For Quick Alerts
ALLOW NOTIFICATIONS  
For Daily Alerts

ಜಿಯೋ ಸಮ್ಮರ್ ಸರ್ಫ್ರೈಸ್ ಆಫರ್ ಶೀಘ್ರ ಮುಕ್ತಾಯ..! ಮುಂದೇನು..?

ಇದೀಗ ಸಮ್ಮರ್ ಸರ್ಫ್ರೈಸ್ ಆಫರ್ ಮುಕ್ತಾಯದ ಹಂತದಲ್ಲಿದೆ..! ಹಾಗಿದ್ದರೆ ಇನ್ನೂ ಎಷ್ಟು ದಿನ ಆಫರ್ ಇರಲಿದೆ, ಕೊನೆಗೊಳಿಸಲು ಕಾರಣಗಳೇನು, ನಿಮ್ಮ ಜಿಯೋ ಆಫರ್ ಅವಧಿ ಮುಗಿಯುವ ದಿನಾಂಕ ತಿಳಿಯುವುದು ಹೇಗೆ ಇತ್ಯಾದಿ ಅಂಶಗಳನ್ನು ನೋಡೋಣ.

By Siddu
|

ರಿಲಾಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಜಿಯೋ ಲಾಂಚ್ ಮಾಡಿದಾಗಿನಿಂದ ಇಲ್ಲಿಯವರೆಗೆ ಹಲವಾರು ಗ್ರಾಹಕಪ್ರಿಯ ಆಫರ್ ಗಳನ್ನು ಘೋಷಿಸುತ್ತಾ ಬಂದಿದ್ದಾರೆ.

 

ಪ್ರಾರಂಭದಲ್ಲಿ ವೆಲ್ಕಮ್ ಆಫರ್, ನಂತರ ಹ್ಯಾಪಿ ನ್ಯೂ ಇಯರ್ ನಂತಹ ಉಚಿತ ಆಫರ್ ಗಳನ್ನು ನೀಡಿದ್ದರು. ಮೂರನೇ ಪ್ರಯತ್ನದಲ್ಲಿ ಟ್ರಾಯ್ ನಿಯಮಗಳಿಗೆ ಅನುಸಾರವಾಗಿ ಕಡಿಮೆ ದರದಲ್ಲಿ ಜಿಯೋ ಸಮ್ಮರ್ ಸರ್ಪ್ರೈಸ್ ಆಫರ್, ಧನ್ ಧನಾ ಧನ್ ಆಫರ್ ಘೋಷಣೆ ಮಾಡಿದ್ದರು. ('ಜಿಯೋ ಆಫರ್ಸ್' ಕೊಡುವುದರ ಉದ್ದೇಶಗಳೇನು?)

ಆದರೆ ಇದೀಗ ರಿಲಾಯನ್ಸ್ ಜಿಯೋ ಸಮ್ಮರ್ ಸರ್ಫ್ರೈಸ್ ಆಫರ್ ಮುಕ್ತಾಯದ ಹಂತದಲ್ಲಿದೆ..! ಹಾಗಿದ್ದರೆ ಇನ್ನೂ ಎಷ್ಟು ದಿನ ಆಫರ್ ಇರಲಿದೆ, ಕೊನೆಗೊಳಿಸಲು ಕಾರಣಗಳೇನು, ಮೈಜಿಯೋ ಆಪ್ ಮೂಲಕ ಪ್ಲಾನ್ ವಿವರ ಚೆಕ್ ಮಾಡೋದು ಹೇಗೆ, ನಿಮ್ಮ ಜಿಯೋ ಆಫರ್ ಅವಧಿ ಮುಗಿಯುವ ದಿನಾಂಕ ತಿಳಿಯುವುದು ಹೇಗೆ ಇತ್ಯಾದಿ ಅಂಶಗಳನ್ನು ನೋಡೋಣ...

ಜಿಯೋ ಗ್ರಾಹಕರಿಗೆ ನೀಡಿದ್ದೇನು?

ಜಿಯೋ ಗ್ರಾಹಕರಿಗೆ ನೀಡಿದ್ದೇನು?

ಫ್ರೈಮ್ ಸದಸ್ಯತ್ವದ ಅಡಿಯಲ್ಲಿ ಜಿಯೋ ಸಮ್ಮರ್ ಸರ್ಪ್ರೈಸ್ ಆಫರ್ ಮೂಲಕ ಡೇಟಾ ಮತ್ತು ಉಚಿತ ಧ್ವನಿ ಕರೆಗಳನ್ನು ಪ್ರತಿದಿನಕ್ಕೆ ಕೇವಲ ರೂ. 3ರ ಅತ್ಯಂತ ಕಡಿಮೆ ಬೆಲೆಯಲ್ಲಿ ಅನುಭವಿಸಿದ್ದರು. ರೂ. 309 ರೀಚಾರ್ಜ್ ಮಾಡಿ ಮೂರು ತಿಂಗಳು ಡೇಟಾ ಮತ್ತು ಉಚಿತ ಧ್ವನಿ ಕರೆಗಳು ಸೇರಿದಂತೆ ಇನ್ನಿತರ ಸೇವೆಗಳನ್ನು ಗ್ರಾಹಕರು ಪಡೆಯುತ್ತಿದ್ದಾರೆ. ಆದರೆ ಈ ಆಫರ್ ಇದೀಗ ಕೇಲವೆ ದಿನಗಳಲ್ಲಿ ಮುಕ್ತಾಯವಾಗಲಿದೆ.

ಮೈಜಿಯೋ ಆಪ್ ಮೂಲಕ ಪ್ಲಾನ್ ವಿವರ ಚೆಕ್ ಮಾಡೋದು ಹೇಗೆ?

ಮೈಜಿಯೋ ಆಪ್ ಮೂಲಕ ಪ್ಲಾನ್ ವಿವರ ಚೆಕ್ ಮಾಡೋದು ಹೇಗೆ?

- ಮೈಜಿಯೋ ಆಪ್ ತೆರೆದು, ಪಾಸ್ವರ್ಡ್ ಇಲ್ಲವೇ ಸಿಮ್ ವೆರಿಪಿಕೇಷನ್ ಮೂಲಕ ಲಾಗಿನ್ ಆಗಿರಿ
- ಆಪ್ ತೆರೆದ ನಂತರ ಬಲಬದಿಯ ಮೇಲ್ತುದಿಯಲ್ಲಿ ಬ್ಯಾಲೆನ್ಸ್ ನೋಡಬಹುದು. ನೀವು ಕೇವಲ ಸಮ್ಮರ್ ಆಫರ್ ಅಥವಾ ಧನ್ ಧನಾ ಧನ್ ಆಫರ್ ಮಾತ್ರ ಬಳಸಿದ್ದಲ್ಲಿ ಬ್ಯಾಲೆನ್ಸ್ 0(ಶೂನ್ಯ) ಎಂಬುದಾಗಿ ತೋರಿಸುತ್ತದೆ. ಇದರ ಹೊರತಾಗಿ ಹೆಚ್ಚುವರಿ ಡೇಟಾ ಅಥವಾ ಅಂತರಾಷ್ಟ್ರೀಯ ರೋಮಿಂಗ್ ಗಾಗಿ ರೀಚಾರ್ಜ್ ಮಾಡಿದ್ದರೆ ಬ್ಯಾಲೆನ್ಸ್ ತೊರಿಸುತ್ತದೆ.

ಜಿಯೋ ಪ್ಲಾನ್ ವ್ಯಾಲಿಡಿಟಿ ತಿಳಿಯುವುದು ಹೇಗೆ?
 

ಜಿಯೋ ಪ್ಲಾನ್ ವ್ಯಾಲಿಡಿಟಿ ತಿಳಿಯುವುದು ಹೇಗೆ?

- ನೀವು ಈಗಾಗಲೇ ಬಳಸುತ್ತಿರುವ ಜಿಯೋ ಪ್ಲಾನ್ ವ್ಯಾಲಿಡಿಟಿಯನ್ನು ತಿಳಿದುಕೊಳ್ಳಲು ಮೈಜಿಯೋ ಆಪ್ ಎಡಬಾಗದಲ್ಲಿರುವ ಮೈ ಪ್ಲಾನ್ಸ್(My Plan) ಮೇನ್ ಮೆನು ಬಟನ್ ಮೇಲೆ ಕ್ಲಿಕ್ ಮಾಡಿರಿ.
- ಇದು ನೀವು ಪ್ರಸ್ತುತ ಬಳಸುತ್ತಿರುವ ಪ್ಲಾನ್ ಬಗ್ಗೆ ಮಾಹಿತಿ ಒಳಗೊಂಡಿರುತ್ತದೆ.
- ಇದು ಪ್ಲಾನ್ ವ್ಯಾಲಿಡಿಟಿ ದಿನಾಂಕ, ಪ್ರತಿದಿನ ಲಭ್ಯವಿರುವ ಎಸ್ಎಂಎಸ್ ಮತ್ತು ಡೇಟಾ ವಿವರ ತೋರಿಸುತ್ತದೆ.

ಆನ್ಲೈನ್ ಮೂಲಕ ಪ್ಲಾನ್ ವಿವರ ತಿಳಿಯೋದು ಹೇಗೆ?

ಆನ್ಲೈನ್ ಮೂಲಕ ಪ್ಲಾನ್ ವಿವರ ತಿಳಿಯೋದು ಹೇಗೆ?

- jio.com ವೆಬ್ಸೈಟ್ ತೆರೆದು, ಸೈನ್ ಇನ್ ಆಗಿ
- ಪಾಸ್ವರ್ಡ್ ಅಥವಾ ಒಟಿಪಿ ಮೂಲಕ ನಿಮ್ಮ ಖಾತೆಗೆ ಲಾಗಿನ್ ಆಗಿ
- ಲಾಗಿನ್ ಆದ ನಂತರ ಮೇಲ್ಬಾಗದಲ್ಲಿ ಜಿಯೋ ಬ್ಯಾಲೆನ್ಸ್ ನೋಡಬಹುದು.
- ಕೆಳಭಾಗದಲ್ಲಿ ನಿಮ್ಮ ಜಿಯೋ ಪ್ಲಾನ್ ವಿವರ(ಸಮ್ಮರ್ ಆಫರ್ ಅಥವಾ ಧನ್ ಧನಾ ಧನ್ ಆಫರ್) ಕಾಣಬಹುದು. ಅಲ್ಲಿ ವ್ಯಾಲಿಡಿಟಿ ಅವಧಿ ಕೂಡ ನೋಡಬಹುದು.

100% ಕ್ಯಾಶ್ ಬ್ಯಾಕ್! 2010 ಮೌಲ್ಯದ 4ಜಿ ಡೇಟಾ ಉಚಿತ

100% ಕ್ಯಾಶ್ ಬ್ಯಾಕ್! 2010 ಮೌಲ್ಯದ 4ಜಿ ಡೇಟಾ ಉಚಿತ

ಜಿಯೋ ಈಗಾಗಲೇ ಈ ಹಿಂದೆ ಸೂಪರ್ ಆಫರ್ ನ್ನು ಗ್ರಾಹಕರಿಗೆ ಪರಿಚಯಿಸಿದೆ. ಹಳೆಯ ಡಾಂಗಲ್, ಡೇಟಾ ಕಾರ್ಡ್, ವೈಫೈ ರೂಟರ್ ಗಳನ್ನು ಜಿಯೋಫೈ 4ಜಿ ರೂಟರ್ ಜತೆ ಎಕ್ಸ್‌ಚೇಂಜ್ ಮಾಡಿಕೊಂಡರೆ 100% ಕ್ಯಾಶ್ ಬ್ಯಾಕ್ ಆಫರ್ ಘೋಷಿಸಿದೆ. ಜಿಯೋ ಧನ್ ಧನಾ ಧನ್ ಅಡಿಯಲ್ಲಿ ಗ್ರಾಹಕರು ಇದರ ಲಾಭ ಪಡೆಯುತ್ತಿದ್ದು, ಯಾವುದೇ ಟೆಲಿಕಾಂ ಕಂಪನಿಗಳ ಈಗಾಗಲೇ ಬಳಸುತ್ತಿರುವ ಡೇಟಾ ಕಾರ್ಡ್, ಡಾಂಗಲ್, ಹಾಟ್ ಸ್ಪಾಟ್ ರೂಟರನ್ನು ಹತ್ತಿರದ ಜಿಯೋ ಡಿಜಿಟಲ್ ಮಳಿಗೆ ಅಥವಾ ಜಿಯೋ ಕೇರ್ ಮಳಿಗೆಯಲ್ಲಿ ವಿನಿಮಯ ಮಾಡಿಕೊಳ್ಳಬೇಕು. ಹೀಗೆ ಮಾಡಿದರೆ 100% ಕ್ಯಾಶ್ ಬ್ಯಾಕ್ ಅಥವಾ 2010 ರೂಪಾಯಿ ಮೌಲ್ಯದ 4ಜಿ ಡೇಟಾ ಪಡೆಯಬಹುದು. ಜಿಯೋ ಹೊಸ ಅವತಾರ! 100% ಕ್ಯಾಶ್ ಬ್ಯಾಕ್ ಬಂಪರ್ ಆಫರ್!!

English summary

Jio Summer Surprise Offer To End Soon. Here Is How To Check Your Plan's Validity

Reliance Jio's Summer Surprise Offer, under which its Prime members enjoyed data and free voice call services at an ultra-low cost of just above Rs. 3 per day, will end in few weeks.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X