For Quick Alerts
ALLOW NOTIFICATIONS  
For Daily Alerts

ಬ್ಯಾಂಕ್ ಖಾತೆಗಳಿಗೆ ಆಧಾರ್ ಕಡ್ಡಾಯ, ಹೊಸ ನಿಯಮದಲ್ಲಿ ಮತ್ತೇನಿದೆ..?

ಕೇಂದ್ರ ಸರ್ಕಾರ ಅನೇಕ ಹೊಸ ಯೋಜನೆಗಳಿಗೆ ಆಧಾರ್ ಕಡ್ಡಾಯ ಮಾಡುತ್ತಿದ್ದು, ಇದೀಗ ಬ್ಯಾಂಕು ವಹಿವಾಟುಗಳಿಗೆ ಆಧಾರ್ ಸಂಖ್ಯೆ ಕಡ್ಡಾಯ ಮಾಡುತ್ತಿದೆ. ರೂ. 50 ಸಾವಿರ ಮತ್ತು ಅದಕ್ಕಿಂತ ಹೆಚ್ಚಿನ ವ್ಯವಹಾರ ನಡೆಸಲು ಆಧಾರ್ ನಮೂದಿಸುವುದು ಕಡ್ಡಾಯ.

By Siddu
|

ಕೇಂದ್ರ ಸರ್ಕಾರ ಅನೇಕ ಹೊಸ ಯೋಜನೆಗಳಿಗೆ ಆಧಾರ್ ಕಡ್ಡಾಯ ಮಾಡುತ್ತಿದ್ದು, ಇದೀಗ ಬ್ಯಾಂಕು ವಹಿವಾಟುಗಳಿಗೆ ಆಧಾರ್ ಸಂಖ್ಯೆ ಕಡ್ಡಾಯ ಮಾಡುತ್ತಿದೆ.

ಆಧಾರ್ ಸಂಖ್ಯೆ ಪ್ರತಿ ಭಾರತೀಯ ನಾಗರಿಕರ ಗುರುತು ಹಾಗೂ ಹೆಮ್ಮೆಯ ಪ್ರತೀಕವಾಗಿ ಮಾರ್ಪಡುತ್ತಿದೆ. ಹಲವು ಸೇವೆಗಳ ಆಧಾರ ಸ್ಥಂಭವಾಗಿ ಹಾಗೂ ಅಪಾರ ಪ್ರಯೋಜನಗಳಗಳನ್ನು ಪಡೆಯುವ ಸೇತುವೆಯಾಗಿ ಆಧಾರ್ ಪ್ರಾಮುಖ್ಯತೆ ಪಡೆದಿದೆ. ದೇಶದ ಯಾವುದೇ ಮೂಲೆಗೂ ಹೋದರೂ ವಿಳಾಸ ಮತ್ತು ಗುರುತಿನ ದಾಖಲಾತಿಯಾಗಿ ಪ್ರಮುಖ ಪಾತ್ರ ವಹಿಸುತ್ತಿದೆ. ಆಧಾರ್ ಲಿಂಕ್ ಮಾಡಿಲ್ಲವೆ? ಹಾಗಿದ್ದರೆ ಈ ಸೌಲಭ್ಯಗಳು ಸಿಗಲ್ಲ

ನೂತನ ಬ್ಯಾಂಕ್ ಖಾತೆ

ನೂತನ ಬ್ಯಾಂಕ್ ಖಾತೆ

ಹೊಸದಾಗಿ ಬ್ಯಾಂಕು ಖಾತೆ ತೆರೆಯಲು ಬಯಸುವ ಗ್ರಾಹಕರು ಆಧಾರ್ ಸಂಖ್ಯೆ ಕಡ್ಡಾಯವಾಗಿ ಒದಗಿಸಬೇಕು. ಜತೆಗೆ ರೂ. 50 ಸಾವಿರ ಮತ್ತು ಅದಕ್ಕಿಂತ ಹೆಚ್ಚಿನ ಹಣಕಾಸು ವ್ಯವಹಾರ ನಡೆಸಲು ಆಧಾರ್ ನಂಬರ್ ನಮೂದಿಸುವುದು ಕಡ್ಡಾಯ ಎಂದು ಸರ್ಕಾರ ಹೇಳಿದೆ.

ಹಳೆ ಬ್ಯಾಂಕು ಖಾತೆ ಸ್ಥಗಿತ

ಹಳೆ ಬ್ಯಾಂಕು ಖಾತೆ ಸ್ಥಗಿತ

ಹೌದು. ಹೊಸ ಬ್ಯಾಂಕ್ ಖಾತೆಗಳಿಗೆ ಆಧಾರ್ ಸಂಖ್ಯೆ ಒದಗಿಸುವಂತೆ, ಈಗಾಗಲೇ ಬ್ಯಾಂಕ್ ಖಾತೆಗಳನ್ನು ಹೊಂದಿರುವವರು ಕೂಡ ಡಿಸೆಂಬರ್ 31, 2017ರ ಒಳಗಾಗಿ ಸಂಬಂಧಿಸಿದ ಬ್ಯಾಂಕುಗಳಿಗೆ ಆಧಾರ್ ಸಂಖ್ಯೆ ಸಲ್ಲಿಸಬೇಕು. ಇಲ್ಲದಿದ್ದರೆ ಅಂತಹ ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಲಾಗುವುದು.

ಪ್ಯಾನ್ ನೊಂದಿಗೆ ಆಧಾರ್ ಕಡ್ಡಾಯ

ಪ್ಯಾನ್ ನೊಂದಿಗೆ ಆಧಾರ್ ಕಡ್ಡಾಯ

ಕೇಂದ್ರ ನಿಯಮಾನುಸಾರ ಇನ್ನು ಮುಂದೆ ರೂ. 50 ಸಾವಿರ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಆರ್ಥಿಕ ವಹಿವಾಟು ನಡೆಸುವಂತಹ ವ್ಯಕ್ತಿಗಳು, ಕಂಪೆನಿ ಮತ್ತು ಪಾಲುದಾರಿಕೆ ಕಂಪನಿಗಳು ಪ್ಯಾನ್ ನಂಬರ್ ನೊಂದಿಗೆ ಆಧಾರ್ ಸಂಖ್ಯೆ ಕಡ್ಡಾಯವಾಗಿ ನಮೂದಿಸಬೇಕು ಎಂದು ತಿಳಿಸಿದೆ.

6 ತಿಂಗಳ ಗಡುವು

6 ತಿಂಗಳ ಗಡುವು

 ಆಧಾರ್ ಕಾರ್ಡ್ ನಲ್ಲಿ ತಪ್ಪುಗಳಿದ್ದರೆ ಸರಿಪಡಿಸುವುದು ಹೇಗೆ? ಆಧಾರ್ ಕಾರ್ಡ್ ನಲ್ಲಿ ತಪ್ಪುಗಳಿದ್ದರೆ ಸರಿಪಡಿಸುವುದು ಹೇಗೆ?

ಪ್ಯಾನ್‌, ಆಧಾರ್ ಇಲ್ಲದಿದ್ದರೂ ಖಾತೆ ತೆರೆಯಲು ಸಾಧ್ಯ!

ಪ್ಯಾನ್‌, ಆಧಾರ್ ಇಲ್ಲದಿದ್ದರೂ ಖಾತೆ ತೆರೆಯಲು ಸಾಧ್ಯ!

ಹಲವು ಬಾರಿ ಅನೇಕ ಗ್ರಾಹಕರ ಬಳಿ ಪ್ಯಾನ್‌ ಮತ್ತು ಆಧಾರ್ ಕಾರ್ಡ್ ಇರುವುದಿಲ್ಲ. ಅಂತಹ ಸಂದರ್ಭದಲ್ಲೂ ಬ್ಯಾಂಕುಗಳು ಖಾತೆ ತೆರೆಯಲು ಅವಕಾಶ ನೀಡಬೇಕು. ಆದರೆ ಅಂತಹ ಗ್ರಾಹಕರು ತಾವು ಆಧಾರ್ ಮತ್ತು ಪ್ಯಾನ್‌ ಕಾರ್ಡ್ ಪಡೆಯಲು ಅರ್ಹತೆ ಹೊಂದಿರುವುದನ್ನು ಬ್ಯಾಂಕಿಗೆ ಮನವರಿಕೆ ಮಾಡಿಸಬೇಕು. ಇಲ್ಲದಿದ್ದರೆ ಆಧಾರ್, ಪ್ಯಾನ್‌ ಗಾಗಿ ನೋಂದಣಿ ಮಾಡಿಕೊಂಡಿರುವ ದಾಖಲೆ ಒದಗಿಸಬೇಕು.

ಕೆವೈಸಿ ಸಂಗ್ರಹ

ಕೆವೈಸಿ ಸಂಗ್ರಹ

ಇನ್ನುಮುಂದೆ ಬ್ಯಾಂಕು ಮತ್ತು ಹಣಕಾಸು ಸಂಸ್ಥೆಗಳು ತಮ್ಮ ಗ್ರಾಹಕರ ಗುರುತಿನ ವಿವರಗಳನ್ನು(know you customer) ತಪ್ಪದೆ ದಾಖಲಿಸಿ ಸಂಗ್ರಹಿಸಿಕೊಳ್ಳಬೇಕು. ಅಗತ್ಯವಿರುವ ಸಂದರ್ಭಗಳಲ್ಲಿ ಈ ಮಾಹಿತಿಯನ್ನು ಹಣಕಾಸು ಇಲಾಖೆಯ ಗುಪ್ತಚರ ವಿಭಾಗಕ್ಕೆ ಸಲ್ಲಿಸುವುದು ಕಡ್ಡಾಯ ಎಂದು ತಿದ್ದುಪಡಿ ನಿಯಮದಲ್ಲಿ ಉಲ್ಲೇಖಿಸಲಾಗಿದೆ.

ಸಣ್ಣ ಖಾತೆದಾರರಿಗೂ ನಿಯಮ

ಸಣ್ಣ ಖಾತೆದಾರರಿಗೂ ನಿಯಮ

ಹೊಸ ನಿಯಮಾನುಸಾರ ಸಣ್ಣ ಖಾತೆದಾರರಿಗೂ ಕಟ್ಟುನಿಟ್ಟಿನ ನಿಯಮ ಅನ್ವಯವಾಗಲಿದೆ. ನಿಮ್ಮ ಗ್ರಾಹಕರನ್ನು ಅರಿಯಿರಿ(kyc) ದಾಖಲೆ ಇಲ್ಲದೆ ತೆರೆಯಲಾದ ಸಣ್ಣ ಖಾತೆದಾರರ ಖಾತೆಗಳ ಮೇಲೂ ಇನ್ನು ಮುಂದೆ ನೀಗಾ ಇಡಲಾಗುವುದು. ಹೊಸ ನಿಯಮದನ್ವಯ ರೂ. 50 ಸಾವಿರಕ್ಕಿಂತ ಹೆಚ್ಚಿನ ಮೊತ್ತ ಇರಬಾರದು ಎಂದು ಹೇಳಿದೆ.

ಅಕ್ರಮ ವಹಿವಾಟುಗಳ ಮೇಲೆ ಖಡಕ್ ನೀಗಾ

ಅಕ್ರಮ ವಹಿವಾಟುಗಳ ಮೇಲೆ ಖಡಕ್ ನೀಗಾ

ಭ್ರಷ್ಟಾಚಾರ, ಅಕ್ರಮ, ಭಯೋತ್ಪಾದಕ ಚಟುವಟಿಕೆ ಸೇರಿದಂತೆ ಕಾನೂನುಬಾಹಿರ ನಡೆಸಲಾಗುವ ಚಟುವಟಿಕೆಗಳಿಗೆ ಈ ಖಡಕ್ ನಿಯಮ ಅನ್ವಯವಾಗಲಿದೆ. ಅಕ್ರಮ ಹಣ ವರ್ಗಾವಣೆ ಮಾಡಿರುವಂತ ಶಂಕೆ ಅಥವಾ ಮಾಹಿತಿ ದೊರೆತರೆ ಕೂಡಲೇ ಅಂತಹ ಖಾತೆದಾರರನ್ನು ಕರೆಯಿಸಿ ವಿಚಾರಣೆಗೆ ಒಳಪಡಿಸಲಾಗುವುದು. ಜತೆಗೆ ಹಣದ ಮೂಲದ ದಾಖಲೆ ಒದಗಿಸುವಂತೆ ಸೂಚಿಸಲಾಗುವುದು ಎಂದು ಹೊಸ ತಿದ್ದುಪಡಿ ನಿಯಮ ಹೇಳುತ್ತದೆ. ಈ 20 ವ್ಯವಹಾರಗಳಿಗೆ ಪಾನ್ ಕಾರ್ಡ್ ಕಡ್ಡಾಯ

English summary

Aadhaar now mandatory for bank accounts

Government has made Aadhaar mandatory for opening new accounts. It has noted that all existing bank accounts will have to be linked with Aadhaar number by December 31, 2017 or else they will be declared invalid.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X