For Quick Alerts
ALLOW NOTIFICATIONS  
For Daily Alerts

ಆನ್ಲೈನ್ ಮೂಲಕ ಮ್ಯೂಚುವಲ್ ಫಂಡ್(SIP) ಪ್ರಾರಂಭಿಸುವುದು ಹೇಗೆ?

ಇಕ್ವಿಟಿ ಮ್ಯೂಚುವಲ್ ಫಂಡ್ ಯೋಜನೆಯಲ್ಲಿ ಸಿಸ್ಟಮೆಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್(ಸಿಪ್) ಪ್ರಾರಂಭಿಸಲು ಯೋಚನೆ ಮಾಡುತ್ತೇವೆ. ಯಾವುದೋ ಕಚೇರಿಗೆ ತೆರಳಿ ಹೂಡಿಕೆ ನಿಯಮ, ಕಾಗದ ವ್ಯವಹಾರ ನಿರ್ವಹಿಸುವ ಬಗ್ಗೆ ತಲೆಕೆಡಿಸಿಕೊಂಡಿರುತ್ತೇವೆ.

By Siddu
|

ಇಕ್ವಿಟಿ ಮ್ಯೂಚುವಲ್ ಫಂಡ್ ಯೋಜನೆಯಲ್ಲಿ ಸಿಸ್ಟಮೆಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್(ಸಿಪ್) ಪ್ರಾರಂಭಿಸಲು ಯೋಚನೆ ಮಾಡುತ್ತೇವೆ. ಯಾವುದೋ ಕಚೇರಿಗೆ ತೆರಳಿ ಹೂಡಿಕೆ ನಿಯಮ, ಕಾಗದ ವ್ಯವಹಾರ ನಿರ್ವಹಿಸುವ ಬಗ್ಗೆ ತಲೆಕೆಡಿಸಿಕೊಂಡಿರುತ್ತೇವೆ. ಆದರೆ ಈಗ ಅದರ ಬಗ್ಗೆ ತೆಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಇದೀಗ ನಿಮ್ಮ ಮನೆ ಅಥವಾ ಆಫೀಸ್ ನಲ್ಲಿ ಕುಳಿತು ಆನ್ಲೈನ್ ಮೂಲಕ ಸಿಪ್ ಕಾರ್ಯಗಳನ್ನು ಸುಲಭಗೊಳಿಸಬಹುದು. ಮ್ಯೂಚುವಲ್ ಫಂಡ್ಸ್ ವಿಧಗಳು ಯಾವುವು?

ಕೆವೈಸಿ ಅಗತ್ಯ

ಕೆವೈಸಿ ಅಗತ್ಯ

ಸಿಸ್ಟಮೆಟಿಕ್ ಇನ್ವೆಸ್ಟ್ಮೆಂಟ್ ಪ್ಲಾನ್(ಸಿಪ್) ಪ್ರಾರಂಭಿಸುವ ಮುನ್ನ ನಿಮ್ಮ ಗ್ರಾಹಕ ತಿಳಿಯಿರಿ(ಕೆವೈಸಿ) ವಿವರ ಅಗತ್ಯವಾಗಿ ನೀಡಬೇಕು. ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಲು ಕೆವೈಸಿ ಕಡ್ಡಾಯ.

ದಾಖಲಾತಿ

ದಾಖಲಾತಿ

ನೀವು ಗುರುತಿನ ಪುರಾವೆ, ವಿಳಾಸ ದಾಖಲಾತಿ, ಭಾವಚಿತ್ರವನ್ನು ಒದಗಿಸಬೇಕಾಗುತ್ತದೆ. ಇನ್-ಪರ್ಸನ್ ವೆರಿಫಿಕೇಶನ್(IPV) ಮಾಡಬೇಕಾಗುತ್ತದೆ. IPV ಪ್ರಕ್ರಿಯೆ ಪೂರ್ಣಗೊಳಿಸಲು ಸಂಬಂಧಪಟ್ಟ ಸಂಸ್ಥೆಗಳು ವಿಡಿಯೋ ಕಾಲ್ ಮೂಲಕ ಪಿಸಿಕಲ್ ಎಕ್ಸಿಸ್ಟೆನ್ಸ್ ಬಯಸಬಹುದು. ಇ-ಕೆವೈಸಿ ಮೂಲಕ ವಿದ್ಯುನ್ಮಾನಾತ್ಮಕವಾಗಿ ಈ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬಹುದು. ಬಿರ್ಲಾ ಸನ್ ಲೈಫ್, ಕ್ವಾಂಟಮ್ ಇತ್ಯಾದಿ ಸಂಸ್ಥೆಗಳು ವೆಬ್ಸೈಟ್ ಸೌಲಭ್ಯ ಕಲ್ಪಿಸಿದ್ದು, ekyc ಲಿಂಕ್ ಮೇಲೆ ಕ್ಲಿಕ್ ಮಾಡಿ ಮುನ್ನಡೆಯಬೇಕು.

ಮೂಲ ಮಾಹಿತಿ

ಮೂಲ ಮಾಹಿತಿ

ನಿಮ್ಮ ವೈಯಕ್ತಿಕ ಸಂಬಂಧಿತ ಮಾಹಿತಿಯನ್ನು ಆನ್ಲೈನ್ ಮೂಲಕ ತುಂಬಾ ಪ್ರಾಮಾಣಿಕವಾಗಿ ಯಾವುದೇ ತಪ್ಪುಗಳಿಲ್ಲದೆ ತುಂಬಬೇಕಾಗುತ್ತದೆ. ಇದು ನಿಮ್ಮ ಹೆಸರು, ಜನ್ಮ ದಿನಾಂಕ, ವಿಳಾಸ, ಮೊಬೈಲ್ ನಂಬರ್ ಒಳಗೊಂಡಿರುತ್ತದೆ.

ಡಾಕ್ಯುಮೆಂಟ್ ಅಪ್ ಲೋಡ್ ಮಾಡಿ

ಡಾಕ್ಯುಮೆಂಟ್ ಅಪ್ ಲೋಡ್ ಮಾಡಿ

ನಂತರದ ಹಂತದಲ್ಲಿ ಸ್ಕ್ಯಾನ್ ಮಾಡಿರುವ ನಿಮ್ಮ ಪ್ಯಾನ್ ಕಾರ್ಡ್ ಮತ್ತು ವಿಳಾಸ ದಾಖಲಾತಿಯ ಪ್ರತಿಗಳನ್ನು ಅಪ್ಲೋಡ್ ಮಾಡಬೇಕು.

ಆಧಾರ್ ಆಧಾರಿತ ಇಕೆವೈಸಿ

ಆಧಾರ್ ಆಧಾರಿತ ಇಕೆವೈಸಿ

ಆಧಾರ್ ಮೂಲಕ ಈ ಮೇಲಿನ ಎಲ್ಲಾ ಪ್ರಕ್ರಿಯೆಗಳನ್ನು ಸರಳಗೊಳಿಸಬಹುದು. ಆಧಾರ್ ನಂಬರ್ ನಮೂದಿಸಿ ನಂತರ ಯುಐಎಡಿಐ ಕಳುಹಿಸುವ ಓಟಿಪಿ(one time password) ಮೂಲಕ ಯುಐಎಡಿಐ ಡೇಟಾಬೇಸ್ ಲಭ್ಯವಾಗುತ್ತದೆ. ಆಧಾರ್ ಮೂಲಕ ಇಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿದರೆ ವಿಡಿಯೊ ಕಾಲ್ ಮೂಲಕ IPV ಅಗತ್ಯವಿಲ್ಲ.

ಕೊನೆ ಹಂತ

ಕೊನೆ ಹಂತ

ಸಿಪ್ ಹೊಸ ಖಾತೆಯನ್ನು ಪಡೆಯಲು ನಿಮ್ಮ ಫಂಡ್ ಹೌಸ್ ವೆಬ್ಸೈಟ್ ಗೆ ಬೇಟಿ ನೀಡಿ, ಹೊಸ ಖಾತೆಗಾಗಿ ನೋಂದಣಿ ಲಿಂಕ್ ಹುಡುಕಿ. ಇದು ಸಾಮಾನ್ಯವಾಗಿ ಲಾಗಿನ್ ಬಟನ್ ಕೆಳಗಡೆ ಇರುತ್ತದೆ. ಈ ಖಾತೆ ಆನ್ಲೈನ್ ಮೂಲಕ ವ್ಯವಹಾರ ನಡೆಸಲು ಸಹಕಾರಿಯಾಗುತ್ತದೆ. ನಿಮ್ಮ ಚೆಕ್ ಬುಕ್, ಮೊಬೈಲ್ ನಂಬರ್, ಬ್ಯಾಂಕ್ ಖಾತೆ ಸಂಖ್ಯೆಗಳನ್ನು ನಮೂದಿಸಿ, ನಂತರ ಓಟಿಪಿ ಮೂಲಕ ಪ್ರಕ್ರಿಯೆ ಅಂತಿಮಗೊಳಿಸಿ.
ಒಂದು ಬಾರಿ ಖಾತೆ ತೆರೆದ ನಂತರ ಲಾಗಿನ್ ಆಗಿ ಮ್ಯೂಚುವಲ್ ಫಂಡ್ ಯೋಜನೆ ಆಯ್ಕೆ ಮಾಡಿ. ಸಿಪ್ ದಿನಾಂಕ ಆಯ್ಕೆ ಮಾಡಿ ನಂತರ ಸಬ್ಮಿಟ್ ಮಾಡಿ. (Mutual Funds)

English summary

How to start a Systematic Investment Plan online

he first thing you need to do before starting an SIP is fulfilling the Know Your Customer (KYC) requirement. KYC is a must to invest in mutual funds.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X