For Quick Alerts
ALLOW NOTIFICATIONS  
For Daily Alerts

ಪೇಟಿಎಂ ಪೇಮೆಂಟ್ ಬ್ಯಾಂಕ್(PPBL) ಆರಂಭ- ಗ್ರಾಹಕರಿಗೆ ಲಾಭಗಳೇನು?

ಬಾರತೀಯ ರಿಸರ್ವ್ ಬ್ಯಾಂಕ್ ನಿಂದ ಅನುಮತಿ ದೊರೆತ ನಂತರ ಪೇಟಿಎಂ ಪೇಮೆಂಟ್ ಬ್ಯಾಂಕ್‌ ಕಾರ್ಯನಿರ್ವಹಣೆ ಮಂಗಳವಾರದಿಂದ(ಮೇ 23) ಪ್ರಾರಂಭವಾಗಿದೆ.

By Siddu
|

ಬಾರತೀಯ ರಿಸರ್ವ್ ಬ್ಯಾಂಕ್ ನಿಂದ ಅನುಮತಿ ದೊರೆತ ನಂತರ ಪೇಟಿಎಂ ಪೇಮೆಂಟ್ ಬ್ಯಾಂಕ್‌ ಕಾರ್ಯನಿರ್ವಹಣೆ ಮಂಗಳವಾರದಿಂದ (ಮೇ 23) ಪ್ರಾರಂಭವಾಗಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್(PPBL) ಸಂಸ್ಥೆ ಮೊದಲ ವರ್ಷದಲ್ಲಿ 31 ಶಾಖೆ ಹಾಗೂ 3000 ಗ್ರಾಹಕ ಸೇವಾ ಕೇಂದ್ರಗಳನ್ನು ಆರಂಭಿಸುವುದಾಗಿ ತಿಳಿಸಿದೆ.

 
ಪೇಟಿಎಂ ಪೇಮೆಂಟ್ ಬ್ಯಾಂಕ್(PPBL) ಆರಂಭ ಗ್ರಾಹಕರಿಗೆ ಲಾಭಗಳೇನು?

ಪೇಟಿಎಂ ಪೇಮೆಂಟ್ ಬ್ಯಾಂಕ್‌ ಸೌಲಭ್ಯಗಳೇನು?

* ಪೇಟಿಎಂ ಪೇಮೆಂಟ್ ಬ್ಯಾಂಕ್‌ ಖಾತೆಗೆ ರೂ. 25 ಸಾವಿರ ಜಮೆ ಮಾಡುವವರಿಗೆ ರೂ. 250 ಕ್ಯಾಷ್‌ಬ್ಯಾಕ್‌ ಕೊಡುಗೆ ಸಿಗಲಿದೆ.
* ಮಿನಿಮಮ್ ಬ್ಯಾಲೆನ್ಸ್ ಖಾತೆ, ನೆಫ್ಟ್(NEFT), ಐಎಂಪಿಎಸ್(IMPS)‌ ಆರ್ಟಿಜಿಎಸ್(RTGS) ಸೇರಿದಂತೆ ಉಚಿತ ಆನ್‌ಲೈನ್‌ ವಹಿವಾಟು ಸೇವೆ ಒದಗಿಸಲಿದೆ.
* ಗರಿಷ್ಠ ರೂ. 1 ಲಕ್ಷದ ವರೆಗೆ ಪೇಮೆಂಟ್ ಬ್ಯಾಂಕ್‌ಗಳಲ್ಲಿ ಠೇವಣಿ ಇಡಲು ಅವಕಾಶವಿದೆ.
* ಪೇಟಿಎಂ ಪೇಮೆಂಟ್ ಬ್ಯಾಂಕ್‌ ಡೆಬಿಟ್ ಕಾರ್ಡ್ ಸೌಲಭ್ಯ ಒದಗಿಸಲಿದೆ. ಆದರೆ ಕ್ರೆಡಿಟ್ ಕಾರ್ಡ್ ಸೌಲಭ್ಯವಿರುವುದಿಲ್ಲ.
* ಪೇಮೆಂಟ್‌ ಬ್ಯಾಂಕ್‌ ಉಳಿತಾಯ ಖಾತೆಯಲ್ಲಿನ ಠೇವಣಿಗೆ ಶೇ. 4ರಷ್ಟು ಬಡ್ಡಿ ನಿಗದಿಪಡಿಸಿದೆ.
* ಗ್ರಾಹಕರಿಗೆ ಡೆಬಿಟ್ ಕಾರ್ಡ್‌ ಒದಗಿಸಲಾಗುತ್ತಿದ್ದು, ಪೇಟಿಎಂ ಪೇಮೆಂಟ್ ಬ್ಯಾಂಕ್‌ ಎಟಿಎಂ ಮೂಲಕ 5 ಬಾರಿ ಉಚಿತವಾಗಿ ಹಣ ವಿತ್ ಡ್ರಾ ಮಾಡಬಹುದು. ಮೆಟ್ರೊ ಮತ್ತು ನಾನ್ ಮೆಟ್ರೊ ಎಟಿಎಂ ಗಳಲ್ಲಿ ಮೂರು ಬಾರಿ ಉಚಿತವಾಗಿ ಹಣ ಪಡೆಯಬಹುದು. ನಂತರದ ಪ್ರತಿ ವಹಿವಾಟಿಗೆ ರೂ. 20 ಶುಲ್ಕ ವಿಧಿಸಲಾಗುತ್ತದೆ.
* ಈಗಾಗಲೇ ಏರ್‌ಟೆಲ್‌ ಮತ್ತು ಭಾರತೀಯ ಅಂಚೆ ಈ ಸಏವೆಯನ್ನು ಆರಂಭಿಸಿದ್ದು, ಏರ್‌ಟೆಲ್‌ ಪೇಮೆಂಟ್‌ ಬ್ಯಾಂಕ್‌ ಶೇ. 7.3 ಹಾಗೂ ಅಂಚೆ ಪೇಮೆಂಟ್ ಬ್ಯಾಂಕ್‌ ಶೇ. 5.5 ರಷ್ಟು ವಾರ್ಷಿಕ ಬಡ್ಡಿದರ ನಿಗದಿ ಪಡಿಸಿವೆ.

 
ಪೇಟಿಎಂ ಪೇಮೆಂಟ್ ಬ್ಯಾಂಕ್(PPBL) ಆರಂಭ ಗ್ರಾಹಕರಿಗೆ ಲಾಭಗಳೇನು?

English summary

Paytm Payments Bank Launched: Here's What It Means for Paytm Users

Paytm on Tuesday launched the Paytm Payments Bank in India, announcing the new unit via a public notice in newspapers and a blog post. After Vijay Shekhar Sharma secured an in-principle approval to start a payments bank in 2015, the Paytm bank was scheduled to commence operations around Diwali last year, but got delayed by several months.
Story first published: Wednesday, May 24, 2017, 16:08 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X