For Quick Alerts
ALLOW NOTIFICATIONS  
For Daily Alerts

ಜಿಎಸ್ಟಿ ಎಫೆಕ್ಟ್: ರೈಲು ದರಗಳಲ್ಲಿ ಏರಿಕೆ

ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಜುಲೈ 1ರಿಂದ ಜಾರಿಯಾಗುತ್ತಿರುವ ಪರಿಣಾಮ ರೈಲು ಪ್ರಯಾಣಿಕರು ಎಸಿ ಮತ್ತು ಪ್ರಥಮ ದರ್ಜೆ ಪ್ರಯಾಣಗಳ ಮೇಲೆ ಸಲ್ಪ ಹೆಚ್ಚು ಮೊತ್ತ ಪಾವತಿಸಬೇಕಾಗುತ್ತದೆ.

By Siddu
|

ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ) ಜುಲೈ 1ರಿಂದ ಜಾರಿಯಾಗುತ್ತಿರುವ ಪರಿಣಾಮ ರೈಲು ಪ್ರಯಾಣಿಕರು ಎಸಿ ಮತ್ತು ಪ್ರಥಮ ದರ್ಜೆ ಪ್ರಯಾಣಗಳ ಮೇಲೆ ಸಲ್ಪ ಹೆಚ್ಚು ಮೊತ್ತ ಪಾವತಿಸಬೇಕಾಗುತ್ತದೆ.
ಜಿಎಸ್ಟಿ ಅನುಷ್ಠಾನದ ನಂತರ ಟಿಕೆಟ್ ಶುಲ್ಕದ ಮೇಲಿನ ಸೇವಾ ತೆರಿಗೆ ಶೇ. 4.5 ರಿಂದ ಶೇ. 5ಕ್ಕೆ ಏರಿಕೆಯಾಗಲಿದೆ.

 

ಎಷ್ಟು ಪಾವತಿಸಬೇಕು?

ಎಷ್ಟು ಪಾವತಿಸಬೇಕು?

ಎಸಿ ಮತ್ತು ಪ್ರಥಮ ದರ್ಜೆಯ ಪ್ರಯಾಣ ದರಗಳಲ್ಲಿ ಮಾತ್ರ ಸೇವಾ ತೆರಿಗೆಯನ್ನು ವಿಧಿಸಲಾಗುತ್ತದೆ. ಹಾಗಾಗಿ ಟಿಕೆಟ್ ದರ ರೂ. 2,000 ಆಗಿದ್ದರೆ, ಮುಂದಿನ ತಿಂಗಳಲ್ಲಿ ಪ್ರಯಾಣಿಕರು ರೂ. 2,010ರಷ್ಟು ಪಾವತಿಸಬೇಕಾಗುತ್ತದೆ ಎಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಸಲಹೆಗಾರರ ನೇಮಕ

ಸಲಹೆಗಾರರ ನೇಮಕ

ಜುಲೈ 1 ರಿಂದ ಜಿಎಸ್ಟಿ(GOODS AND SERVICES TAX) ಅನುಷ್ಠಾನವಾಗುತ್ತಿರುವ ಹಿನ್ನೆಲೆಯಲ್ಲಿ ಹೊಸ ಏಕ ತೆರಿಗೆ ಪದ್ದತಿಯ ಸುಗಮ ಆಡಳಿತ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಹಾಗೂ ನಿರ್ವಹಿಸಲು ರೈಲ್ವೆ ಇಲಾಖೆ ಪ್ರತಿ ರಾಜ್ಯದಲ್ಲಿ ನೋಡಾಲ್ ಅಧಿಕಾರಿಯನ್ನು ನೇಮಿಸಿದೆ. ಜತೆಗೆ ಭಾರತೀಯ ರೈಲ್ವೆಯಲ್ಲಿ ಜಿಎಸ್ಟಿ ಪ್ರಭಾವವನ್ನು ಪರಿಶೀಲಿಸಲು ಸಲಹೆಗಾರರನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಜಿಎಸ್ಟಿ ದೂರು ಪರಿಶೀಲನೆ
 

ಜಿಎಸ್ಟಿ ದೂರು ಪರಿಶೀಲನೆ

ಜಿಎಸ್ಟಿ ನೋಂದಣಿ ಪಾನ್ ವಿವರಗಳನ್ನು ಆಧರಿಸಿರುವುದರಿಂದ, ಪ್ರಕ್ರಿಯೆ ಚಾಲ್ತಿಯಲ್ಲಿದೆ. ಜಿಎಸ್ಟಿ ಸಂಬಂಧಿತ ದೂರುಗಳನ್ನು ತೆಗೆದು ಪರಿಶೀಲಿಸಲು ರೈಲ್ವೆಯ ಪ್ರತಿ ವಲಯಗಳಲ್ಲಿ ಪ್ರಧಾನ ಅಧಿಕಾರಿಗಳನ್ನು ನಾಮಕರಣ ಮಾಡಲಾಗಿದೆ. ರೈಲ್ವೆಯ ಪ್ರಮುಖ ವಹಿವಾಟುಗಳನ್ನು ಗಣಕೀಕೃತಗೊಳಿಸಿದ್ದರೂ, ಕೆಲವು ಇನ್ನೂ ಆಫ್-ಲೈನ್ ಆಗಿವೆ. ಅವುಗಳ ಡಿಜಿಟಲೀಕರಣಕ್ಕಾಗಿ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಜಿಎಸ್‌ಟಿ(GST) ರೇಟ್ ಫಿಕ್ಸ್: 13 ಪ್ರಯೋಜನ ತಪ್ಪದೆ ಪಡೆಯಿರಿ

English summary

GST impact: AC, first class train fares to go up..

With the Goods and Services Tax (GST) coming into effect from 1 July, train passengers will have to pay a bit more to travel AC and first class.
Story first published: Thursday, June 22, 2017, 12:00 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X