For Quick Alerts
ALLOW NOTIFICATIONS  
For Daily Alerts

2018ರಿಂದ ಹಣಕಾಸು ವರ್ಷ ಬದಲು ಸಾಧ್ಯತೆ?

ಕೇಂದ್ರ ಸರ್ಕಾರ ಹಣಕಾಸು ವರ್ಷವನ್ನು ಏಪ್ರಿಲ್ ಬದಲಾಗಿ ಕ್ಯಾಲೆಂಡರ್ ವರ್ಷ ಜನೆವರಿಯಿಂದ ಜಾರಿಗೆ ತರುವ ಬಗ್ಗೆ ಗಂಭೀರವಾಗಿ ಪರಿಶೀಲಿಸುತ್ತಿದೆ.

By Siddu
|

ಕೇಂದ್ರ ಸರ್ಕಾರ ಹಣಕಾಸು ವರ್ಷವನ್ನು ಏಪ್ರಿಲ್ ಬದಲಾಗಿ ಕ್ಯಾಲೆಂಡರ್ ವರ್ಷ ಜನೆವರಿಯಿಂದ ಜಾರಿಗೆ ತರುವ ಬಗ್ಗೆ ಗಂಭೀರವಾಗಿ ಪರಿಶೀಲಿಸುತ್ತಿದೆ.

 
2018ರಿಂದ ಹಣಕಾಸು ವರ್ಷ ಬದಲು ಸಾಧ್ಯತೆ?

ಹಿಂದಿನಂತೆ ಏಪ್ರಿಲ್-ಮಾರ್ಚ್ ಬದಲಿಗೆ, 2018ರಿಂದ ಜನೆವರಿಯಿಂದ ಡಿಸೆಂಬರ್ ವರೆಗೆ ಹಣಕಾಸು ವರ್ಷ ಜಾರಿ ತರುವ ನಿರ್ಧಾರ ಅಂತಿಮವಾಗಿ ಕಾರ್ಯರೂಪಕ್ಕೆ ಬಂದರೆ 150 ವರ್ಷಗಳ ಹಳೆಯ ಸಂಪ್ರದಾಯ ಕೊನೆಗಾಣಲಿದೆ.

 

ಪ್ರಧಾನಿ ನರೇಂದ್ರ ಮೋದಿಯವರು ಕ್ಯಾಲೆಂಡರ್ ವರ್ಷಕ್ಕೆ ಅನುಗುಣವಾಗಿ ಆರ್ಥಿಕ ವರ್ಷ ಬದಲಾಯಿಸುವ ಬಗ್ಗೆ ಆಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ.

ಹಣಕಾಸು ವರ್ಷ ಬದಲಿಸುವುದರ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಸಮಿತಿ ರಚಿಸಲಾಗಿತ್ತು. ಉನ್ನತ ಮಟ್ಟದ ಸಮಿತಿ ಈಗಾಗಲೇ ಹಣಕಾಸು ಸಚಿವಾಲಯಕ್ಕೆ ತನ್ನ ವರದಿ ಒಪ್ಪಿಸಿದೆ.

ಹಣಕಾಸು ವರ್ಷ ಬದಲಿಸುವ ಕುರಿತು ನೀತಿ ಆಯೋಗ ಈಗಾಗಲೇ ಒಲವು ವ್ಯಕ್ತಪಡಿಸಿದ್ದು, ಮಧ್ಯಪ್ರದೇಶ ಸರ್ಕಾರ 2018ರಿಂದ ಹಣಕಾಸು ವರ್ಷ ಬದಲಿಸುವುದಾಗಿ ಘೋಷಿಸಿದ ಮೊದಲ ರಾಜ್ಯ ಎನಿಸಿದೆ.

2018ರಿಂದ ಹಣಕಾಸು ವರ್ಷ ಬದಲು ಸಾಧ್ಯತೆ?

English summary

Financial year likely to be changed from 2018

Come 2018 and the financial year in India could commence from January instead of April as the Center appears set to make the historic transition to end the 150-year-old tradition.
Story first published: Tuesday, June 27, 2017, 12:16 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X