For Quick Alerts
ALLOW NOTIFICATIONS  
For Daily Alerts

ಪಿಎಫ್ ಯಾವಾಗ ವಿಥ್ ಡ್ರಾ ಮಾಡ್ಬಹುದು?

By Mahesh
|

ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಯೋಜನೆ ಖಾತೆ ಮಾಹಿತಿ ಈಗ ಎಲ್ಲರಿಗೂ ಆನ್ ಲೈನ್ ನಲ್ಲಿ ಸಂಪೂರ್ಣವಾಗಿ ಲಭ್ಯವಿದೆ. ಇಪಿಎಫ್ ನಿಮ್ಮ PF ಖಾತೆಗೆ ಜಮೆಯಾಗಿರುವ ಮೊತ್ತ ಹಾಗೂ ಪಿಎಫ್ ಹಣ ಹಿಂಪಡೆಯುವುದು, ವರ್ಗಾವಣೆ ಮಾಡುವುದು ಇತ್ಯಾದಿ ಕ್ರಿಯೆ ಈಗ ಆನ್ ಲೈನ್ ಮೂಲಕ ಸಾಧ್ಯ. ಆದರೆ, ಅವಧಿಗೆ ಮುನ್ನ ಇಪಿಎಫ್ ಹಣ ಹಿಂಪಡೆಯುವುದು ಹೇಗೆ? ಎಂಬ ಪ್ರಶ್ನೆ ಕಾಡುತ್ತದೆ.

ಸದಸ್ಯರು ತಮ್ಮ ಕೆಲಸಗಳನ್ನು ಬದಲಾಯಿಸುವಾಗ ಹಾಗೂ ಹಳೆಯ ಖಾತೆಯಲ್ಲಿರುವ ಹಣವನ್ನು ಹೊಸ ಖಾತೆಗೆ ಹಾಕುವಾಗ ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಸಮಸ್ಯೆಗಳನ್ನು ನಿವಾರಿಸುವುದಕ್ಕಾಗಿ ಸದಸ್ಯರ ಆಧಾರ್ ಸಂಖ್ಯೆಗಳನ್ನೇ ಅವರ ಇಪಿಎಫ್ ಖಾತೆಯ ಸಂಖ್ಯೆಗಳನ್ನಾಗಿ ಪರಿವರ್ತಿಸುವ ಯೋಜನೆಯನ್ನು ಭವಿಷ್ಯನಿಧಿ ಸಂಸ್ಥೆ ಕೈಗೆತ್ತಿಕೊಂಡಿತ್ತು.

ಆದರೆ, ಕೆಲವು ಸಾಂದರ್ಭಿಕ ಕಾರಣಗಳ ಅಡಿಯಲ್ಲಿ ಮಾತ್ರ ಪಿಎಫ್ ಹಣ ವಿಥ್ ಡ್ರಾ ಮಾಡಬಹುದಾಗಿದೆ ಹಾಗೂ ಸಾಲ ಪಡೆಯಬಹುದಾಗಿದೆ. ಯಾವ ಸಂದರ್ಭ? ಪಿಎಫ್ ವರ್ಗಾಯಿಸಲು ಸಾಧ್ಯವೇ?ಪಿಎಫ್ ನಿಧಿಯಿಂದ ಏನು ಪ್ರಯೋಜನ? ಮುಂದೆ ಓದಿ...

ಸಾಂದರ್ಭಿಕ ಕಾರಣಗಳು

ಸಾಂದರ್ಭಿಕ ಕಾರಣಗಳು

* ಮದುವೆ/ ಶಿಕ್ಷಣ ಸಲುವಾಗಿ
* ಆರೋಗ್ಯ ಶುಶ್ರೂಷೆ
* ಮನೆ ಕಟ್ಟುವುದು ಅಥವಾ ಮನೆ ಖರೀದಿ
* ಗೃಹ ಸಾಲ ರೀಪೇಮೆಂಟ್
* ಹಾಲಿ ವಾಸಿಸುತ್ತಿರುವ ಮನೆ ರಿಪೇರಿ, ನಿವೇಶನ ಖರೀದಿ
* ನಿವೃತ್ತಿ ಬಯಸಿ ವಿಥ್ ಡ್ರಾ ಲಾಕ್ ಔಟ್
* ಇನ್ನಿತರೆ ಕಾರಣಗಳು

ಪಿಎಫ್ ವರ್ಗಾಯಿಸಲು ಸಾಧ್ಯವೇ?

ಪಿಎಫ್ ವರ್ಗಾಯಿಸಲು ಸಾಧ್ಯವೇ?

ಹೌದು, ಪಿಎಫ್ ಕೆಲವು ಸಂದರ್ಭಗಳಲ್ಲಿ ವರ್ಗಾಯಿಸಬಹುದಾಗಿದೆ. ಉದ್ಯೋಗಿ ಒಂದು ಸಂಸ್ಥೆ ತೊರೆದು ಮತ್ತೊಂದು ಸಂಸ್ಥೆ ಸೇರಿದ ಸಂದರ್ಭದಲ್ಲಿ ವರ್ಗಾಯಿಸಬಹುದು. ಆದರೆ, ಹೊಸ ಅಕೌಂಟ್ ನಂಬರ್ ನೀಡಲಾಗುತ್ತದೆ. ಹಳೆ ಬಾಕಿ ಮೊತ್ತ ಹೊಸ ಖಾತೆಗೆ ವರ್ಗಾಯಿಸಲಾಗುತ್ತದೆ.

ಪಿಎಫ್ ವರ್ಗಾಯಿಸಲು ಸಾಧ್ಯವೇ?

ಪಿಎಫ್ ವರ್ಗಾಯಿಸಲು ಸಾಧ್ಯವೇ?

ಇಪಿಎಫ್ ಕಚೇರಿಯಲ್ಲಿ ಹೊಸ ಸಂಸ್ಥೆ ಮೂಲಕ ಅರ್ಜಿ 13(R) ಸಲ್ಲಿಸಬೇಕಾಗುತ್ತದೆ. ಇದರಲ್ಲಿ ಹಳೆ ಹಾಗೂ ಹೊಸ ಇಪಿಎಫ್ ಸಂಖ್ಯೆಯನ್ನು ನಮೂದಿಸಬೇಕು. ಹಾಗೂ ವರ್ಗಾವಣೆ ಕಾರಣಗಳನ್ನು ನೀಡಬೇಕು ಅಥವಾ ಖಾತೆ ಸ್ಥಗಿತಗೊಳಿಸುವ ಕಾರಣ ತಿಳಿಸಬೇಕು.

ನಮ್ಮ ಸಲಹೆ ಏನೆಂದರೆ, ಪಿಎಫ್ ಖಾತೆ ಕ್ಲೋಸ್ ಮಾಡುವುದರಿಂದ ವರ್ಗಾವಣೆ ಮಾಡುವುದು ಒಳಿತು. ಇದು ನಮ್ಮದೇ ಉಳಿತಾಯದ ಮೊತ್ತ ನಮ್ಮ ಕಷ್ಟದ ಸಮಯಕ್ಕೆ ಸಿಗುವಂತಿರಬೇಕು.
ಪಿಎಫ್ ನಿಧಿಯಿಂದ ಏನು ಪ್ರಯೋಜನ?

ಪಿಎಫ್ ನಿಧಿಯಿಂದ ಏನು ಪ್ರಯೋಜನ?

ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್) ಯೋಜನೆ ಖಾತೆದಾರರಿಗೆ ಮೂರು ಮುಖ್ಯ ಪ್ರಯೋಜನಗಳಿವೆ. ಇಲ್ಲಿ ಉಳಿತಾಯಕ್ಕಾಗಿ ಇಡಲಿರುವ ಮೊತ್ತಕ್ಕೆ ಬಡ್ಡಿ ಲಭಿಸುತ್ತದೆ.

ನಿವೃತ್ತಿ ಪಿಂಚಣಿ ಸಿಗುತ್ತದೆ. ವಿಮೆ ಸೌಲಭ್ಯವೂ ಇದರ ಜೊತೆ ಕೂಡಿರುತ್ತದೆ. ಇಪಿಎಫ್ ಖಾತೆದಾರರಾದರೆ ತಕ್ಷಣವೇ Employees Pension Scheme 1995 ಹಾಗೂ Employees Deposit Linked Insurance Scheme 1976 (EDLIS) ನ ಸದಸ್ಯರಾಗುತ್ತೀರಿ.

 

ಪಿಎಫ್ ನಿಧಿಯಿಂದ ಏನು ಪ್ರಯೋಜನ?

ಪಿಎಫ್ ನಿಧಿಯಿಂದ ಏನು ಪ್ರಯೋಜನ?

ಉದ್ಯೋಗಿಯ ಸಂಪೂರ್ಣ ಕೊಡುಗೆ ಹಾಗೂ ಶೇ 8.33 ರಷ್ಟು ನಿಮ್ಮ ಸಂಸ್ಥೆಯ ಕೊಡುಗೆ ಇಪಿಎಫ್ ಗೆ ಸೇರುತ್ತದೆ. ಇದಕ್ಕೆ ವಾರ್ಷಿಕ ಬಡ್ಡಿ ನಿಗದಿಯಾಗಿರುತ್ತದೆ. ಅಲ್ಲದೆ ನಿಮ್ಮ ಸಂಸ್ಥೆ(employer) ಬ್ಯಾಲೆನ್ಸ್ ಕೊಡುಗೆ ಉದ್ಯೋಗಿಗಳ ಪಿಂಚಣಿ ನಿಧಿ ಸೇರಲಿದೆ.

ಕೇಂದ್ರ ಸರ್ಕಾರ ಶೇ 1.16 ರಷ್ಟು ದರದಲ್ಲಿ ಪಿಂಚಣಿ ನಿಧಿಗೆ ತನ್ನ ಕೊಡುಗೆ ನೀಡುತ್ತಿದೆ. ಪಿಂಚಿಣಿ ನಿಧಿಗೆ ಉದ್ಯೋಗಿಗಳು ಯಾವುದೇ ಹೆಚ್ಚಿನ ಕೊಡುಗೆ ನೀಡಬೇಕಾದ್ದಿಲ್ಲ. ನಿಮ್ಮ ಉದ್ಯೋಗದಾತರು ಶೇ 0.5ರಷ್ಟು ಸಂಬಳ ಮೊತ್ತವನ್ನು EDLIS ಗೆ ಸೇರಿಸುತ್ತಾರೆ. ಇದಕ್ಕೂ ಕೂಡಾ ಉದ್ಯೋಗಿಗಳ ನೇರ ಕೊಡುಗೆ ಅಗತ್ಯವಿಲ್ಲ.

 

ಪಿಎಫ್ ಹಣ ಪಡೆಯುವ ಬಗೆ ಸ್ಥಿತಿ ಗತಿ

ಪಿಎಫ್ ಹಣ ಪಡೆಯುವ ಬಗೆ ಸ್ಥಿತಿ ಗತಿ

ಭವಿಷ್ಯ ನಿಧಿ ಸದಸ್ಯರು/ಚಂದಾದಾರರು/ಪಿಂಚಣಿದಾರರಿಗೆ ಈ ಸೌಲಭ್ಯ ಲಭ್ಯವಿರುತ್ತದೆ. ದೇಶದ ಯಾವುದೇ EPFO ಕಚೇರಿಯಲ್ಲಿ PF ಹಣ ಕ್ಲೇಮ್ ಮಾಡಿದ್ದರೆ ಈ ಸೌಲಭ್ಯ ಬಳಸಿ ಸ್ಥಿತಿ ಗತಿ ತಿಳಿಯಬಹುದು. ಕ್ಲೇಮ್ ಸ್ಥಿತಿಗತಿ ಮಾಹಿತಿ ನೀಡುವ ಪುಟದಲ್ಲಿ ಹಾಗೂ ನಿಮ್ಮ ಪಿಎಫ್ ಖಾತೆ ನಿರ್ವಹಿಸುವ ಉದ್ಯೋಗದಾತರು (employer) ಹೊಂದಿರುವ ಪ್ರಾದೇಶಿಕ ಪ್ರಾವಿಡೆಂಟ್ ಕಚೇರಿಯನ್ನು ಆಯ್ಕೆ ಮಾಡಿಕೊಳ್ಳಿ. ನಂತರ EPF ಖಾತೆ ಸಂಖ್ಯೆ ನಮೂದಿಸಿ ಹೆಚ್ಚಿನ ಮಾಹಿತಿಗೆ ಕ್ಲಿಕ್ ಮಾಡಿ

English summary

When can you withdraw your provident fund? | ಪಿಎಫ್ ಯಾವಾಗ ವಿಥ್ ಡ್ರಾ ಮಾಡ್ಬಹುದು?

An Employees Provident Fund (EPF) can be withdrawn by an employee for some specific purposes only. The purposes for which such withdrawals and loans can be availed and other conditions are as follows
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X