For Quick Alerts
ALLOW NOTIFICATIONS  
For Daily Alerts

ಪಿಂಚಣಿದಾರರಿಗೂ ಆನ್ ಲೈನ್ ನಲ್ಲಿ ಪಿಎಫ್ ಲಭ್ಯ

By Mahesh
|

ಭವಿಷ್ಯ ನಿಧಿ ಸೌಲಭ್ಯ ಹೊಂದಿರುವ ಸುಮಾರು 50 ಲಕ್ಷ ಪಿಂಚಣಿ ಚಂದಾದಾರರಿಗೆ ಸಿಹಿ ಸುದ್ದಿ ಸಿಕ್ಕಿದೆ. ಜುಲೈ 1 ರಿಂದ ಪಿಎಫ್ ವರ್ಗಾಅಣೆ ಹಾಗು ಹಿಂತೆಗೆತಕ್ಕಾಗಿ ಆನ್ ಲೈನ್ ಮೂಲಕವೇ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಸಂಸ್ಥೆ ಹೇಳಿದೆ. ಇದರಿಂದ ಪಿಂಚಣಿದಾರರಿಗೆ ತ್ವರಿತವಾಗಿ ಪಿಎಫ್ ಹಣ ದೊರೆಯಲಿದೆ.

 

ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಯೋಜನೆ ಖಾತೆ ಮಾಹಿತಿ ಈಗ ಎಲ್ಲರಿಗೂ ಆನ್ ಲೈನ್ ನಲ್ಲಿ ಸಂಪೂರ್ಣವಾಗಿ ಲಭ್ಯವಿದೆ. ಇಪಿಎಫ್ ನಿಮ್ಮ PF ಖಾತೆಗೆ ಜಮೆಯಾಗಿರುವ ಮೊತ್ತ ಹಾಗೂ ಪಿಎಫ್ ಹಣ ಹಿಂಪಡೆಯುವುದು, ವರ್ಗಾವಣೆ ಮಾಡುವುದು ಇತ್ಯಾದಿ ಕ್ರಿಯೆ ಈಗ ಆನ್ ಲೈನ್ ಮೂಲಕ ಸಾಧ್ಯ.

ನಾವು ಕೇಂದ್ರಿಕೃತ ವಿಲೇವಾರಿ ವ್ಯವಸ್ಥೆಯನ್ನು ಅಳವಡಿಸಿದ್ದೇವೆ. ಜು.1 ರಿಂದ ಇದು ಕಾರ್ಯನಿರ್ವಹಿಸಲಿದೆ. ಆನ್ ಲೈನ್ ಮೂಲಕ ಸುಲಭವಾಗಿ ನಿಧಿಯನ್ನು ವರ್ಗಾವಣೆ ಹಾಗೂ ಕ್ಲೇಮ್ ಗಳನ್ನು ಪಡೆಯಬಹುದು ಎಂದು ಇಪಿಎಫ್ ಒ ನ ಅಯುಕ್ತ ಅನಿಲ್ ಸ್ವರೂಪ್ ಹೇಳಿದ್ದಾರೆ.

ಪಿಎಫ್ ಹಣ ವರ್ಗಾವಣೆ ಬಹುದೊಡ್ಡ ಸಮಸ್ಯೆಯಾಗಿದೆ. ಈಗ ಆನ್ ಲೈನ್ ಸೌಲಭ್ಯದಿಂದ ಉದ್ಯೋಗ ಬದಲಾವಣೆಗೊಂಡರೂ ಪಿಎಫ್ ಖಾತೆ ವರ್ಗಾವಣೆ ಸುಲಭವಾಗಲಿದೆ. ವಿಶೇಷವಾಗಿ ನಿವೃತ್ತಿ ಪಡೆದ ಉದ್ಯೋಗಿಗಳು ಸುಲಭವಾಗಿ ತಮ್ಮ ಪಿಎಫ್ ಹಣದ ಮೇಲೆ ನಿಗಾವಹಿಸಬಹುದು.ಇಪಿಎಫ್ ಆನ್ ಲೈನ್ ಯೋಜನೆ ಪ್ರಯೋಜನಗಳೇನು? ಯಾವಾಗ ಪಿಎಫ್ ವಿಥ್ ಡ್ರಾ ಮಾಡಬಹುದು? ಮುಂತಾದ ಪ್ರಶ್ನೆಗಳಿಗೆ ಉತ್ತರ ಮುಂದಿನ ಚಿತ್ರ ಸರಣಿಯಲ್ಲಿ...

ಪಿಎಫ್ ವಿಥ್ ಡ್ರಾ ಸಾಧ್ಯವೇ?

ಪಿಎಫ್ ವಿಥ್ ಡ್ರಾ ಸಾಧ್ಯವೇ?

ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಯೋಜನೆ ಖಾತೆದಾರ ಶಾಶ್ವತ ಖಾತೆ ಸಂಖ್ಯೆ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು ಈ ವರ್ಷಾಂತ್ಯಕ್ಕೆ ಪೂರ್ಣಗೊಳ್ಳುವ ಸಾಧ್ಯತೆಯಿದೆ. ಕ್ಲೇಮುಗಳನ್ನು ಪಡೆಯಲು ಉದ್ಯೋಗಿಯೂ ಉದ್ಯೋಗದಾತರ ಹತ್ತಿರ ತಿರುಗಬೇಕಾಗಿಲ್ಲ. ಪಿಎಫ್ ಖಾತೆ ಪರಿಶೀಲನೆಯನ್ನು EPFO ನೋಡಿಕೊಳ್ಳಲಿದೆ.

ಪಿಎಫ್ ವಿಥ್ ಡ್ರಾ ಸಾಧ್ಯವೇ?

ಪಿಎಫ್ ವಿಥ್ ಡ್ರಾ ಸಾಧ್ಯವೇ?

ಪಿಎಫ್ ಕೆಲವು ಸಂದರ್ಭಗಳಲ್ಲಿ ವರ್ಗಾಯಿಸಬಹುದಾಗಿದೆ. ಉದ್ಯೋಗಿ ಒಂದು ಸಂಸ್ಥೆ ತೊರೆದು ಮತ್ತೊಂದು ಸಂಸ್ಥೆ ಸೇರಿದ ಸಂದರ್ಭದಲ್ಲಿ ವರ್ಗಾಯಿಸಬಹುದು. ಆದರೆ, ಹೊಸ ಅಕೌಂಟ್ ನಂಬರ್ ನೀಡಲಾಗುತ್ತದೆ. ಹಳೆ ಬಾಕಿ ಮೊತ್ತ ಹೊಸ ಖಾತೆಗೆ ವರ್ಗಾಯಿಸಲಾಗುತ್ತದೆ.

EPFO ನಲ್ಲಿ ಸಂಪೂರ್ಣ ಮಾಹಿತಿ ಲಭ್ಯವಿರುತ್ತದೆ. ಉದ್ಯೋಗಿಗಳು, ನಿವೃತ್ತಿ ಹೊಂದಿದ ಸದಸ್ಯರು ಸುಲಭವಾಗಿ ಟ್ರ್ಯಾಕ್ ಮಾಡಬಹುದು

 

ಪಿಎಫ್ ವಿಥ್ ಡ್ರಾ ಸಾಧ್ಯವೇ?
 

ಪಿಎಫ್ ವಿಥ್ ಡ್ರಾ ಸಾಧ್ಯವೇ?

ಇಪಿಎಫ್ ಕಚೇರಿಯಲ್ಲಿ ಹೊಸ ಸಂಸ್ಥೆ ಮೂಲಕ ಅರ್ಜಿ 13(R) ಸಲ್ಲಿಸಬೇಕಾಗುತ್ತದೆ. ಇದರಲ್ಲಿ ಹಳೆ ಹಾಗೂ ಹೊಸ ಇಪಿಎಫ್ ಸಂಖ್ಯೆಯನ್ನು ನಮೂದಿಸಬೇಕು. ಹಾಗೂ ವರ್ಗಾವಣೆ ಕಾರಣಗಳನ್ನು ನೀಡಬೇಕು ಅಥವಾ ಖಾತೆ ಸ್ಥಗಿತಗೊಳಿಸುವ ಕಾರಣ ತಿಳಿಸಬೇಕು.

ನಮ್ಮ ಸಲಹೆ ಏನೆಂದರೆ, ಪಿಎಫ್ ಖಾತೆ ಕ್ಲೋಸ್ ಮಾಡುವುದರಿಂದ ವರ್ಗಾವಣೆ ಮಾಡುವುದು ಒಳಿತು. ಇದು ನಮ್ಮದೇ ಉಳಿತಾಯದ ಮೊತ್ತ ನಮ್ಮ ಕಷ್ಟದ ಸಮಯಕ್ಕೆ ಸಿಗುವಂತಿರಬೇಕು

 

ಪಿಎಫ್ ವಿಥ್ ಡ್ರಾ ಸಾಧ್ಯವೇ?

ಪಿಎಫ್ ವಿಥ್ ಡ್ರಾ ಸಾಧ್ಯವೇ?

ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಯೋಜನೆ ಖಾತೆದಾರರಿಗೆ ಮೂರು ಮುಖ್ಯ ಪ್ರಯೋಜನಗಳಿವೆ. ಇಲ್ಲಿ ಉಳಿತಾಯಕ್ಕಾಗಿ ಇಡಲಿರುವ ಮೊತ್ತಕ್ಕೆ ಬಡ್ಡಿ ಲಭಿಸುತ್ತದೆ. ನಿವೃತ್ತಿ ಪಿಂಚಣಿ ಸಿಗುತ್ತದೆ. ವಿಮೆ ಸೌಲಭ್ಯವೂ ಇದರ ಜೊತೆ ಕೂಡಿರುತ್ತದೆ.

ಇಪಿಎಫ್ ಖಾತೆದಾರರಾದರೆ ತಕ್ಷಣವೇ Employees Pension Scheme 1995 ಹಾಗೂ Employees Deposit Linked Insurance Scheme 1976 (EDLIS) ನ ಸದಸ್ಯರಾಗುತ್ತೀರಿ.

 

 

ಪಿಎಫ್ ವಿಥ್ ಡ್ರಾ ಸಾಧ್ಯವೇ?

ಪಿಎಫ್ ವಿಥ್ ಡ್ರಾ ಸಾಧ್ಯವೇ?

ಉದ್ಯೋಗಿಯ ಸಂಪೂರ್ಣ ಕೊಡುಗೆ ಹಾಗೂ ಶೇ 8.33 ರಷ್ಟು ನಿಮ್ಮ ಸಂಸ್ಥೆಯ ಕೊಡುಗೆ ಇಪಿಎಫ್ ಗೆ ಸೇರುತ್ತದೆ. ಇದಕ್ಕೆ ವಾರ್ಷಿಕ ಬಡ್ಡಿ ನಿಗದಿಯಾಗಿರುತ್ತದೆ. ಅಲ್ಲದೆ ನಿಮ್ಮ ಸಂಸ್ಥೆ(employer) ಬ್ಯಾಲೆನ್ಸ್ ಕೊಡುಗೆ ಉದ್ಯೋಗಿಗಳ ಪಿಂಚಣಿ ನಿಧಿ ಸೇರಲಿದೆ.

ಕೇಂದ್ರ ಸರ್ಕಾರ ಶೇ 1.16 ರಷ್ಟು ದರದಲ್ಲಿ ಪಿಂಚಣಿ ನಿಧಿಗೆ ತನ್ನ ಕೊಡುಗೆ ನೀಡುತ್ತಿದೆ. ಪಿಂಚಿಣಿ ನಿಧಿಗೆ ಉದ್ಯೋಗಿಗಳು ಯಾವುದೇ ಹೆಚ್ಚಿನ ಕೊಡುಗೆ ನೀಡಬೇಕಾದ್ದಿಲ್ಲ. ನಿಮ್ಮ ಉದ್ಯೋಗದಾತರು ಶೇ 0.5ರಷ್ಟು ಸಂಬಳ ಮೊತ್ತವನ್ನು EDLIS ಗೆ ಸೇರಿಸುತ್ತಾರೆ. ಇದಕ್ಕೂ ಕೂಡಾ ಉದ್ಯೋಗಿಗಳ ನೇರ ಕೊಡುಗೆ ಅಗತ್ಯವಿಲ್ಲ.

 

 

English summary

Online PF options now available for pensioners | ಪಿಂಚಣಿದಾರರಿಗೂ ಆನ್ ಲೈನ್ ನಲ್ಲಿ ಪಿಎಫ್ ಲಭ್ಯ


 Over 50 million subscribers of the retirement fund body EPFO will be able to apply online for transfer and withdrawal of their provident fund from July 1, a move aimed at speedy settlement of claims.
Story first published: Friday, April 19, 2013, 15:30 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X