For Quick Alerts
ALLOW NOTIFICATIONS  
For Daily Alerts

ಜಿಎಸ್ಟಿ: 66 ಅಗತ್ಯ ವಸ್ತುಗಳ ತೆರಿಗೆ ದರ ಕಡಿತ

ಭಾರತದ ಅತ್ಯಂತ ವಿಸ್ತೃತ ಪರೋಕ್ಷ ತೆರಿಗೆ ಸುಧಾರಣೆ ಸರಕು ಮತ್ತು ಸೇವಾ ತೆರಿಗೆ(GST) ಜುಲೈ 1ರಿಂದ ಜಾರಿಗೆ ಬರಲಿದೆ.

By Siddu
|

ಭಾರತದ ಅತ್ಯಂತ ವಿಸ್ತೃತ ಪರೋಕ್ಷ ತೆರಿಗೆ ಸುಧಾರಣೆ ಸರಕು ಮತ್ತು ಸೇವಾ ತೆರಿಗೆ(GST) ಜುಲೈ 1ರಿಂದ ಜಾರಿಗೆ ಬರಲಿದೆ. ಭಾನುವಾರ ಜೂನ್ 11ರಂದು ನಡೆದ ಜಿಎಸ್ಟಿ ಮೀಟಿಂಗ್ ನಲ್ಲಿ 66 ಅಗತ್ಯ ಪದಾರ್ಥಗಳ ದರಗಳನ್ನು ಪರಿಷ್ಕರಿಸಲಾಗಿದೆ. ಜಿಎಸ್ಟಿ(GST) ಎಂದರೇನು? ಯಾಕೆ ಬೇಕು?

 

ಯಾವುದಕ್ಕೆ ತೆರಿಗೆ ಕಡಿಮೆ

ಯಾವುದಕ್ಕೆ ತೆರಿಗೆ ಕಡಿಮೆ

ಆಹಾರ ಪದಾರ್ಥ, ಎಲೆಕ್ಟ್ರಾನಿಕ್ ಮತ್ತು ಇನ್ನಿತರ ವಸ್ತುಗಳ ತೆರಿಗೆ ಕಡಿಮೆ ಮಾಡಲಾಗಿದೆ. ಉಪ್ಪಿನಕಾಯಿ, ಸಾಸಿವೆ ಸಾಸ್, ಮಧುಮೇಹದ ಚಿಕಿತ್ಸೆಗೆ ಬಳಸುವ ಇನ್ಸುಲಿನ್, ಎಲೆಕ್ಟ್ರಾನಿಕ್ ವಸ್ತುಗಳಾದ ಪ್ರಿಂಟರ್ ಮತ್ತು ರೂ. 100ಕ್ಕಿಂತ ಕಡಿಮೆ ದರದ ಸಿನಿಮಾ ಟಿಕೆಟ್ ಸೇರಿದಂತೆ ಒಟ್ಟು 66 ವಸ್ತುಗಳ ತೆರಿಗೆ ದರಗಳನ್ನು ಕಡಿಮೆ ಮಾಡಲಾಗಿದೆ.

ತೆರಿಗೆ ದರ ಎಷ್ಟು?

ತೆರಿಗೆ ದರ ಎಷ್ಟು?

ಇನ್ಸುಲಿನ್ ಮತ್ತು ಅಗರಬತ್ತಿ ಮೇಲಿನ ತೆರಿಗೆ ದರವನ್ನು ಶೇ. 18ರಿಂದ 5ಕ್ಕೆ ಇಳಿಕೆ ಮಾಡಲಾಗಿದೆ. ಶಾಲಾ ಬ್ಯಾಗುಗಳ ತೆರಿಗೆ ದರ ಶೇ. 28 ಇರಲಿದೆ. ರೂ. 100ಕ್ಕಿಂತ ಕಡಿಮೆ ದರದ ಸಿನಿಮಾ ಟಿಕೆಟ್ ಗಳ ಮೇಲೆ ಶೇ. 18ರಷ್ಟು ತೆರಿಗೆ ವಿಧಿಸಲಾಗಿದೆ. ರೂ. 100ರ ಮೇಲಿನ ಟಿಕೇಟ್ ಗಳ ಮೇಳೆ ಶೇ. 28ರಷ್ಟು ತೆರಿಗೆ ವಿಧಿಸಲಾಗುವುದು. ಉಪ್ಪಿನಕಾಯಿ, ಸಾಸಿವೆ ಸಾಸ್ ಮೇಲೆ ಶೇ. 18ರ ಬದಲಾಗಿ ಶೇ. 12ರಷ್ಟು ತೆರಿಗೆ ಅಂತಿಮಗೊಳಿಸಲಾಗಿದೆ.

ವ್ಯಾಪಾರಿಗಳಿಗೇನು ಲಾಭ?
 

ವ್ಯಾಪಾರಿಗಳಿಗೇನು ಲಾಭ?

ವ್ಯಾಪಾರಿಗಳು, ತಯಾರಕರು, ರೆಸ್ಟೋರೆಂಟ್ ಮಾಲೀಕರು ರೂ. 75 ಲಕ್ಷ ಮತ್ತು ಅದಕ್ಕಿಂತ ಕಡಿಮೆ ವಹಿವಾಟು ನಡೆಸಿದರೆ ಶೇ. 1, 2 ಮತ್ತು 5ರ ದರದಲ್ಲಿ ತೆರಿಗೆ ಪಾವತಿಸುವ ಯೋಜನೆಯ ಆಯ್ಕೆಯ ಅವಕಾಶ ನೀಡಲಾಗಿದೆ. ಈ ಹಿಂದೆ ರೂ. 50 ಲಕ್ಷ ವಹಿವಾಟಿನ ಮಿತಿಯನ್ನು ವಿಧಿಸಲಾಗಿತ್ತು. ಜಿಎಸ್ಟಿ ಮಹಿಮೆ..! ಮಾರುತಿ, ಹುಂಡೈ, ಜಾಗ್ವಾರ್, ಹೊಂಡಾ, ಫೊರ್ಡ್, ಆಡಿ, ಟಾಟಾ ಕಾರುಗಳ ಮೇಲೆ ಭಾರೀ ಡಿಸ್ಕೌಂಟ್!!

English summary

GST Council revises rates for 66 items

Goods and Services Tax (GST) Council on Sunday revised the rates of 66 items from what was originally stated in the four-slab indiret tax structure.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X