For Quick Alerts
ALLOW NOTIFICATIONS  
For Daily Alerts

ಜಿಯೋ 4G ಸ್ಮಾರ್ಟ್ಫೋನ್ ಲಾಂಚ್..! ಮುಖೇಶ್ ಅಂಬಾನಿ ಘೋಷಿಸಿರುವ ಉಚಿತ ಆಫರ್ ಗಳೇನು..?

ಅನಿಯಮಿತ 4G ಡೇಟಾ, ಕರೆ ಮತ್ತು ಸ್ಮಾರ್ಟ್ ಫೋನ್ ಮೊತ್ತ ರೂ. 1500 ಮರುಪಾವತಿ ಮಾಡುವ ಬಗ್ಗೆ ಮಾತನಾಡಿದ್ದಾರೆ. ಹೀಗೆ ಅಂಬಾನಿ ಜಿಯೋ 4G ಸ್ಮಾರ್ಟ್ ಫೋನ್ ಬಗ್ಗೆ ಹಾಗೂ ಘೋಷಿಸಿರುವ ಆಫರ್ ಗಳು ಯಾವುವು ಎಂಬುದನ್ನು ನೋಡೋಣ...

By Siddu
|

ರಿಲಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ 40ನೇ ವಾರ್ಷಿಕ ಸಾಮಾನ್ಯ ಸಭೆ (AGM) ಯಲ್ಲಿ ಮುಖ್ಯಸ್ಥ ಮುಖೇಶ್ ಅಂಬಾನಿ ಜಿಯೋ 4G ಸ್ಮಾರ್ಟ್ ಫೋನ್ ಕುರಿತು ಮಾತುಗಳನ್ನಾಡಿದ್ದು, ಗ್ರಾಹಕರಿಗೆ ಕೊಡುಗೆಗಳ ಮಹಾಪೂರವನ್ನೇ ಹರಿಸಿದ್ದಾರೆ.

 

ಅಂಬಾನಿ ಇದನ್ನು ಭಾರತದ ಇಂಟಲಿಜೆಂಟ್ ಸ್ಮಾರ್ಟ್ ಫೋನ್ ಎಂಬುದಾಗಿ ವರ್ಣಿಸಿದ್ದು, ರಿಲಯನ್ಸ್ ಕಂಪನಿ ಹಾಗೂ ಜಿಯೋ ಸಾಧನೆಗಳನ್ನು ವಾರ್ಷಿಕ ಸಾಮಾನ್ಯ ಸಭೆ (AGM) ಯಲ್ಲಿ ಬಿಚ್ಚಿಟ್ಟರು. ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯ ಯೋಜನೆಯನ್ನು ಶ್ಲಾಘಿಸಿ, ಮೊಬೈಲ್ ಡೇಟಾ ಬಳಕೆಯಲ್ಲಿ ನಮ್ಮ ದೇಶ ಚೀನಾ ಮತ್ತು ಅಮೆರಿಕಾವನ್ನು ಹಿಂದಿಕ್ಕಿದೆ ಎಂದರು.

ಭಾರತದಲ್ಲಿ ಜಿಯೋ 4G ಸ್ಮಾರ್ಟ್ ಫೋನ್ ಹೊಸ ಕ್ರಾಂತಿಗೆ ಕಾರಣವಾಗಲಿದ್ದು, ಟೆಲಿಕಾಂ ರಂಗದಲ್ಲಿ ವೇಗವಾಗಿ ಎಲ್ಲೆಡೆ ಪಸರಿಸಲಿದೆ ಎಂದರು.

ಅನಿಯಮಿತ 4G ಡೇಟಾ, ಕರೆ ಮತ್ತು ಸ್ಮಾರ್ಟ್ ಫೋನ್ ಮೊತ್ತ ರೂ. 1500 ಮರುಪಾವತಿ ಮಾಡುವ ಬಗ್ಗೆ ಮಾತನಾಡಿದ್ದಾರೆ. ಹೀಗೆ ಅಂಬಾನಿ ಜಿಯೋ 4G ಸ್ಮಾರ್ಟ್ ಫೋನ್ ಹಾಗೂ ಘೋಷಿಸಿರುವ ಆಫರ್ ಗಳು ಯಾವುವು ಎಂಬುದನ್ನು ನೋಡೋಣ...

100 ಮಿಲಿಯನ್ ಗ್ರಾಹಕರು!

100 ಮಿಲಿಯನ್ ಗ್ರಾಹಕರು!

ಕೇವಲ 170 ದಿನಗಳಲ್ಲಿ ಜಿಯೋ 100 ಮಿಲಿಯನ್ ಗ್ರಾಹಕರು ಜಿಯೋ ಸೇವೆಗಳನ್ನು ಪಡೆಯುತ್ತಿದ್ದಾರೆ. ಜಿಯೋ ಪ್ರತಿ ಸೆಕೆಂಡಿಗೆ 7 ಗ್ರಾಹಕರನ್ನು ಹೊಂದುತ್ತಿದೆ. ಇದು ಫೆಸ್ ಬುಕ್, ವಾಟ್ಸ್ ಅಪ್, ಸ್ಕೈಪೇ ಗಿಂತಲೂ ವೇಗವಾಗಿ ಜಿಯೋ ಬೆಳೆದಿದೆ ಎಂದು ಅಂಬಾನಿ ಹೇಳಿದರು.

ಡೇಟಾ ಬಳಕೆಯಲ್ಲಿ ಭಾರತ ನಂಬರ್ 1

ಡೇಟಾ ಬಳಕೆಯಲ್ಲಿ ಭಾರತ ನಂಬರ್ 1

ಇಂದು ಜಿಯೋ 100 ಮಿಲಿಯನ್ ಗ್ರಾಹಕರನ್ನು ಹೊಂದಿದ್ದು, ಇದರಲ್ಲಿ ರೂ. 309ರ ಪ್ಲಾನ್ ಅಥವಾ ಅದಕ್ಕಿಂತಲೂ ಹೆಚ್ಚಿನ ಪ್ಲಾನ್ ಗಳನ್ನು ಗ್ರಾಹಕರು ರೀಚಾರ್ಜ್ ಮಾಡಿದ್ದಾರೆ. ಮೊಬೈಲ್ ಡೇಟಾ ಬಳಕೆಯಲ್ಲಿ ಭಾರತ ಚೀನಾ ಮತ್ತು ಅಮೆರಿಕಾವನ್ನು ಹಿಂದಿಕ್ಕಿದೆ ಎಂದರು.

99% ಜನಸಂಖ್ಯೆ ತೆಕ್ಕೆಗೆ
 

99% ಜನಸಂಖ್ಯೆ ತೆಕ್ಕೆಗೆ

ಮುಂದಿನ ಒಂದು ವರ್ಷದಲ್ಲಿ ದೇಶದ ಶೇ. 99ರಷ್ಟು ಜನಸಂಖ್ಯೆಯನ್ನು ಜಿಯೋ ಸೇವೆಗಳು ಕವರ್ ಮಾಡಲಿದೆ. ಜಿಯೋ ತುಂಬಾ ವೇಗದ ನೆಟ್ವರ್ಕ್ ಹೊಂದಿದ್ದು, ಅಂತರ್ಜಾಲ ರಂಗದಲ್ಲಿ ಭದ್ರ ಅಡಿಪಾಯ ಹಾಕಲು ತಳಭಾಗದಿಂದ ಕಾರ್ಯನಿರತವಾಗಿದೆ ಎಂದು ಅಂಬಾನಿ ಹೇಳಿದರು.

4G ನೆಟ್ವರ್ಕ್ ಬೃಹತ್ ಜಾಲ

4G ನೆಟ್ವರ್ಕ್ ಬೃಹತ್ ಜಾಲ

ದೇಶದ ಪ್ರಮುಖ ಟೆಲಿಕಾಂ ಕಂಪನಿಗಳು 2G ನೆಟ್ವರ್ಕ್ ಭದ್ರ ಅಡಿಪಾಯ ಹಾಕಲು ಹೆಚ್ಚುಕಡಿಮೆ 25 ವರ್ಷಗಳನ್ನು ತೆಗೆದುಕೊಂಡಿತು. ಆದರೆ ಜಿಯೋ ಕೇವಲ ಮೂರು ವರ್ಷಗಳಲ್ಲಿ 4G ನೆಟ್ವರ್ಕ್ ನ ಬೃಹತ್ ಜಾಲವನ್ನು ಸೃಷ್ಟಿಸಲಿದೆ ಎಂದರು. ಅದಕ್ಕಾಗಿಯೇ ಮುಖೇಶ್ ಅಂಬಾನಿ ಜಿಯೋ ಸ್ಮಾರ್ಟ್ಫೋನ್ ಅನ್ನು ಭಾರತದಲ್ಲಿ ನಿರ್ಮಿಸಿದ್ದಾರೆ.

ಜಿಯೋ 4G ಸ್ಮಾರ್ಟ್ಫೋನ್ ಬಿಡುಗಡೆ

ಜಿಯೋ 4G ಸ್ಮಾರ್ಟ್ಫೋನ್ ಬಿಡುಗಡೆ

ನೂತನ ವೈಶಿಷ್ಟ್ಯತೆಗಳನ್ನು ಹೊಂದಿರುವ ಜಿಯೋ 4G ಸ್ಮಾರ್ಟ್ಫೋನ್ ಅಂಬಾನಿ ಬಿಡುಗಡೆ ಮಾಡಿದ್ದು, ಇದನ್ನು ಇಂಡಿಯಾ ಕಾ ಇಂಟಲಿಜೆಂಟ್ ಸ್ಮಾರ್ಟ್ಫೋನ್ ಎಂದು ವರ್ಣಿಸಿದ್ದಾರೆ.

4G ಸ್ಮಾರ್ಟ್ಫೋನ್ ಸೌಲಭ್ಯಗಳೇನು?

4G ಸ್ಮಾರ್ಟ್ಫೋನ್ ಸೌಲಭ್ಯಗಳೇನು?

ಎಲ್ಲ ಭಾರತೀಯರಿಗೆ ಜಿಯೋ ಫೋನ್ 0 ಬೆಲೆಯಲ್ಲಿ ಸಿಗಲಿದೆ.! ಜಿಯೋ ಪ್ರತಿ ತಿಂಗಳಿಗೆ ರೂ. 153 ನಿಗದಿಪಡಿಸಿದ್ದು, ಡೇಟಾ ಸೌಲಭ್ಯ ಒದಗಿಸಲಿದೆ. ಜಿಯೋ ಫೋನ್ ನಲ್ಲಿ ಧ್ವನಿ ಕರೆಗಳು  ಉಚಿತವಾಗಿ ಇರಲಿವೆ ಎಂದಿದ್ದಾರೆ.

ಜಿಯೋ ಲಾಂಚ್ ಯಾವಾಗ?

ಜಿಯೋ ಲಾಂಚ್ ಯಾವಾಗ?

ಅಗಸ್ಟ್ 15ರಂದು ಜಿಯೋ ಫೋನ್ ಬಿಡುಗಡೆಯಾಗಲಿದೆ. ಅಗಸ್ಟ್ 24ರಿಂದ ಬುಕಿಂಗ್ ಪ್ರಕ್ರಿಯೆ ಪ್ರಾರಂಭವಾಗಲಿದೆ. ಫೋನ್ ಗಳು ಸೆಪ್ಟಂಬರ್ ನಲ್ಲಿ ಗ್ರಾಹಕರ ಕೈ ಸೇರಲಿವೆ. ಜಿಯೋ ಫೋನ್ ಗಳು 2G ಬಳಕೆಯಲ್ಲಿರದಂತೆ ಮಾಡಲಿದ್ದು, ಇದು ಹೊಸ ಮೈಲುಗಲ್ಲನ್ನು ಸೃಷ್ಟಿ ಮಾಡಲಿದೆ ಎಂದು ಅಂಬಾನಿ ಹೇಳಿದರು.

ರಿಫಂಡ್ ಸೌಲಭ್ಯ!

ರಿಫಂಡ್ ಸೌಲಭ್ಯ!

ಜಿಯೋ 4G ಸ್ಮಾರ್ಟ್ಫೋನ್ ಖರೀದಿಸುವಾಗ ರೂ. 1500 ಪಾವತಿಸಬೇಕು. ಫೋನ್ ಹಿಂದಿರುಗಿಸಿದ 36 ತಿಂಗಳ ನಂತರ ಪಾವತಿಸಲ್ಟಟ್ಟ ರೂ. 1500 ಮೊತ್ತ ಮರುಪಾವತಿಸಲಾಗುವುದು ಎಂದು ಅಂಬಾನಿ ಹೇಳಿದ್ದಾರೆ. ಎದುರಾಗಬಹುದಾದ ದುರೂಪಯೋಗಗಳನ್ನು ತಡೆಯಲು ಇದು ಸಹಕಾರಿಯಾಗಲಿದೆ.

ಟಾರ್ಗೆಟ್ ಎಷ್ಟು?

ಟಾರ್ಗೆಟ್ ಎಷ್ಟು?

ಜಿಯೋ 4G ಸ್ಮಾರ್ಟ್ಫೋನ್ ಭಾರತದಲ್ಲಿ ಉತ್ಪಾದನೆ ಮಾಡಲಾಗುತ್ತಿದ್ದು, ಪ್ರತಿ ವಾರಕ್ಕೆ 5 ಮಿಲಿಯನ್ ಗ್ರಾಹಕರನ್ನು ಹೊಂದುವ ಗುರಿ ಇರಿಸಿದ್ದು, 5 ಮಿಲಿಯನ್ ಫೋನ್ ಗಳನ್ನು ಪೂರೈಸಲಿದೆ. ಕಳೆದ ತ್ರೈಮಾಸಿಕದಿಂದ ಫೋನ್ ಉತ್ಪಾದನೆ ಕಾರ್ಯ ಚಾಲ್ತಿಯಲ್ಲಿದೆ ಎಂದರು.

English summary

Jio 4G Feature Phone 'JioPhone' Launched By Mukesh Ambani

The JioPhone will effectively cost Rs 0 (and not Rs 500) with one time refundable security of Rs 1,500 which will be refundable for 36 months.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X