ್ಯೆ ಮಾತ್ರ ಕೇವಲ 500 ಮಾತ್ರ. ಸಾಮಾನ್ಯವಾಗಿ ಎಸ್ಎಂಎಸ್ ಗಳ ಮೂಲಕ ಷೇರುಗಳನ್ನು ಕೊಳ್ಳಲು ಪ್ರೇರೇಪಿಸುವ ಪದ್ಧತಿ ಈಗ ಹೆಚ್ಚಾಗಿದ್ದು, ಅವುಗಳಲ್ಲಿ ಹೆಚ್ಚಾಗಿ ಕಡಿಮೆ ಮೌಲ್ಯದ ಕಳಪೆ, ಜೊಳ್ಳು, ಟೊಳ್ಳು, ಕಂಪನಿಗಳ ಶಿಫಾರಸುಗಳೇ ಹೆಚ್ಚಾಗಿರುತ್ತದೆ. ಸರಿಯಾಗಿ ದೃಢಪಡಿಸಿಕೊಂಡು ಹೂಡಿಕೆ ಬಗ್ಗೆ ನಿರ್ಧರಿಸಿರಿ.

ಸುರಕ್ಷತೆಗೆ ಆದ್ಯತೆ

ಸುರಕ್ಷತೆಗೆ ಆದ್ಯತೆ

ಅಂತರ್ಗತವಾಗಿ ಅರ್ಥಗರ್ಬಿತವಾಗಿದ್ದಲ್ಲಿ ಮಾತ್ರ ಅಧಿಕ ಲಾಭ ಗಳಿಕೆ ಸಾಧ್ಯ. ಸ್ಟಾಟಿಸ್ಟಿಕ್ಸ್ ನಂಬಿಕೊಂಡು ಕಣ್ಮುಚ್ಚಿ ಚಟುವಟಿಕೆ ನಡೆಸುವ ಮೊದಲು ಷೇರು ಯಾವ ಗ್ರೂಪ್ ಗೆ ಸೇರಿದೆ, ಷೇರಿನ ಮುಖಬೆಲೆ, ಪೇಟೆಯ ದರ, ವಹಿವಾಟಿನ ಗಾತ್ರಗಳನ್ನೂ ಪರಿಶೀಲಿಸಿ ನಂತರ ಇತರೆ ಮಾಪನಾಂಶಗಳನ್ನು ಅಳವಡಿಸಿಕೊಂಡು ನಿರ್ಧರಿಸಿದರೆ ಹೂಡಿಕೆ ಸ್ವಲ್ಪಮಟ್ಟಿನ ಸುರಕ್ಷತೆಯನ್ನು ನೀಡಬಹುದು.

English summary

Don't believe statistics, dont miss the opportunities

Don't believe statistics and the same time dont miss the share market chance.
Story first published: Monday, May 22, 2017, 14:44 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X