For Quick Alerts
ALLOW NOTIFICATIONS  
For Daily Alerts

ಮೋದಿ ಸರ್ಕಾರ್ ಎಫೆಕ್ಟ್! ಷೇರುಪೇಟೆ ಅಂದು-ಇಂದು, ಏನೇನಾಗಿದೆ..?

ಕೇಂದ್ರದಲ್ಲಿ ಬಿಜೆಪಿ ಸರ್ಕಾರವು ಪ್ರಸಕ್ತ ಅವಧಿಯಲ್ಲಿ ಮೂರು ವರ್ಷ ಪೂರ್ಣಗೊಳಿಸಿದೆ. ಈ ಅಂಶವು ಮಾರ್ಕೆಟ್ ನಲ್ಲಿ ಆಪರೇಟರ್ ಗಳಲ್ಲಿ ಮತ್ತು ಡೊಮೆಸ್ಟಿಕ್ ಇನ್ಸ್ಟಿಟ್ಯೂಶನ್ ಗಳಲ್ಲಿ ಎಲ್ಲಿಲ್ಲದ ಉತ್ಸಾಹವನ್ನು ತುಂಬಿದೆ.

By K G Krupal
|

ಕೇಂದ್ರದಲ್ಲಿ ಬಿಜೆಪಿ ಸರ್ಕಾರವು ಪ್ರಸಕ್ತ ಅವಧಿಯಲ್ಲಿ ಮೂರು ವರ್ಷ ಪೂರ್ಣಗೊಳಿಸಿದೆ. ಈ ಅಂಶವು ಮಾರ್ಕೆಟ್ ನಲ್ಲಿ ಆಪರೇಟರ್ ಗಳಲ್ಲಿ ಮತ್ತು ಡೊಮೆಸ್ಟಿಕ್ ಇನ್ಸ್ಟಿಟ್ಯೂಶನ್ ಗಳಲ್ಲಿ ಎಲ್ಲಿಲ್ಲದ ಉತ್ಸಾಹವನ್ನು ತುಂಬಿದೆ. ಈ ಉತ್ಸಾಹ ಎಷ್ಟರ ಮಟ್ಟಿಗಿದೆ ಎಂದರೆ ವಾರದ ಆರಂಭದ ದಿನಗಳಲ್ಲಿ ಪಾಕ್ ಗಡಿಯಲ್ಲಿದ್ದ ಸಂಘರ್ಷಣಾ ವಾತಾವರಣದ ಕರಾಳ ಛಾಯೆಯು ಮಾಯವಾಗಿತ್ತು. ಇದು ಪೇಟೆ ತನ್ನ ಚಲನೆಯ ದಿಶೆಯನ್ನು ಬದಲಿಸುವ ವೇಗ ಮತ್ತು ಅದಕ್ಕೆ ಸೃಷ್ಟಿಯಾಗುವ ಕಾರಣಗಳು ಹೇಗಿರುತ್ತದೆಂಬುದನ್ನು ತೋರಿಸುತ್ತದೆ. ನಂತರದ ದಿನಗಳಲ್ಲಿ ಮತ್ಯಾವ ಹೊಸ ಅಂಶಗಳು ಮಂಚೂಣಿಯಲ್ಲಿರುತ್ತವೆ ಎಂಬುದರ ಮೇಲೆ ಪೇಟೆಯ ದಿಶೆ ನಿರ್ಧರಿತವಾಗುತ್ತದೆ. ಮೋದಿ ಸರ್ಕಾರಕ್ಕೆ ಮೂರು, ಸಾಧನೆಗಳು ನೂರು, ಪ್ರಶ್ನೆಗಳು ಹಲವಾರು...!?

 

ಷೇರುಪೇಟೆಯಲ್ಲಿ ಮೂರು ವರ್ಷಗಳ ಹಿಂದಿನಿಂದ ಇಲ್ಲಿಯವರೆಗೆ ಭಾರೀ ಜಿಗಿತದ ಏರಿಳಿತಗಳು ಕಂಡುಬಂದರೂ ಆಂತರ್ಯ ಮಾತ್ರ ಬೇರೆ ಬೇರೆ. ಮುಂದೆ ಓದಿ...

ಮೋದಿ ಸರ್ಕಾರ್ ಎಫೆಕ್ಟ್

ಮೋದಿ ಸರ್ಕಾರ್ ಎಫೆಕ್ಟ್

ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಮೂರು ವರ್ಷಗಳ ಹಿಂದೆ ಅಂದರೆ ಆರಂಭದ ದಿನ 2014ರ ಮೇ 26ರಂದು ಸೆನ್ಸೆಕ್ಸ್ ಸುಮಾರು 720 ಪಾಯಿಂಟುಗಳ ಏರಿಳಿತ ಪ್ರದರ್ಶಿಸಿದೆ. ಅದಕ್ಕೆ ಪೂರಕವಾಗಿ ಮಿಡ್ ಕ್ಯಾಪ್ ಇಂಡೆಕ್ಸ್ 492 ಪಾಯಿಂಟುಗಳ, ಸ್ಮಾಲ್ ಕ್ಯಾಪ್ ಇಂಡೆಕ್ಸ್ 520 ಪಾಯಿಯಿಂಟುಗಳ ಏರಿಳಿತ ಕಂಡರೆ ಬ್ಯಾಂಕೇಕ್ಸ್ 707 ಪಾಯಿಂಟು, ಮೆಟಲ್ ಇಂಡೆಕ್ಸ್ 703 ಪಾಯಿಂಟು, ಆಯಿಲ್ ಅಂಡ್ ಗ್ಯಾಸ್ 615 ಪಾಯಿಂಟು, ಪಿ ಎಸ್ ಯು ಇಂಡೆಕ್ಸ್ 648 ಪಾಯಿಂಟು, ಆಟೋ ಇಂಡೆಕ್ಸ್ 409 ಪಾಯಿಂಟು ಏರಿಳಿತಗಳ ಪ್ರದರ್ಶಿಸಿದರೆ ಕ್ಯಾಪಿಟಲ್ ಗೂಡ್ಸ್ ಇಂಡೆಕ್ಸ್ 1172 ಪಾಯಿಂಟುಗಳ ಏರಿಳಿತ ಪ್ರದರ್ಶಿಸಿದೆ. ಒಂದೇ ದಿನ ವಿವಿಧ ಇಂಡೆಕ್ಸ್ ಗಳು ಭಾರಿ ಏರಿಕೆ ಕಂಡಿರುವ ದಿನ ಅದಾಗಿತ್ತು. ಶುಕ್ರವಾರ 26 ರಂದು 31,028 ಪಾಯಿಂಟುಗಳಲ್ಲಿ ದಾಖಲೆಯ ಅಂತ್ಯ ಕಂಡಿರುವ ಸೆನ್ಸೆಕ್ಸ್ ನೊಂದಿಗೆ ಬ್ಯಾಂಕೆಕ್ಸ್ ಸಹ ಗರಿಷ್ಟ ಏರಿಕೆಯ ದಾಖಲೆ ನಿರ್ಮಿಸಿದೆ.

ಸೆನ್ಸೆಕ್ಸ್ ಏರಿಕೆ ಪ್ರಮಾಣ
 

ಸೆನ್ಸೆಕ್ಸ್ ಏರಿಕೆ ಪ್ರಮಾಣ

2014ರ ಮೇ 26ರಂದು ಸೆನ್ಸೆಕ್ಸ್ 24,716ರಲ್ಲಿದ್ದು ಅಂದಿನ ಮಾರ್ಕೆಟ್ ಕ್ಯಾಪಿಟಲೈಸೇಶನ್ ರೂ. 83.77 ಲಕ್ಷ ಕೋಟಿಯಷ್ಟಿತ್ತು. ಆದರೆ ಮೂರು ವರ್ಷಗಳಲ್ಲಿ ಸೆನ್ಸೆಕ್ಸ್ 6,312 ಪಾಯಿಂಟುಗಳ ಏರಿಕೆಯಿಂದ ಮಾರ್ಕೆಟ್ ಕ್ಯಾಪಿಟಲೈಸೇಶನ್ ರೂ. 41.86 ಲಕ್ಷ ಕೋಟಿ ಹೆಚ್ಚಿದೆ. ಅಂದರೆ ಮಾರ್ಕೆಟ್ ಕ್ಯಾಪಿಟಲೈಸೇಶನ್ ಶೇ. 50ರಷ್ಟು ಹೆಚ್ಚಾಗಿದ್ದು, ಸೆನ್ಸೆಕ್ಸ್ ಏರಿಕೆ ಪ್ರಮಾಣ ಮಾತ್ರ ಸುಮಾರು ಶೇ. 25ರಷ್ಟು ಮಾತ್ರವಿರುವುದು. ಪೇಟೆಯ ಚಟುವಟಿಕೆಯು ಬ್ರಾಡ್ ಬೇಸ್ ಆಗಿದ್ದು ಸೆನ್ಸೆಕ್ಸ್ ಹೊರಗಿನ ಷೇರುಗಳಲ್ಲಿಯೂ ಹೆಚ್ಚಿನ ಏರಿಕೆ ಪ್ರದರ್ಶಿತವಾಗಿದೆ ಎಂದಾಯಿತು.

ವಾಸ್ತವಿಕ ನಿರ್ಧಾರ ಉತ್ತಮ

ವಾಸ್ತವಿಕ ನಿರ್ಧಾರ ಉತ್ತಮ

ಸೆನ್ಸೆಕ್ಸ್ 2015ರ ಜನವರಿಯಲ್ಲಿ 30 ಸಾವಿರದ ಗಡಿ ದಾಟಿ ಹೊಸ ದಾಖಲೆ ನಿರ್ಮಿಸಿದ ನಂತರ ಮತ್ತೆ 22,494 ಪಾಯಿಂಟುಗಳಿಗೆ ಕುಸಿದು, ಅಲ್ಲಿಂದ ಚೇತರಿಕೆ ಕಂಡು ಹೊಸ ದಾಖಲೆಯ ಮಟ್ಟಕ್ಕೆ ಬರಲು ಸುಮಾರು ಒಂದೂಕಾಲು ವರ್ಷ ಸಮಯವನ್ನು ತೆಗೆದುಕೊಂಡಿದೆ. ಹೀಗೆ ಅಂಕಿ ಅಂಶಗಳು ವಿಭಿನ್ನತೆಯನ್ನು ಪ್ರದರ್ಶಿಸುವ ಈಗಿನ ದಿನಗಳಲ್ಲಿ ಚಟುವಟಿಕೆಯನ್ನು ಕೇವಲ ಸ್ಟಾಟಿಸ್ಟಿಕ್ಸ್ ಆಧಾರಿತವಾಗಿ ನಡೆಸದೆ ವಾಸ್ತವಾಂಶದ ಮೇಲೆ ನಿರ್ಧರಿಸುವುದು ಉತ್ತಮ.

ಏರಿಳಿತಗಳ ತಾತ್ಸಾರ ಸಲ್ಲ

ಏರಿಳಿತಗಳ ತಾತ್ಸಾರ ಸಲ್ಲ

ಪೇಟೆಯೊಳಗೆ ಫಂಡ್ ಇನ್ ಫ್ಲೋ ಹೆಚ್ಚಾಗಿರುವುದರಿಂದ ಬೇಡಿಕೆ ಹೆಚ್ಚಾದಂತೆ ಕಾಣುತ್ತದೆ. ಆದರೆ ಮಂಗಳವಾರ ಮತ್ತು ಬುಧವಾರದಂದು ಇದ್ದಂತಹ ಪರಿಸ್ಥಿತಿಯು ಮುಂದಿನ ದಿನಗಳಲ್ಲಿ ಮರುಕಳಿಸಲುಬಹುದು. ಡೆರಿವೇಟಿವ್ ಮಾರ್ಕೆಟ್ ಸೆಟ್ಲ್ ಮೆಂಟ್ ಸೈಕಲ್ ನ ಹೊಸ ದಿನವಾದ್ದರಿಂದ ಪ್ರೋತ್ಸಾಹದಾಯಕ ವಾತಾವರಣ ಮೂಡಿರಬಹುದು. ಪೇಟೆಯ ಆರೋಗ್ಯವನ್ನು ಕೇವಲ ಸೆನ್ಸೆಕ್ಸ್ ನ ಆಧಾರದ ಮೇಲೆ ಮಾಪನ ಮಾಡುವುದು ಸರಿಯಲ್ಲ. ಟ್ರೇಡ್ ಮಾಡುವ ಸಂದರ್ಭದಲ್ಲಿನ ಪರಿಸ್ಥಿತಿಯನ್ನು ಗಮನದಲ್ಲಿರಿಸಿ, ಅಂದಿನ ಸಂದರ್ಭದಲ್ಲಿ ಉತ್ತಮ ಕಂಪನಿಯ ಷೇರಿನ ಬೆಲೆ ಇಳಿಕೆಯಾಗಿರುವುದನ್ನು ಖರೀದಿಸಿದರೆ ಅಪಾಯದ ಮಟ್ಟ ಕಡಿಮೆಯಿರುತ್ತದೆ. ಏರುತ್ತಿರುವ ಷೇರುಗಳನ್ನು ಬೆನ್ನು ಹತ್ತುವುದು, ಇಳಿಕೆಯಲ್ಲಿರುವ ಷೇರುಗಳನ್ನು ತಾತ್ಸಾರ ಮಾಡುವುದು ಸರಿಯಲ್ಲ. ಪೇಟೆ ಗರಿಷ್ಟದಲ್ಲಿರುವ ಈ ಹಂತದಲ್ಲಿ ತ್ವರಿತ ಲಾಭ ಗಳಿಕೆಗೆ ಆಧ್ಯತೆ ನೀಡುವುದು ಅಗತ್ಯ. ಇದು ಬಂಡವಾಳದ, ಸ್ವಲ್ಪಮಟ್ಟಿನ, ಸುರಕ್ಷತೆಗೂ ಕಾರಣವಾಗುತ್ತದೆ.

English summary

Modi Sarkar Effect! The stock market today and three years ago?

History in stock Markets is only for guidance to take proper decision for investments. Diversified developments influence the price movements of shares. Before taking decision one should consider present status of the market conditions for safety of the investment.
Story first published: Saturday, May 27, 2017, 15:39 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X