For Quick Alerts
ALLOW NOTIFICATIONS  
For Daily Alerts

ಖೋಟಾ ನೋಟು ಪತ್ತೆ ಮಾಡುವುದು ಹೇಗೆ?

By Prasad
|

ಖೋಟಾ ನೋಟು ಪತ್ತೆ ಮಾಡುವುದು ಹೇಗೆ?
ಬ್ಯಾಂಕಿನಲ್ಲಿ, ಚಿನ್ನದ ಅಂಗಡಿಯಲ್ಲಿ, ಬಿಗ್ ಮಾಲ್‌ಗಳಲ್ಲಿ ಅಥವಾ ಯಾವುದೇ ವ್ಯಾಪಾರ ಸ್ಥಳಗಳಲ್ಲಿ ಐನೂರು ಅಥವಾ ಸಾವಿರದ ನೋಟು ನೀಡಿದಾಗ ಅದನ್ನು ಕೂಲಂಕಷವಾಗಿ ಪರೀಕ್ಷಿಸದೆ ತೆಗೆದುಕೊಳ್ಳುವುದೇ ಇಲ್ಲ. ಇದು ಪ್ರತಿ ನಾಗರಿಕರಿಗೂ ತಿಳಿದ ಸಂಗತಿ. ಆದರೆ, ತಿಳಿಯದಿರದ ಸಂಗತಿಯೇನೆಂದರೆ, ಆ ನೋಟು ಖೋಟಾ ಹೌದೋ ಅಲ್ಲವೋ ಎಂಬುದನ್ನು ಪತ್ತೆ ಹಚ್ಚುವುದು ಹೇಗೆ ಎಂಬುದು.

ಖೋಟಾ ನೋಟು ಚಲಾವಣೆ ಮಾಡುವುದು ಅಥವಾ ಇರಿಸಿಕೊಳ್ಳುವುದು ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆಯ ಪ್ರಕಾರ ಗುರುತರ ಅಪರಾಧ. ಆ ನೋಟು ನೋಡಲು ಎಲ್ಲ ನೋಟುಗಳಂತೆಯೇ ಇರುತ್ತದೆ. ಆದರೆ, ಅಸಲಿಗೆ ಅದು ಅಸಲು ನೋಟು ಆಗಿರುವುದೇ ಇಲ್ಲ. ನಮ್ಮ ಕೈಯಲ್ಲಿ ಇರುವುದು ಖೋಟಾ ನೋಟು ಎಂದು ಬೇರೆಯವರಿಂದ ತಿಳಿಯುವ ಹೊತ್ತಿಗೆ ಅನಾಹುತ ಸಂಭವಿಸಿರುತ್ತದೆ.

ನೋಟು ಅಸಲಿಯೋ ನಕಲಿಯೋ ಎಂಬುದು ನಾಗರಿಕರಿಗೇ ತಿಳಿಯಪಡಿಸುವ ಉದ್ದೇಶದಿಂದ ಭಾರತೀಯ ರಿಸರ್ವ್ ಬ್ಯಾಂಕ್ http://www.paisaboltahai.rbi.org.in/ ಅಂತರ್ಜಾಲ ತಾಣವನ್ನು ಆರಂಭಿಸಿದೆ. ಅದಕ್ಕೆ, 'ಪೈಸೆಯ ಮಾತನ್ನು ಆಲಿಸಿರಿ, ಏಕೆಂದರೆ ಪೈಸೆ ಮಾತನಾಡುತ್ತದೆ' ಎಂಬ ಅಡಿಬರಹದೊಂದಿಗೆ ವೆಬ್‌ಸೈಟನ್ನು ಆರ್ಬಿಐ ಆರಂಭಿಸಿದೆ. ಇದರರ್ಥ, ರುಪಾಯಿಯೇ ತಾನು ಅಸಲಿ ಅಥವಾ ನಕಲಿ ಎಂದು ಹೇಳುತ್ತದೆ, ಅದನ್ನು ಗುರುತಿಸುವ ಜಾಣ್ಮೆ ನಮ್ಮಲ್ಲಿ ಇರಬೇಕು.

ಆಕರ್ಷಕ ಪೋಸ್ಟರ್ ಮತ್ತು ಚಿತ್ರಗಳ ಮುಖಾಂತರ ಖೋಟಾ ನೋಟುಗಳನ್ನು ಗುರುತಿಸುವ ಬಗೆಯನ್ನು ರಿಸರ್ವ್ ಬ್ಯಾಂಕ್ ತಿಳಿಸಿಕೊಟ್ಟಿದೆ. ಅದು ಇನ್ನಷ್ಟು ಸುಲಭವಾಗಿ ನಮ್ಮ ಓದುಗರಿಗೆ ತಿಳಿಸಬೇಕೆನ್ನುವು ಉದ್ದೇಶದಿಂದ ಪ್ರಶ್ನೋತ್ತರಗಳ ಶೈಲಿಯಲ್ಲಿ ಮಾಹಿತಿ ನೀಡಲಾಗಿದೆ.

ಖೋಟಾ ನೋಟು ಯಾವುದು?
ಇದನ್ನು ಸರಳವಾಗಿ ಉತ್ತರಿಸಬೇಕೆಂದರೆ, ಯಾವುದು ಅಸಲಿ ಭಾರತೀಯ ರುಪಾಯಿಯ ಗುಣಲಕ್ಷಣಗಳನ್ನು ಹೊಂದಿರುವುದಿಲ್ಲವೋ ಅದೇ ನಕಲಿ ಅಥವಾ ಖೋಟಾ ನೋಟು.

ಖೋಟಾ ನೋಟು ಗುರುತಿಸುವುದು ಹೇಗೆ?
ಅಸಲಿ ನೋಟಿನಲ್ಲಿರಬೇಕಾದ ಗುಣಲಕ್ಷಣಗಳನ್ನು ಗುರುತಿಸಲು ಸಾಧ್ಯವಾಗದಿದ್ದರೂ ಖೋಟಾ ನೋಟು ಯಾವುದೆಂದು ಕಂಡುಹಿಡಿಯಲು ಸಾಧ್ಯ. ನೋಟನ್ನು ಗಮನಿಸಿ, ತಿರುಗಿಮುರುಗಿ ನೋಡಿ, ಅದನ್ನು ಕೈಯಿಂದ ಹಿಡಿದು ನೋಡುವ ಮುಖಾಂತರ ಖೋಟಾ ನೋಟು ಯಾವುದೆಂದು ಕಂಡುಹಿಡಿಯಬಹುದು.

ಎಲ್ಲ ನೋಟುಗಳು ಹೇಗಿರುತ್ತವೆ?
* 10 ರು.
* 20 ರು.
* 50 ರು.
* 100 ರು.
* 500 ರು.
* 1000 ರು.

ಭಾರತದಲ್ಲಿ ಎಷ್ಟು ಖೋಟಾ ನೋಟುಗಳು ಚಲಾವಣೆಯಲ್ಲಿವೆ?
ಪ್ರಸ್ತುತ ಚಲಾವಣೆಯಲ್ಲಿರುವ ಖೋಟಾ ನೋಟುಗಳ ನಿಖರವಾದ ಲೆಕ್ಕವನ್ನು ಯಾವ ಸಂಸ್ಥೆಯೂ ನೀಡಿಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಖೋಟಾ ನೋಟುಗಳ ಮೇಲೆ ಬ್ಯಾಂಕುಗಳೇ ಜಾಸ್ತಿ ನಿಗಾ ಇಡುತ್ತಿರುವುದರಿಂದ ಮತ್ತು ಅವುಗಳನ್ನು ಗುರುತಿಸಿ ರಿಸರ್ವ್ ಬ್ಯಾಂಕ್ ಗಮನಕ್ಕೆ ತರುತ್ತಿರುವುದರಿಂದ ನಕಲಿ ನೋಟುಗಳ ಚಲಾವಣೆ ಸಾಕಷ್ಟು ತಗ್ಗಿದೆ.

ಖೋಟಾ ನೋಟುಗಳ ತೊಂದರೆಯನ್ನು ರಿಸರ್ವ್ ಬ್ಯಾಂಕ್ ಹೇಗೆ ಸರಿಪಡಿಸುತ್ತಿದೆ?

* ಬ್ಯಾಂಕ್ ನೋಟ್ ಮೇಲಿನ ಸುರಕ್ಷತಾ ಗುಣಲಕ್ಷಣಗಳನ್ನು ಕಾಲಕಾಲಕ್ಕೆ ಉತ್ತಮಪಡಿಸುವಿಕೆ.
* ಬ್ಯಾಂಕಲ್ಲಿ ಖೋಟಾ ನೋಟನ್ನು ತಕ್ಷಣ ಗುರುತಿಸುವಂತಹ ಅತ್ಯುನ್ನತ ಸಾಧನಗಳ ಅಳವಡಿಕೆ.
* ಅಸಲಿ ನೋಟುಗಳ ಬಗ್ಗೆ ನಾಗರಿಕರಲ್ಲಿ ನಿರಂತರವಾಗಿ ಜಾಗೃತಿ ಬೆಳೆಸುವುದು.
* ಹಣಕಾಸು ವ್ಯವಹಾರ ನೋಡುವವರಿಗೆ ನಕಲಿ ನೋಟು ಗುರುತಿಸಲು ತರಬೇತಿ.
* ಬ್ಯಾಂಕ್ ಮತ್ತು ಪೊಲೀಸ್ ಇಲಾಖೆಯ ನಡುವೆ ನಿರಂತರ ಸಂವಹನ.

ಅರಿವಿಲ್ಲದೆ ನಕಲಿ ನೋಟು ಹೊಂದಿದ್ದರೆ ಅದಕ್ಕೆ ಪ್ರತಿಯಾಗಿ ಅಷ್ಟೇ ಮೌಲ್ಯದ ಅಸಲಿ ನೋಟು ದೊರೆಯುವುದಾ?
ನಕಲಿ ಅಥವಾ ಖೋಟಾ ನೋಟುಗಳಿಗೆ ಯಾವುದೇ ಬೆಲೆಯಿಲ್ಲ.

ಕಾನೂನು ಏನು ಹೇಳುತ್ತದೆ?
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 489ಎ ಮತ್ತು 489ಇ ಪ್ರಕಾರ ಖೋಟಾ ನೋಟು ಮುದ್ರಿಸುವುದು ಮತ್ತು ಚಲಾವಣೆ ಮಾಡುವುದು ಅಪರಾಧ.

ತಿಳಿವಳಿಕೆಯಿಲ್ಲದೆ ಖೋಟಾ ನೋಟು ಬಳಿಯಿದ್ದರೆ ಏನು ಮಾಡಬೇಕು?
ಅಪರಾಧ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ)ಯ ಸೆಕ್ಷನ್ 39ರ ಪ್ರಕಾರ, ಯಾರಿಗೇ ಆದಲ್ಲಿ ಖೋಟಾ ಅಥವಾ ನಕಲಿ ನೋಟಿನ ಚಲಾವಣೆ ಮಾಡುತ್ತಿರುವುದರ ಬಗ್ಗೆ ಅರಿವಿದ್ದರೆ ಅಥವಾ ಆ ಬಗ್ಗೆ ಸಂದೇಹ ಬಂದರೆ ಕೂಡಲೆ ಮ್ಯಾಜಿಸ್ಟ್ರೇಟ್ ಅಥವಾ ಪೊಲೀಸರಿಗೆ ದೂರು ನೀಡಬೇಕು.

ಖೋಟಾ ನೋಟು ಪಡೆಯದಂತೆ ಮಾಡುವುದು ಹೇಗೆ?
ಯಾವುದೇ ನೋಟನ್ನು ಸ್ವೀಕರಿಸುವಾಗ ಸಂದೇಹ ಬಂದಲ್ಲಿ ಕೂಲಂಕಷವಾಗಿ ಪರಿಶೀಲಿಸಿ ನಂತರ ಅಸಲಿ ಎಂದು ಖಚಿತವಾದ ಮೇಲೆ ಪಡೆಯಬೇಕು.

ಒಂದು ವೇಳೆ ಬ್ಯಾಂಕಲ್ಲಿ ಖೋಟಾ ನೋಟು ಜಮಾ ಆದರೆ, ಬ್ಯಾಂಕ್ ಹೇಗೆ ವ್ಯವಹರಿಸುತ್ತದೆ?
ಖೋಟಾ ನೋಟು ಜಮಾ ಮಾಡಿದ ವ್ಯಕ್ತಿಯ ಎದುರಿನಲ್ಲೇ ನೋಟನ್ನು ವಶಕ್ಕೆ ತೆಗೆದುಕೊಂಡು ಬ್ಯಾಂಕ್ ಆತನಿಗೆ ರಶೀದಿ ನೀಡುತ್ತದೆ. ಬ್ಯಾಂಕ್ ಕ್ಯಾಶಿಯರ್ ಮತ್ತು ಗ್ರಾಹಕ ಆ ರಶೀದಿಯ ಮೇಲೆ ಸಹಿ ಹಾಕಬೇಕು. ಗ್ರಾಹಕ ಸಹಿ ಹಾಕದಿದ್ದರೂ ಬ್ಯಾಂಕ್ ಗ್ರಾಹಕನಿಗೆ ನೀಡುತ್ತದೆ. ವಶಪಡಿಸಿಕೊಂಡ ನೋಟನ್ನು ಮುಂದಿನ ಕ್ರಮ ಜರುಗಿಸಲು ಪೊಲೀಸರ ವಶಕ್ಕೆ ನೀಡುತ್ತದೆ.

English summary

Money talks; FAQs on counterfeit notes | How to identify fake notes | ಖೋಟಾ ನೋಟು : ಪೈಸೆ ಮಾತಾಡುತ್ತಿದೆ ಆಲಿಸಿರಿ

In a move aimed at spreading awareness among individuals on counterfeit notes, the Reserve Bank of India has launched a website www.paisaboltahai.rbi.org.in with a catchy tagline 'Pehchano Paise Ki Boli, Kyunki Paisa Bolta Hai.'
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X