For Quick Alerts
ALLOW NOTIFICATIONS  
For Daily Alerts

ಏನಿದು ಜಿಯೋಜಿಎಸ್ಟಿ(JioGST) ಸ್ಟಾರ್ಟರ್ ಕಿಟ್? ಉಚಿತ ಡೇಟಾ ಮತ್ತು ಕರೆ ಆಫರ್ ನಿಮ್ಮದಾಗಿಸಿ

ಜಿಯೋಜಿಎಸ್ಟಿ ಸ್ಟಾರ್ಟರ್ ಕಿಟ್(JioGST starter kit) ಎಂಬ ಹೊಸ ಸ್ಕೀಮ್ ಘೋಷಣೆ ಮಾಡಿದೆ.ರಿಲಯನ್ಸ್ ಸಂಸ್ಥೆ 'ಜಿಯೋಜಿಎಸ್ಟಿ ಸ್ಟಾರ್ಟರ್ ಕಿಟ್' ಮೂಲಕ ತನ್ನ ಬಳಕೆದಾರರಿಗೆ ಹಲವಾರು ಪ್ರಯೋಜನಗಳನ್ನು ಪ್ರಸ್ತುತ ಪಡಿಸುತ್ತಿದೆ.

By Siddu
|

ರಿಲಯನ್ಸ್ ಜಿಯೋ ಸದಾ ಹೊಸತನಕ್ಕೆ ತುಡಿಯುತ್ತಿರುತ್ತದೆ ಎಂಬುದಕ್ಕೆ ಅದು ಬಿಡುಗಡೆ ಮಾಡುವ ಯೋಜನೆಗಳ ಮುಖಾಂತರ ಗೊತ್ತಾಗುತ್ತದೆ.

ಇದೀಗ ಜಿಯೋಜಿಎಸ್ಟಿ ಸ್ಟಾರ್ಟರ್ ಕಿಟ್(JioGST starter kit) ಎಂಬ ಹೊಸ ಸ್ಕೀಮ್ ಘೋಷಣೆ ಮಾಡಿದೆ. ರಿಲಯನ್ಸ್ ಸಂಸ್ಥೆ 'ಜಿಯೋಜಿಎಸ್ಟಿ ಸ್ಟಾರ್ಟರ್ ಕಿಟ್' ಮೂಲಕ ತನ್ನ ಬಳಕೆದಾರರಿಗೆ ಹಲವಾರು ಪ್ರಯೋಜನಗಳನ್ನು ಪ್ರಸ್ತುತ ಪಡಿಸುತ್ತಿದೆ. (ಜಿಯೋ ಅಲೆಲೆಲೆ...! ಕೇವಲ 500 ರೂ.ಗೆ 4G ವೋಲ್ಟ್ ಸ್ಮಾರ್ಟ್ ಫೋನ್ !!)

ಜಿಯೋಜಿಎಸ್ಟಿ ಕಿಟ್ ಏಕೆ?

ಜಿಯೋಜಿಎಸ್ಟಿ ಕಿಟ್ ಏಕೆ?

ದೇಶದಾದ್ಯಂತ ಜುಲೈ 1ರಿಂದ ಜಾರಿಯಾಗಿರುವ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ)ಯೊಂದಿಗೆ ವ್ಯವಹಾರಗಳನ್ನು ಸುಲಭಗೊಳಿಸುವ ಉದ್ದೇಶದಿಂದ ಅಪ್ಲಿಕೇಷನ್‌ಗಳನ್ನು ಒಳಗೊಂಡಿರುವ ‘ಜಿಯೋಫೈ ಜಿಯೋಜಿಎಸ್ಟಿ(JioFi JioGST starter kit)' ಕಿಟ್‌ ಎಂಬ ನೂತನ ಯೋಜನೆ ರಿಲಯನ್ಸ್ ಜಿಯೊ ಬಿಡುಗಡೆ ಮಾಡಿದೆ.

ಜಿಯೋಜಿಎಸ್ಟಿ ಪ್ರಯೋಜನ?

ಜಿಯೋಜಿಎಸ್ಟಿ ಪ್ರಯೋಜನ?

- ಜಿಯೋಜಿಎಸ್ಟಿ ಮೂಲಕ ಒಂದು ವರ್ಷದ ವರೆಗೂ ಅನ್ ಲಿಮಿಟೆಡ್ ಕರೆಗಳು ಹಾಗೂ 24GB 4g ಡೇಟಾ ಲಭ್ಯವಿದೆ.
- ಜಿಯೋಜಿಎಸ್ಟಿ ಸಲ್ಯೂಷನ್(Jio-GST Solution) ಮೂಲಕ ತೆರಿಗೆ ರಿಟರ್ನ್ಸ್ ತುಂಬಲು ಸಹಕಾರಿಯಾಗಿರುತ್ತದೆ.
- ಚಿಲ್ಲರೆ ವ್ಯಾಪಾರಿಗಳ ಅಂಕಿಅಂಶಗಳ ದಾಖಲೆ ನಿರ್ವಹಣೆಗೆ ಸಹಕಾರಿ
- ಜಿಎಸ್ಟಿ ಕಾನೂನಿನ ನಿಬಂದನೆಗಳನ್ನು ಅನುಸರಿಸಲು
- ತೆರಿಗೆ ಮತ್ತು ರಿಟರ್ನ್ಸ್ ಫೈಲಿಂಗ್ ಗಾಗಿ ಜುಲೈ 1ರಿಂದ ಬಿಸಿನೆಸ್ ಗಾಗಿ GSTIN ನಂಬರ್ ಬೇಕಾಗುತ್ತದೆ. ಹೀಗಾಗಿ ಅಂತಹ ಸಂದರ್ಭಗಳಲ್ಲಿ ಇದು ಪ್ರಯೋಜನಕ್ಕೆ ಬರುತ್ತದೆ.

ಜಿಯೋಜಿಎಸ್ಟಿ ಕಿಟ್ ಬೆಲೆ?

ಜಿಯೋಜಿಎಸ್ಟಿ ಕಿಟ್ ಬೆಲೆ?

ಜಿಎಸ್ಟಿ ಸಾಫ್ಟ್‌ವೇರ್‌ ಸಲ್ಯೂಷನ್, ಐಟಿ ರಿಟರ್ನ್ಸ್ ಹಾಗೂ ಬಿಲ್ಲಿಂಗ್ ಅಪ್ಲಿಕೇಷನ್ ಸೌಲಭ್ಯಗಳನ್ನು ಒಳಗೊಂಡಿರುವ ಸ್ಟಾರ್ಟರ್‌ ಕಿಟ್‌ ಬೆಲೆ ರೂ. 1999 ನಿಗದಿ ಪಡಿಸಿದೆ. ರಿಲಯನ್ಸ್ ಜಿಯೋ ಪ್ರಕಾರ ರೂ. 1999 ಮೊತ್ತದ ಸಿಂಗಲ್ ಡಿವೈಸ್ ಮುಖಾಂತರ ಬಳಕೆದಾರರು ರೂ. 10,844ರ ವರೆಗೆ ಆಫರ್ ಪಡೆಯಬಹುದಾಗಿದೆ. ಭಾರತದಲ್ಲಿ ಈ ಆದಾಯಗಳಿಗೆ ತೆರಿಗೆ ಇಲ್ಲ

ಜಿಯೋಜಿಎಸ್ಟಿ ಕಿಟ್ ಪಡೆಯುವುದು ಹೇಗೆ?

ಜಿಯೋಜಿಎಸ್ಟಿ ಕಿಟ್ ಪಡೆಯುವುದು ಹೇಗೆ?

- jio.com ಮುಖಾಂತರ ಜಿಯೋಜಿಎಸ್ಟಿ ಸ್ಟಾರ್ಟರ್ ಕಿಟ್ ಆರ್ಡರ್ ಮಾಡಿ, ಕಿಟ್ ತಲುಪಿದ ನಂತರ ಹತ್ತಿರದ ರಿಲಯನ್ಸ್ ಡಿಜಿಟಲ್/ಜಿಯೋ ಸ್ಟೋರ್ ಗೆ ಬೇಟಿ ನೀಡಿ ಪಡೆಯಿರಿ.
- ಸ್ಟಾರ್ಟರ್ ಕಿಟ್ ಮತ್ತು ಡಿವೈಸ್ ಪಡೆದ ನಂತರ jioGST.com ನಲ್ಲಿ ಅಕೌಂಟ್ ತೆರೆಯಿರಿ. GSTIN ನಂಬರ್ ಆಯ್ಕೆ ಮಾಡಿ ಜಿಯೋಜಿಎಸ್ಟಿ ಸ್ಟಾರ್ಟರ್ ಕಿಟ್ ಕ್ರಿಯಾಶೀಲಗೊಳಿಸಿ.

English summary

Reliance Jio offers JioGST Starter Kit with free data

Reliance Jio on Thursday announced a new scheme — JioGST Starter Kit worth Rs 1,999. The starter kit offers JioFi device.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X