For Quick Alerts
ALLOW NOTIFICATIONS  
For Daily Alerts

ಬಿಎಸ್ಎನ್ಎಲ್ ಸ್ಯಾಟಲೈಟ್ ಫೋನ್‌ ಸೇವೆ ಆರಂಭ

ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆಯಾದ ಬಿಎಸ್ಎನ್ಎಲ್ ಸ್ಯಾಟಲೈಟ್ ಫೋನ್‌ ಸೇವೆಯನ್ನು ಆರಂಭಿಸಿದೆ. ಜಾಗತಿಕ ಮೊಬೈಲ್ ಸೇವೆಗಳನ್ನು ಒದಗಿಸುವ ಬ್ರಿಟಿಷ್ ಸ್ಯಾಟಲೈಟ್ ಟೆಲಿಕಮ್ಯೂನಿಕೆಷನ್ಸ್ ಕಂಪನಿ(INMARSAT) ಮೂಲಕ ಈ ಸೇವೆ ಒದಗಿಸಲಾಗುತ್ತಿದೆ.

By Siddu
|

ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆಯಾದ ಬಿಎಸ್ಎನ್ಎಲ್ ಸ್ಯಾಟಲೈಟ್ ಫೋನ್‌ ಸೇವೆಯನ್ನು ಆರಂಭಿಸಿದೆ. ಜಾಗತಿಕ ಮೊಬೈಲ್ ಸೇವೆಗಳನ್ನು ಒದಗಿಸುವ ಬ್ರಿಟಿಷ್ ಸ್ಯಾಟಲೈಟ್ ಟೆಲಿಕಮ್ಯೂನಿಕೆಷನ್ಸ್ ಕಂಪನಿ(INMARSAT) ಮೂಲಕ ಈ ಸೇವೆ ಒದಗಿಸಲಾಗುತ್ತಿದೆ. ಪುಣೆಯಲ್ಲಿ ಸ್ಯಾಟಲೈಟ್ ಫೋನ್‌ ಸೇವೆಗೆ ಅಗತ್ಯವಾಗಿ ಬೇಕಿರುವ ಭೂ ವಿನಿಮಯ ಕೇಂದ್ರವನ್ನು ಆರಂಭಿಸಲಾಗಿದೆ.

 

ಟಿಸಿಎಲ್ ಸೇವೆ

ಟಿಸಿಎಲ್ ಸೇವೆ

ಪ್ರಸ್ತುತ ದೇಶದಲ್ಲಿ ಸ್ಯಾಟಲೈಟ್ ಫೋನ್‌ ಸೇವೆಗಳನ್ನು ಟಾಟಾ ಕಮ್ಯುನಿಕೇಷನ್ಸ್ ಲಿ.(ಟಿಸಿಎಲ್) ಪೂರೈಸುತ್ತಿದೆ. ವಿದೇಶ್ ಸಂಚಾರ್ ನಿಗಮ್ ಲಿಮಿಟೆಡ್ ಹೆಸರಿನಿಂದ ಟಾಟಾ ಕಮ್ಯುನಿಕೇಷನ್ಸ್ ಲಿಮಿಟೆಡ್ ಆಗಿದೆ. ಜೂನ್‌ ಅಂತ್ಯಕ್ಕೆ ಟಿಸಿಎಲ್ ಸೇವೆ ಸ್ಥಗಿತವಾಗಲಿದೆ. ಮೊಬೈಲ್‌ ಮಾದರಿಯ ಉಪಕರಣದಲ್ಲಿಯೇ ಸ್ಯಾಟಲೈಟ್ ಫೋನ್‌ ಕಾರ್ಯನಿರ್ವಹಿಸಲಿದೆ.

ಸೇವಾ ಕ್ಷೇತ್ರ

ಸೇವಾ ಕ್ಷೇತ್ರ

ಮೊದಲ ಹಂತದಲ್ಲಿ ವಿಕೋಪ ಪರಿಹಾರ ಸಂಸ್ಥೆಗಳು, ರಾಜ್ಯ ಪೊಲೀಸ್‌, ರೈಲ್ವೆ, ಗಡಿ ಭದ್ರತಾ ಪಡೆ, ಸರ್ಕಾರದ ಇತರ ಸಂಸ್ಥೆಗಳು, ಸೇವೆಪಡೆಯಲಿವೆ. ನಂತರದಲ್ಲಿ ಹಡಗುಗಳು/ದೋಣಿಗಳು, ವಿಮಾನ ಪ್ರಯಾಣಿಕರು ಮತ್ತು ಸಾರ್ವಜನಿಕರಿಗೆ ಸ್ಯಾಟಲೈಟ್ ಫೋನ್‌ ಸೇವೆ ವಿಸ್ತರಿಸುವ ಸಾದ್ಯತೆ ಇದೆ.

ಇನ್‌ಮಾರ್‌ಸ್ಯಾಟ್
 

ಇನ್‌ಮಾರ್‌ಸ್ಯಾಟ್

1979ರಲ್ಲಿ ಅಂತರರಾಷ್ಟ್ರೀಯ ಜಲ ಸಾರಿಗೆ ಸಂಘಟನೆ(ಐಎಂಒ) ಈ ಸೇವೆಯನ್ನು ಆರಂಭಿಸಿದ್ದು, ಒಟ್ಟು 14 ಉಪಗ್ರಹಗಳನ್ನು ಹೊಂದಿದೆ. ಹಡಗುಗಳು ಸಮುದ್ರ ಮಧ್ಯೆ ಇದ್ದಾಗ ಬಂದರಿನೊಂದಿಗೆ ಸಂಪರ್ಕ ಸಾಧಿಸುವುದು ಮತ್ತು ಅಪಾಯದ ಸಂದರ್ಭದಲ್ಲಿ ನೆರವು ಒದಗಿಸುವುದು ಇನ್‌ಮಾರ್‌ಸ್ಯಾಟ್ ಉದ್ದೇಶ.

ಸುರಕ್ಷತೆಗೆ ಆದ್ಯತೆ

ಸುರಕ್ಷತೆಗೆ ಆದ್ಯತೆ

ಸುರಕ್ಷತೆ ಮತ್ತು ಬೇಹುಗಾರಿಕೆ ದೃಷ್ಟಿಯಿಂದ ವಿದೇಶಿ ಸಂಸ್ಥೆಗಳು ಪೂರೈಸುವ ಸ್ಯಾಟ್ಲೈಟ್ ಫೋನ್ ಗಳು ರಕ್ಷಣಾ ಪಡೆಗಳಿಗೆ ಸುರಕ್ಷಿತವಾಗಿರಲಿಲ್ಲ. ಏಕೆಂದರೆ ಈ ವಿನಿಮಯ ಕೇಂದ್ರಗಳು ದೇಶದಿಂದ ಹೊರಗಡೆ ಇದ್ದವು. ದೇಶದ ಸುರಕ್ಷತೆ ಮತ್ತು ಬೇಹುಗಾರಿಕೆ ದೃಷ್ಟಿಯಿಂದ ವಿನಿಮಯ ಕೇಂದ್ರದ ಸ್ಥಾಪನೆ ಬಹುಮುಖ್ಯವಾಗಿದೆ.

English summary

BSNL launches satellite phone service

BSNL started satellite phone service through INMARSAT which will be initially offered to government agencies and later opened for others citizen in phased manner.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X