For Quick Alerts
ALLOW NOTIFICATIONS  
For Daily Alerts

ಚಿನ್ನದ ಜಿಎಸ್ಟಿ ದರ 3%, ಷೇರುಪೇಟೆಯಲ್ಲಿ ಧನಾತ್ಮಕ ಬೆಳವಣಿಗೆ

ಚಿನ್ನದ ಮೇಲಿನ ಜಿಎಸ್ಟಿ ದರವನ್ನು ಕೇಂದ್ರ ಸರ್ಕಾರ ಅಂತಿಮಗೊಳಿಸಿದ್ದು, ಚಿನ್ನದ ಮೇಲೆ ಶೇ. 3ರಷ್ಟು ಜಿಎಸ್ಟಿ ದರ ವಿಧಿಸಲು ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಮಂಡಳಿ ನಿರ್ಧರಿಸಿದೆ.

By Siddu
|

ಶೇ. 3ಕ್ಕಿಂತ ಹೆಚ್ಚು 5ಕ್ಕಿಂತ ಕಡಿಮೆ ಜಿಎಸ್ಟಿ ದರ ನಿರೀಕ್ಷಿಸಲಾಗಿತ್ತು ಎಂದು ವಿಶ್ಲೇಷಕರು ಹೇಳಿದ್ದು, ರತ್ನಾಭರಣಗಳ ಮೇಲಿನ ಜಿಎಸ್ಟಿ ದರ ನಿರೀಕ್ಷೆಗಿಂತ ಕಡಿಮೆ ಇರುವುದರಿಂದ ಇದು ರತ್ನಾಭರಣ ಷೇರುಗಳ ಮೇಲೆ ಧನಾತ್ಮಕ ಪರಿಣಾಮ ಬೀರಿದೆ.

ಸಂಸ್ಕರಿಸಿದ ಆಹಾರ, ಸಿದ್ಧ ಉಡುಪು, ಪಾದರಕ್ಷೆ, ಬೀಡಿ ಸೇರಿದಂತೆ ಹಲವು ಉತ್ಪನ್ನಗಳ ಜಿಎಸ್ಟಿ ದರ ಅಂತಿಮಗೊಳಿಸಲಾಗಿದ್ದು, ಸಂಸ್ಕರಿಸಿದ ಆಹಾರಕ್ಕೆ ಶೇ. 5, ಬಿಸ್ಕತ್ ಮೇಲೆ ಶೇ. 18, ಬೀಡಿ ಶೇ. 28 ನಿಗದಿಪಡಿಸಲಾಗಿದೆ. 500ಕ್ಕಿಂತ ಕಡಿಮೆ ಬೆಲೆಯ ಪಾದರಕ್ಷೆಗಳ ಜಿಎಸ್ಟಿ ದರ ಶೇ. 5 ಹಾಗೂ ರೂ. 500ಕ್ಕಿಂತ ಹೆಚ್ಚಿನ ಬೆಲೆಯ ಪಾದರಕ್ಷೆಗಳ ಮೇಲೆ ಶೇ. 18ರಷ್ಟು ಜಿಎಸ್ಟಿ ದರ ನಿಗದಿಯಾಗಿದೆ.

ಚಿನ್ನದ ಜಿಎಸ್ಟಿ ದರ 3%, ಷೇರುಪೇಟೆಯಲ್ಲಿ ಧನಾತ್ಮಕ ಬೆಳವಣಿಗೆ

English summary

Gems and jewellery stocks surge on lower tax under GST

Shares of gems and jewellery stocks surged on Monday as analysts saw goods and services tax (GST) on the sector as lower-than-expected.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X