For Quick Alerts
ALLOW NOTIFICATIONS  
For Daily Alerts

ಈ ವರ್ಷ ಬ್ಯಾಂಕಿಂಗ್ - ಮುಂದೆ ಫಾರ್ಮ ಕಿಂಗ್?

ಷೇರುಪೇಟೆಯಲ್ಲಿ ಹೆಚ್ಚಿನ ಕಂಪನಿಗಳು ವಿಶೇಷವಾಗಿ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳು ಕುದುರೆ ಏರಿ ದಾಖಲೆಗಳನ್ನು ನಿರ್ಮಿಸಿದ ದಿನಗಳ ನಂತರ ಸೋಮವಾರ ಮತ್ತು ಮಂಗಳವಾರ ಕಾಂಗರೂ ಓಟದಲ್ಲಿ ಕಳಚಿ ಬಿದ್ದವು.

By K G Krupal
|

ಷೇರುಪೇಟೆಯಲ್ಲಿ ಹೆಚ್ಚಿನ ಕಂಪನಿಗಳು ವಿಶೇಷವಾಗಿ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಷೇರುಗಳು ಕುದುರೆ ಏರಿ ದಾಖಲೆಗಳನ್ನು ನಿರ್ಮಿಸಿದ ದಿನಗಳ ನಂತರ ಸೋಮವಾರ ಮತ್ತು ಮಂಗಳವಾರ ಕಾಂಗರೂ ಓಟದಲ್ಲಿ ಕಳಚಿ ಬಿದ್ದವು. ಈ ಕುಸಿತವು ಎಷ್ಟರಮಟ್ಟಿಗೆ ತೀವ್ರವಾಗಿತ್ತೆಂದರೆ ಬಿಎಸ್ಇ ಸ್ಮಾಲ್ ಕ್ಯಾಪ್ ವಿಭಾಗದ ಕಂಪನಿ ಇಂಡೋ ಕೌಂಟ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿ ಷೇರಿನ ಬೆಲೆ ಮಂಗಳವಾರದಂದು ದಿನದ ಆರಂಭದಲ್ಲಿ ರೂ. 191ರ ಸಮೀಪವಿದ್ದು ನಂತರ ಏಕಮುಖವಾಗಿ ರೂ. 163ರವರೆಗೂ ಇಳಿಕೆ ಕಂಡು ರೂ. 170ರ ಸಮೀಪಕ್ಕೆ ಇಳಿಕೆಯಿಂದ ಕೊನೆಗೊಂಡಿತು.

 

ಅಸಹಜ ಏರಿಕಳಿತ

ಅಸಹಜ ಏರಿಕಳಿತ

ಈ ತಿಂಗಳ 5 ರಂದು ರೂ. 208ರ ವಾರ್ಷಿಕ ಗರಿಷ್ಟ ತಲುಪಿದ್ದ ಈ ಷೇರಿನ ಬೆಲೆ ಒಂದೇ ದಿನ ಭಾರಿ ಕುಸಿತ ಪ್ರದರ್ಶಿಸಿರುವುದು ಪೇಟೆಯ ಒಳಗೆ ಇರುವ ಟೊಳ್ಳು ತನಕ್ಕೆ ಸಾಕ್ಷಿಯಾಗಿದೆ. ಇದೇ ರೀತಿ ಸಾರ್ವಜನಿಕ ವಲಯದ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ ಕಂಪನಿಯ ಷೇರಿನ ಬೆಲೆಯೂ ಈ ತಿಂಗಳ 5ರಂದು ವಾರ್ಷಿಕ ಗರಿಷ್ಟ ರೂ. 197ರವರೆಗೂ ದಾಖಲೆಯ ಏರಿಕೆಯನ್ನು ಪ್ರದರ್ಶಿಸಿದ್ದು, ಸೋಮವಾರದಿಂದ ಷೇರಿನ ಬೆಲೆ ಇಳಿಯಲಾರಂಭಿಸಿ ಮಂಗಳವಾರದಂದು ರೂ. 146ರ ಸಮೀಪ ಕೊನೆಗೊಂಡಿದೆ. ಅಂದರೆ ಕೆಲವೇ ದಿನಗಳಲ್ಲಿ ರೂ. 50ಕ್ಕೂ ಹೆಚ್ಚಿನ ಇಳಿಕೆ ಕಂಡಿದೆ. ಇದು ಪೇಟೆ ಪ್ರದರ್ಶಿಸಿದ್ದ ಅಸಹಜ ಏರಿಕೆಯನ್ನು ಬಿಂಬಿಸುತ್ತದೆ. ವಿಶೇಷವೆಂದರೆ ಸರಿಯಾಗಿ ಒಂದು ವರ್ಷದ ಹಿಂದೆ ಅಂದರೆ 25ನೇ ಮೇ 2016ರಂದು ಷೇರಿನ ಬೆಲೆಯು ರೂ. 78ರ ಸಮೀಪವಿದ್ದು ಸರಿಯಾಗಿ ಒಂದೇ ವರ್ಷದಲ್ಲಿ ರೂ. 78-197ರವರೆಗೂ ಏರಿಕೆ ಕಂಡಿದೆ. ಈ ಅಲ್ಪ ಬಡ್ಡಿ ಯುಗದಲ್ಲಿ ಹೂಡಿಕೆ ಹಣ ದ್ವಿಗುಣವಾಗಲು ವರ್ಷಗಟ್ಟಲೆ ಕಾಯಬೇಕಾಗುವುದು. ಅಂತಹುದರಲ್ಲಿ ಒಂದೇ ವರ್ಷದಲ್ಲಿ ಒಂದೂವರೆ ಪಟ್ಟು ಹೆಚ್ಚು ಲಾಭ ಬಂದರೆ ಮಾರಾಟ ಮಾಡಲು ಹಿಂಜರಿಕೆಯಾಕೆ? ಈ ಕಾರಣ ವಿತ್ತೀಯ ಸಂಸ್ಥೆಗಳು ಲಾಭದ ನಗದೀಕರಣಕ್ಕೆ ಮುಂದಾಗಿವೆ. ಇದು ಸೂಚ್ಯಂಕಗಳನ್ನು ಕುಸಿಯುವಂತೆ ಮಾಡಿವೆ.

ಹೆಚ್ಚಿನ ಲಾಭ
 

ಹೆಚ್ಚಿನ ಲಾಭ

ಇದೇ ರೀತಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಷೇರಿನ ಬೆಲೆಯು ಏರಿಳಿತಗಳನ್ನು ಪ್ರದರ್ಶಿಸಿದೆ. ಈ ತಿಂಗಳ 5 ರಂದು ರೂ. 185ರ ವಾರ್ಷಿಕ ಗರಿಷ್ಟ ತಲುಪಿದ್ದ ಷೇರು ಕಳೆದೆರಡು ದಿನಗಳಿಂದ ಮಾರಾಟದ ಒತ್ತಡದಿಂದ ರೂ. 145ರ ಸಮೀಪಕ್ಕೆ ಕುಸಿದಿರುವುದು ಪ್ರಾಫಿಟ್ ಬುಕಿಂಗ್ ವೇಗ ತಿಳಿಸುತ್ತದೆ. ಈ ಷೇರಿನ ಬೆಲೆ ರೂ. 71ರ ಸಮೀಪ 24ನೇ ಮೇ 2016ರಲ್ಲಿದ್ದು, ಅಲ್ಲಿಂದ ಸರಿಯಾಗಿ ಒಂದು ವರ್ಷದ ಅವಧಿಯಲ್ಲಿ ರೂ. 185ಕ್ಕೆ ತಲುಪಿ ವರ್ಷದಲ್ಲಿ ಒಂದುವರೆ ಪಟ್ಟಿಗಿಂತ ಹೆಚ್ಚಿನ ಲಾಭ ಗಳಿಸಿಕೊಟ್ಟಿದೆ.

ಗಮನಾರ್ಹ ಇಳುವರಿ

ಗಮನಾರ್ಹ ಇಳುವರಿ

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾಗಳು ಸಹ ಇದೇ ರೀತಿಯ ಭಾರಿ ಏರಿಳಿತಗಳನ್ನು ಸರಿಯಾಗಿ ಒಂದೇ ವರ್ಷದಲ್ಲಿ ಪ್ರದರ್ಶಿಸಿವೆ. ವಿಜಯ ಬ್ಯಾಂಕ್ ಷೇರಿನ ಇಳುವರಿ ಮಾತ್ರ ಒಂದೇ ವರ್ಷದಲ್ಲಿ ಸುಮಾರು ಮೂರುಪಟ್ಟು ಹೆಚ್ಚಾಗಿರುವುದು ಗಮನಾರ್ಹ.

ಮಾರುಕಟ್ಟೆಯಲ್ಲಿನ ಏರಿಳಿತ

ಮಾರುಕಟ್ಟೆಯಲ್ಲಿನ ಏರಿಳಿತ

ಈ ತಿಂಗಳ ಮಧ್ಯೆಯಲ್ಲಿ ಭಾರತ್ ಫೈನಾನ್ಷಿಯಲ್ ಇನ್ ಕ್ಲು ಶನ್ ಲಿಮಿಟೆಡ್ ಷೇರಿನ ಬೆಲೆಯು ವಾರ್ಷಿಕ ಗರಿಷ್ಟ ರೂ. 823ರಲ್ಲಿದ್ದು, ನಂತರದಲ್ಲಿ ಸತತವಾದ ಮಾರಾಟದ ಒತ್ತಡ ಕಂಡಿದೆ. ಮಂಗಳವಾರದಂದು ಷೇರಿನ ಬೆಲೆಯು ರೂ. 657ರವರೆಗೂ ಇಳಿಕೆ ಕಂಡು ರೂ. 665ರ ಸಮೀಪ ಕೊನೆಗೊಂಡಿದೆ. ಕಳೆದ ಡಿಸೆಂಬರ್ ನಲ್ಲಿ ರೂ. 466ರ ಸಮೀಪವಿದ್ದ ಈ ಷೇರಿನ ಬೆಲೆಯು ರೂ. 823ಕ್ಕೆ ಕೇವಲ ಕೆಲವೇ ತಿಂಗಳಲ್ಲಿ ಏರಿಕೆ ಕಂಡಿದೆ. ಇದರ ಲಾಭದ ಇಳುವರಿಯ ಶೇಕಡಾವಾರು ಅದ್ಭುತವಾಗಿದೆ ಎಂದೆನಿಸಿದರೂ, ಕಳೆದ ಜುಲೈ 29, 2016ರಂದು ಷೇರಿನ ಬೆಲೆಯು ರೂ. 938ರಲ್ಲಿದ್ದು ಅಲ್ಲಿಂದ ಸತತವಾಗಿ ಇಳಿಕೆ ಕಂಡು ಡಿಸೆಂಬರ್ ನಲ್ಲಿ ವಾರ್ಷಿಕ ಕನಿಷ್ಠ ತಲುಪಿತ್ತು ಎಂಬುದು ಗಮನಾರ್ಹ ಅಂಶ. ಏರಿಳಿತಗಳ ರಭಸಕ್ಕೆ ಹಿಡಿದ ಕನ್ನಡಿಯಾಗಿದೆ.

ವಾರ್ಷಿಕ ಕನಿಷ್ಠ ಮಟ್ಟ

ವಾರ್ಷಿಕ ಕನಿಷ್ಠ ಮಟ್ಟ

ಈಗಿನ ದಿನಗಳಲ್ಲಿ ಅತೀವ ಒತ್ತಡದಲ್ಲಿರುವ ಫಾರ್ಮ ಕಂಪನಿಗಳು ಮುಂದಿನ ಒಂದು ವರ್ಷದಲ್ಲಿ ಬ್ಯಾಂಕಿಂಗ್ ಸೆಕ್ಟರ್ ಷೇರುಗಳ ರೀತಿ ಏರಿಕೆಯಿಂದ ಆಕರ್ಷಕ ಲಾಭ ತಂದುಕೊಟ್ಟಲ್ಲಿ ಅಚ್ಚರಿ ಏನಿಲ್ಲ. ಪ್ರಮುಖ ಫಾರ್ಮ ವಲಯದ ಕಂಪನಿಗಳಾದ ದಿವೀಸ್ ಲ್ಯಾಬ್, ಅಲೆಂಬಿಕ್ ಫಾರ್ಮ್, ಲುಪಿನ್, ಸ್ಟ್ರೈಡ್ಸ್ ಶಾಸೂನ್, ಗ್ಲೇನ್ ಮಾರ್ಕ್ ಫಾರ್ಮ ಗಳು ವಾರ್ಷಿಕ ಕನಿಷ್ಠ ಮಟ್ಟದ ಸಮೀಪಕ್ಕೆ ಕುಸಿದಿರುವುದರಿಂದ ದೀರ್ಘಕಾಲೀನ ಹೂಡಿಕೆಗೆ ಸೂಕ್ತವಲ್ಲವೇ?

Read more about: stock share sensex
English summary

Will Pharma Sector companies rule next year?

Majority of Banking Companies specifically public sector banks have recovered from yearly low level in May 2016 to Yearly high in May 2017. In some cases the return is more than triple. That is Market Miracle. Now major pharma sector Companies have fallen to yearly low level.
Story first published: Wednesday, May 24, 2017, 12:59 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X