For Quick Alerts
For Daily Alerts
ಬಿಲ್ ಗೇಟ್ಸ್ ಅವರನ್ನು ಹಿಂದಿಕ್ಕಿ ಒಂದು ದಿನದ ಮಟ್ಟಿಗೆ ವಿಶ್ವದ ಅತೀ ಶ್ರೀಮಂತ ವ್ಯಕ್ತಿ ಎನಿಸಿದರು!
ಜಾಗತಿಕ ಇ–ಕಾಮರ್ಸ್ ಕ್ಷೇತ್ರದ ದೈತ್ಯ ಸಂಸ್ಥೆ ಅಮೆಜಾನ್ ಕಂಪೆನಿಯ ಸಿಇಒ ಜೆಫ್ ಬೆಜೊಸ್ ಒಂದು ದಿನದ ಮಟ್ಟಿಗೆ ವಿಶ್ವದ ಅತೀ ಶ್ರೀಮಂತ ವ್ಯಕ್ತಿ ಎನಿಸಿದರು!
|
ಜಾಗತಿಕ ಇ-ಕಾಮರ್ಸ್ ಕ್ಷೇತ್ರದ ದೈತ್ಯ ಸಂಸ್ಥೆ ಅಮೆಜಾನ್ ಕಂಪೆನಿಯ ಸಿಇಒ ಜೆಫ್ ಬೆಜೊಸ್ ಒಂದು ದಿನದ ಮಟ್ಟಿಗೆ ವಿಶ್ವದ ಅತೀ ಶ್ರೀಮಂತ ವ್ಯಕ್ತಿ ಎನಿಸಿದರು!
ಗುರುವಾರ ಷೇರುಪೇಟೆಯ ಆರಂಭದಲ್ಲಿ ಅಮೆಜಾನ್ ಷೇರು ಬೆಲೆ ಶೇ 1.6ರಷ್ಟು ಏರಿಕೆಯಾಗಿದ್ದರಿಂದ ಜೆಫ್ ಬೆಜೊಸ್ ಗೆ 1.4 ಮಿಲಿಯನ್ ಡಾಲರ್ ಲಭಿಸಿತ್ತು. ಹೀಗಾಗಿ ಅವರ ಒಟ್ಟಾರೆ ಆಸ್ತಿ ಮೌಲ್ಯ 9,500 ಕೋಟಿ ಡಾಲರ್ಗೆ ಏರಿಕೆಯಾಗಿತ್ತು. ಗುರುವಾರದ ಷೇರು ವಹಿವಾಟಿನ ವ್ಯತ್ಯಾಸದಿಂದ ಜೆಫ್, ಬಿಲ್ ಗೇಟ್ಸ್ ಅವರನ್ನು ಹಿಂದಿಕ್ಕಿದ್ದರು.
ಬುಧವಾರದ ಷೇರುಪೇಟೆ ಅಂತ್ಯಕ್ಕೆ ಬಿಲ್ ಗೇಟ್ಸ್ ಒಟ್ಟಾರೆ ಆಸ್ತಿ 9000 ಕೋಟಿ ಡಾಲರ್ ನಷ್ಟಿತ್ತು, ಆದರೆ ಗುರುವಾರ ಷೇರುಒಏಟೆ ಆರಂಬದಲ್ಲಿ ಜೆಫ್ ಬಿಜೋಸ್ ಆಸ್ತಿ ಮೌಲ್ಯ 9,500 ಕೋಟಿಗೆ ಏರಿಕೆಯಾಗಿತ್ತು. 2013ರಿಂದ ಮೈಕ್ರೋಸಾಫ್ಟ್ ಮುಖ್ಯಸ್ಥ ಬಿಲ್ ಗೇಟ್ಸ್ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರು.
English summary