For Quick Alerts
ALLOW NOTIFICATIONS  
For Daily Alerts

ಜಿಎಸ್ಟಿ ಕೊಡುಗೆ: ಬೈಕ್ ಗಳ ಮೇಲೆ ರಿಯಾಯಿತಿ ಪಡೆಯಿರಿ..!

ವಾಹನ ಪ್ರಿಯರಿಗೆ ಸುಗ್ಗಿಯೋ.. ಸುಗ್ಗಿ..! ಜಿಎಸ್ಟಿ ಜುಲೈ 1ರಿಂದ ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೂ ಮುನ್ನವೇ ಟಿವಿಎಸ್ ಮೋಟಾರ್‌ ಮತ್ತು ರಾಯಲ್ ಎನ್‌ಫೀಲ್ಡ್‌ ಕಂಪೆನಿಗಳು ದ್ವಿಚಕ್ರ ವಹಾನಗಳ ಮೇಲೆ ಡಿಸ್ಕೌಂಟ್ ಕೊಡುಗೆ ಘೋಷಿಸಿವೆ.

By Siddu
|

ವಾಹನ ಪ್ರಿಯರಿಗೆ ಸುಗ್ಗಿಯೋ.. ಸುಗ್ಗಿ..! ಸರಕು ಮತ್ತು ಸೇವಾ ತೆರಿಗೆ(goods and services tax) ಜುಲೈ 1ರಿಂದ ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೂ ಮುನ್ನವೇ ಟಿವಿಎಸ್ ಮೋಟಾರ್‌ ಮತ್ತು ರಾಯಲ್ ಎನ್‌ಫೀಲ್ಡ್‌ ಕಂಪೆನಿಗಳು ದ್ವಿಚಕ್ರ ವಹಾನಗಳ ಮೇಲೆ ಡಿಸ್ಕೌಂಟ್ ಕೊಡುಗೆಗಳನ್ನು ಘೋಷಿಸಿವೆ.

 

ಈಗಾಗಲೇ ಗೃಹೋಪಯೋಗಿ ಉತ್ಪನ್ನ, ವಿವಿಧ ಕಾರು, ಬಜಾಜ್ ಬೈಕ್ ಗಳ ಮೇಲೆ ಡಿಸ್ಕೌಂಟ್ ಗಳನ್ನು ಘೊಷಿಸಲಾಗಿದೆ. ಇದೀಗ ಟಿವಿಎಸ್ ಮೋಟಾರ್‌, ಬಜಾಜ್ ಆಟೋ ಮತ್ತು ರಾಯಲ್ ಎನ್‌ಫೀಲ್ಡ್‌ ಸರದಿ... ಜಿಎಸ್ಟಿ ಎಫೆಕ್ಟ್: ಎಲೆಕ್ಟ್ರಾನಿಕ್, ಗೃಹೋಪಯೋಗಿ ಉತ್ಪನ್ನಗಳ ಮೇಲೆ 40% ಡಿಸ್ಕೌಂಟ್!

ರಾಯಲ್‌ ಎನ್‌ಫೀಲ್ಡ್‌

ರಾಯಲ್‌ ಎನ್‌ಫೀಲ್ಡ್‌

ರಾಯಲ್‌ ಎನ್‌ಫೀಲ್ಡ್‌ ಕಂಪೆನಿ ರೂ. 2,300ರವರೆಗೆ (ಚೆನ್ನೈನಲ್ಲಿ ಆನ್‌ರೋಡ್ ಬೆಲೆ) ಬೆಲೆ ಇಳಿಕೆ ಮಾಡಿದೆ. ಹೆಚ್ಚುಕಡಿಮೆ ರೂ. 1600-2300ರ ವ್ಯಾಪ್ತಿಯಲ್ಲಿ ದರ ಕಡಿತ ಮಾಡುವ ನಿರೀಕ್ಷೆಯಿದೆ. ಇದು ಬುಲೆಟ್, ಕ್ಲಾಸಿಕ್, ಥಂಡರ್ ಬರ್ಡ್ ಮೋಟಾರ್ ಸೈಕಲ್ ಮಾಡೆಲ್ ಗಳ ಮೇಲೆ ಬೆಲೆ ಕಡಿತಗೊಳಿಸಲಿದೆ. ಜಿಎಸ್ಟಿ ಎಫೆಕ್ಟ್: ಜುಲೈ 1ರಿಂದ ಯಾವುದು ದುಬಾರಿ, ಯಾವುದು ಅಗ್ಗ..?

ಟಿವಿಎಸ್ ಮೋಟಾರ್‌

ಟಿವಿಎಸ್ ಮೋಟಾರ್‌

ಟಿವಿಎಸ್ ಮೋಟಾರ್ ಕಂಪೆನಿ ತನ್ನ ಬೈಕ್ ಗಳ ಮೇಲಿನ ದರ ಇಳಿಸುವ ಪ್ರಮಾಣವನ್ನು ಖಚಿತವಾಗಿ ತಿಳಿಸಿಲ್ಲ. ಜಿಎಸ್ಟಿ ವ್ಯಾಪಾರ ಮಾಡುವಲ್ಲಿ ಸಾಕಷ್ಟು ಸೌಲಭ್ಯಗಳನ್ನು ತರುತ್ತಿದ್ದು, ಇದರ ಹಲವಾರು ಪ್ರಯೋಜನಗಳನ್ನು ನಾವು ಗ್ರಾಹಕರಿಗೆ ನೀಡುತ್ತಿದ್ದೇವೆ ಎಂದು ಟಿವಿಎಸ್ ಮೋಟಾರ್ ಸಿಇಒ ಕೆ ಎನ್ ರಾಧಾಕೃಷ್ಣನ್ ಹೇಳಿದ್ದಾರೆ.

ಬಜಾಜ್ ಆಟೋ
 

ಬಜಾಜ್ ಆಟೋ

ದೇಶದ ಮೂರನೇ ಅತಿದೊಡ್ಡ ದ್ವಿಚಕ್ರವಾಹನ ಉತ್ಪಾದನಾ ಸಂಸ್ಥೆ 'ಬಜಾಜ್ ಆಟೋ' ತನ್ನ ಬೈಕ್ ಗಳ ಮೇಲೆ ಡಿಸ್ಕೌಂಟ್ ಘೋಷಣೆ ಮಾಡಿದೆ. ಬಜಾಜ್ ಸಂಸ್ಥೆ ತನ್ನ ಮೋಟಾರ್ ಬೈಕ್ ಗಳ ಮೇಲೆ ರೂ. 4,500ರ ವರೆಗೆ ಡಿಸ್ಕೌಂಟ್ ಘೋಷಿಸಿದೆ. ಬೈಕ್ ಮಾಡೆಲ್ ಮತ್ತು ರಾಜ್ಯಗಳನ್ನು ಆಧರಿಸಿ ರಿಯಾಯಿತಿ ಮತ್ತು ಉಳಿತಾಯದ ಪ್ರಮಾಣ ನಿರ್ಧಾರವಾಗಲಿದೆ ಎಂದು ಕಂಪನಿ ಹೇಳಿದೆ.

ಬಜಾಜ್ ಬುಕಿಂಗ್ ಆಫರ್ ಅವಧಿ

ಬಜಾಜ್ ಬುಕಿಂಗ್ ಆಫರ್ ಅವಧಿ

ಗ್ರಾಹಕರು ಜೂನ್ 14 ರಿಂದ 30ರ ನಡುವಿನ ಅವಧಿಯಲ್ಲಿ ಅಧಿಕೃತ ಬಜಾಜ್ ಆಟೋ ವಿತರಕರಲ್ಲಿ ಉಳಿತಾಯದ ಬಗ್ಗೆ ತಿಳಿದುಕೊಂಡು ಬುಕಿಂಗ್ ಮಾಡಬಹುದು. ರಾಜ್ಯಗಳಿಗೆ ಮತ್ತು ಬೈಕ್ ಮಾಡೆಲ್ ಗಳಿಗನುಸಾರವಾಗಿ ಡಿಸ್ಕೌಂಟ್ ಭಿನ್ನವಾಗಿರಲಿದೆ.

ಆಫರ್ ಗೆ ಕಾರಣ

ಆಫರ್ ಗೆ ಕಾರಣ

ಜುಲೈ 1ರಿಂದ ಸರಕು ಮತ್ತು ಸೇವಾ ತೆರಿಗೆ(goods and services tax) ಜಾರಿ ಬರುತ್ತಿರುವುದರಿಂದ ಅದರ ತತ್ ಕ್ಷಣದ ಪರಿಣಾಮವಾಗಿ ಬೈಕ್ ಗಳ ಮೇಲೆ ಡಿಸ್ಕೌಂಟ್ ಆಫರ್ ನೀಡುತ್ತಿದೆ. ಜಿಎಸ್ಟಿ ಅಡಿಯಲ್ಲಿ ದ್ವಿಚಕ್ರ ವಾಹನಗಳ ತೆರಿಗೆ ದರ ಶೇ. 28ಕ್ಕೆ ಕಡಿಮೆಯಾಗಲಿದೆ. ಪ್ರಸ್ತುತ ಶೇ. 30ರಷ್ಟು ತೆರಿಗೆ ದರವಿದೆ. ಜಿಎಸ್ಟಿ ಮಹಿಮೆ..! ಮಾರುತಿ, ಹುಂಡೈ, ಜಾಗ್ವಾರ್, ಹೊಂಡಾ, ಫೊರ್ಡ್, ಆಡಿ, ಟಾಟಾ ಕಾರುಗಳ ಮೇಲೆ ಭಾರೀ ಡಿಸ್ಕೌಂಟ್!!

English summary

TVS Motors, Royal Enfield, Bajaj auto to pass on GST benefit to customers

Two-wheeler makers TVS Motor Company and Royal Enfield have become the latest to pass on expected benefit of goods and services tax (GST) to customers by lowering prices of their vehicles.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X