For Quick Alerts
ALLOW NOTIFICATIONS  
For Daily Alerts

ಜಿಎಸ್ಟಿ(GST) ಎಂದರೇನು? ಯಾಕೆ ಬೇಕು?

ಪ್ರಸ್ತುತ ದೇಶದಾದ್ಯಂತ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಕುರಿತಾಗಿ ಚರ್ಚೆಗಳು ಜೋರಾಗಿ ನಡೆದಿವೆ. ಬೇರೆ ಬೇರೆ ವಲಯಗಳಿಂದ ಗ್ರಾಹಕರು, ವಿಶ್ಲೇಷಕರು, ಪಂಡಿತರು ಮಿಶ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

By Siddu
|

ಪ್ರಸ್ತುತ ದೇಶದಾದ್ಯಂತ ಸರಕು ಮತ್ತು ಸೇವಾ ತೆರಿಗೆ(goods and services tax) ಕುರಿತಾಗಿ ಚರ್ಚೆಗಳು ಜೋರಾಗಿ ನಡೆದಿವೆ. ಬೇರೆ ಬೇರೆ ವಲಯಗಳಿಂದ ಗ್ರಾಹಕರು, ವಿಶ್ಲೇಷಕರು, ಪಂಡಿತರು ಮಿಶ್ರ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಏನಿದು ಜಿಎಸ್ಟಿ? ಇದರ ಪ್ರಯೋಜನಗಳೇನು? ಯಾಕೆ ವಿಧಿಸಬೇಕು? ಇದರ ಅಗತ್ಯವೇನು? ಇತ್ಯಾದಿ ಪ್ರಶ್ನೆಗಳನ್ನು ಪರಸ್ಪರ ಒಬ್ಬರು ಇನ್ನೊಬ್ಬರಿಗೆ ಕೇಳಿರುತ್ತೇವೆ. ಅಲ್ಲದೇ ಕೆಲ ಪ್ರಶ್ನೆಗಳು, ಗೊಂದಲಗಳು ನಮ್ಮ ಸುತ್ತ ಗಿರಕಿ ಹೊಡೆಯುತ್ತಲೇ ಇರುತ್ತವೆ.....

ಜಿಎಸ್‌ಟಿ(GST) ರೇಟ್ ಫಿಕ್ಸ್: 13 ಪ್ರಯೋಜನ ತಪ್ಪದೆ ಪಡೆಯಿರಿಜಿಎಸ್‌ಟಿ(GST) ರೇಟ್ ಫಿಕ್ಸ್: 13 ಪ್ರಯೋಜನ ತಪ್ಪದೆ ಪಡೆಯಿರಿ

ಏನಿದು ಜಿಎಸ್ಟಿ?

ಏನಿದು ಜಿಎಸ್ಟಿ?

ಸರಕು ಮತ್ತು ಸೇವೆಗಳ (ತಯಾರಿ, ಮಾರಾಟ, ಬಳಕೆ) ಮೇಲೆ ವ್ಯಾಪಕ ಮತ್ತು ಸಮಗ್ರ ಆಧಾರಿತ ತೆರಿಗೆಯನ್ನು ವಿಧಿಸುವ ವ್ಯವಸ್ಥೆ. ಸರಕಿನ ತಯಾರಿಕೆ ಹಂತದಿಂದ ಪ್ರಾರಂಭಿಸಿ ಅಂತಿಮ ಬಳಕೆಯ ಎಲ್ಲಾ ಹಂತದವರೆಗೆ ಈ ತೆರಿಗೆಯನ್ನು ವಿಧಿಸಲಾಗುವುದು. ಜಿಎಸ್ಟಿ ರಾಷ್ಟ್ರಮಟ್ಟದ ತೆರಿಗೆ ವ್ಯವಸ್ಥೆಯಾಗಿದೆ.

ಜಿಎಸ್ಟಿ ಉದ್ದೇಶ?

ಜಿಎಸ್ಟಿ ಉದ್ದೇಶ?

- ರಾಜ್ಯಗಳು ವಿವಿಧ ತೆರಿಗೆಗಳನ್ನು ವಿಧಿಸುವ ಬಹು ತೆರಿಗೆ ಪದ್ಧತಿಯನ್ನು ರದ್ದುಪಡಿಸುವುದು
- ದೇಶದಾದ್ಯಂತ ಏಕರೂಪದ ತೆರಿಗೆ ವ್ಯವಸ್ಥೆ ಜಾರಿಗೆ ತರುವುದು
- ಇಡೀ ದೇಶದಲ್ಲಿ ಒಂದೇ ರೀತಿಯ ಅರ್ಥವ್ಯವಸ್ಥೆ ರೂಪಿಸುವುದು. ಒಂದು ದೇಶ, ಒಂದು ತೆರಿಗೆ ಇದರ ಧ್ಯೇಯ.

ಜಿಎಸ್ಟಿಯೊಳಗೆ ಅಂತರ್ಗತಗೊಳ್ಳಲಿರುವ ತೆರಿಗೆಗಳು

ಜಿಎಸ್ಟಿಯೊಳಗೆ ಅಂತರ್ಗತಗೊಳ್ಳಲಿರುವ ತೆರಿಗೆಗಳು

ಕೇಂದ್ರ ಸರ್ಕಾರದ ತೆರಿಗೆಗಳು
- ಕೇಂದ್ರೀಯ ಅಬಕಾರಿ ಸುಂಕ
- ಅಬಕಾರಿ ಸಂ(ಔಷಧೀಯ ಮತ್ತು ಟಾಯ್ಲೆಟ್ ತಯಾರಿಕೆಗಳ ಮೇಲೆ)
- ಹೆಚ್ಚುವರಿ ಅಬಕಾರಿ ಸುಂಕ(ಜವಳಿ ಉತ್ಪನ್ನಗಳು)
- ಹೆಚ್ಚುವರಿ ಸೀಮಾ ಶುಲ್ಕ
- ವಿಶೇಷ ಹೆಚ್ಚುವರಿ ಸೀಮಾ ಶುಲ್ಕ
- ಸೇವಾ ತೆರಿಗೆ
- ಸರ್ಚಾಜ್ ಮತ್ತು ಸೇಸ್

ರಾಜ್ಯ ಸರ್ಕಾರ
- ರಾಜ್ಯದ ಮೌಲ್ಯವರ್ಧನೆ ತೆರಿಗೆ(ವ್ಯಾಟ್)
- ಕೇಂದ್ರ ಮಾರಾಟ ತೆರಿಗೆ
- ಐಷಾರಾಮಿ, ಮನರಂಜನಾ ತೆರಿಗೆ
- ಪ್ರವೇಶ ತೆರಿಗೆ(ಎಲ್ಲಾ ವಿಧ)
- ಜಾಹೀರಾತು ತೆರಿಗೆ
- ಖರೀದಿ ತೆರಿಗೆ ಲಾಟರಿ, ಬೆಟ್ಟಿಂಗ್, ಜೂಜಾಟ
- ರಾಜ್ಯ ಸರ್ಕಾರದ ಸರ್ಚಾಜ್, ಸೆಸ್

ಪ್ರಯೋಜನಗಳು

ಪ್ರಯೋಜನಗಳು

- ಎಲ್ಲ ಪರೋಕ್ಷ ತೆರಿಗೆಗಳು ಜಿಎಸ್ಟಿಯಲ್ಲಿ ಅಂತರ್ಗತಗೊಳ್ಳುತ್ತವೆ.
- ಜನರಲ್ಲಿ ಸ್ವಯಂ ಪ್ರೇರಿತ ತೆರಿಗೆ ಪಾವತಿಗೆ ಪ್ರೋತ್ಸಾಹ ನೀಡುತ್ತದೆ.
- ಉದ್ಯಮಗಳು ತೆರಿಗೆ ಪಾವತಿಸುವ ವ್ಯವಸ್ಥೆ ಸರಳವಾಗುತ್ತದೆ. ಪ್ರತಿಯೊಬ್ಬರಲ್ಲೂ ತೆರಿಗೆ ಬದ್ಧತೆ ಹೆಚ್ಚುತ್ತದೆ.
- ಉತ್ಪಾದನೆ ಮತ್ತು ವಿತರಣೆ ಹಂತಗಳಲ್ಲಿ ಪಾವತಿಸಿದ ತೆರಿಗೆ ಪ್ರಮಾಣವನ್ನು ಅಂತಿಮ ಹಂತದಲ್ಲಿ ಕಳೆಯಲು ಅವಕಾಶ ಇದೆ. (Read more: GST)

English summary

What is GST or goods and services tax?

The GST is a Value added Tax (VAT) is proposed to be a comprehensive indirect tax levy on manufacture, sale and consumption of goods as well as services at the national level. It will replace all indirect taxes levied on goods and services by the Indian Central and state governments.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X