For Quick Alerts
ALLOW NOTIFICATIONS  
For Daily Alerts

ಫಾರ್ಚೂನ್ 500 ಪಟ್ಟಿಯಲ್ಲಿ ದೇಶದ 7 ಕಂಪನಿಗಳು

ಫಾರ್ಚೂನ್ ನಿಯತಕಾಲಿಕೆ ಪ್ರಕಟಿಸಿದ ಜಗತ್ತಿನ 500 ಪ್ರಮುಖ ಕಂಪನಿಗಳ ಪಟ್ಟಿಯಲ್ಲಿ ದೇಶದ 7 ಕಂಪನಿಗಳು ಸ್ಥಾನ ಪಡೆದಿವೆ.

By Siddu
|

ಫಾರ್ಚೂನ್ ನಿಯತಕಾಲಿಕೆ ಪ್ರಕಟಿಸಿದ ಜಗತ್ತಿನ 500 ಪ್ರಮುಖ ಕಂಪನಿಗಳ ಪಟ್ಟಿಯಲ್ಲಿ ದೇಶದ 7 ಕಂಪನಿಗಳು ಸ್ಥಾನ ಪಡೆದಿವೆ.

 

ಜಾಗತಿಕವಾಗಿ ಫಾರ್ಚೂನ್ 500ರ ಪಟ್ಟಿಯಲ್ಲಿ ಚಿಲ್ಲರೆ ವ್ಯಾಪಾರ ರಂಗದ ದೈತ್ಯ ಕಂಪನಿ ವಾಲ್ ಮಾರ್ಟ್ ಅಗ್ರ ಸ್ಥಾನದಲ್ಲಿದೆ. ಫಾರ್ಚೂನ್ ತಯಾರಿಸಿರುವ ಪಟ್ಟಿಯಲ್ಲಿ ದೇಶದ ಭಾರತೀಯ ತೈಲ ನಿಗಮ (ಐಒಸಿ) ಮುಂಚೂಣಿಯಲ್ಲಿದ್ದು, 161ನೇ ಸ್ಥಾನ ಪಡೆದುಕೊಂಡಿದೆ.

ಮಾನದಂಡ ಮತ್ತು ವಿಶೇಷ

ಮಾನದಂಡ ಮತ್ತು ವಿಶೇಷ

ಕಂಪನಿಗಳ ಆದಾಯ ಗಳಿಕೆಯ ಆಧಾರದ ಮೇಲೆ ಫಾರ್ಚೂನ್ ಶ್ರೇಯಾಂಕಗಳನ್ನು ಪ್ರಕಟಿಸಿದೆ. ಇದರಲ್ಲಿ ಭಾರತದ ಏಳು ಸಂಸ್ಥೆಗಳಲ್ಲಿ 4 ಸಾರ್ವಜನಿಕ ವಲಯ ಹಾಗೂ 3 ಖಾಸಗಿ ಸಂಸ್ಥೆಗಳು ಸೇರಿವೆ. ಚಿನ್ನಾಭರಣ ವಲಯದ ಖಾಸಗಿ ಸಂಸ್ಥೆ ರಾಜೇಶ್‌ ಎಕ್ಸ್‌ಪೋರ್ಟ್ಸ್ ಇದೇ ಮೊದಲ ಬಾರಿ ಫಾರ್ಚೂನ್ 500 ಪಟ್ಟಿಯಲ್ಲಿದ್ದು, 423ನೇ ಸ್ಥಾನದಲ್ಲಿದೆ.

ದೇಶದ 7 ಕಂಪನಿಗಳು

ದೇಶದ 7 ಕಂಪನಿಗಳು

ಭಾರತೀಯ ತೈಲ ನಿಗಮ (indian oil) 161 ಸ್ಥಾನದಲ್ಲಿದ್ದು, 54.7 ಬಿಲಿಯನ್‌ ಡಾಲರ್‌ (₹3.52 ಲಕ್ಷ ಕೋಟಿ) ಆದಾಯ ಹೊಂದಿದೆ.
ರಿಲಯನ್ಸ್ ಇಂಡಸ್ಟ್ರಿಸ್ - 215ನೇ ಸ್ಥಾನ, ಟಾಟಾ ಮೋಟಾರ್ಸ್- 226ನೇ ಸ್ಥಾನ, ಭಾರತೀಯ ಸ್ಟೇಟ್‌ ಬ್ಯಾಂಕ್‌- 232 ನೇ ಸ್ಥಾನ, ಭಾರತ್‌ ಪೆಟ್ರೋಲಿಯಂ- 358ನೇ ಸ್ಥಾನ, ಹಿಂದುಸ್ತಾನ ಪೆಟ್ರೋಲಿಯಂ- 367ನೇ ಸ್ಥಾನ

ಅಗ್ರ 3 ಕಂಪನಿಗಳು
 

ಅಗ್ರ 3 ಕಂಪನಿಗಳು

ಚಿಲ್ಲರೆ ವ್ಯಾಪಾರ ಕ್ಷೇತ್ರದ ವಾಲ್‌ಮಾರ್ಟ್- 4,82,130 ಮಿಲಿಯನ್‌ ಡಾಲರ್‌ (ರೂ. 31 ಲಕ್ಷ ಕೋಟಿ) ಆದಾಯದೊಂದಿಗೆ ಮುಂಚೂಣಿಯಲ್ಲಿದೆ. ನಂತರದಲ್ಲಿ ಸ್ಟೇಟ್‌ ಗ್ರಿಡ್‌- 3,29,601 ಮಿಲಿಯನ್‌ ಡಾಲರ್‌ ಹಾಗೂ ಮೂರನೇ ಸ್ಥಾನದಲ್ಲಿ ಚೀನಾ ನ್ಯಾಷನಲ್‌ ಪೆಟ್ರೋಲಿಯಂ ಕಂಪನಿ ಇದೆ. ಫಾರ್ಚೂನ್ ಪಟ್ಟಿಯಲ್ಲಿ ಭಾರತದ ಪ್ರಭಾವಶಾಲಿ ಮಹಿಳೆಯರು

English summary

Fortune 500: 7 Indian cos make it to list

Seven Indian companies have made it to the latest Fortune 500 list of the worlds biggest corporations in terms of revenue with the retail giant Walmart topping the global rankings.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X